ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿ ಸ್ಫೋಟ, 8 ಕಾರ್ಮಿಕರ ದೇಹ ಛಿದ್ರ ಛಿದ್ರ, 8 ಮಂದಿ ಗಂಭೀರ!

By Chethan KumarFirst Published May 9, 2024, 4:14 PM IST
Highlights

ಶಿವಕಾಶಿಯಲ್ಲಿ ಪಟಾಕಿ ಫ್ಯಾಕ್ಟರಿ ಸ್ಫೋಟಗೊಂಡಿದೆ. ಕೆಲಸದ ವೇಳೆ ಈ ಸ್ಫೋಟ ಸಂಭವಿಸಿದ್ದು, 8 ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇತ್ತ 8ಕ್ಕೂ ಹಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
 

ಶಿವಕಾಶಿ(ಮೇ.09) ಸರ್ಕಾರ ಹಾಗೂ ಪೊಲೀಸರ ಖಡಕ್ ಸೂಚನೆ, ಕಟ್ಟು ನಿಟ್ಟಿನ ನಿಯಮ ಜಾರಿಗೊಳಿಸಿದರೂ ಇದೀಗ ಮತ್ತೊಂದು ಪಟಾಕಿ ಫ್ಯಾಕ್ಟರಿ ಸ್ಫೋಟ ಘಟನೆ ನಡೆದಿದೆ. ತಮಿಳುನಾಡಿನ ಶಿವಕಾಶಿ ಬಳಿಯಲ್ಲಿರುವ ಚೆನ್ನಗಲಂಪಟ್ಟಿ ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಕೆಲಸದ ಸಮಯದಲ್ಲೇ ಈ ಸ್ಪೋಟ ಸಂಭವಿಸಿದೆ. ಇದರ ಪರಿಣಾಮ ಕೆಲಸ ಮಾಡುತ್ತಿದ್ದ 8 ಮಂದಿ ಕಾರ್ಮಿಕರು ಈ ಸ್ಪೋಟಕ್ಕೆ ಬಲಿಯಾಗಿದ್ದಾರೆ. ಇನ್ನು 8ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಪರಿಣಾಮ ಇಡೀ ಫ್ಯಾಕ್ಟರಿ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಧಾವಿಸಿದ್ದು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿದೆ.

ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಅನ್ನೋ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಸದ್ಯ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತರಾಗಿದ್ದು, ಬೆಂಕಿಯ ಕೆನ್ನಾಲಗೆ ಪಕ್ಕದ ಫ್ಯಾಕ್ಟರಿಗೆ ತಗಲುವ ಅಪಾಯವನ್ನು ನಿಯಂತ್ರಿಸಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಕಾರ್ಮಿಕರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತ ಫ್ಯಾಕ್ಟರಿಯಲ್ಲಿ ಸಂಪೂರ್ಣ ಹೊಗೆ ತುಂಬಿಕೊಂಡಿರುವ ಕಾರಣ ಕಾರ್ಯಾಚರಣೆ ಕಷ್ಟವಾಗಿದೆ.

ಪಾರ್ಸೆಲ್ ಸ್ಫೋಟಿಸಿ ಅಪ್ಪ ಮಗಳ ಸಾವು ಪ್ರಕರಣಕ್ಕೆ ಟ್ವಿಸ್ಟ್‌: ಬಾಂಬ್ ಕಳಿಸಿದ್ದ ಪತ್ನಿಯ ಸ್ಯಾಡಿಸ್ಟ್ ಲವರ್‌

ಫ್ಯಾಕ್ಟರಿಗೆ ಕಾನೂನುಬದ್ಧ ಪರವಾನಗಿ ಇದೆ. ಲೈಸೆನ್ಸ್ ಪಡೆದು ಪಟಾಕಿ ಫ್ಯಾಕ್ಟರಿ ನಡೆಸುತ್ತಿದ್ದಾರೆ. ಆದರೆ ಈ ಸ್ಫೋಟಕ್ಕೆ ಕಾರಣವೇನು ಅನ್ನೋದರ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಘಟನೆಯಲ್ಲಿ ಮೃತಪಟ್ಟ 8 ಮಂದಿ ಪೈಕಿ ಮಹಿಳೆಯರೂ ಸೇರಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ಕುರಿತು ಸ್ಥಳೀಯ ಮುಖಂಡರು ಆಘಾತ ವ್ಯಕ್ತಪಡಿಸಿದ್ದಾರೆ. 

ಇತ್ತ ಗಯಾಳುಗಳ ಪರಿಸ್ಥಿತಿ ಗಂಭೀರವಾಗಿದೆ. ಶಿವಕಾಶಿ ಜಿಲ್ಲಾಧಿಕಾರಿ ಗಾಯಾಳುಗಳ ಸೂಕ್ತ ಚಿಕಿತ್ಸೆ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಾಹಿತಿ ತಿಳಿಯುತ್ತಿದ್ದಂತೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದವರ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿದ್ದಾರೆ. ಇತ್ತ ಹಲವರು ಆಸ್ಪತ್ರೆಗೆ ತೆರಳಿದ್ದಾರೆ. 
 

click me!