ನೀರು ಮಾತ್ರವಲ್ಲ, ಪಾಕಿಸ್ತಾನಕ್ಕೆ ಈ ವಸ್ತುಗಳ ಪೂರೈಕೆಯನ್ನು ಭಾರತ ನಿಲ್ಲಿಸಬಹುದು!

Published : Apr 29, 2025, 03:04 PM ISTUpdated : Apr 29, 2025, 03:07 PM IST
ನೀರು ಮಾತ್ರವಲ್ಲ, ಪಾಕಿಸ್ತಾನಕ್ಕೆ ಈ ವಸ್ತುಗಳ ಪೂರೈಕೆಯನ್ನು ಭಾರತ ನಿಲ್ಲಿಸಬಹುದು!

ಸಾರಾಂಶ

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಸಿಂಧೂ ನದಿ ಒಪ್ಪಂದ ರದ್ದುಗೊಳಿಸಿ, ವಾಘಾ ಗಡಿಯನ್ನು ಮುಚ್ಚಿದೆ. ಪಾಕಿಸ್ತಾನಕ್ಕೆ ಔಷಧಿ ಕಚ್ಚಾವಸ್ತು, ರಾಸಾಯನಿಕ, ಕೃಷಿ ಉತ್ಪನ್ನಗಳ ಪೂರೈಕೆ ನಿಂತರೆ ಆರ್ಥಿಕ ಸಂಕಷ್ಟ ತಪ್ಪಿದ್ದಲ್ಲ. ಪಾಕಿಸ್ತಾನ ರಕ್ಷಣಾ ಸಚಿವರು ಭಾರತದ ದಾಳಿ ಅನಿವಾರ್ಯ ಎಂದಿದ್ದಾರೆ.

ನವದೆಹಲಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ಉಗ್ರರ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧ ಅತ್ಯಂತ ಕಠಿಣವಾಗಿದೆ. ಉಗ್ರರ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ಸಿಂಧೂ ನದಿ ನೀರಿನ ಒಪ್ಪಂದವನ್ನು ರದ್ದುಗೊಳಿಸಿದೆ. ಭಾರತ ಒಪ್ಪಂದ ರದ್ದುಗೊಳಿಸುತ್ತಿದ್ದಂತೆ ಪಾಕಿಸ್ತಾನಲ್ಲಿ ಹಾಹಾಕಾರ ಸೃಷ್ಟಿಯಾಗಿದೆ. ವಾಘಾ ಗಡಿಯನ್ನು ಸಹ ಭಾರತ ಬಂದ್ ಮಾಡಿದೆ. ವೀಸಾ ಪಡೆದುಕೊಂಡು ಭಾರತದಲ್ಲಿದ್ದ ಪಾಕಿಸ್ತಾನಿಗಳನ್ನು ಹಿಂದಿರುಗಿ ಕಳುಹಿಸಿದೆ. ಎರಡು ದೇಶಗಳ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಿದ್ದು, ಭಾರತದ ಸೈನಿಕರು ಪ್ರತೀಕಾರಕ್ಕಾಗಿ ಸಿದ್ದರಾಗಿದ್ದಾರೆ. ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನ ಕದನ ವಿರಾಮವನ್ನು ಸಹ ಉಲ್ಲಂಘಿಸಿ ದಾಳಿ ನಡೆಸಿತ್ತು. ಭಾರತ ಪ್ರತಿದಾಳಿ ನಡೆಸಿ ತಿರುಗೇಟು ನೀಡಿತ್ತು. 

ಪಾಕಿಸ್ತಾನಕ್ಕೆ ಸಿಂಧೂ ನದಿ ನೀರು ಹರಿಯೋದನ್ನು ನಿಲ್ಲಿಸೋದಾಗಿ ಭಾರತ ಸರ್ಕಾರ ಅಧಿಕೃತವಾಗಿ ಹೇಳಿದೆ. ಸಿಂಧೂ, ಚೆನಾಬ್ ಮತ್ತು ಝೀಲಂ ನದಿಗಳ ನೀರನ್ನು ನಿಲ್ಲಿಸಲು ಪ್ರಸ್ತುತ ಸಾಕಷ್ಟು ಸಂಪನ್ಮೂಲಗಳು ಲಭ್ಯವಿಲ್ಲದಿದ್ದರೂ, ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ ನೀರು ಸಿಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ, ಇದರಿಂದಾಗಿ ಪಾಕಿಸ್ತಾನ ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕೋದು ಖಚಿತವಾಗಿದೆ. ಭಾರತ ಸಿಂಧೂ ನದಿಯ ನೀರು ಮಾತ್ರವಲ್ಲ ಇನ್ನು ಅನೇಕ ವಸ್ತುಗಳನ್ನು ರಫ್ತು ಮಾಡುವುದನ್ನು ನಿಲ್ಲಿಸಬಹುದಾಗಿದೆ. ಒಂದು ವೇಳೆ ಭಾರತ ಕೆಲ ಪ್ರಮುಖ ವಸ್ತುಗಳ ಪೂರೈಕೆಯನ್ನು ಸ್ಥಗಿತಗೊಳಿಸಿದ್ರೆ, ಪಾಕಿಸ್ತಾನದಲ್ಲಿ ಅಕ್ಷರಷಃ ಹಾಹಾಕಾರ ಉಂಟಾಗಿ ಸಮಸ್ಯೆಗಳ ಸುಳಿಯಲ್ಲಿ ಸಿಲುಕಲಿದೆ. 

ಭಾರತದಿಂದ ಯಾವೆಲ್ಲಾ ವಸ್ತುಗಳ ಪೂರೈಕೆ?
ಔಷಧಿ ತಯಾರಿಕೆಯಲ್ಲಿ ಬಳಸಲಾಗುವ ಕಚ್ಚಾ ವಸ್ತುಗಳಿಗಾಗಿ ಭಾರತದ ಮೇಲೆಯೇ ಪಾಕಿಸ್ತಾನ ಅವಲಂಬನೆಯಾಗಿದೆ. ಶೇ.30 ರಿಂದ ಶೇ.40ರಷ್ಟು ಔಷಧಿ ಕಚ್ಚಾವಸ್ತುಗಳಿಗಾಗಿ ಭಾರತವನ್ನು ಅವಲಂಬಿಸಿದೆ. ಇದರಲ್ಲಿ ಸಕ್ರಿಯ ಔಷಧೀಯ ಪದಾರ್ಥಗಳು ಸೇರಿದಂತೆ ವಿವಿಧ ಸುಧಾರಿತ ಚಿಕಿತ್ಸಕ ಉತ್ಪನ್ನಗಳು ಸೇರಿವೆ. ಔಷಧಿ ತಯಾರಿಕಾ ಕಚ್ಚಾ ವಸ್ತುಗಳನ್ನು ರಫ್ತು ಮಾಡೋದನ್ನು ನಿಲ್ಲಿಸಿದ್ರೆ ಪಾಕಿಸ್ತಾನದ ಆರೋಗ್ಯ ಇಲಾಖೆ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದಂತಾಗುತ್ತದೆ. ಭಾರತದೊಂದಿಗೆ ಯುದ್ಧ ನಡೆದ್ರೆ ಪಾಕಿಸ್ತಾನದಲ್ಲಿ  ಔಷಧಗಳ ದೊಡ್ಡ ಬಿಕ್ಕಟ್ಟು ಉಂಟಾಗಬಹುದು. ಸೈನಿಕರ ಚಿಕಿತ್ಸೆಗೂ ಔಷಧಿ ಇಲ್ಲದೇ ಪರದಾಡುವ ಹಂತಕ್ಕೆ ಪಾಕಿಸ್ತಾನಮ ತಲುಪಬಹುದು.

ಕಚ್ಚಾ ಔಷಧಿ ಉತ್ಪನ್ನಗಳ ಜೊತೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಸಾವಯವ ಮತ್ತು ಅಜೈವಿಕ ರಾಸಾಯನಿಕಗಳು, ಕೃಷಿ ಉತ್ಪನ್ನಗಳು, ಹತ್ತಿ ಮತ್ತು ಹತ್ತಿ ನೂಲು, ಸಕ್ಕರೆ, ಪ್ಲಾಸ್ಟಿಕ್ ಮತ್ತು ಯಂತ್ರೋಪಕರಣಗಳು ರಫ್ತು ಆಗುತ್ತವೆ. ಇವುಗಳ ಪೂರೈಕೆ ಸ್ಥಗಿತಗೊಂಡರೆ ಕೃಷಿ ವಲಯ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಭಾರತ ಸಂಪೂರ್ಣವಾಗಿ ಪಾಕಿಸ್ತಾನದೊಂದಿಗಿನ ವ್ಯಾಪಾರ ಸಂಬಂಧ ಕಡಿದುಕೊಂಡ್ರೆ ವೈರಿ ದೇಶದಲ್ಲಿ ಹಣದುಬ್ಬರ ಉಂಟಾಗಲಿದೆ. ಈಗಾಗಲೇ ಹಣದುಬ್ಬರದಿಂದ ಬಳಲುತ್ತಿರೋ ಪಾಕಿಸ್ತಾನಕ್ಕೆ ಭಾರತ ತೆಗೆದುಕೊಳ್ಳುತ್ತಿರುವ ಒಂದೊಂದು ಕಠಿಣ ನಿರ್ಧಾರಗಳು ಶಾಕ್ ನೀಡುತ್ತಿವೆ.

ಇದನ್ನೂ ಓದಿ: ಕಾಶ್ಮೀರದಲ್ಲಿ ಹೈ ಅಲರ್ಟ್,ಪೆಹಲ್ಗಾಂ ರೀತಿಯಲ್ಲಿ ದಾಳಿಗೆ ಸಂಚು, ಕಾಶ್ಮೀರದ 48 ಪ್ರವಾಸಿ ತಾಣ ಬಂದ್

ಭಾರತದ ದಾಳಿ ಖಚಿತ
26 ಜನರನ್ನು ಬಲಿಪಡೆದ ಪಹಲ್ಗಾಂ ನರಮೇಧದ ಘಟನೆಗೆ ಪ್ರತೀಕಾರವಾಗಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಖಚಿತ ಎಂದು ಸ್ವತಃ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್‌ ಹೇಳಿದ್ದಾರೆ. ಪಹಲ್ಗಾಂ ಘಟನೆ ಬೆನ್ನಲ್ಲೇ ಸೋಮವಾರ ಸುದ್ಧಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಆಸೀಫ್‌, ‘ಇತ್ತೀಚಿನ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮೇಲೆ ಭಾರತದ ದಾಳಿ ಖಚಿತ. ಅದನ್ನು ತಡೆಯಲು ಸಾಧ್ಯವೇ ಇಲ್ಲ ಎಂದು ಸೇನೆ ಸರ್ಕಾರಕ್ಕೆ ಮಾಹಿತಿ ನೀಡಿದೆ. ಹೀಗಾಗಿ ಗಡಿಯಲ್ಲಿ ನಮ್ಮ ಪಡೆಗಳನ್ನು ಬಲಪಡಿಸಿದ್ದೇವೆ. ಈ ಪರಿಸ್ಥಿತಿಯಲ್ಲಿ ಕೆಲವು ಕಾರ್ಯತಂತ್ರದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಭಾರತದಿಂದ ನಮ್ಮ ಅಸ್ತಿತ್ವಕ್ಕೇನಾದರೂ ಧಕ್ಕೆ ಬಂದರೆ ಪರಮಾಣು ದಾಳಿಗೂ ಸಿದ್ಧರಿದ್ದೇವೆ’ ಎಂದು ಆಸಿಫ್‌ ತಿಳಿಸಿದ್ದಾರೆ.

ಮೊದಲಿಗೆ ಘಟನೆಯಲ್ಲಿ ತನ್ನ ಯಾವುದೇ ಪಾತ್ರ ಇಲ್ಲ ಎಂದಿದ್ದ ಪಾಕಿಸ್ತಾನ, ದಾಳಿಯಲ್ಲಿ ತನ್ನ ಪಾತ್ರದ ಬಗ್ಗೆ ಭಾರತಕ್ಕೆ ಖಚಿತ ಸಾಕ್ಷ್ಯ ಸಿಕ್ಕಿರುವುದು ತಿಳಿಯುತ್ತಲೇ ತಟಸ್ಥ ದೇಶವೊಂದರಿಂದ ತನಿಖೆಯ ಮಾತುಗಳನ್ನು ಆಡಿತ್ತು.

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ