Uttar Pradesh | 7 ತಾಸು ಫ್ರೀಜರ್‌ನಲ್ಲಿದ್ದು ಬದುಕಿದ ‘ಮೃತ’ ವ್ಯಕ್ತಿ!

By Kannadaprabha NewsFirst Published Nov 22, 2021, 6:59 AM IST
Highlights
  • ಜೀವಂತ ವ್ಯಕ್ತಿಯೋರ್ವನನ್ನು ಮೃತ ಎಂದು ಘೋಷಿಸಿ 7 ಗಂಟೆಗಳ ಕಾಲ ಶವಾಗಾರದ ಫ್ರೀಜರ್‌ನಲ್ಲಿಟ್ಟ ವಿಚಿತ್ರ ಘಟನೆ 
  • 7 ಗಂಟೆಗಳ ನಂತರ ಮನೆಯವರಿಗೆ ದೇಹವನ್ನು ಹಸ್ತಾಂತರಿಸುವಾಗ ದೇಹದಲ್ಲಿನ್ನೂ ಚಲನವಲನ

ನವದೆಹಲಿ (ನ.22): ಜೀವಂತ (Live) ವ್ಯಕ್ತಿಯೋರ್ವನನ್ನು ಮೃತ ಎಂದು ಘೋಷಿಸಿ 7 ಗಂಟೆಗಳ ಕಾಲ ಶವಾಗಾರದ ಫ್ರೀಜರ್‌ನಲ್ಲಿಟ್ಟ (Freezer) ವಿಚಿತ್ರ ಘಟನೆ ಉತ್ತರ ಪ್ರದೇಶದಲ್ಲಿ  (Uttara Pradesh) ನಡೆದಿದೆ.  ಶ್ರೀ ಕೇಶ ಕುಮಾರ (40) ಎಂಬ ವ್ಯಕ್ತಿಯೋರ್ವನಿಗೆ ಬೈಕ್‌ (Bike) ಗುದ್ದಿದ್ದರಿಂದ ಗುರುವಾರ ಜಿಲ್ಲಾ ಆಸ್ಪತ್ರೆಗೆ (District Hospital) ಸೇರಿಸಲಾಗಿತ್ತು. ವೈದ್ಯರು (Doctors) ಅವನು ಅಪಘಾತದಲ್ಲಿ ಮೃತ ಪಟ್ಟಿದ್ದಾನೆಂದು ಘೋಷಿಸಿದ ನಂತರ ಶವವನ್ನು ಫ್ರೀಜರ್‌ನಲ್ಲಿ ಇಡಲಾಯಿತು.7 ಗಂಟೆಗಳ ನಂತರ ಮನೆಯವರಿಗೆ ದೇಹವನ್ನು ಹಸ್ತಾಂತರಿಸುವಾಗ ದೇಹದಲ್ಲಿನ್ನೂ ಚಲನವಲನವಿರುವುದನ್ನು ನಾದಿನಿ ಮಧುಬಾಲಾ ಗಮನಿಸಿ, ಇವರಿನ್ನೂ ಬದುಕಿದ್ದಾರೆ ಏನನ್ನೋ ಹೇಳಲು ಬಯಸುತ್ತಾರೆ ಎಂದಿದ್ದಾಳೆ.

ತಕ್ಷಣ ಕುಮಾರನನ್ನು ಮೇರಠ್‌ ಆಸ್ಪತ್ರೆಗೆ (Hospital) ದಾಖಲಿಸಿದ್ದು, ಅವನು ಚೇತರಿಸಿಕೊಳ್ಳುತ್ತಿದ್ದಾನೆ. ಈ ನಡುವೆ, ಕುಮಾರ್‌ ಕುಟುಂಬಸ್ಥರು (family) ವೈದ್ಯರ ವಿರುದ್ಧ ಪ್ರಕರಣ (Case) ದಾಖಲಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಮೊರಾದಾ ಬಾದ್‌ ಆಸ್ಪತ್ರೆಯ (Moradabad Hospital) ಹಿರಿಯ ವೈದ್ಯ ಶಿವಸಿಂಗ್‌, ‘ಕುಮಾರನನ್ನು ರಾತ್ರಿ ಮೂರು ಗಂಟೆಗೆ ಆಸ್ಪತ್ರೆಗೆ ಕೆರತಂದಾಗ ಅವನ ಹೃದಯ (Heart) ಸ್ತಬ್ಧವಾಗಿತ್ತು. ತುರ್ತು ವೈದ್ಯಕೀಯ (Emergency) ಅಧಿಕಾರಿ ಹಲವಾರು ಬಾರಿ ಪರೀಕ್ಷಿಸಿಯೇ ಮೃತನೆಂದು ಘೋಷಿಸಿದ್ದರು. ಆದರೆ ಈಗ ಪೊಲೀಸರು (Police) ಮನೆಯವರು ಅವನಿನ್ನೂ ಬದುಕಿರುವುದನ್ನು ಕಂಡುಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುವುದು. ವ್ಯಕ್ತಿಯ ಜೀವ ರಕ್ಷಣೆಗೆ ಮೊದಲಿನ ಪ್ರಾಶಸ್ತ್ಯ ನೀಡಲಾಗುವುದು’ ಎಂದಿದ್ದಾರೆ.

ಮೃತ ಗರ್ಭಿಣಿ ಹೊಟ್ಟೆಯಿಂದ ಮಗು ತೆಗೆದ ವೈದ್ಯರು  : 

ವೈದ್ಯ ಲೋಕದಲ್ಲಿ ಒಂದೊಂದು ಅಚ್ಚರಿಗಳು ಆಗುತ್ತಲೇ  ಇರುತ್ತವೆ. ಈ ಬಾರಿ ಅಂಥದ್ದೊಂದು ಅಚ್ಚರಿಯನ್ನು ಗದಗದ (Gadag) ವೈದ್ಯರು ಮಾಡಿದ್ದಾರೆ. ಮೃತ ಗರ್ಭಿಣಿ(Pregnant) ಉದರದಿಂದ ಮಗುವನ್ನು ಜೀವಂತವಾಗಿ (Childbirth)ಹೊರತೆಗೆದಿದ್ದಾರೆ.

ಗದಗ ದಂಡಪ್ಪ ಮಾನ್ವಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನವೆಂಬರ್ 4ರಂದು ಈ ಸಾಧನೆ ಮಾಡಿದ್ದಾರೆ. ಮೂರ್ಛೆ ರೋಗ, ಲೋ ಬಿಪಿಯಿಂದ ಆಸ್ಪತ್ರೆಗೆ ಬರುವಷ್ಟರಲ್ಲಿ ಗರ್ಭಿಣಿ ಮೃತಪಟ್ಟಿದ್ದಳು.  ತಕ್ಷಣ ಎಚ್ಚರಿಕೆ ಹೆಜ್ಜೆ ಇಟ್ಟ ವೈದ್ಯರಿಂದ ಮಗು ಬಚಾವ್ ಮಾಡಿದ್ದಾರೆ.

10 ನಿಮಿಷದಲ್ಲಿ ಆಪರೇಷನ್ ಮಾಡಿ ಮಗು ಬದುಕಿಸಿದ್ದಾರೆ. ಅಪರೂಪದಲ್ಲಿ ಅತೀ ಅಪರೂಪ ಪ್ರಕರಣ ಇದಾಗಿದೆ. ಮೂರ್ಛೆ ರೋಗ, ಲೋ ಬಿಪಿ ಆಗಿ ಗರ್ಭಿಣಿ ಮೃತಪಟ್ಟರೂ ಮಗುವನ್ನ ಬದುಕಿಸಿದ್ದಾರೆ. ಕುಟುಂಬ ಸದಸ್ಯರ ಮನವೊಲಿಸಿ ಯಶಸ್ವಿಯಾಗಿ ಹೆರಿಗೆ ನಡೆಸಲಾಗಿದೆ.

ಮಗು ಆರೋಗ್ಚೇಯವಾಗಿದ್ತದು ಸುಧಾರಿಸಿಕೊಳ್ಳುತ್ತಿದೆ. ಗದಗ ಜಿಲ್ಲೆಯ ರೋಣ ತಾಲೂಕಿನ ಮುಶಿಗೇರಿ ಗ್ರಾಮದ ಗರ್ಭಿಣಿ ಅನ್ನಪೂರ್ಣ ಅವರು ಮಗುನ್ನು ಜಗತ್ತಿಗೆ ನೀಡಿ ಕಣ್ಣು ಮುಚ್ಚಿಕೊಂಡಿದ್ದಾರೆ. ಸದ್ಯ ಮಗುವಿಗೆ ದಂಡಪ್ಪ ಮಾನ್ವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 

ಸತ್ತವಳು ಎದ್ದು ಬಂದಳು; ಎಂಥ ವಿಸ್ಮಯ ಈ ನರಜನ್ಮ!

ಸತ್ತವಳು ಎದ್ದು ಬಂದಿದ್ದಳು; ಮಹಿಳೆ ಸಾವನ್ನಪ್ಪಿದ್ದು, ಆಕೆ ಮೃತಪಟ್ಟಿರುವುದಾಗಿ ಖುದ್ದು ವೈದ್ಯರೇ ಪರಿಶೀಲಿಸಿ ಘೋಷಿಸಿದ್ದರು. ಆದರೆ ಇದಾದ ಬರೋಬ್ಬರಿ 45 ನಿಮಿಷಗಳ ಬಳಿಕ ಆ ಮಹಿಳೆ ಎದ್ದು ಕುಳಿತ್ತಿದ್ದಾಳೆ. 

ದ ಸನ್ ಮಾಡಿದ ವರದಿಯನ್ವಯ ಅಮೆರಿಕದ ಕ್ಯಾಥಿ ಎನ್ನುವವರಿಗೆ ಹೊಸ ಜೀವನ ಸಿಕ್ಕಿದೆ. ಆಕೆ ಅಮೆರಿಕದ ಪೂರ್ವ ಕರಾವಳಿಯ ಮೇರಿಲ್ಯಾಂಡ್‌ ನಿವಾಸಿ. ವಾಸ್ತವವಾಗಿ ಕ್ಯಾಥಿಯ ಮಗಳು ಗರ್ಭಿಣಿಯಾಗಿದ್ದು, ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಇನ್ನು ಕ್ಯಾಥಿ ಗಾಲ್ಫ್‌ ಕೋರ್ಸ್‌ನಲ್ಲಿದ್ದಾಗ ಈ ಮಾಹಿತಿ ಬಂದಿದೆ. ಕೂಡಲೇ ಆಕೆ ಅಲ್ಲಿಂದ ಆಸ್ಪತ್ರೆಗೆ ತೆರಳಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಆಕೆಗೆ ಹೃದಯಾಘಾತವಾಗಿದೆ. 

ಇಂತಹ ಪರಿಸ್ಥಿತಿಯಲ್ಲಿ, ಕ್ಯಾಥಿಯನ್ನು ತಕ್ಷಣವೇ ಎಮರ್ಜೆನ್ಸಿ ವಾರ್ಡ್‌ಗೆ ಕರೆದೊಯ್ಯಲಾಯಿತು. ವೈದ್ಯರ ಪ್ರಕಾರ, ಕ್ಯಾಥಿಯ ನಾಡಿ ಸಿಕ್ಕಿಲ್ಲ. ಹೀಗಾಗಿ ಬಹಳ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕ್ಯಾಥಿಯ ಮೆದುಳಿಗೆ ಸುಮಾರು 45 ನಿಮಿಷಗಳ ಕಾಲ ಆಮ್ಲಜನಕ ಪೂರೈಕೆಯಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ವೈದ್ಯರು ಕ್ಯಾಥಿ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ವೈದ್ಯರ ಭಾಷೆಯಲ್ಲಿ ಹೇಳುವುದಾದರೆ ಕ್ಯಾಥಿಯನ್ನು ಕ್ಲಿನಿಕಲಿ ಡೆಡ್ ಎಂದು ಘೋಷಿಸಲಾಗಿದೆ. ಅತ್ತ, ಕ್ಯಾಥಿಯ ಮಗಳಿಗೆ 36 ಗಂಟೆಯ ಹೆರಿಗೆ ನೋವಿನ ಬಳಿಕ ಸಿಸೇರಿಯನ್ ಮೂಲಕ ಹೆರಿಗೆ ನಡೆದಿದೆ. ಈ ಆತಂಕದ ಸನ್ನಿವೇಶದಲ್ಲಿ ಇತ್ತ ಕ್ಯಾಥಿ ಸತ್ತ ಕೇವಲ 45 ನಿಮಿಷಗಳ ಬಳಿಕ ಮತ್ತೆ ಎದ್ದು ಕುಳಿತಿದ್ದರು.

click me!