ಸ್ವಾತಂತ್ರ್ಯ ದಿನಾಚರಣೆಗೆ ಕೆಂಪುಕೋಟೆಯಲ್ಲಿ ಗರಿಷ್ಠ ಧ್ವಜಾರೋಹಣ ಮಾಡಿದ ಪ್ರಧಾನಿ ಯಾರು?

By Suvarna NewsFirst Published Aug 14, 2023, 5:53 PM IST
Highlights

ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಲಿದ್ದಾರೆ. ಈ ಮೂಲಕ ಮನ್‌ಮೋಹನ್ ಸಿಂಗ್ ದಾಖಳೆ ಸರಿಗಟ್ಟಲಿದ್ದಾರೆ. ಗರಿಷ್ಠ ಬಾರಿ ಸ್ವಾತಂತ್ರ್ಯ ದಿನಾಚಾರಣೆಯ ಧ್ವಜಾರೋಹಣ ಮಾಡಿದ ಪ್ರಧಾನಿಗಳು ಯಾರ್ಯಾರು? ಇಲ್ಲಿದೆ ಪಟ್ಟಿ

ನವದೆಹಲಿ(ಆ.14) ಭಾರತದ ಸ್ವಾತಂತ್ರ್ಯ ಸಂಭ್ರಮ ಇಮ್ಮಡಿಗೊಂಡಿದೆ. ಆಗಸ್ಟ್ 15, 1947ರಲ್ಲಿ ಭಾರತ ಬ್ರಿಟಿಷರ ಆಡಳಿತದ ಮುಕ್ತಿಪಡೆದುಕೊಂಡು ಸ್ವತಂತ್ರಗೊಂಡಿತು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಮೋದಿ 10ನೇ ಬಾರಿಗೆ ಕೆಂಪುಕೋಟೆ ಮೇಲೆ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸುತ್ತಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್ ಎರಡು ಬಾರಿ ಪ್ರಧಾನಿಯಾಗಿ ಒಟ್ಟು 10 ಬಾರಿ ಸ್ವಾತಂತ್ರ್ಯದ ಧ್ವಜಾರೋಹಣ ಮಾಡಿದ್ದಾರೆ. ಇದೀಗ ಮೋದಿ ಕೂಡ 10ನೇ ಬಾರಿಗೆ ಧ್ವಾಜರೋಹಣ ಮಾಡಲಿದ್ದಾರೆ.

ಪ್ರಧಾನಿ ಮೋದಿ ಸೇರಿದಂತೆ ಭಾರತ ಇದುವರಗೆ ಒಟ್ಟು 15 ಪ್ರಧಾನ ಮಂತ್ರಿಗಳನ್ನು ಕಂಡಿದೆ. ಇದರಲ್ಲಿ 13 ಪ್ರಧಾನಿಗಳಿಗೆ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಮಾಡಿದ್ದಾರೆ. ಇನ್ನುಳಿದ ಗುಲ್ಜಾರಿಲಾಲ್ ನಂದಾ ಹಾಗೂ ಚಂದ್ರ ಶೇಖರ್‌ಗೆ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ಮಾಡುವ ಅವಕಾಶವೇ ಸಿಕ್ಕಿಲ್ಲ. ಭಾರತದಲ್ಲಿ ಗರಿಷ್ಠ ಬಾರಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಿದ, ಕೆಂಪುಕೋಟೆಯಲ್ಲಿ ಆಗಸ್ಟ್ 15 ರಂದು ಧ್ವಜಾರೋಹಣ ಮಾಡಿದ ಹೆಗ್ಗಳಿಕೆಗೆ ಜವಾಹರ್ ಲಾಲ್ ನೆಹರೂ ಪಾತ್ರರಾಗಿದ್ದಾರೆ.

ಸ್ವಾತಂತ್ರ್ಯ ದಿನಾಚರಣೆಗೆ ಪಾಕ್ ಉಗ್ರರಿಂದ ದಾಳಿ ಸಂಚು, ಗುಪ್ತಚರ ಮಾಹಿತಿ ಬೆನ್ನಲ್ಲೇ ಹೈ ಅಲರ್ಟ್!

ಬ್ರಿಟಿಷರಿಂದ ಮುಕ್ತಿ ಪಡೆದ ಸ್ವತಂತ್ರ ಭಾರತಕ್ಕೆ ಜವಾಹರ್ ಲಾಲ್ ನೆಹರೂ ಮೊದಲ ಪ್ರಧಾನಿ. 1947, ಆಗಸ್ಟ್ 15 ರಂದು ನೆಹರೂ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದರು. 1947 ರಿಂದ 1967ರ ವರೆಗೆ ನೆಹರೂ ಸತತವಾಗಿ ಸ್ವಾತಂತ್ರ್ಯ ದಿನಾಚರಣೆಗೆ ಕಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ. ಬರೋಬ್ಬರಿ 17 ಬಾರಿ ನೆಹರೂ ಆಗಸ್ಟ್ 15 ರಂದು ಧ್ವಜಾರೋಹಣ ಮಾಡಿದ್ದಾರೆ.

ನೆಹರೂ ನಂತರದ ಸ್ಥಾನ ಇಂದಿರಾ ಗಾಂಧಿಗೆ ಸಲ್ಲಲಿದೆ. ನೆಹರು ಪುತ್ರಿ ಇಂದಿರಾ ಗಾಂಧಿ ಒಟ್ಟು 16 ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಕೆಂಪುಕೋಟೆಯಲ್ಲಿ ಫ್ಲಾಗ್ ಹೋಸ್ಟ್ ಮಾಡಿದ್ದಾರೆ. ಆಧರೆ ನೆಗರೂ ರೀತಿ ಸತತವಾಗಿ ಮಾಡಿಲ್ಲ. ಇದರ ನಡುವೆ ನಾಲ್ಕು ವರ್ಷಗಳ ಅಂತರವಿದೆ. ಗರಿಷ್ಠ ಬಾರಿ ಆಗಸ್ಟ್ 15 ರಂದು ಫ್ಲಾಗ್ ಹೋಸ್ಟ್ ಮಾಡಿದ ಕೀರ್ತಿಗೆ ನೆಹರೂ ಹಾಗೂ ಇಂದಿರಾ ಗಾಂಧಿ ಪಾತ್ರರಾಗಿದ್ದಾರೆ.

ನೆಹರೂ, ಇಂದಿರಾ ಗಾಂಧಿ ಬಳಿಕ ಮೂರನೇ ಸ್ಥಾನ ಮಾಜಿ ಪ್ರಧಾನಿ ಮನ್‌ಮೋಹನ್ ಸಿಂಗ್‌ಗೆ ಸಲ್ಲಲಿದೆ. ಮನ್‌ಮೋಹನ್ ಸಿಂಗ್ 10 ಬಾರಿ ಸ್ವಾತಂತ್ರ್ಯ ದಿನಾಚರಣೆಗೆ ಧ್ವಜಾರೋಹಣ ಮಾಡಿದ್ದಾರೆ. ಇದೀಗ ಈ ದಾಖಲೆಯನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ಸರಿಗಟ್ಟಲಿದ್ದಾರೆ. ಇನ್ನು ಅಟಲ್ ಬಿಹಾರಿ ವಾಜಪೇಯಿ 5 ಬಾರಿ ಆಗಸ್ಟ್ 15 ರಂದು ಧ್ವಜಾರೋಹಣ ಮಾಡಿದ್ದರೆ, ರಾಜೀವ್ ಗಾಂಧಿ 5 ಬಾರಿ ಧ್ವಜಾರೋಹಣ ಮಾಡಿ 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಇನ್ನು ಕರ್ನಾಟಕದಿಂದ ಪ್ರಧಾನಿ ಪಟ್ಟ ಅಲಂಕರಿಸಿದ ಹೆಚ್‌ಡಿ ದೇವೇಗೌಡ ಒಂದ ಬಾರಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ್ದಾರೆ.

ಹೃದಯದಿಂದ ತಿರಂಗ ಹಾರಿಸಿದ್ದೇನೆ, ಬದಲಾದ ಕಾಶ್ಮೀರ ಕುರಿತು ಮುಸ್ಲಿಂ ವ್ಯಾಪಾರಿ ಮಾತು!

ಆ.15ರಂದು ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿದ ಪ್ರಧಾನಿಗಳು
ಜವಾಹರ್ ಲಾಲ್ ನೆಹರೂ: 17 ಬಾರಿ
ಇಂದಿರಾ ಗಾಂಧಿ :16 ಬಾರಿ
ಮನ್‌ಮೋಹನ್ ಸಿಂಗ್ : 10 ಬಾರಿ
ನರೇಂದ್ರ ಮೋದಿ : 9 ಬಾರಿ(2023 ಸೇರಿ 10)
ಅಟಲ್ ಬಿಹಾರಿ ವಾಜಪೇಯಿ : 6  ಬಾರಿ
ರಾಜೀವ್ ಗಾಂಧಿ : 5 ಬಾರಿ
ಪಿವಿ ನರಸಿಂಹ ರಾವ್ : 5 ಬಾರಿ
ಲಾಲ್ ಬಹದ್ದೂರ್ ಶಾಸ್ತ್ರಿ : 2 ಬಾರಿ
ಮೊರಾರ್ಜಿ ದೇಸಾಯಿ : 2ಬಾರಿ
ಚರಣ್ ಸಿಂಗ್ :1 ಬಾರಿ
ವಿಪಿ ಸಿಂಗ್ : 1 ಬಾರಿ
ಹೆಚ್‌ಡಿ ದೇವೇಗೌಡ : 1ಬಾರಿ
ಐಕೆ ಗುಜ್ರಾಲ್ :1ಬಾರಿ
 

click me!