Watch: ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಕಾಣದ ಪಾಕ್‌ ಧ್ವಜ, ಖಾಲಿ ಕಟ್ಟಡ ಕಂಡು ಸಿಟ್ಟಿಗೆದ್ದ ಪಾಕ್‌ ಜನತೆ!

By Santosh NaikFirst Published Aug 14, 2023, 5:49 PM IST
Highlights

ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ಕಟ್ಟಡ ಎನಿಸಿಕೊಂಡಿರುವ ಬುರ್ಜ್‌ ಖಲೀಫಾ ಇತ್ತೀಚಿನ ದಿನಗಳಲ್ಲಿ ಪ್ರಮುಖ ರಾಷ್ಟ್ರಗಳ ಸ್ವಾತಂತ್ರ್ಯೋತ್ಸವದಂದು ಆಯಾ ರಾಷ್ಟ್ರದ ರಾಷ್ಟಧ್ವಜವನ್ನು ತನ್ನ ಕಟ್ಟಡದಲ್ಲಿ ಪ್ರದರ್ಶನ ಮಾಡುವ ಸಂಪ್ರದಾಯ ಬೆಳೆಸಿಕೊಂಡು ಬಂದಿದೆ.
 

ನವದೆಹಲಿ (ಆ.14): ಯುಎಇ ಪಾಲಿಗೆ ಸೋಮವಾರ ಏನೂ ವಿಶೇಷ ದಿನವಾಗಿರಲಿಲ್ಲ. ಆದರೆ, ಸಾವಿರಾರು ಪಾಕಿಸ್ತಾನಿ ಪ್ರಜೆಗಳು ಮಧ್ಯರಾತ್ರಿಯಂದು ಬುರ್ಜ್‌ ಖಲೀಫಾ ಕಟ್ಟದ ಎದುರು ನಿಂತಿದ್ದರು. ಯಾಕೆ ಎನ್ನುವುದು ಯಾರಿಗೂ ಗೊತ್ತಿರಲಿಲ್ಲ. ಆದರೆ, ಕೆಲ ಹೊತ್ತಿನಲ್ಲಿಯೇ ಅವರು ನಿರಾಶರಾಗಿ ಬೈದಾಡಿಕೊಳ್ಳಲು ಆರಂಭಿಸಿದರು. ಕಾರಣ ಇಷ್ಟೇ.. ಸೋಮವಾರ ಪಾಕಿಸ್ತಾನದ ಸ್ವಾತಂತ್ರ್ಯದ ದಿನ. ಸಾಮಾನ್ಯವಾಗಿ ಸ್ನೇಹಪರ ರಾಷ್ಟ್ರಗಳ ಸ್ವಾತಂತ್ರ್ಯೋತ್ಸವ ದಿನದಂದು ವಿಶ್ವದ ಅತಿ ಎತ್ತರದ ಮಾನವ ನಿರ್ಮಿತ ಕಟ್ಟಡವಾಗಿರುವ ಬುರ್ಜ್‌ ಖಲೀಫಾ ಕಟ್ಟಡದಲ್ಲಿ ಆ ದೇಶದ ರಾಷ್ಟ್ರಧ್ವಜ ಪ್ರದರ್ಶನ ಮಾಡಲಾಗುತ್ತದೆ. ಯುಎಇ ರಾಷ್ಟ್ರದ ಅತ್ಯಂತ ಪ್ರಖ್ಯಾತ ಲ್ಯಾಂಡ್‌ಮಾರ್ಕ್‌ ಆಗಿರುವ ಬುರ್ಜ್‌ ಖಲೀಫಾದಲ್ಲಿ ಧ್ವಜ ಪ್ರದರ್ಶನ ಇತ್ತೀಚೆಗೆ ಸಾಮಾನ್ಯ ಎನ್ನುವಂತೆ ನಡೆಯುತ್ತಿದೆ. ಪಾಕಿಸ್ತಾನಿಯರೂ ಕೂಡ ಆಗಸ್ಟ್‌ 13-14ರ ಮಧ್ಯರಾತ್ರಿಯಂದು ಬುರ್ಜ್‌ ಖಲೀಫಾ ತನ್ನ ದೇಶದ ಧ್ವಜ ಕೂಡ ಪ್ರದರ್ಶನ ಮಾಡುತ್ತದೆ ಎಂದು ಕಾದು ನಿಂತಿದ್ದರು. ಆದರೆ, 5 ನಿಮಿಷ ಆಯ್ತು, 10 ನಿಮಿಷ ಆಯ್ತು.. ಕೊನೆಗೆ ಅರ್ಧ ಗಂಟೆಯಾದರೂ ಪಾಕಿಸ್ತಾನದ ಧ್ವಜ ಪ್ರದರ್ಶನವಾಗಲಿಲ್ಲ. ಬುರ್ಜ್‌ ಖಲೀಫಾದಲ್ಲಿ ಪಾಕಿಸ್ತಾನದ ಧ್ವಜ ಪ್ರದರ್ಶನ ಆಗೋದಿಲ್ಲ ಎಂದು ಗೊತ್ತಾಗುತ್ತಿದ್ದಂತೆ ಪಾಕ್‌ ಪ್ರಜೆಗಳು ಕಿಡಿಕಾರಲು ಆರಂಭಿಸಿದರು.

ಕಳೆದ ವರ್ಷ ಭಾರತದ ಸ್ವಾತಂತ್ರ್ಯೋತ್ಸವದಂದು ಬುರ್ಜ್‌ ಖಲೀಫಾದಲ್ಲಿ ಭಾರತದ ಧ್ವಜ ಪ್ರದರ್ಶನ ಮಾಡಲಾಗಿತ್ತು. ಪಾಕಿಸ್ತಾನವು ಆಗಸ್ಟ್ 14 ರಂದು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತದೆ. ಈ ದಿನವನ್ನು ಆಚರಿಸಲು, ದುಬೈನಲ್ಲಿರುವ ನೂರಾರು ಪಾಕಿಸ್ತಾನಿಗಳು ಬುರ್ಜ್ ಖಲೀಫಾದಲ್ಲಿ ಜಮಾಯಿಸಿದ್ದರು. ಪ್ರಮುಖ ದಿನಗಳಲ್ಲಿ ಲೇಸರ್ ಲೈಟ್ ಶೋಗಳಿಗೆ ಹೆಸರುವಾಸಿಯಾದ ಕಟ್ಟಡವು ತಮ್ಮ ದೇಶದ ಧ್ವಜವನ್ನು ಪ್ರದರ್ಶಿಸುತ್ತದೆ ಎಂದು ಆಸೆಯಲ್ಲಿದ್ದ ಅವರಿಗೆ ನಿರಾಸೆಯಾಗಿದೆ. ಆದರೆ, ಬುರ್ಜ್ ಖಲೀಫಾ ಪಾಕ್‌  ಧ್ವಜವನ್ನು ಪ್ರದರ್ಶನ ಮಾಡದೇ ಇದ್ದಾಗ ಅವರು ನಿರಾಸೆಗೊಂಡಿದ್ದರೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಪಾಕಿಸ್ತಾನಿಗಳು ಕಟ್ಟಡದ ಸುತ್ತಲೂ ಕಾಯುತ್ತಿರುವುದನ್ನು ಕಾಣಬಹುದು, ಕೆಲವರು ತಮ್ಮ ಫೋನ್‌ಗಳಲ್ಲಿ ಕ್ಷಣವನ್ನು ಸೆರೆಹಿಡಿಯಲು ತಯಾರಾಗಿದ್ದರು. ಮಹಿಳೆಯೊಬ್ಬರು ಈಗಾಗಲೇ 12 ಗಂಟೆ ಆಗಿದೆ ಎಂದು ಹೇಳುತ್ತಿರುವುದನ್ನೂ ಕೇಳಬಹುದಾಗಿದೆ. "ಪಾಕಿಸ್ತಾನ್ ಕಾ ಝಂಡಾ ಬುರ್ಜ್ ಖಲೀಫಾ ಪರ್ ನಹಿ ಲಗೀ. ಸೋ ಸ್ಯಾಡ್‌! ಪ್ರಾಂಕ್ ಹೋ ಗಯಾ ಪಾಕಿಸ್ತಾನಿಯೋ,"  (ಪಾಕಿಸ್ತಾನದ ಧ್ವಜ ಬುರ್ಜ್‌ ಖಲೀಫಾದಲ್ಲಿ ಬಿತ್ತರವಾಗಿಲ್ಲ, ತುಂಬಾ ಬೇಸರವಾಗಿದೆ. ನಿಮ್ಮ ಮೇಲೆ ಪ್ರ್ಯಾಂಕ್‌ ಮಾಡಲಾಗಿದೆ ಪಾಕಿಸ್ತಾನಿಗಳೇ) ಎಂದು ವಿಡಿಯೋದಲ್ಲಿ ಹೇಳಿದ್ದಾಳೆ. ಕಳೆದ ವರ್ಷದ ಆಗಸ್ಟ್‌ 14 ಹಾಗೂ ಈ ವರ್ಷದ ಮಾರ್ಚ್‌ 24 ರಂದು ಈ ಕಟ್ಟಡದಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶನ ಮಾಡಲಾಗಿತ್ತು.

Burj Khalifa refused to display Pakistan’s flag 🇵🇰 this year 😂

Thank You UAE 🇦🇪❤️

This is really the prank of the year🤣 pic.twitter.com/TNxpHUVRgh

— Shayan Ali (@ShayaanAlii)

ದುಬೈನ ಬುರ್ಜ್‌ ಖಲೀಫಾದಲ್ಲಿ ಕನ್ನಡ ಧ್ವಜ: ಕಿಚ್ಚ ಸಿನಿ ಜರ್ನಿಗೆ 25 ವರ್ಷ

'ಇಲ್ಲಿಯವರೆಗಿನ ಅತಿದೊಡ್ಡ ಪ್ರ್ಯಾಂಕ್‌ಅನ್ನು ಈಗ ಕಂಡಿದ್ದೇನೆ. ಪಾಕಿಸ್ತಾನದ ಸ್ವಾತಂತ್ರ್ಯೋತ್ಸವದಂದು ಯುಎಇ ಅಧಿಕಾರಿಗಳು ಅತ್ಯಂತ ತಮಾಷೆಯಾದ ಕ್ಷಣ ದಾಖಲು ಮಾಡಿದ್ದಾರೆ. ಬುರ್ಜ್‌ ಖಲೀಫಾದಲ್ಲಿ ಧ್ವಜ ಪ್ರದರ್ಶನವಾಗುತ್ತದೆ ಎಂದು ಎಲ್ಲರೂ ನಂಬುವಂತೆ ಮಾಡಿದ್ದರು. ಆದರೆ, ನಿರಾಸೆ ಎನ್ನುವುದು ನಿಜವಾಗಿತ್ತು. ಇದು ಬಹಳ ಮೋಜಿನ ಕ್ಷಣವಾಗಿತ್ತು' ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ. ಪಾಕಿಸ್ತಾನದ ದೇಶಪ್ರೇಮಿಗಳ ಜೊತೆ ಇಂದು ಬುರ್ಜ್‌ ಖಲೀಫಾ ಇದೇ ಮೊದಲ ಬಾರಿಗೆ ಹೈಡ್‌ ಆಂಡ್‌ ಸೀಕ್‌ ಆಗಿದೆ. ಅಚ್ಚರಿ ಏನೆಂದರೆ, ಪಾಕಿಸ್ತಾನ ಧ್ವಜ ಈಗಲೂ ಕಾಣುತ್ತಿಲ್ಲ. ತಮ್ಮ ನಿರೀಕ್ಷೆಗಳಿಗೆ ಪಾಕಿಸ್ತಾನಿಯರು ರೀಫಂಡ್‌ ಕೇಳುತ್ತಿದ್ದಾರೆ. ದುಬೈನಲ್ಲಿರುವ ಬುರ್ಜ್ ಖಲೀಫಾದಲ್ಲಿ ಪಾಕಿಸ್ತಾನದ ಧ್ವಜ ಕಂಡಿಲ್ಲ. ಇದು ಬಹಳ ಬೇಸರದ ವಿಷಯ ಎಂದು ಪಾಕ್‌ ಟ್ವೀಟರ್ ಬಳಕೆದಾರರ ರಕುಫ್ ಖಾದ್ರಿ ಹೇಳಿದ್ದಾರೆ.

Latest Videos

ಬುರ್ಜ್‌ ಖಲೀಫಾ ಮೇಲೆ ನ್ಯೂಜಿಲ್ಯಾಂಡ್ ಪ್ರಧಾನಿ ಫೋಟೋ!

click me!