ಸೋಂಕು ತೀವ್ರ ಹೆಚ್ಚಳ: ಮಾರ್ಗಸೂಚಿಯಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

By Kannadaprabha NewsFirst Published May 10, 2020, 7:14 AM IST
Highlights

‘ಕೊರೋನಾಜನಕ’ ಸ್ಥಿತಿಗೆ ಕೇಂದ್ರ ಸಿದ್ಧತೆ!| ಸೋಂಕು ತೀವ್ರ ಹೆಚ್ಚಳ| ಮುಂದಿನ ಗಂಭೀರ ಸ್ಥಿತಿ ನಿರ್ವಹಣೆಗೆ ತಯಾರಿ| ತೀವ್ರ ಸೋಂಕಿತರಿಗೆ ಮಾತ್ರ ಡಿಸ್ಚಾಜ್‌ರ್‍ಗೆ ಮುನ್ನ ಪರೀಕ್ಷೆ| ಇತರರಿಗೆ ತಪಾಸಣೆ ಮಾತ್ರ ನಡೆಸಿ ಬಿಡುಗಡೆ| ಚಿಕಿತ್ಸೆ ಬಳಿಕ ಡಿಸ್ಚಾಜ್‌ರ್‍ ಮಾಡುವ ಮಾರ್ಗಸೂಚಿಯಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಬದಲಾವಣೆ

ನವದೆಹಲಿ(ಮೇ.10): ದೇಶದಲ್ಲಿ ದಿನೇ ದಿನೇ ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಭಾರೀ ಏರಿಕೆಯಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಕೊರೋನಾ ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್‌ಚಾಜ್‌ರ್‍ ಮಾಡಲು ಅನುಸರಿಸಬೇಕಾದ ಮಾರ್ಗಸೂಚಿ ಸಡಿಲಗೊಳಿಸಿದೆ. ಇನ್ನುಮುಂದೆ ತೀವ್ರ ಸೋಂಕಿನಿಂದ ಬಳಲುತ್ತಿರುವವರಿಗೆ ಮಾತ್ರ ಡಿಸ್‌ಚಾಜ್‌ರ್‍ಗೂ ಮುನ್ನ ಕೊರೋನಾ ಟೆಸ್ಟ್‌ ಮಾಡಿ ಸೋಂಕು ನೆಗೆಟಿವ್‌ ಆಗಿರುವುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆ. ಸಣ್ಣ ಪ್ರಮಾಣದ ಸೋಂಕಿದ್ದವರು ಗುಣಮುಖರಾಗಿದ್ದರೆ ಮೇಲ್ನೋಟಕ್ಕೆ ಅವರನ್ನು ತಪಾಸಣೆ ಮಾಡಿ ಡಿಸ್‌ಚಾಜ್‌ರ್‍ ಮಾಡಲಾಗುತ್ತದೆ.

"

ಇಷ್ಟುದಿನ ಕೊರೋನಾ ರೋಗಿಯೊಬ್ಬ ಆಸ್ಪತ್ರೆಗೆ ದಾಖಲಾಗಿದ್ದರೆ ಆತ ಗುಣಮುಖನಾದ ಮೇಲೆ ಡಿಸ್‌ಚಾಜ್‌ರ್‍ ಮಾಡುವ ಮುನ್ನ 24 ಗಂಟೆಗಳ ಅಂತರದಲ್ಲಿ 2 ಬಾರಿ ಆರ್‌ಟಿ-ಪಿಸಿಆರ್‌ ಟೆಸ್ಟ್‌ ಮಾಡಲಾಗುತ್ತಿತ್ತು. ಇನ್ನುಮುಂದೆ ಒಂದೂ ಟೆಸ್ಟ್‌ ಮಾಡದೆ ಬಿಡುಗಡೆ ಮಾಡಲಾಗುತ್ತದೆ.

ರಾಜ್ಯದಲ್ಲಿ ಮತ್ತೆ ತಬ್ಲೀಘಿ ಆತಂಕ: ನಿನ್ನೆ 18 ಮಂದಿಗೆ ಸೋಂಕು ದೃಢ

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಕಳೆದ ಒಂದೇ ವಾರದಲ್ಲಿ 20,000ದಷ್ಟುಏರಿಕೆಯಾಗಿದೆ. ಇದೇ ಗತಿಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಾ ಹೋದಲ್ಲಿ ಅದು ಮುಂದಿನ ದಿನಗಳಲ್ಲಿ ನಿತ್ಯವೂ 10000 ಹೊಸ ಸೋಂಕಿತರು ಪತ್ತೆಯಾಗುವ ಮಟ್ಟಕ್ಕೆ ತಲುಪುವ ಎಲ್ಲಾ ಸಾಧ್ಯತೆ ಇದೆ. ಈ ವೇಳೆ ಎಲ್ಲರಿಗೂ ಟೆಸ್ಟ್‌ ಮಾಡುವುದು ಕಷ್ಟ. ಜೊತೆಗೆ ಎಲ್ಲಾ ರೋಗಿಗಳ ನಿರ್ವಹಣೆ ಕಷ್ಟಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ.

ನಾವೆಲ್ಲರೂ ವೈರಸ್‌ ಜತೆಗೆ ಬದುಕಬೇಕಾದ ಬಹುದೊಡ್ಡ ಸವಾಲು ಮುಂದಿದೆ. ‘ವೈರಸ್‌ ಜತೆ ಬದುಕೋದು ಕಲಿಯಿರಿ’ ಎಂದು ಕೇಂದ್ರ ಸರ್ಕಾರ ಜನರಿಗೆ ಸಲಹೆ ನೀಡಿದ ಮಾರನೇ ದಿನವೇ ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲಾಗಿದೆ.

ನಿಯಮ ಸಡಿಲಕ್ಕೆ ತಜ್ಞರ ಆಕ್ಷೇಪ:

ಕೇಂದ್ರ ಸರ್ಕಾರ ಕೊರೋನಾ ರೋಗಿಗಳ ಡಿಸ್‌ಚಾಜ್‌ರ್‍ ನಿಯಮಗಳನ್ನು ಸಡಿಲಗೊಳಿಸಿರುವುದಕ್ಕೆ ಕೆಲ ತಜ್ಞರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಮೆರಿಕ ಹಾಗೂ ಯುರೋಪಿಯನ್‌ ದೇಶಗಳೂ ಸೇರಿದಂತೆ ಬಹುತೇಕ ದೇಶಗಳಲ್ಲಿ ಈಗಲೂ 2 ಟೆಸ್ಟ್‌ ನೆಗೆಟಿವ್‌ ಬಂದ ನಂತರವೇ ರೋಗಿಗಳನ್ನು ಡಿಸ್‌ಚಾಜ್‌ರ್‍ ಮಾಡಲಾಗುತ್ತಿದೆ.

ಲಾಕ್‌ಡೌನ್‌ ವಿಸ್ತರಣೆ ಕುರಿತು ಕೇಂದ್ರದಿಂದ ಮಹತ್ತರ ಸುಳಿವು!

ಹೊಸ ಮಾರ್ಗಸೂಚಿ

1. ತೀವ್ರ ಸೋಂಕಿತರಲ್ಲದವರಿಗೆ ಉಷ್ಣತೆ, ನಾಡಿಮಿಡಿತ ತಪಾಸಣೆ. ಜ್ವರ ಇಳಿದು 3 ದಿನ ಆಗಿದ್ದರೆ ಟೆಸ್ಟ್‌ ಇಲ್ಲದೆ 10 ದಿನಕ್ಕೇ ಡಿಸ್ಚಾಜ್‌ರ್‍

2. ಆಸ್ಪತ್ರೆ ಸೇರಿ 3 ದಿನದಲ್ಲಿ ಲಕ್ಷಣ ನಿವಾರಣೆ ಆಗಿ, 4 ದಿನ ಆಮ್ಲಜನಕ ನೀಡದೆ ಶೇ.95ಕ್ಕಿಂತ ಹೆಚ್ಚು ಸ್ಯಾಚುರೇಶನ್‌ ಇದ್ದರೆ ಡಿಸ್ಚಾಜ್‌ರ್‍

3. ಅಂಗಕಸಿ ಮಾಡಿಸಿದವರು, ಎಚ್‌ಐವಿ, ಕ್ಯಾನ್ಸರ್‌ಪೀಡಿತರು ಗುಣಮುಖರಾದ ಬಳಿಕ 1 ಪರೀಕ್ಷೆ ನಡೆಸಿ ನೆಗೆಟಿವ್‌ ಬಂದರೆ ಡಿಸ್ಚಾಜ್‌ರ್‍

4. ಕೃತಕ ಆಮ್ಲಜನಕ ಪಡೆಯುತ್ತಿದ್ದವರು ಆ ವ್ಯವಸ್ಥೆ ಇಲ್ಲದೆ 3 ದಿನ ಚೆನ್ನಾಗಿದ್ದರೆ, ಜ್ವರ ಕಡಿಮೆಯಾಗಿ 3 ದಿನ ಆಗಿದ್ದರೆ ಬಿಡುಗಡೆ

ಮುಂಬೈನ ಶಾಕಿಂಗ್ ವಿಡಿಯೋ, ಕೊರೋನಾ ಸೋಂಕಿತರ ಪಕ್ಕದಲ್ಲೇ ಶವಗಳ ರಾಶಿ!

ಏನು ಉದ್ದೇಶ?

- ಹೊಸ ಸೋಂಕಿತರ ಪತ್ತೆಗೆ ಹೆಚ್ಚಿನ ಅವಕಾಶ ಮಾಡಿಕೊಡುವುದು

- ಆಸ್ಪತ್ರೆಗಳಲ್ಲಿ ತೀವ್ರ ಸೋಂಕಿತರಿಗೆ ಬೆಡ್‌ಗಳನ್ನು ಕಾಯ್ದಿರಿಸುವುದು

- ವೈದ್ಯಕೀಯ ಸಿಬ್ಬಂದಿ ಮೇಲಿನ ಒತ್ತಡ ಕಡಿಮೆ ಮಾಡುವುದು

- ಗಂಭೀರ ಸ್ಥಿತಿಯಲ್ಲಿ ಇರುವವರ ಬಗ್ಗೆ ಹೆಚ್ಚಿನ ಕಾಳಜಿಗೆ ಅವಕಾಶ

click me!