Uddhav Thackeray ಧೈರ್ಯ ಅನ್ನೋದಿದ್ರೆ ದಾವೂದ್ ಇಬ್ರಾಹಿಂನನ್ನು ಕೊಂದು ತೋರಿಸಿ!

By Suvarna News  |  First Published Mar 25, 2022, 6:59 PM IST

ನಿಮಗೆ ಗಟ್ಸ್ ಇದ್ದರೆ ದಾವೂದ್ ನನ್ನು ಕೊಂದು ತೋರಿಸಿ

ದಾವೂದ್ ಹೆಸರಲ್ಲಿ ವೋಟ್ ಕೇಳೋಕೆ ರೆಡಿಯಾಗ್ತಿದ್ದೀರಿ

ಬಿಜೆಪಿ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರ ವಾಗ್ದಾಳಿ


ಮುಂಬೈ (ಮಾ.25): ಭೂಗತ ಪಾತಕಿ ದಾವೂದ್ ಇಬ್ರಾಹಿಂ (Dawood Ibrahim) ಜೊತೆ ಸಂಬಂಧ ಹೊಂದಿದ್ದ ಕಾರಣಕ್ಕಾಗಿ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಎನ್ ಸಿಪಿ ನಾಯಕ (NCP Leader) ಹಾಗೂ ಮಹಾರಾಷ್ಟ್ರ ಸರ್ಕಾರದ ಸಚಿವ ನವಾಬ್ ಮಲೀಕ್ (Nawab Malik) ರನ್ನು ಜಾರಿ ನಿರ್ದೇಶನಾಲಯ (Enforcement Directorate) ಬಂಧಿಸಿದೆ. ಇದಕ್ಕೆ ಶುಕ್ರವಾರ ಮಹಾರಾಷ್ಟ್ರ ವಿಧಾನಸಭೆಯಲ್ಲಿ (Maharashtra Assembly) ಮುಖ್ಯಮಂತ್ರಿ ಉದ್ದವ್ ಠಾಕ್ರೆ ( Chief Minister Uddhav Thackeray )ಮಹಾರಾಷ್ಟ್ರದ ವಿರೋಧ ಪಕ್ಷವಾಗಿರುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು. "ನಿಮಗೆ ಧೈರ್ಯವಿದ್ದರೆ ದಾವೂದ್ ಇಬ್ರಾಹಿಂನನ್ನು ಕೊಂದು ತೋರಿಸಿ' ಎಂದು ಸವಾಲ್ ಹಾಕಿದ್ದಾರೆ.

ಇಡೀ ದೇಶಕ್ಕೆ ಬೇಕಾಗಿರುವ ದಾವೂದ್ ಇಬ್ರಾಹಿಂ ಎಲ್ಲಿದ್ದಾನೆ? ಯಾರಿಗಾದರೂ ಗೊತ್ತಿದೆಯೇ ಅವನು ಎಲ್ಲಿದ್ದಾನೆ ಅಂತಾ? ಕಳೆದ ಚುನಾವಣೆಯನ್ನು ನೀವು ರಾಮಮಂದಿರದ ಹೆಸರಲ್ಲಿ ಎದುರಿಸಿದ್ದೀರಿ. ಈ ಬಾರಿ ದಾವೂದ್ ನ ಹೆಸರಲ್ಲಿ ವೋಟ್ ಪಡೆಯುವ ಹುನ್ನಾರ ಮಾಡುತ್ತೀದ್ದೀರಿ ತಾನೆ? ಲಾಡೆನ್ ಹೆಸರಲ್ಲಿ ಒಬಾಮಾ ಯಾವಾಗಲಾದರೂ ವೋಟ್ ಕೇಳಿದ್ರಾ? ನಿಮಗೆ ಧೈರ್ಯ ಅನ್ನೋದಿದ್ದರೆ ದಾವೂದ್ ಇಬ್ರಾಹಿಂನನ್ನು ಕೊಂದು ತೋರಿಸಿ, ಇದನ್ನು ಮಾಡ್ತೀರಾ? ಎಂದು ವಿರೋಧ ಪಕ್ಷ ಬಿಜೆಪಿಗೆ ಪ್ರಶ್ನೆ ಮಾಡಿದ್ದಾರೆ.

ನವಾಬ್ ಮಲೀಕ್ ಅನ್ನೋ ವ್ಯಕ್ತಿ ಹಲವು ವರ್ಷಗಳಿಂದ ದಾವೂದ್ ಇಬ್ರಾಹಿಂ ಜೊತೆ ಸಂಪರ್ಕ ಹೊಂದಿದ್ದ ಎಂದು ಹೇಳುತ್ತಿದ್ದೀರಿ, ಹಾಗಿದ್ದಲ್ಲಿ ಇಷ್ಟು ವರ್ಷಗಳ ಕಾಲ ಕೇಂದ್ರದ ಏಜೆನ್ಸಿಗಳು ಏನು ಮಾಡ್ತಿದ್ರಿ? ಬಹುಶಃ ಇದರ ಬಗ್ಗೆ ಈಗ ಮಾತನಾಡುವುದು ಸೂಕ್ತವಲ್ಲ. ಇದು ಕೋರ್ಟ್ ನ ಮುಂದಿದೆ. ಬಹುಶಃ ಜಾರಿ ನಿರ್ದೇಶನಾಲಯ ಹೇಳಿರುವಂತೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರನ್ನು ಈ ಕೆಲಸಕ್ಕಾಗಿ ನೇಮಿಸಿಕೊಂಡಿರಬಹುದು. ಖಾಸಗಿ ಸ್ಥಳದಲಲ್ಲಿ ದಾಖಲೆಗಳನ್ನು ನೀಡಿರುವ ಸಾಧ್ಯತೆ ಇದ್ದರೂ ಇರಬಹುದು ಎಂದು ಲೇವಡಿ ಮಾಡಿದ್ದಾರೆ.

Where is Dawood? Does anyone know where is he? You fought last elections in the name of Ram Mandir. Now, are you going to ask for votes in the name of Dawood? Did Obama ask for votes in the name of Laden? If you have guts then kill Dawood, will you?: Maharashtra CM in Assembly

— ANI (@ANI)


ನೀವು ನವಾಬ್ ಮಲಿಕ್ ರಾಜೀನಾಮೆ ಕೇಳುತ್ತಿದ್ದೀರಿ. ಹಾಗಿದ್ದಲ್ಲಿ ಮೊದಲು ನನ್ನ ಪ್ರಶ್ನೆಗೆ ಉತ್ತರ ನೀಡಿ, ಅಫ್ಜಲ್ ಗುರು ಮತ್ತು ಬುರ್ಹಾನ್ ವಾನಿ ಬಗ್ಗೆ ಸಹಾನುಭೂತಿ ಹೊಂದಿದ್ದ ಮೆಹಬೂಬಾ ಮುಫ್ತಿ ಅವರನ್ನು ಏಕೆ ಬೆಂಬಲಿಸಿದ್ದೀರಿ ಎಂದು ಉದ್ಧವ್ ಠಾಕ್ರೆ ಪ್ರಶ್ನೆ ಮಾಡಿದ್ದಾರೆ.

Tap to resize

Latest Videos

ಅಂದು ಗುಜರಿ ವ್ಯಾಪಾರಿ, ಇಂದು ಕೋಟ್ಯಾಧಿಪತಿ, ಹೀಗಿದೆ ನವಾಬ್ ಮಲಿಕ್ ರಾಜಕೀಯ ಪಯಣ!

ಉದ್ಧವ್ ಠಾಕ್ರೆ ಅವರ ಸೋದರ ಮಾವ ಕೂಡ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಟಾರ್ಗೆಟ್ ಆಗಿರುವ ಬೆನ್ನಲ್ಲಿಯೇ ವಿಧಾನಸಭೆಯಲ್ಲಿ ಈ ಮಾತುಗಳನ್ನು ಆಡಿದ್ದಾರೆ. "ನೀವು ಅಧಿಕಾರಕ್ಕೆ ಬರಬೇಕಾದರೆ ಅಧಿಕಾರಕ್ಕೆ ಬನ್ನಿ. ಆದರೆ ಅಧಿಕಾರಕ್ಕೆ ಬರಲು ಈ ಎಲ್ಲಾ ಕೆಟ್ಟ ಕೆಲಸಗಳನ್ನು ಮಾಡಬೇಡಿ. ನಮ್ಮ ಅಥವಾ ಬೇರೆಯವರ ಕುಟುಂಬ ಸದಸ್ಯರಿಗೆ ಕಿರುಕುಳ ನೀಡಬೇಡಿ. ನಿಮ್ಮ ಕುಟುಂಬಕ್ಕೆ ನಾವು ಎಂದಿಗೂ ತೊಂದರೆ ನೀಡಿಲ್ಲ" ಎಂದು ಹೇಳಿದ್ದಾರೆ.

Nawab Malik Arrest : ದಾವೂದ್ ಇಬ್ರಾಹಿಂ ಜೊತೆ ನಂಟು ಹೊಂದಿದ್ದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿಯಿಂದ ಬಂಧನ!

"ನಿಮ್ಮ ಕುಟುಂಬಗಳು ಏನಾದರೂ ತಪ್ಪು ಮಾಡಿದೆ ಎಂದು ನಾವು ಹೇಳುತ್ತಿಲ್ಲ ಅಥವಾ ನಾವು ನಿಮಗೆ ತೊಂದರೆ ಕೊಡುವ ಉದ್ದೇಶ ಹೊಂದಿದ್ದೇವೆ ಎಂದು ಹೇಳುತ್ತಿಲ್ಲ. ನೀವು ಅಧಿಕಾರಕ್ಕೆ ಬರಲು ನನ್ನನ್ನು ಜೈಲಿಗೆ ಹಾಕಲು ಬಯಸಿದರೆ, ನನ್ನನ್ನು ಜೈಲಿಗೆ ಹಾಕಿ" ಎಂದು ಠಾಕ್ರೆ "ಭಾವನಾತ್ಮಕ" ಮನವಿ ಮಾಡಿದ್ದಾರೆ. ಠಾಕ್ರೆ ಅವರ ಪತ್ನಿ ರಶ್ಮಿ ಅವರ ಸಹೋದರ ಶ್ರೀಧರ್ ಮಾಧವ್ ಪಾಟಂಕರ್ ಅವರು ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್ ಅನ್ನು "ಮಾಲೀಕರಾಗಿದ್ದಾರೆ ಮತ್ತು ನಿಯಂತ್ರಿಸುತ್ತಿದ್ದಾರೆ" ಎಂದು ಇಡಿ ಆರೋಪಿಸಿದೆ. ಪುಷ್ಪಕ್ ಬುಲಿಯನ್ ಹೆಸರಿನ ಕಂಪನಿಯ ವಿರುದ್ಧ ತನಿಖೆ ನಡೆಸಲಾಗುತ್ತಿರುವ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಸೋರಿಕೆಯಾದ ಹಣವನ್ನು ಶ್ರೀ ಸಾಯಿಬಾಬಾ ಗೃಹನಿರ್ಮಿತಿ ಪ್ರೈವೇಟ್ ಲಿಮಿಟೆಡ್‌ನ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ ಹಾಕಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

 

click me!