ವಿಶೇಷಚೇತನ ಕೋಟಾದಲ್ಲಿ ಕೆಲಸ ಪಡೆದ ಸರ್ಕಾರಿ ಅಧಿಕಾರಿಯ ಡಾನ್ಸ್‌ ವೈರಲ್: ಹಲವು ಪ್ರಶ್ನೆ

Published : Feb 20, 2025, 12:00 PM ISTUpdated : Feb 20, 2025, 12:18 PM IST
ವಿಶೇಷಚೇತನ ಕೋಟಾದಲ್ಲಿ ಕೆಲಸ ಪಡೆದ ಸರ್ಕಾರಿ ಅಧಿಕಾರಿಯ ಡಾನ್ಸ್‌ ವೈರಲ್: ಹಲವು ಪ್ರಶ್ನೆ

ಸಾರಾಂಶ

ಮಧ್ಯಪ್ರದೇಶದ ವಿಶೇಷಚೇತನ ಸರ್ಕಾರಿ ಅಧಿಕಾರಿಯೊಬ್ಬರು ನೃತ್ಯ ಮಾಡಿ ವಿವಾದಕ್ಕೆ ಗುರಿಯಾಗಿದ್ದಾರೆ. ವಿಶೇಷಚೇತನ ಕೋಟಾದಡಿ ಕೆಲಸ ಗಿಟ್ಟಿಸಿಕೊಂಡಿದ್ದ ಅಧಿಕಾರಿಯ ನೃತ್ಯದ ಬಗ್ಗೆ ನೆಟ್ಟಿಗರು ಪ್ರಶ್ನೆಗಳನ್ನು ಎತ್ತಿದ್ದಾರೆ.

ಮಧ್ಯಪ್ರದೇಶ: ವಿಶೇಷಚೇತನ ಅಧಾರದಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದ ಸರ್ಕಾರಿ ಅಧಿಕಾರಿಯ ಬಿಂದಾಸ್‌ ನೃತ್ಯವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವಿವಾದ ಸೃಷ್ಟಿಸಿದೆ. ಮಧ್ಯಪ್ರದೇಶ ರಾಜ್ಯ ಅಧಿಕಾರಿ ಪ್ರಿಯಾಂಕಾ ಕದಂ ಅವರು ಕಾರ್ಯಕ್ರಮವೊಂದರಲ್ಲಿ ಯಾರಿಗೂ ಕಮ್ಮಿ ಇಲ್ಲದಂತೆ ಬಿಂದಾಸ್ ಆಗಿ ನೃತ್ಯ ಮಾಡಿದ್ದಾರೆ. ಆದರೆ ಇವರು ಮಧ್ಯಪ್ರದೇಶ ಸಾರ್ವಜನಿಕ ಸೇವಾ ಆಯೋಗದ (MPPSC) ಪರೀಕ್ಷೆಯಲ್ಲಿ ಮೂಳೆ-ವಿಕಲಚೇತನ ಅಂಗವಿಕಲ (bone-impaired disabled) ಕೋಟಾದ ಅಡಿಯಲ್ಲಿ ಆಯ್ಕೆಯಾಗಿದ್ದಾರೆ. ಆದರೆ ಈಗ ಅವರು ಈ ರೀತಿ ಸಾಮಾನ್ಯರಂತೆ ಡಾನ್ಸ್ ಮಾಡುವುದನ್ನು ನೋಡಿ ನೆಟ್ಟಿಗರಿಗೆ ಹಲವು ಪ್ರಶ್ನೆಗಳು ಹುಟ್ಟಿದ್ದು, ಅವರ ದೈಹಿಕ ಅಸಮರ್ಥತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. 

ವೈರಲ್ ಆದ ವೀಡಿಯೋದಲ್ಲಿ ವಿಶೇಷಚೇತನಯಾದರೂ ಬಹಳ ಉತ್ಸಾಹದಿಂದ ಎಲ್ಲಾ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಿದ್ದಲ್ಲದೇ ಓಟ ಹಾಗೂ ಡಾನ್ಸ್ ಮಾಡಿರುವುದು ಕೂಡ ಸೆರೆಯಾಗಿದೆ. ಆದರೆ ದೀಪಿಕಾ ಕದಂ ಅವರು ಎಕ್ಸ್‌ರೇ ವರದಿಯನ್ನು  ಸಾರ್ವಜನಿಕವಾಗಿ ಶೇರ್‌ ಮಾಡುವ ಮೂಲಕ ತಮ್ಮ ಸ್ಥಿತಿಯನ್ನು ಸಮರ್ಥಿಸಿಕೊಂಡಿದ್ದಾರೆ.  ಅದರಲ್ಲಿ ಆಕೆಯ ಎರಡೂ ಕಾಲುಗಳ ಮೂಳೆಗಳು ಹಾನಿಗೊಳಗಾಗಿವೆ. ಅಲ್ಲದೇ ಆಕೆ ಸರ್ಜರಿಗೂ ಒಳಗಾಗಿದ್ದು, ಆಕೆಯ ಕಾಲಿಗೆ ರಾಡ್ ಅಳವಡಿಸಲಾಗಿರುವುದನ್ನು ತೋರಿಸುತ್ತಿದೆ. ಆದರೂ ತಾವು ಸರಾಗವಾಗಿ ಡಾನ್ಸ್ ಮಾಡುವುದಕ್ಕೆ ನೋವು ನಿವಾರಕ ಮಾತ್ರೆ ಸೇವಿಸಿರುವುದು ಕಾರಣವಾಗಿದೆ ಹಾಗೂ ಅದು ತನ್ನ ಅಂಗವೈಕಲ್ಯ ಸ್ಥಿತಿಯನ್ನು ನಿರಾಕರಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಆದರೆ ಈಕೆಯ ಡಾನ್ಸ್ ವೈರಲ್ ಆಗುತ್ತಿದ್ದಂತೆ ಇದು ಮಧ್ಯ ಪ್ರದೇಶ ಸಾರ್ವಜನಿಕ ಸೇವಾ ಆಯೋಗದ ನೇಮಕಾತಿ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆ ಪ್ರಶ್ನೆ ಮೂಡುವಂತೆ ಮಾಡಿದೆ. ಅದರಲ್ಲೂ ವಿಶೇಷವಾಗಿ  ವಿಶೇಷವಾಗಿ ಅಂಗವಿಕಲರಿಗೆ ಕೋಟಾಗಳ ಹಂಚಿಕೆಗೆ ಸಂಬಂಧಿಸಿದ ಚರ್ಚೆಗಳನ್ನು ಮತ್ತೆ ಹುಟ್ಟು ಹಾಕಿದೆ. ಸಾಮಾಜಿಕ ಕಾರ್ಯಕರ್ತೆ ರಾಧೆ ಜಾಟ್ ಇದು ಹೊಸ ಘಟನೆಯಲ್ಲ ಎಂದಿದ್ದು, ಇದು ಸಾರ್ವಜನಿಕ ಸೇವಾ ಪರೀಕ್ಷೆಗಳಲ್ಲಿ ಅಂಗವಿಕಲರಿಗೆ ಕೋಟಾಗಳನ್ನು ಹೇಗೆ ಅನ್ವಯಿಸಲಾಗುತ್ತದೆ ಎಂಬುದರಲ್ಲಿರುವ ವ್ಯವಸ್ಥಿತ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದಿದ್ದಾರೆ. 

ಈ ಹಿಂದೆ ಮಾಜಿ ಐಎಎಸ್ ಪ್ರೊಬೆಷನರ್ ಅಧಿಕಾರಿ ಪೂಜಾ ಖೇಡ್ಕರ್ ವಿರುದ್ಧ  ಒಬಿಸಿ ಮತ್ತು ಅಂಗವೈಕಲ್ಯ ಕೋ

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಟ್ರಂಪ್‌ಗೆ ಮುಯ್ಯಿಗೆ ಮುಯ್ಯಿ, ಪುಟಿನ್‌ ಜೊತೆ ಭಾಯಿ ಭಾಯಿ!
ಇನ್ನೂ 10 ದಿನಗಳ ಕಾಲ ಇಂಡಿಗೋಳು