ಕಳೆದುಕೊಂಡ 35 ರೂ. ಕದ್ದಿಲ್ಲ ಎಂದು 122 ವಿದ್ಯಾರ್ಥಿಗಳಿಂದ ದೇವರ ಮೇಲೆ ಆಣೆ ಮಾಡಿಸಿದ ಶಿಕ್ಷಕಿ!

By Suvarna News  |  First Published Feb 24, 2024, 12:53 PM IST

ತನ್ನ ಪರ್ಸ್‌ನಿಂದ 35 ರೂ. ಕಾಣೆಯಾಗಿದ್ದಕ್ಕೆ ಇಡೀ ಶಾಲೆಯ ಮಕ್ಕಳನ್ನು ಸಮೀಪದ ದೇವಾಲಯಕ್ಕೆ ಕರೆದುಕೊಂಡು ಹೋಗಿ ಕದ್ದಿಲ್ಲ ಎಂದು ದೇವರ ಮೇಲೆ ಆಣೆ ಮಾಡುವಂತೆ ಒತ್ತಾಯಿಸಿದ ಶಿಕ್ಷಕಿಯನ್ನು ಕೆಲಸದಿಂದ ಅಮಾನತ್ತು ಮಾಡಲಾಗಿದೆ. 


ತನ್ನ ಪರ್ಸ್‌ನಿಂದ 35 ರೂ. ಕಾಣೆಯಾಗಿದ್ದಕ್ಕೆ ಇಡೀ ಶಾಲೆಯ ಮಕ್ಕಳನ್ನು ಸಮೀಪದ ದೇವಾಲಯಕ್ಕೆ ಕರೆದುಕೊಂಡು ಹೋಗಿ ಕದ್ದಿಲ್ಲ ಎಂದು ದೇವರ ಮೇಲೆ ಆಣೆ ಮಾಡಿಸಿದ ಘಟನೆ ಬಿಹಾರದಲ್ಲಿ ನಡೆದಿದೆ. ಇದೀಗ ಶಿಕ್ಷಕಿಯನ್ನು ಅಮಾನತುಗೊಳಿಸಲಾಗಿದೆ. 

ಇಲ್ಲಿನ ಬಂಕಾ ಜಿಲ್ಲೆಯ ರಜಾನ್ ಬ್ಲಾಕ್‌ನ ಅಸ್ಮಾನಿಚಕ್ ಹಳ್ಳಿಯಲ್ಲಿರುವ ಪ್ರಾಥಮಿಕ ಶಾಲೆಯೊಂದರಲ್ಲಿ ಮಹಿಳಾ ಶಿಕ್ಷಕಿ ನೀತು ಕುಮಾರಿ, ತರಗತಿಯಲ್ಲಿ ವಿದ್ಯಾರ್ಥಿನಿಯೊಬ್ಬಳಿಗೆ ತನ್ನ ಬ್ಯಾಗ್‌ನಿಂದ ನೀರಿನ ಬಾಟಲಿಯನ್ನು ತರುವಂತೆ ಕೇಳಿದ್ದಾರೆ. ಸ್ವಲ್ಪ ಸಮಯದ ನಂತರ ಆಕೆಯ ಪರ್ಸ್ ಪರಿಶೀಲಿಸಿದಾಗ 35 ರೂಪಾಯಿ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಕೂಡಲೇ ಕೋಪಗೊಂಡ ಆಕೆ ಮಕ್ಕಳಲ್ಲಿ ಈ ಬಗ್ಗೆ ಪ್ರಶ್ನಿಸಿದ್ದಾರೆ. ತಾವು ತೆಗೆದಿಲ್ಲ ಎಂದು ಮಕ್ಕಳು ಹೇಳುತ್ತಿದ್ದಂತೆ, ಎಲ್ಲ ಶಾಲಾ ಮಕ್ಕಳನ್ನು ಸಮೀಪದ ದೇವಸ್ಥಾನಕ್ಕೆ ಕರೆದೊಯ್ದು, ಆಕೆಯ ಪರ್ಸ್‌ನಿಂದ 35 ರೂಪಾಯಿ ಕದ್ದಿಲ್ಲ ಎಂದು ದೇವರ ಹೆಸರಿನಲ್ಲಿ ಪ್ರಮಾಣ ಮಾಡಿಸಿದ್ದಾರೆ. ಆ ದಿನ 122 ವಿದ್ಯಾರ್ಥಿಗಳು ಹಾಜರಾಗಿದ್ದರು ಮತ್ತು ನೀತು ಕುಮಾರಿ ಮಾತ್ರ ಕರ್ತವ್ಯದಲ್ಲಿದ್ದರು. ಏಕೆಂದರೆ ಶಾಲೆಯಲ್ಲಿ ಒಟ್ಟು ಇಬ್ಬರು ಶಿಕ್ಷಕರು ಮಾತ್ರ ಇದ್ದಾರೆ.

Tap to resize

Latest Videos

undefined

ವಿಷಯ ತಿಳಿಯುತ್ತಿದ್ದಂತೆ ಘಟನೆ ಬಗ್ಗೆ ಗ್ರಾಮಸ್ಥರಿಂದ ತೀವ್ರ ಆಕ್ಷೇಪ ಕೇಳಿಬಂದಿತು. ಮರುದಿನ ಶಾಲೆಯ ಆವರಣದಲ್ಲಿ ಗ್ರಾಮಸ್ಥರು ಗಲಾಟೆ ಮಾಡಿದ್ದಾರೆ. 

'ಇಷ್ಟೊಂದು ಕ್ಯೂಟ್ ಆಗಿರೋದು ಕ್ರೈಂ ಅಲ್ವಾ?' ಕಪ್ಪು ಸೀರೆಯಲ್ಲಿ ಕೈವಾ ನಟಿ ಮೇಘಾ ಶೆಟ್ಟಿ
 

ವರ್ಗ
ಶಿಕ್ಷಕಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳ ಪೋಷಕರು ಗುರುವಾರ ಒತ್ತಾಯಿಸಿದರು. ಯಾವುದೇ ಕ್ರಮ ಕೈಗೊಳ್ಳದಿದ್ದರೆ ಶಾಲೆಯ ಚಟುವಟಿಕೆಗಳಿಗೆ ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದರು. ಶಿಕ್ಷಕಿಯ ಕ್ರಮವನ್ನು ಖಂಡಿಸಿದ ಬ್ಲಾಕ್ ಶಿಕ್ಷಣಾಧಿಕಾರಿ ಕುಮಾರ್ ಪಂಕಜ್, ವಿದ್ಯಾರ್ಥಿಗಳನ್ನು ಈ ರೀತಿ ಅನುಮಾನಿಸುವುದು ಅನುಚಿತವಾಗಿದೆ ಎಂದು ಹೇಳಿದ್ದಾರೆ. ಶಿಕ್ಷಕಿಯನ್ನು ಬೇರೆ ಸ್ಥಾನಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ.

ಶನಿ ಉದಯ 2024 ಧನು, ವೃಷಭ, ತುಲಾ ರಾಶಿಗಳಿಗೆ ಭಾಗ್ಯೋದಯ ಕಾಲ
 

ಸಮರ್ಥನೆ
ಪ್ರತಿಕ್ರಿಯೆಯಾಗಿ, ನೀತು ಕುಮಾರಿ ತನ್ನ ಕಾರ್ಯಗಳನ್ನು ಸಮರ್ಥಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳಿಂದ ಕಾಣೆಯಾದ ಹಣದ ಬಗ್ಗೆ ತಾನು ಸರಳವಾಗಿ ಕೇಳಿದ್ದೇನೆ ಮತ್ತು ಅವರು ಸ್ವಯಂಪ್ರೇರಣೆಯಿಂದ ದೇವತೆಗಳ ಮುಂದೆ ಪ್ರಮಾಣ ಮಾಡಲು ದೇವಸ್ಥಾನಕ್ಕೆ ಬಂದರು ಎಂದು ಹೇಳಿದ್ದಾರೆ. ಅವಳು ಹಳ್ಳಿಗರ ಗಲಾಟೆಗೆ ಆಘಾತ ಮತ್ತು ನಿರಾಶೆಯನ್ನು ವ್ಯಕ್ತಪಡಿಸಿ, ಶಾಲೆಯಲ್ಲಿ ತನ್ನ 18 ವರ್ಷಗಳ ಸೇವಾವಧಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ. 

ಸ್ಥಳೀಯ ಮುಖಂಡರಾದ ಅನುಪಮ ಕುಮಾರಿ, ಶಿಕ್ಷಕಿಯ ವರ್ತನೆಯನ್ನು ಟೀಕಿಸಿ, ಇದು ಅನ್ಯಾಯವಾಗಿದೆ ಮತ್ತು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಘಟನೆ ಸಂಬಂಧ ಶನಿವಾರ ಶಿಕ್ಷಕರು ಮತ್ತು ಪೋಷಕರ ಸಭೆ ಕರೆಯಲಾಗಿದೆ ಎಂದಿದ್ದಾರೆ.

click me!