ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ, ಹವಾಮಾನ ಮುನ್ಸೂಚನೆ ಪ್ರಸಾರ!

By Kannadaprabha NewsFirst Published May 10, 2020, 7:32 AM IST
Highlights

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ!| ಪಾಕ್‌ ಆಕ್ರಮಿತ ಕಾಶ್ಮೀರದ ಹವಾಮಾನ ಮುನ್ಸೂಚನೆ ಪ್ರಸಾರ| ಖಾಸಗಿ ವಾಹಿನಿಗಳಿಗೂ ಮನವಿ| ಜಾಗತಿಕ ಸಂದೇಶಕ್ಕೆ ಪ್ರಯತ್ನ| ಕೇಂದ್ರದ ನಿಲುವಿಗೆ ನಮ್ಮ ಸಂಪೂರ್ಣ ಬೆಂಬಲ| ನಿತ್ಯ ಪ್ರೈಮ್‌ಟೈಮ್‌ ನ್ಯೂಸ್‌ನಲ್ಲಿ ಪಿಒಕೆ ಹವಾಮಾನ ಮುನ್ಸೂಚನೆ ಪ್ರಸಾರ ಮಾಡಲಿದೆ ಸುವರ್ಣ ನ್ಯೂಸ್‌.

ನವದೆಹಲಿ(ಮೇ.10): ಸರ್ಕಾರಿ ಸ್ವಾಮ್ಯದ ಡಿಡಿ ನ್ಯೂಸ್‌ ಸುದ್ದಿವಾಹಿನಿಯಲ್ಲಿ ಪ್ರತಿನಿತ್ಯ ಪ್ರಸಾರವಾಗುವ ದೇಶದ ಹವಾಮಾನ ಮುನ್ಸೂಚನೆಯಲ್ಲಿ ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ)ದ ಹವಾಮಾನ ಮುನ್ಸೂಚನೆಯನ್ನೂ ಪ್ರಸಾರ ಮಾಡಲಾರಂಭಿಸಿದ ಕೇಂದ್ರದ ಕ್ರಮ ದೇಶಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದೆ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಭಾರತದ ಭೂಭಾಗಗಳಾದ ಪಿಒಕೆ ಹಾಗೂ ಗಿಲ್ಗಿಟ್‌-ಬಾಲ್ಟಿಸ್ತಾನದ ಮೇಲೆ ತನ್ನ ಹಕ್ಕು ಪ್ರತಿಪಾದಿಸುವ ರಣತಂತ್ರ ಇದು ಎಂದು ವಿಶ್ಲೇಷಿಸಲಾಗುತ್ತಿದೆ.

ಅಲ್ಲದೆ, ಇದರ ಹಿಂದೆ ‘ಸರ್ಜಿಕಲ್‌ ಸ್ಟೆ್ರೖಕ್‌ ಮಾಸ್ಟರ್‌ಮೈಂಡ್‌’ ಎಂದೇ ಖ್ಯಾತರಾಗಿರುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ತಂತ್ರಗಾರಿಕೆ ಇದೆ ಎಂದು ತಿಳಿದು ಬಂದಿದೆ. ಖಾಸಗಿ ಸುದ್ದಿವಾಹಿನಿಗಳೂ ಪಿಒಕೆ ಹವಾಮಾನ ಮುನ್ಸೂಚನೆ ಪ್ರಸಾರ ಮಾಡಲು ಕೇಂದ್ರ ಸರ್ಕಾರ ಕೋರಿದ್ದು, ಭಾರತ ತನ್ನ ಸಾರ್ವಭೌಮತೆಯನ್ನು ಸಾಧಿಸಲು ಆರಂಭಿಸಿರುವ ಪೂರ್ವಸಿದ್ಧತೆಯ ಒಂದು ಭಾಗವಿದು ಎಂದೂ ಹೇಳಲಾಗುತ್ತಿದೆ.

ಭಾರತೀಯ ಸೇನಾ ಗುಂಡಿಗೆ ಹಿಜ್ಬುಲ್ ಕಮಾಂಡರ್ ಬಲಿ; ಕಾಶ್ಮೀರದಲ್ಲಿ ಇಂಟರ್ನೆಟ್ ಸ್ಥಗಿತ!

ಭಾರತದ ರಾಷ್ಟ್ರೀಯ ಸುದ್ದಿವಾಹಿನಿಗಳಲ್ಲಿ ಪ್ರಸಾರವಾಗುವ ಹವಾಮಾನ ಮುನ್ಸೂಚನೆಯಲ್ಲಿ ಪಿಒಕೆಯ ಮೀರ್‌ಪುರ, ಮುಜಾಫರಾಬಾದ್‌ ಹಾಗೂ ಗಿಲ್ಗಿಟ್‌ ಬಾಲ್ಟಿಸ್ತಾನ್‌ಗಳ ಹವಾಮಾನ ಮುನ್ಸೂಚನೆಯನ್ನೂ ಸೇರಿಸಿಕೊಂಡರೆ ಪಾಕಿಸ್ತಾನಕ್ಕೆ ಹಾಗೂ ಅಂತಾರಾಷ್ಟ್ರೀಯ ಸಮುದಾಯಕ್ಕೆ ಈ ಭಾಗಗಳು ಭಾರತಕ್ಕೆ ಸೇರಿದ್ದು ಎಂಬ ಸಂದೇಶ ರವಾನಿಸಿದಂತಾಗುತ್ತದೆ ಎಂಬ ಚಿಂತನೆ ಇದರ ಹಿಂದಿದೆ. ಹವಾಮಾನ ಮುನ್ಸೂಚನೆಯನ್ನು ಪ್ರಸಾರ ಮಾಡುವಾಗ ತೋರಿಸುವ ಭಾರತದ ನಕ್ಷೆಯಲ್ಲಿ ಪಿಒಕೆಯನ್ನು ಜಮ್ಮು ಕಾಶ್ಮೀರದ ಭಾಗವಾಗಿ ತೋರಿಸಲೂ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

'ಈಗಲೇ ನಮ್ಮ ಜಾಗ ಬಿಟ್ಟು ಹೊರಡಿ' ಕುತಂತ್ರಿ ಪಾಕ್‌ಗೆ ಭಾರತ ಕೊನೆ ಸಂದೇಶ

ಮೂರು ತಿಂಗಳ ಹಿಂದೆಯೇ ಅಜಿತ್‌ ದೋವಲ್‌ ಇಂತಹದ್ದೊಂದು ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದರು. ‘ಈ ಪ್ರದೇಶ ನಮ್ಮದು. ಇದರ ಮೇಲೆ ನಾವು ಸಾರ್ವಭೌಮ ಹಕ್ಕು ಹೊಂದಿದ್ದೇವೆ’ ಎಂದು ಹೇಳುವುದು ಇದರ ಉದ್ದೇಶ. ಇದಕ್ಕೆ ಇತ್ತೀಚೆಗೆ ಒಪ್ಪಿಗೆ ಸಿಕ್ಕ ನಂತರ ದೂರದರ್ಶನದಲ್ಲಿ ಪಿಒಕೆಯ ಹವಾಮಾನ ಮುನ್ಸೂಚನೆ ಪ್ರಕಟವಾಗಲು ಆರಂಭವಾಗಿದೆ ಎಂದು ಸರ್ಕಾರದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಬೆಳವಣಿಗೆಯೊಂದಿಗೆ, 86,000 ಚ.ಕಿ.ಮೀ. ವಿಸ್ತೀರ್ಣವಿರುವ ಪಿಒಕೆಯ ವಿಷಯದಲ್ಲಿ ಭಾರತದ ವಿದೇಶಾಂಗ ನೀತಿಯಲ್ಲಿ ಮಹತ್ವದ ಬದಲಾವಣೆಯಾದಂತಾಗಿದೆ. ಪಿಒಕೆಯಲ್ಲಿ ಚೀನಾ-ಪಾಕಿಸ್ತಾನದ ಆರ್ಥಿಕ ಕಾರಿಡಾರ್‌ ಹಾದು ಹೋಗುತ್ತಿದ್ದು, ಭಾರತದ ಈ ನಿರ್ಧಾರದಿಂದ ಚೀನಾಕ್ಕೂ ಬಲವಾದ ಸಂದೇಶ ರವಾನೆಯಾಗಲಿದೆ.

click me!