10, 12ನೇ ಕ್ಲಾಸ್‌ನಲ್ಲಿ ಐಐಟಿ ಬಾಬಾ ತೆಗೆದ ಮಾರ್ಕ್ಸ್ ರಿವೀಲ್; IIT-JEE ರ‍್ಯಾಂಕ್ ಕಂಡು ಸೈಕ್ ಆದ್ರು ಜನರು

Published : Feb 20, 2025, 01:26 PM ISTUpdated : Feb 20, 2025, 01:39 PM IST
10, 12ನೇ ಕ್ಲಾಸ್‌ನಲ್ಲಿ ಐಐಟಿ ಬಾಬಾ ತೆಗೆದ ಮಾರ್ಕ್ಸ್ ರಿವೀಲ್; IIT-JEE ರ‍್ಯಾಂಕ್ ಕಂಡು ಸೈಕ್ ಆದ್ರು ಜನರು

ಸಾರಾಂಶ

IITian Baba mark Sheet Viral: ಐಐಟಿ ಬಾಂಬೆ ಪದವೀಧರ ಅಭಯ್ ಸಿಂಗ್ ಅವರ 10 ಮತ್ತು 12ನೇ ತರಗತಿಯ ಅಂಕಗಳು ಬಹಿರಂಗವಾಗಿವೆ. ಐಐಟಿ-ಜೆಇಇಯಲ್ಲಿ ಉತ್ತಮ ರ‍್ಯಾಂಕ್ ಪಡೆದಿದ್ದರೂ ಆಧ್ಯಾತ್ಮದತ್ತ ಸೆಳೆದಿದ್ದು ಹೇಗೆ ಎಂಬುದು ಕುತೂಹಲ ಮೂಡಿಸಿದೆ.

ನವದೆಹಲಿ: ಪ್ರಯಾಗ್‌ರಾಜ್‌ ಮಹಾಕುಂಭ ಮೇಳದಲ್ಲಿ ಗಮನ ಸೆಳೆದಿದ್ದ ಐಐಟಿ ಬಾಬಾ ಅವರ 10 ಮತ್ತು 12ನೇ ಕ್ಲಾಸ್‌ನಲ್ಲಿ ತೆಗೆದುಕೊಂಡ ಅಂಕಗಳ ಮಾಹಿತಿ ಬಹಿರಂಗಗೊಂಡಿದೆ. ಐಐಟಿ ಬಾಂಬೆಯಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿದ್ದ ಅಭಯ್ ಸಿಂಗ್ ಅವರ ಆಧ್ಯಾತ್ಮಿಕ ಜೀವನದತ್ತ ಆಕರ್ಷಿತರಾಗಿದ್ದರು. ಮಹಾಕುಂಭಕ್ಕೆ ಆಗಮಿಸಿದ್ದ ಅಭಯ್ ಸಿಂಗ್ ಅವರನ್ನು ಮಾಧ್ಯಮವೊಂದು ಮಾತನಾಡಿಸಿತ್ತು. ಈ ವೇಳೆ ತಾನೋರ್ವ ಐಐಟಿ ವಿದ್ಯಾರ್ಥಿ ಎಂದು ಹೇಳಿಕೊಂಡಿದ್ದರು. ನಂತರ ಅಭಯ್ ಸಿಂಗ್ ಸಂದರ್ಶನದ ವಿಡಿಯೋ ಕ್ಲಿಪ್ ಸೋಶಿಯಲ್ ಮೀಡಿಯಾದಲ್ಲಿ ಮಿಂಚಿನಂತೆ ವೈರಲ್ ಆಗಿತ್ತು. ಭೌತಿಕ ಜಗತ್ತು ತ್ಯಜಿಸಿರುವ ಅಭಯ್ ಸಿಂಗ್, ಆಂತರಿಕ, ಆತ್ಮಾವಲೋಕನದ ಜೀವನದಲ್ಲಿ ಆಧ್ಯಾತ್ಮಿಕತೆಯಲ್ಲಿ ಮುಂದುವರಿದಿದ್ದರು. ಅಭಯ್ ಸಿಂಗ್ ಉರ್ಫ್ ಬಾಬಾ ಅವರ ಜೀವನ ಜನರ ಗಮನ ಸೆಳೆದಿತ್ತು. 

ಇದೀಗ ಐಐಟಿ ಬಾಬಾ ಅಭಯ್ ಸಿಂಗ್ ಅವರ ಶೈಕ್ಷಣಿಕ ಮಾಹಿತಿಯನ್ನು ಎಕಾನಾಮಿಕ್ ಟೈಮ್ಸ್ ವರದಿ ಮಾಡಿದೆ.  ಇದೀಗ ಅಭಯ್ ಸಿಂಗ್ ಅವರು 10 ಮತ್ತು 12ನೇ ಕ್ಲಾಸ್‌ನಲ್ಲಿ ತೆಗೆದುಕೊಂಡ ಅಂಕಗಳನ್ನು ನೋಡಿ ಜನರು ಆಶ್ಚರ್ಯಚಕಿತರಾಗುತ್ತಿದ್ದಾರೆ.  ಅಭಯ್ ಸಿಂಗ್ 10ನೇ ಕ್ಲಾಸ್ ಬೋರ್ಡ್ ಎಕ್ಸಾಂನಲ್ಲಿ ಶೇ.93 ಮತ್ತು 12ನೇ ಕ್ಲಾಸ್‌ನಲ್ಲಿ ಶೇ.92.4ರಷ್ಟು ಅಂಕಗಳನ್ನು ಗಳಿಸಿದ್ದಾರೆ. ಈ ಅಂಕಗಳು ಅಭಯ್ ಸಿಂಗ್ ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದರು ಎಂಬುದನ್ನು ತಿಳಿಸಿದ್ದಾರೆ. 

ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಬಾಂಬೆ ಐಐಟಿಯಲ್ಲಿ ಅಭಯ್ ಸಿಂಗ್ ಸೀಟ್ ಪಡೆದುಕೊಂಡಿದ್ದರು. 2008ರ ಐಐಟಿ ಪ್ರವೇಶ ಪರೀಕ್ಷೆ IIT-JEEಯಲ್ಲಿ 731ನೇ (All India Rank -AIR) ಸ್ಥಾನ ಪಡೆದುಕೊಂಡಿದ್ದರು. ಏರೋಸ್ಪೇಸ್ ವಿಭಾಗದಲ್ಲಿ ಇಂಜಿನೀಯರಿಂಗ್ ಪದವಿ ಪಡೆದುಕೊಂಡಿದ್ದ ಅಭಯ್ ಸಿಂಗ್, ಮೂರು ವರ್ಷ ಕೆನಾಡದಲ್ಲಿ ಕೆಲಸ ಮಾಡಿದ್ದರು. ಈ ವೇಳೆ ಅಭಯ್ ಸಿಂಗ್ ವಾರ್ಷಿಕವಾಗಿ 36 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಿದ್ದರು. 

ಮೂರು ವರ್ಷ ಕೆಲಸ ಮಾಡಿದ ಬಳಿಕ ಅಜಯ್ ಸಿಂಗ್,ಆದ್ಯತ್ಮದತ್ತ ಆಕರ್ಷಿತರಾಗಿದ್ದರು. ಬಾಹ್ಯ ಅಥವಾ ಭೌತಿಕ ಸುಖ, ಸಂಪತ್ತು ಆಂತರಿಕ ತೃಪ್ತಿಯನ್ನು ನೀಡಲ್ಲ. ಹಾಗಾಗಿ ಎಲ್ಲವನ್ನು ತೊರೆದು ಆಂತರಿಕ ನೆಮ್ಮದಿಯನ್ನು ಕಂಡುಕೊಳ್ಳುವ ಕೆಲಸವನ್ನು ಮಾಡುತ್ತಿರೋದಾಗಿ ಆಭಯ್ ಸಿಂಗ್ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. 

ಇದನ್ನೂ ಓದಿ: ಬಾಂಬೆ ಐಐಟಿಯಲ್ಲಿ ಏರೋಸ್ಪೇಸ್‌ ಇಂಜಿನಿಯರಿಂಗ್‌ ಮಾಡಿದ್ದ ವ್ಯಕ್ತಿ ಇಂದು ಮಹಾಸಾಧು!

ಅಖಾಡದಿಂದ ಹೊರಕ್ಕೆ ಐಐಟಿ ಬಾಬಾ
ಜುನಾ ಅಖಾಡಕ್ಕೆ ಸೇರಿದ್ದ ಐಐಟಿ ಬಾಬಾ ಅಭಯ್ ಸಿಂಗ್ ಅವರು  ಗುರು ಮಹಾಂತ ಸೋಮೇಶ್ವರ್‌ ಪುರಿಯವರನ್ನು ಮಾಧ್ಯಮಗಳ ಮುಂದೆ ನಿಂದನೆ ಮಾಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಕಾರಣದಿಂದ ಅಖಾಡ ಹಾಗೂ ಅದರ ಸುತ್ತಮುತ್ತ ಸುಳಿಯುವುದರಿಂದ ನಿರ್ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಈ ಕುರಿತು ಮಾತನಾಡಿದ್ದ ಜುನಾ ಅಖಾಡದ ಸದಸ್ಯರೊಬ್ಬರು, ‘ಆತ ಸಾಧುವಲ್ಲ, ಅಲೆಮಾರಿ. ಟಿವಿ ಎದುರು ಏನೇನೋ ಹೇಳುತ್ತಿದ್ದ ಕಾರಣ ಅವರನ್ನು ಹೊರಹಾಕಲಾಗಿದೆ. ಆತ ಯಾರ ಶಿಷ್ಯನೂ ಆಗಿರಲಿಲ್ಲ ಎಂದು ಹೇಳಿಕೆಯನ್ನು ನೀಡಿದ್ದರು. ನಾನು ಜನಪ್ರಿಯನಾಗಿರುವ ಕಾರಣ ಅವರ ಬಗ್ಗೆ ಬಾಯ್ಬಿಡಬಹುದು ಎಂದು ಬೆದರಿ, ನಾನು ರಹಸ್ಯ ತಪಸ್ಸಿನಲ್ಲಿ ತೊಡಗಿರುವುದಾಗಿ ಹೇಳುತ್ತಿದ್ದಾರೆ ಎಂದು ಅಭಯ್ ಸಿಂಗ್ ಹೇಳಿದ್ದರು.

ಇದನ್ನೂ ಓದಿ: ಐಐಟಿ ಬಾಬಾನಿಗೆ ಮನೆಗೆ ವಾಪಸ್ ಬರುವಂತೆ ಕೇಳಿದ ಅಪ್ಪ, ಮಗನ ರಿಯಾಕ್ಷನ್ ಹೇಗುತ್ತು ನೋಡಿ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು