ಭಾರತ-ಅಮೆರಿಕ 11ನೇ ದ್ವಿಪಕ್ಷೀಯ ಕೌನ್ಸುಲರ್ ಮಾತುಕತೆ, ಮಹಿಳೆ-ಮಕ್ಕಳ ರಕ್ಷಣೆಗೆ ಆದ್ಯತೆ!

By Suvarna NewsFirst Published Feb 24, 2024, 3:36 PM IST
Highlights

ಭಾರತ ಹಾಗೂ ಅಮೆರಿಕ 11ನೇ ಕೌನ್ಸುಲರ್ ದ್ವಿಪಕ್ಷೀಯ ಮಾತುಕತೆ ನವದೆಹಲಿಯಲ್ಲಿ ನಡೆದಿದೆ. ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಚರ್ಚೆಗಳು ನಡೆದಿದೆ. ಪ್ರಮುಖವಾಗಿ ವಿದ್ಯಾರ್ಥಿಗಳು, ಮಹಿಳಾ-ಮಕ್ಕಳ ರಕ್ಷಣೆ ಸೇರಿದಂತೆ ಹಲವು ವಲಯದಲ್ಲಿನ ಸವಾಲುಗಳಿಗೆ ಉತ್ತರ ಹುಡುಕು ಪ್ರಯತ್ನವನ್ನು ಭಾರತ ಹಾಗೂ ಅಮೆರಿಕ ಮಾಡಿದೆ
 

ನವದೆಹಲಿ(ಫೆ.24) ದುರ್ಬಲ ಮಹಿಳೆಯರು ಹಾಗೂ ಮಕ್ಕಳ ರಕ್ಷಣೆ, ವಿದ್ಯಾರ್ಥಿಗಳ ವೀಸಾ ಹಾಗೂ ಅಧ್ಯಯನ, ಸುರಕ್ಷಿತ ಹಾಗೂ ಕಾನೂನು ಬದ್ಧ ವಲಸೆ, ಉಭಯ ದೇಶಗ ಪ್ರಜೆಗಳ ಸುರಕ್ಷತೆ, ಸುಗಮ ಪ್ರಯಾಣ ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಭಾರತ ಹಾಗೂ ಅಮೆರಿಕ ದ್ವಿಪಕ್ಷೀಯ ಮಾತುಕತೆ ನಡೆಸಿದೆ. ನವದೆಹಲಿಯಲ್ಲಿ ಆಯೋಜಿಸಿದ ಈ ಮಾತುಕತೆಯಲ್ಲಿ ಭಾರತದ ಕಾನ್ಸುಲರ್ ಪಾಸ್‌ಪೋರ್ಟ್ ವಿಸಾ ಜಂಟಿ ಕಾರ್ಯದರ್ಶಿ ಕೆಜಿ ಶ್ರೀನಿವಾಸ್ ಹಾಗೂ ಅಮೆರಿಕ ಕಾನ್ಸುಲರ್ ಬ್ಯೂರ್ ರಾಯಭಾರಿ ರೆನಾ ಬಿಟರ್ ಪಾಲ್ಗೊಂಡಿದ್ದರು.

ಭಾರತ ಹಾಗೂ ಅಮೆರಿಕ ದೂತವಾಸ ವಿಚಾರಗಳಲ್ಲಿ ಪರಸ್ಪರ ಹಿತಾಸಕ್ತಿ ಹಾಗೂ ತಮ್ಮ ಜನರ ಸಂಬಂಧ ಹಾಗೂ ಸಹಕಾರಗಳನ್ನು ಮತ್ತಷ್ಟುಬಲಪಡಿಸುವ ನಿಟ್ಟಿನಲ್ಲಿ ಈ ಮಾತುಕತೆ ನಡೆದಿದೆ.  ಉಭಯ ದೇಶಗಳು ವಿದೇಶಾಂಗ ಇಲಾಖೆಗಳು ಕೆಲ ಸವಾಲುಗಳನ್ನು ಎದುರಿಸುತ್ತಿದೆ. ಈ ನಿಟ್ಟಿನಲ್ಲಿ ಪರಸ್ಪರ ಒಪ್ಪಿಗೆ ಸೂತ್ರ ಮುಂದಿಟ್ಟು ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಪಡಿಸಲು ಈ ಮಾತುಕತೆ ಫಲಪ್ರದವಾಗಿದೆ.

Latest Videos

H-1B Visa: ಹೆಚ್-1 ಬಿ ಸೇರಿ ಹಲವು ವೀಸಾ ಅರ್ಜಿದಾರರ ಸಂದರ್ಶನ ಕೈಬಿಟ್ಟ ಅಮೆರಿಕ!

ಈ ಕಾರ್ಯಕ್ರಮದಲ್ಲಿ ಉಭಯ ದೇಶದ ಪ್ರತಿನಿಧಿಗಳು  H1B ವೀಸಾ ಪೈಲೆಟ್ ಪ್ರೋಗ್ರಾಂ ಸ್ವಾಗತಿಸಿದರು. ವೀಸಾ ನವೀಕರಣ, ಅಮೆರಿಕದಲ್ಲಿನ  H1B ವೀಸಾ ಪ್ರಾಯೋಗಿಕ ಕಾರ್ಯಕ್ರಮಗಳು ಅಮರಿಕೆ ತೆಗೆದುಕೊಂಡ ಮಹತ್ತರ ಹೆಜ್ಜೆಗಳಾಗಿದೆ. ಕೆಲ ವರ್ಗೀಯ ವೀಸಾ ನವೀಕರಣ ಕುರಿತು ಮಾತುಕತೆಗಳು ನಡೆದಿದೆ. ಈ ಕ್ರಮಗಳು ಉಭಯ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಕ್ಕೆ ಮತ್ತಷ್ಟು ಉತ್ತೇಜನ ನೀಡಿದೆ.  

ವಿಸಿಟರ್ ವೀಸಾಗಾಗಿ ಕಾಯುವಿಕೆ ಸಮಯವನ್ನು ಶೇಕಡಾ 75 ರಷ್ಟು ಕಡಿಮೆ ಮಾಡಲಾಗಿದೆ. ಕಳೆದ ವರ್ಷ ತೆಗೆದುಕೊಂಡು ಮಹತ್ವದ ಕ್ರಮಗಳಿಂದ ಇದೀಗ ಪ್ರವಾಸಿ ವೀಸಾಗಾಗಿ ಕಾಯುವಿಕೆ ತಲೆನೋವು ಇಲ್ಲವಾಗಿದೆ ಎಂದು ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಹೇಳಿದ್ದಾರೆ. ಅಮೆರಿಕ 1.40 ಲಕ್ಷ ವಿದ್ಯಾರ್ಥಿಗಳ ವೀಸಾ ಹಾಗೂ 2.55 ಲಕ್ಷ ಉದ್ಯೋಗ ವೀಸಾಗಳನ್ನು ನೀಡಲಾಗಿದೆ. 

 

11th 🇮🇳-🇺🇸 Consular Dialogue,held 23 Feb '24 in New Delhi, co-chaired by ,JS CPV,MEA & Amb Rena Bitter,Asst Secy,Bureau of Consular Affairs,US Department of State reinforced the strong people-to-people ties & co-op on Extradition,MLAT, students & professionals mobility. pic.twitter.com/66Cs3aPax4

— CPV DIVISION (@CPVIndia)

 

ಮುಂದಿನ ತಿಂಗಳಿನಿಂದ ವೀಸಾಗಾಗಿ ಕಾಯುವಿಕೆ ಅವಧಿ ಮತ್ತಷ್ಟು ಇಳಿಕೆಯಾಗಲಿದೆ. ಇದೀಗ ಒಟ್ಟಾರೆ ಭಾರತೀಯ ವೀಸಾ ಸಂಖ್ಯೆ 10 ಲಕ್ಷ ದಾಟಿದೆ ಎಂದು ರೆನಾ ಬಿಟರ್ ಹೇಳಿದ್ದಾರೆ. ಫೆಬ್ರವರಿ 19 ರಿಂದ 8 ದಿನಗಳ ಕಾಲ ಭಾರತ ಹಾಗೂ ಕತಾರ್ ಪ್ರವಾಸ ಕೈಗೊಂಡಿರುವ ರೆನಾ ಬಿಟರ್, ಚೆನ್ನೈ ಹಾಗೂ ಮುಂಬೈಗೆ ಪ್ರಯಾಣ ಬೆಳೆಸಿ ಇದೀಗ ದೆಹಲಿಗೆ ಮರಳಿದ್ದಾರೆ. ಕೌನ್ಸುಲೇಟ್ ಸಿಬ್ಬಂದಿಗಳ ಜೊತೆ ನಿಶ್ಚಿತಾರ್ಥಕ್ಕಾಗಿ ಚೆನ್ನೈ ಹಾಗೂ ಮುಂಬೈಗೆ ತೆರಳಿದ್ದರು.

 

ಕುಲಭೂಷಣ್ ಜಾಧವ್‌ಗೆ ಎರಡನೇ ರಾಜತಾಂತ್ರಿಕ ನೆರವಿಗೆ ಪಾಕ್ ನಿರಾಕರಣೆ!

11ನೇ ಕೌನ್ಸುಲರ್ ಸಂವಾದ ಕಾರ್ಯಕ್ರಮವನ್ನು ಭಾರತ ನವದೆಹಲಿಯಲ್ಲಿ ಆಯೋಜಿಸಿ ಯಶಸ್ವಿಯಾಗಿದೆ. ಇದೀಗ ಮುಂದಿನ ವರ್ಷದ ಕೌನ್ಸುಲೇಟ್ ಜನರಲ್ ಸಂವಾದ ಅಮೆರಿಕದಲ್ಲಿ ನಡೆಯಲಿದೆ. 
 

click me!