ಮುಂದಿನ ವರ್ಷದಿಂದ ಇಲ್ಲಿ 10ನೇ ಕ್ಲಾಸ್‌ ಪಾಸಾಗೋಕೆ ಕನಿಷ್ಠ ಶೇ. 40 ಮಾರ್ಕ್ಸ್‌ ಗಳಿಸೋದು ಕಂಪಲ್ಸರಿ

By Suvarna NewsFirst Published May 9, 2024, 4:51 PM IST
Highlights

ಇದುವರೆಗೆ 10ನೇ ಕ್ಲಾಸ್ ಪಾಸಾಗೋಕೆ 35 ಮಾರ್ಕ್‌ನ್ನು ವಿದ್ಯಾರ್ಥಿ ಕಡ್ಡಾಯವಾಗಿ ಗಳಿಸಲೇಬೇಕಿತ್ತು. ಆದರೆ ಇನ್ನು ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಬೇಕೆಂದರೆ 40 ಅಂಕಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಗಳಿಸಬೇಕು. ಹಾಗಿದ್ದಲ್ಲಿ ಮಾತ್ರ ಮಕ್ಕಳು 10ನೇ ಕ್ಲಾಸ್ ಪಾಸ್ ಆಗಿ ಪಿಯುಸಿಗೆ ಹೋಗಬಹುದು,

ತಿರುವನಂತಪುರ: ಇದುವರೆಗೆ 10ನೇ ಕ್ಲಾಸ್ ಪಾಸಾಗೋಕೆ 35 ಮಾರ್ಕ್‌ನ್ನು ವಿದ್ಯಾರ್ಥಿ ಕಡ್ಡಾಯವಾಗಿ ಗಳಿಸಲೇಬೇಕಿತ್ತು. ಆದರೆ ಇನ್ನು ಮುಂದೆ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಬೇಕೆಂದರೆ 40 ಅಂಕಗಳನ್ನು ವಿದ್ಯಾರ್ಥಿಗಳು ಕಡ್ಡಾಯವಾಗಿ ಗಳಿಸಬೇಕು. ಹಾಗಿದ್ದಲ್ಲಿ ಮಾತ್ರ ಮಕ್ಕಳು 10ನೇ ಕ್ಲಾಸ್ ಪಾಸ್ ಆಗಿ ಪಿಯುಸಿಗೆ ಹೋಗಬಹುದು, ತಪ್ಪಿದಲ್ಲಿ ಅವರು ಅನುತ್ತೀರ್ಣರಾಗಿದ್ದಾರೆಂದೆ ಲೆಕ್ಕ, ಈ ರೀತಿ 10ನೇ ಕ್ಲಾಸ್ ಬೋರ್ಡ್ ಪರೀಕ್ಷೆಯಲ್ಲಿ  ಬದಲಾವಣೆಗೆ ತರುವುದಕ್ಕೆ ಮುಂದಾಗಿರುವುದು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಅಲ್ಲ, ನೆರೆಯ ಕೇರಳದ 10ನೇ ಕ್ಲಾಸ್ ಪ್ರೌಢ ಶಿಕ್ಷಣ ಮಂಡಳಿ. 

ಕೇರಳದ ಶಿಕ್ಷಣ ಸಚಿವ ವಿ. ಶಿವಕುಟ್ಟಿ ಅವರು ಈ ಬಗ್ಗೆ ಘೋಷಣೆ ಮಾಡಿದ್ದಾರೆ. 2025ರ ಶೈಕ್ಷಣಿಕ ವರ್ಷದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮಾದರಿಯಲ್ಲಿ ಬದಲಾವಣೆ ಮಾಡಲಾಗುವುದು ಎಂದು ಹೇಳಿದ್ದಾರೆ. ಕೇರಳ ಶಿಕ್ಷಣ ಇಲಾಖೆಯೂ ಹೈಯರ್ ಸೆಕೆಂಡರಿಯಲ್ಲಿ ಇರುವಂತೆ ಕನಿಷ್ಠ ಪೇಪರ್ ಸಿಸ್ಟಂ ಅನ್ನು ಜಾರಿಗೆ ತರಲು ಯೋಜನೆ ರೂಪಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

ಸರಿಯಾದ ಪಠ್ಯಪುಸ್ತಕವಿಲ್ಲ, ಟ್ಯೂಶನ್ ಪಡೆದಿಲ್ಲ, 700ಕ್ಕೆ 691 ಅಂಕ ಪಡೆದು ಕೀರ್ತಿ ತಂದ ವಿದ್ಯಾರ್ಥಿನಿ!

ಪ್ರಸ್ತುತ ಕೇರಳದಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾಗಬೇಕಾದರೆ ಮಕ್ಕಳು ಕನಿಷ್ಠ ಪ್ರತಿ ವಿಷಯದಲ್ಲೂ 30 ಶೇಕಡಾ ಅಂಕಗಳನ್ನು ಗಳಿಸಬೇಕಿತ್ತು ಅದೂ ನಿರಂತರ ಮೌಲ್ಯಮಾಪನದ 20 ಶೇಕಡಾ ಅಂಕಗಳನ್ನು ಸೇರಿಸಿಕೊಂಡು. ಆದರೆ ಮುಂದಿನ ವರ್ಷದಿಂದ ಮಕ್ಕಳು ಪ್ರತಿ ಲಿಖಿತ ಪರೀಕ್ಷೆಯಲ್ಲಿ 30 ಶೇಕಡಾ ಅಂಕಗಳನ್ನು ಕಡ್ಡಾಯವಾಗಿ ಗಳಿಸಬೇಕು. 

ಹೀಗಾಗಿ ಪಾಸ್‌ ಮಾರ್ಕ್ 40 ರಲ್ಲಿ 12 (12 out of 40)ಅಂಕ ಆಗಿದ್ದರೆ, 80ರಲ್ಲಿ 24 (24 out of 80) ಆಗಿರಲಿದೆ. ನಂತರ ನಿರಂತರ ಮೌಲ್ಯಮಾಪನದ ಅಂಕಗಳನ್ನು  ಇದರೊಂದಿಗೆ ಸೇರಿಸಿ ಒಟ್ಟು ಅಂಕಗಳನ್ನು  ಲೆಕ್ಕಾಚಾರ ಮಾಡಲಾಗುತ್ತದೆ.

ಶೈಕ್ಷಣಿಕ ಸಮಾವೇಶದ ನಂತರ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ, ಈ ಶೈಕ್ಷಣಿಕ ಸಮಾವೇಶಕ್ಕೆ ಪೋಷಕರು, ಶಾಲಾ ಶಿಕ್ಷಕರು, ಶಿಕ್ಷಣ ತಜ್ಞರನ್ನು ಆಹ್ವಾನಿಸಲಾಗುವುದು. ಹೊಸ ಮಾದರಿಯ ಮೂಲಕ ಮಕ್ಕಳ ಶಿಕ್ಷಣದ ಗುಣಮಟ್ಟವನ್ನು ರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗವುದು ಎಂದು ಸಚಿವರು ಹೇಳಿದ್ದಾರೆ. 

ಕೇರಳ ಎಸ್ಸೆಸ್ಸೆಲ್ಸಿ ಫಲಿತಾಂಶ: ಶೇ.99.69ರಷ್ಟು ವಿದ್ಯಾರ್ಥಿಗಳು ಪಾಸ್‌

ತಿರುವನಂತಪುರಂ:ಕೇರಳದ 2023-24 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಬುಧವಾರ ಪ್ರಕಟಗೊಂಡಿದ್ದು, ಭರ್ಜರಿ ಎನ್ನಬಹುದಾದ ಶೇ.99.69ರಷ್ಟು ಫಲಿತಾಂಶ ಬಂದಿದೆ. ಈ ಬಾರಿ ಒಟ್ಟು 4,25,563 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಆ ಪೈಕಿ ಈ ಬಾರಿ ಶೇ. 99.69 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಫಲಿತಾಂಶದಲ್ಲಿ ಕೊಂಚ ಇಳಿಕೆ ಕಂಡು ಬಂದಿದ್ದು, ಕಳೆದ ವರ್ಷ ಶೇ.99.7 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರು. ಮುಂದಿನ ವರ್ಷದಿಂದ ಪರೀಕ್ಷೆಯಲ್ಲಿ ಬದಲಾವಣೆ ತರುವುದಕ್ಕೆ ಇಲಾಖೆ ಮುಂದಾಗಿದ್ದು, ಪ್ರತಿ ವಿಷಯಕ್ಕೂ ಕನಿಷ್ಠ ಅಂಕವನ್ನು ನಿಗದಿ ಪಡಿಸಲಾಗುತ್ತದೆ ಎಂದು ಸರ್ಕಾರ ಹೇಳಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾಪಿ ಹೊಡೆಸಿದ ಆರೋಪ; ನಾಲ್ವರು ಶಿಕ್ಷಕರು ಅಮಾನತು

click me!