ಆಪರೇಷನ್ ಸಿಂದೂರ್ ಬಗ್ಗೆ ಸುಳ್ಳು ಸುದ್ದಿ ಬಿತ್ತರಿಸುತ್ತಿದ್ದ ಚೀನಾಗೆ ಶಾಕ್ ನೀಡಿದ ಭಾರತ

Published : May 14, 2025, 11:52 AM ISTUpdated : May 14, 2025, 11:53 AM IST
ಆಪರೇಷನ್ ಸಿಂದೂರ್ ಬಗ್ಗೆ ಸುಳ್ಳು ಸುದ್ದಿ  ಬಿತ್ತರಿಸುತ್ತಿದ್ದ ಚೀನಾಗೆ ಶಾಕ್ ನೀಡಿದ ಭಾರತ

ಸಾರಾಂಶ

ಆಪರೇಷನ್ ಸಿಂದೂರ್ ಕುರಿತು ಸುಳ್ಳು ಸುದ್ದಿ ಹರಡಿದ್ದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಇದು ಒಂದು ವಾರದೊಳಗೆ ಚೀನಾ ಸಂಬಂಧಿತ ಮಾಧ್ಯಮಗಳ ವಿರುದ್ಧ ಭಾರತ ತೆಗೆದುಕೊಂಡ ಎರಡನೇ ಕ್ರಮವಾಗಿದೆ.

ನವದೆಹಲಿ: ಇಂದು ಭಾರತ ಸರ್ಕಾರವು ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆಗಳಾದ ಗ್ಲೋಬಲ್ ಟೈಮ್ಸ್ ಮತ್ತು ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಅಧಿಕೃತ X (ಹಿಂದಿನ ಟ್ವಿಟರ್) ಖಾತೆಗಳನ್ನು ಪದೇ ಪದೇ ತಪ್ಪು ಮಾಹಿತಿ, ನಕಲಿ ಸುದ್ದಿ ಮತ್ತು ಪ್ರಚಾರವನ್ನು ಹರಡಿದ್ದಕ್ಕಾಗಿ ನಿರ್ಬಂಧಿಸಿದೆ. ಭಾರತ ಮತ್ತು  ಪಾಕಿಸ್ತಾನದ ನಡುವೆ ಸಂಘರ್ಷ ಉಂಟಾಗಿದ್ದು, ಚೀನಾ ಈ ಕುರಿತು ಅಂದ್ರೆ ಆಪರೇಷನ್ ಸಿಂದೂರ್ ಕಾರ್ಯಚರಣೆಗೆ ಸಂಬಂಧಿಸಿದಂತೆ ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುತ್ತಿತ್ತು. ಈ ಹಿನ್ನೆಲೆ ಚೀನಾದ ಸರ್ಕಾರಿ ಮಾಧ್ಯಮ ಸಂಸ್ಥೆಗಳನ್ನು ಭಾರತ ಸರ್ಕಾರ ನಿರ್ಬಂಧಿಸಿದೆ.

ಇದು ಒಂದು ವಾರದೊಳಗೆ ಚೀನಾದ ಕಮ್ಯುನಿಸ್ಟ್ ಪಕ್ಷ (CCP) ಗೆ ಸಂಬಂಧಿಸಿದ ಮಾಧ್ಯಮಗಳ ವಿರುದ್ಧ ಭಾರತೀಯ ಅಧಿಕಾರಿಗಳು ತೆಗೆದುಕೊಂಡ ಎರಡನೇ ಪ್ರಮುಖ ಕ್ರಮವಾಗಿದೆ. ಇದಕ್ಕೂ ಮೊದಲು ಭಾರತದಲ್ಲಿ ಗ್ಲೋಬಲ್ ಟೈಮ್ಸ್‌ನ ಪ್ರವೇಶವನ್ನು ಅಮಾನತುಗೊಳಿಸಲಾಗಿತ್ತು. ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಯಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತದ ನಿಖರ ದಾಳಿಗಳ ಸಮಯದಲ್ಲಿ ಮತ್ತು ನಂತರ ಎರಡೂ ಸಂಸ್ಥೆಗಳು ಸುಳ್ಳು ಮತ್ತು ಪ್ರಚೋದನಕಾರಿ ನಿರೂಪಣೆಗಳನ್ನು ವರ್ಧಿಸುತ್ತಿರುವುದು ಕಂಡುಬಂದಿದೆ. ನಿರ್ಬಂಧಕ್ಕೊಳಗಾಗಿರುವ ಕ್ಸಿನ್ಹುವಾ ಚೀನಾದ ಅಧಿಕೃತ ಸುದ್ದಿ ಸಂಸ್ಥೆಯಾಗಿದೆ. 

ಇದನ್ನೂ ಓದಿ: ಭಾರತದ ದಾಳಿಗೆ ಚಿಂದಿಯಾದ ಪಾಕ್ ವಾಯುನೆಲೆ: ಹೈ ರೆಸಲ್ಯೂಷನ್ ಚಿತ್ರ ಬಿಡುಗಡೆ ಮಾಡಿದ ಅಮೆರಿಕನ್ ಸಂಸ್ಥೆ

ಪಾಕ್ ರಕ್ಷಣಾ ಸಚಿವರ ಎಕ್ಸ್ ಖಾತೆ ಬ್ಲಾಕ್
ಭಾರತ ಸರ್ಕಾರ  16 ಪಾಕಿಸ್ತಾನ ಯೂಟ್ಯೂಬ್ ಚಾನೆಲ್‌ಗೆ ನಿರ್ಬಂಧ ವಿಧಿಸಿದೆ. ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಅಸೀಫ್ ಎಕ್ಸ್ ಖಾತೆಯನ್ನು ಕೇಂದ್ರ ಸರ್ಕಾರ ಬ್ಲಾಕ್ ಮಾಡಿದೆ. ಜಮ್ಮು ಮತ್ತು ಕಾಶ್ಮೀರ, ಭಾರತ ಕುರಿತು ನಕಲಿ ಮಾಹಿತಿ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ ಕಾರಣಕ್ಕೆ ಖವಾಜಾ ಮೊಹಮ್ಮದ್ ಆಸಿಫ್ ಎಕ್ಸ್ ಖಾತೆ ಭಾರತದಲ್ಲಿ ಬ್ಲಾಕ್ ಆಗಿದೆ.

16 ಯೂಟ್ಯೂಬ್ ಚಾನೆಲ್ ಬ್ಯಾನ್
ಭಾರತದಲ್ಲಿ ದ್ವೇಷ ಹರಡುತ್ತಿದ್ದ, ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದ, ಭಾರತೀಯ ಸೇನೆ, ಭಾರತದ ಧರ್ಮಗಳ ನಡುವೆ ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದ ಯೂಟ್ಯೂಬ್ ಚಾನೆಲ್‌ಗಳನ್ನು ಭಾರತ ಬ್ಯಾನ್ ಮಾಡಿದೆ. ಈ ಪಾಕಿಸ್ತಾನದ 16 ಯೂಟ್ಯೂಬ್ ಚಾನೆಲ್‌ಗೆ ಭಾರತದಲ್ಲಿ ಮಿಲಿಯನ್ ಸಬ್‌ಸ್ಕ್ರೈಬರ್ಸ್ ಕೂಡ ಇದ್ದರು ಅನ್ನೋದು ಗಮಿಸಬೇಕು.

ಇದನ್ನೂ ಓದಿ: 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಲತಾಣಗಳಲ್ಲಿ ಮಕ್ಕಳ ಬಳಕೆ ನಿರ್ಬಂಧಿಸಿ: ಸುಧಾ ಮೂರ್ತಿ
ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!