ಸೇಡಿಗೆ ಸೇಡು: ದೆಹಲಿಯ ಯುಕೆ ಹೈಕಮೀಷನ್‌ಗೆ ವಿಶೇಷ ಭದ್ರತೆ ರದ್ದು, ಬ್ಯಾರಿಕೇಡೂ ಇಲ್ಲ..!

By BK Ashwin  |  First Published Mar 22, 2023, 4:30 PM IST

ಖಲಿಸ್ತಾನ್ ಪರ ಕಾರ್ಯಕರ್ತರ ಪ್ರತಿಭಟನೆಗಳು ಹಿಂಸಾತ್ಮಕವಾಗಿ ತಿರುಗುವ ಸಾಧ್ಯತೆಯ ಬಗ್ಗೆ ಬ್ರಿಟಿಷ್ ಅಧಿಕಾರಿಗಳೊಂದಿಗೆ ಗುಪ್ತಚರ ಮಾಹಿತಿಗಳನ್ನು ಭಾರತ ಮೊದಲೇ ಹಂಚಿಕೊಂಡಿತ್ತು. ಆದರೂ, ಲಂಡನ್‌ನಲ್ಲಿ ಪ್ರತಿಭಟನೆ ಪ್ರಾರಂಭವಾದ ಬಹಳ ಸಮಯದ ನಂತರ ಲಂಡನ್ ಪೊಲೀಸರು ಸ್ಥಳಕ್ಕೆ ಬಂದಿದ್ದರು, ಇದು ಭಾರತದ ಕೋಪಕ್ಕೆ ಕಾರಣವಾಗಿದೆ.


ನವದೆಹಲಿ (ಮಾರ್ಚ್‌ 22, 2023): ಭಾನುವಾರ ಇಂಗ್ಲೆಂಡ್‌ನ ಲಂಡನ್‌ನಲ್ಲಿರುವ ಭಾರತೀಯ ಹೈಕಮೀಷನ್‌ ಹೊರಗೆ ಖಲಿಸ್ತಾನಿಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ರು. ಅಲ್ಲದೆ, ಭಾರತೀಯ ಧ್ವಜವನ್ನು ತೆಗೆದಿದ್ರು ದೂತಾವಾಸ ಕಚೇರಿಯ ಹೊರಗೆ ಭದ್ರತೆಯೇ ಇರಲಿಲ್ಲ. ಈ ಬಗ್ಗೆ ಕೇಂದ್ರ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿತ್ತು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋದ ಕೇಂದ್ರ ಸರ್ಕಾರ, ಬುಧವಾರ ಬ್ರಿಟಿಷ್ ಹೈಕಮಿಷನ್ ಮತ್ತು ರಾಯಭಾರಿ ನಿವಾಸದ ಹೊರಗೆ ಭದ್ರತೆಯನ್ನು ಕಡಿಮೆ ಮಾಡಲು ಪ್ರಾರಂಭಿಸಿದೆ ಎಂದು ಮೂಲಗಳು ಮಾಹಿತಿ ನೀಡಿವೆ. 

ರಾಷ್ಟ್ರ ರಾಜಧಾನಿ ದೆಹಲಿಯ ಚಾಣಕ್ಯಪುರಿ ರಾಜತಾಂತ್ರಿಕ ಎನ್‌ಕ್ಲೇವ್‌ನಲ್ಲಿರುವ ಶಾಂತಿಪಥ್‌ನಲ್ಲಿರುವ ಯುಕೆ ಮಿಷನ್‌ನ ಹೊರಗೆ ಇರಿಸಲಾಗಿದ್ದ ಮತ್ತು ರಾಜಾಜಿ ಮಾರ್ಗದಲ್ಲಿರುವ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರ ನಿವಾಸದಲ್ಲಿದ್ದ ಬ್ಯಾರಿಕೇಡ್‌ಗಳನ್ನು ಬುಧವಾರ ಮಧ್ಯಾಹ್ನದ ವೇಳೆಗೆ ತೆಗೆದುಹಾಕಲಾಗಿದೆ. ಬ್ರಿಟಿಷ್ ಹೈಕಮಿಷನ್ ಮತ್ತು ಹೈಕಮಿಷನರ್ ನಿವಾಸದ ಎದುರು ಹಾಕಲಾಗಿದ್ದ ಬ್ಯಾರಿಕೇಡ್‌ಗಳು ಮಾತ್ರವಲ್ಲದೆ ಶಾಶ್ವತ ಭದ್ರತೆ, ಬಂಕರ್‌ಗಳು, ಪಿಸಿಆರ್ ವ್ಯಾನ್‌ಗಳನ್ನು ಈಗ ತೆಗೆದುಹಾಕಲಾಗಿದೆ. ಆದರೆ, ಹೈಕಮೀಷನ್‌ನಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಯಲ್ಲಿ ಯಾವುದೇ ಕಡಿತ ಮಾಡಿರುವ ಬಗ್ಗೆ ವರದಿಗಳಿಲ್ಲ ಎಂದೂ ಮೂಲಗಳು ತಿಳಿಸಿವೆ. 

Tap to resize

Latest Videos

ಇದನ್ನು ಓದಿ: ಉಕ್ರೇನ್‌ನಿಂದ ರಷ್ಯಾಕ್ಕೆ ಮಕ್ಕಳ ಗಡೀಪಾರು: ವ್ಲಾಡಿಮಿರ್ ಪುಟಿನ್ ವಿರುದ್ಧ ಬಂಧನ ವಾರಂಟ್

"We do not comment on security matters," said a British High Commission spokesperson https://t.co/FHnafxhTZy

— ANI (@ANI)

 ಈ ಬೆಳವಣಿಗೆಯು ಭಾನುವಾರ ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ಹೊರಗೆ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಬಗ್ಗೆ ಸರ್ಕಾರದ ಉನ್ನತ ಮಟ್ಟದ ಮೌಲ್ಯಮಾಪನವನ್ನು ಅನುಸರಿಸಿದೆ. ಖಲಿಸ್ತಾನ್ ಪರ ಕಾರ್ಯಕರ್ತನೊಬ್ಬ ಬಾಲ್ಕನಿಯಲ್ಲಿ ಹತ್ತಿ ಮತ್ತು ಕಟ್ಟಡದ ಮುಂಭಾಗದ ಕಂಬದಿಂದ ರಾಷ್ಟ್ರಧ್ವಜವನ್ನು ಕೆಳಕ್ಕೆ ಎಳೆದಿದ್ದನು. 

ಇನ್ನು, ಭಾರತ ಕೈಗೊಂಡಿರುವ ಇಂದಿನ ಕ್ರಮದ ಬಗ್ಗೆ ಹೇಳಿದ ಬ್ರಿಟಿಷ್ ಹೈಕಮಿಷನ್ ವಕ್ತಾರರು ನಾವು ಭದ್ರತಾ ವಿಷಯಗಳ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ ಎಂದಿದ್ದಾರೆ. ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸಹ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದನ್ನೂ ಓದಿ: ನೊಬೆಲ್ ಶಾಂತಿ ಪ್ರಶಸ್ತಿ ರೇಸ್‌ನಲ್ಲಿ ಪ್ರಧಾನಿ ಮೋದಿ: ಮೋದಿಯೇ ಪ್ರಮುಖ ಸ್ಪರ್ಧಿ ಎಂದ ಪ್ರಶಸ್ತಿ ಸಮಿತಿ ಉಪ ನಾಯಕ

ಖಲಿಸ್ತಾನ್ ಪರ ಕಾರ್ಯಕರ್ತರ ಪ್ರತಿಭಟನೆಗಳು ಹಿಂಸಾತ್ಮಕವಾಗಿ ತಿರುಗುವ ಸಾಧ್ಯತೆಯ ಬಗ್ಗೆ ಬ್ರಿಟಿಷ್ ಅಧಿಕಾರಿಗಳೊಂದಿಗೆ ಗುಪ್ತಚರ ಮಾಹಿತಿಗಳನ್ನು ಭಾರತ ಮೊದಲೇ ಹಂಚಿಕೊಂಡಿತ್ತು. ಆದರೂ, ಲಂಡನ್‌ನಲ್ಲಿ ಪ್ರತಿಭಟನೆ ಪ್ರಾರಂಭವಾದ ಬಹಳ ಸಮಯದ ನಂತರ ಲಂಡನ್ ಪೊಲೀಸರು ಸ್ಥಳಕ್ಕೆ ಬಂದಿದ್ದರು, ಇದು ಭಾರತದ ಕೋಪಕ್ಕೆ ಕಾರಣವಾಗಿದೆ.

ಲಂಡನ್‌ನಲ್ಲಿನ ಬೆಳವಣಿಗೆಗಳಿಗೆ ಭಾರತವು ಕೋಪದಿಂದ ಪ್ರತಿಕ್ರಿಯಿಸಿದ್ದು, ಬ್ರಿಟಿಷ್ ಡೆಪ್ಯೂಟಿ ಹೈಕಮಿಷನರ್ ಕ್ರಿಸ್ಟಿನಾ ಸ್ಕಾಟ್ ಅವರಿಗೆ ಭಾನುವಾರ ತಡರಾತ್ರಿ ವಿದೇಶಾಂಗ ಸಚಿವಾಲಯಕ್ಕೆ ಬರಲು ಸಮನ್ಸ್‌ ನೀಡಲಾಗಿತ್ತು. ಅಲ್ಲದೆ, ಬ್ರಿಟಿಷ್ ಭದ್ರತೆಯ ಸಂಪೂರ್ಣ ಅನುಪಸ್ಥಿತಿಗಾಗಿ ವಿವರಣೆ ಕೋರಿದ್ದರು. ಹಾಗೂ, ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು "ಕಠಿಣ ಕ್ರಮಗಳನ್ನು" ಜಾರಿಗೆ ತರಲು ಯುಕೆಗೆ ಭಾರತ ಸರ್ಕಾರ ಕೇಳಿಕೊಂಡಿದ್ದು, ಮತ್ತು ವಿಯೆನ್ನಾ ಒಪ್ಪಂದದ ಅಡಿಯಲ್ಲಿ ಅದರ ಜವಾಬ್ದಾರಿಗಳನ್ನು ನೆನಪಿಸಿದೆ.

ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಯೋಜಿತ ವೈಯಕ್ತಿಕ ದಾಳಿ: ಗಾಂಧಿ ಕುಟುಂಬ ಆಪ್ತ ಸ್ಯಾಮ್‌ ಪಿತ್ರೋಡಾ ಆಕ್ರೋಶ
.
"ಯುಕೆಯಲ್ಲಿರುವ ಭಾರತೀಯ ರಾಜತಾಂತ್ರಿಕ ಆವರಣಗಳು ಮತ್ತು ಸಿಬ್ಬಂದಿಗಳ ಭದ್ರತೆಗೆ ಯುಕೆ ಸರ್ಕಾರದ ಉದಾಸೀನತೆಯನ್ನು ಭಾರತವು ಸ್ವೀಕಾರಾರ್ಹವಲ್ಲ ಎಂದು ಪರಿಗಣಿಸುತ್ತದೆ" ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿತ್ತು. ಭಾರತದಿಂದ ದೂರದಲ್ಲಿರುವ ಯುಕೆ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರು ಭಾರತೀಯ ಮಿಷನ್‌ನಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದರು. "ನಾನು @HCI_London ನ ಜನರು ಮತ್ತು ಆವರಣದ ವಿರುದ್ಧ ಇಂದು ಅವಮಾನಕರ ಕೃತ್ಯಗಳನ್ನು ಖಂಡಿಸುತ್ತೇನೆ - ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ" ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದರು.

ಈ ಮಧ್ಯೆ, ಖಲಿಸ್ತಾನ್ ಪರ ಕಾರ್ಯಕರ್ತರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ತನ್ನ ಕಾನ್ಸುಲೇಟ್ ಅನ್ನು ಧ್ವಂಸಗೊಳಿಸಿದ ಬಗ್ಗೆ ಭಾರತವು ಸೋಮವಾರ ಯುಎಸ್‌ಗೆ ಸಹ ತೀವ್ರ ಪ್ರತಿಭಟನೆ ಸಲ್ಲಿಸಿದೆ.

click me!