ಲಾಕ್‌ಡೌನ್ ಸಡಿಲಿಕೆ ಬಳಿಕ ದೇಶದಲ್ಲಿ ಬರೋಬ್ಬರಿ 21000 ಕೇಸ್‌!

By Kannadaprabha News  |  First Published May 10, 2020, 7:21 AM IST

ಅನ್‌ಲಾಕ್‌ ಬಳಿಕ ದೇಶದಲ್ಲಿ ಬರೋಬ್ಬರಿ 21000 ಕೇಸ್‌!| ಮೇ 3ಕ್ಕೆ 41000| ಈಗ 62000 ಸೋಂಕಿತರು| ಲಾಕ್‌ಡೌನ್ ಸಡಿಲಿಕೆಯೇ ಮಾರಕವಾಯ್ತಾ?


ನವದೆಹಲಿ(ಮೇ.10): ಕೊರೋನಾ ಸೋಂಕು ತಡೆಗೆ ದೇಶವ್ಯಾಪಿ ಜಾರಿಗೊಳಿಸಿದ್ದ ಲಾಕ್‌ಡೌನ್‌ ಮೇ 4ರಿಂದ ಸಡಿಲಿಕೆಯಾದ ಬಳಿಕ, ಹೊಸ ಸೋಂಕಿತರ ಪ್ರಮಾಣದಲ್ಲಿ ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಲಾಕ್‌ಡೌನ್‌ ಮುಕ್ತಾಯಗೊಂಡ ಮೇ 3ರಂದು ಭಾರತದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 41779 ಇತ್ತು. ಅದಾದ ಒಂದು ವಾರದಲ್ಲಿ ಅಂದರೆ ಮೇ 4ರಿಂದ ಮೇ 9ರವರೆಗೆ ಒಟ್ಟು ಸೋಂಕಿತರ ಸಂಖ್ಯೆ 62513ಕ್ಕೆ ತಲುಪಿದೆ. ಅಂದರೆ ಕೇವಲ 6 ದಿನಗಳಲ್ಲಿ 20732 ಹೊಸ ಪ್ರಕರಣ ಬೆಳಕಿಗೆ ಬಂದಿದೆ.

ಈ ಅಂಕಿ ಸಂಖ್ಯೆಗಳು, ಕೊರೋನಾ ಸೋಂಕಿತರ ಸಂಖ್ಯೆ ಜೂನ್‌, ಜುಲೈ ವೇಳೆಗೆ ಗರಿಷ್ಠ ಪ್ರಮಾಣಕ್ಕೆ ತಲುಪಲಿದೆ ಎಂಬ ದೆಹಲಿಯ ಏಮ್ಸ್‌ನ ನಿರ್ದೇಶಕ ಡಾ. ರಣದೀಪ್‌ ಗುಲೇರಿಯಾ ಎಚ್ಚರಿಕೆಯನ್ನು ಪುರಸ್ಕರಿಸುವಂತಿದ್ದು ಆತಂಕ ಹುಟ್ಟುಹಾಕಿದೆ.

Latest Videos

undefined

ಸೋಂಕು ತೀವ್ರ ಹೆಚ್ಚಳ: ಮಾರ್ಗಸೂಚಿಯಲ್ಲಿ ಕೇಂದ್ರದಿಂದ ಮಹತ್ವದ ಬದಲಾವಣೆ!

ಮೇ 4ರಿಂದ ಕೇಂದ್ರ ಸರ್ಕಾರ ಕೆಂಪು ವಲಯ ಹೊರತುಪಡಿಸಿ ಹಸಿವು ಮತ್ತು ಕಿತ್ತಳೆ ವಲಯದಲ್ಲಿ ಬಹುತೇಕ ಸೇವೆ ಮತ್ತು ಚಟುವಟಿಕೆಗೆ ಅವಕಾಶ ಮಾಡಿಕೊಟ್ಟಿತ್ತು. ಮತ್ತೊಂದೆಡೆ ವಲಸಿಗ ಕಾರ್ಮಿಕರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ತೆರಳಲು ಅನುಮತಿ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ನಡುವೆಯೇ ದೇಶದ ವಿವಿಧ ರಾಜ್ಯಗಳಲ್ಲಿ ದಿನೇ ದಿನೇ ಹೊಸ ಸೋಂಕಿನ ಪ್ರಮಾಣ ಏರಿಕೆಯಾಗತೊಡಗಿದೆ. ಅದರಲ್ಲೂ ಈವರೆಗೆ ಹೆಚ್ಚಿನ ಕೇಸು ದಾಖಲಾಗದ ಜಾರ್ಖಂಡ್‌, ಬಿಹಾರ, ಉತ್ತರಪ್ರದೇಶ, ಮಹಾರಾಷ್ಟ್ರಗಳಲ್ಲಿ ಹೊಸ ಪ್ರಕರಣ ಬೆಳಕಿಗೆ ಬರುತ್ತಿರುವುದು ಆತಂಕ ಮೂಡಿಸಿದೆ. ವಲಸಿಗ ಕಾರ್ಮಿಕರು ಇನ್ನಷ್ಟುಪ್ರಮಾಣದಲ್ಲಿ ತವರಿಗೆ ತೆರಳುತ್ತಿದ್ದ ಅವರಿಂದಾಗಿ ಇನ್ನಷ್ಟುಸೋಂಕು ಹರಡುವ ಭೀತಿಯೂ ಇದೆ.

ಪಿಒಕೆ ಹಿಡಿತಕ್ಕೆ ಭಾರತ ರಣತಂತ್ರ, ಹವಾಮಾನ ಮುನ್ಸೂಚನೆ ಪ್ರಸಾರ!

ಇದು ಕೊರೋನಾ ವೈರಸ್‌ ಪ್ರಕರಣಗಳು ದೇಶದಲ್ಲಿ ಮೇ ವೇಳೆ ಅತ್ಯಂತ ತಾರಕಕ್ಕೆ ಏರಲಿದ್ದು, ನಂತರದಲ್ಲಿ ಪರಿಸ್ಥಿಸಿ ಸುಧಾರಣೆಯಾಗಲಿದೆ ಎಂಬ ಲೆಕ್ಕಾಚಾರಗಳಿಗೆ ಪೂರ್ಣ ವಿರುದ್ಧವಾಗಿದ್ದು, ದೇಶಾದ್ಯಂತ ಸಂಪೂರ್ಣವಾಗಿ ಲಾಕ್‌ಡೌನ್‌ ತೆರವಿಗೆ ಸಜ್ಜಾಗಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ದೊಡ್ಡ ಶಾಕ್‌ ನೀಡಿದೆ.

click me!