ದಾಳಿ ಮಾಡುವಂತೆ ಬಂದ ನೀರು ಕುದುರೆಗೆ ಹೊಡೆದು ಓಡಿಸಿದ ಗಾರ್ಡ್: ವಿಡಿಯೋ

By Anusha KbFirst Published Mar 25, 2022, 6:56 PM IST
Highlights

ದೆಹಲಿಯ ಮೃಗಾಲಯದಲ್ಲಿ ದೈತ್ಯ ಗಾತ್ರದ ನೀರು ಕುದುರೆ ತಾನಿರುವ ಪ್ರದೇಶದಿಂದ ಜಿಗಿದು ಸಂದರ್ಶಕರ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿತ್ತು.

ದೆಹಲಿ(ಮಾ.25):  ಮೃಗಾಲಯದ ಸೆಕ್ಯುರಿಟಿ ಗಾರ್ಡ್‌ ದಾಳಿ ಮಾಡುವಂತೆ ಬಂದ ನೀರು ಕುದುರೆಯೊಂದನ್ನು ಬರಿಗೈಯಲ್ಲಿ ಹೊಡೆದು ದೂರ ಅಟ್ಟಿದ ಘಟನೆ ನಡೆದಿದೆ. ಬಾಯ್ತರೆದುಕೊಂಡು ಕಚ್ಚಿ ತಿಂದು ಬಿಡುವೆ ಎಂಬಂತೆ ಬರುತ್ತಿದ್ದ ನೀರು ಕುದುರೆಯನ್ನು ಸೆಕ್ಯೂರಿಟಿ ಗಾರ್ಡ್‌ ಬರಿಗೈಲಿ ಹಿಂದಕ್ಕೆ ಅಟ್ಟಿದ ದೃಶ್ಯವನ್ನು ಅಲ್ಲೇ ಇದ್ದ ಪ್ರವಾಸಿಗರು ವಿಡಿಯೋ ರೆಕಾರ್ಡ್ ಮಾಡಿದ್ದು, ಸೆಕ್ಯೂರಿಟಿ ಗಾರ್ಡ್‌ ಅವರ ಧೈರ್ಯಕ್ಕೆ ಜನ ಶಹಭಾಷ್ ಅಂದಿದ್ದಾರೆ.

ದೆಹಲಿಯ ಮೃಗಾಲಯದಲ್ಲಿ ದೈತ್ಯ ಗಾತ್ರದ ನೀರು ಕುದುರೆ ತಾನಿರುವ ಪ್ರದೇಶದಿಂದ ಜಿಗಿದು ಸಂದರ್ಶಕರ ಪ್ರದೇಶಕ್ಕೆ ಪ್ರವೇಶಿಸಲು ಪ್ರಯತ್ನಿಸುತ್ತಿತ್ತು. ಈ ವೇಳೆ ಭದ್ರತಾ ಸಿಬ್ಬಂದಿಯೊಬ್ಬರ ಶೌರ್ಯ ಮತ್ತು ಕ್ಷಿಪ್ರ ಪ್ರತಿಕ್ರಿಯೆಯಿಂದಾಗಿ  ಅದು ಇರಬೇಕಾದ ಸ್ಥಳದಲ್ಲಿ ಹೋಗಿ ಕುಳಿತುಕೊಂಡಿದೆ.

 

ಭದ್ರತಾ ಸಿಬ್ಬಂದಿ ಮೊದಲಿಗೆ ಈ ನೀರು ಕುದುರೆಗೆ ನಿಧಾನವಾಗಿ ಕಪಾಳಮೋಕ್ಷ ಮಾಡುತ್ತಿದ್ದಂತೆ, ಅದು ಕೋಪಗೊಂಡ ಗುಟುರು ಹಾಕಿದೆ. ಅಲ್ಲದೇ ಭದ್ರತಾ ಸಿಬ್ಬಂದಿಯನ್ನೇ ಹೆದರಿಸಲು ಮುಂದಕ್ಕೆ ಜಿಗಿಯುತ್ತದೆ. ಆದಾಗ್ಯೂ, ಕೆಚ್ಚೆದೆಯ ಕಾವಲುಗಾರ  ಅಲ್ಲೇ ನಿಂತು ಅದರ ತಲೆಯನ್ನು ತಟ್ಟುತ್ತಾನೆ. ಇದರಿಂದ ಅದು ಮತ್ತೆ ನೀರಿನತ್ತ ತೆರಳುತ್ತದೆ. ಈ ನೀರು ಕುದುರೆ ಇದು ಸೆಮಿಯಾಕ್ವಾಟಿಕ್ ಸಸ್ತನಿಯಾಗಿದೆ (semiaquatic mammal). ಇತ್ತ ಈ ದೃಶ್ಯವನ್ನು ನೋಡಿದ ಪ್ರವಾಸಿಗರು ಗಾಬರಿಯಾಗಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ಸೆಕ್ಯೂರಿಟಿ ಗಾರ್ಡ್ ಧೈರ್ಯವಿರುವ ಕಾರಣಕ್ಕೆ ಅಲ್ಲಿದ್ದಾರೆ ಎಂದು ಶ್ಲಾಘಿಸಿದ್ದಾರೆ.

Buffalo Protest: ಕೋಡು ಮುರಿದ ಸಿಟ್ಟು.. ಹುಬ್ಬಳ್ಳಿಯಲ್ಲಿ ಎಮ್ಮೆಗಳ ಪ್ರತಿಭಟನೆ!

ಹಿಪ್ಪೋಗಳು (Hippos) ಸಾಮಾನ್ಯವಾಗಿ ಸಸ್ಯಾಹಾರಿಗಳು ಆದರೆ ಅತ್ಯಂತ ಆಕ್ರಮಣಕಾರಿಗಳು ಎಂದು ಪರಿಗಣಿಸಲಾಗಿದೆ. ಆವಾಸಸ್ಥಾನದ ನಷ್ಟದಿಂದ ಸಂಕಷ್ಟಕ್ಕೊಳಗಾಗಿರುವ ಅವುಗಳನ್ನು ಮಾಂಸ ಮತ್ತು ಅವುಗಳ ಹಲ್ಲುಗಳಿಗಾಗಿ ಬೇಟೆಯಾಡುವುದರಿಂದ ಅವು ಸಂಕಷ್ಟದಲ್ಲಿವೆ. ಪ್ರತಿ ವರ್ಷ ಹಿಪ್ಪೋಗಳು ಎಂದು ಕರೆಯಲ್ಪಡುವ ಈ ನೀರು ಕುದುರೆಗಳು ಆಫ್ರಿಕಾದಲ್ಲಿ (Africa) ಅಂದಾಜು 500 ಜನರನ್ನು ಕೊಲ್ಲುತ್ತವೆ, ಇದನ್ನು ವಿಶ್ವದಲ್ಲಿರುವ ಮಾನವರ ನಂತರದ  ಅತ್ಯಂತ ಮಾರಕ ಸಸ್ತನಿ (deadliest mammal) ಎಂದು ಹೇಳಲಾಗುತ್ತದೆ. 

ಹಂಗೇರಿಯ (Hungary) ರಾಜಧಾನಿ ಬುಡಾಪೆಸ್ಟ್‌ನಿಂದ ವರದಿಯಾದ ಇದೇ ರೀತಿಯ ಘಟನೆಯೊಂದರಲ್ಲಿ ತನ್ನ ಆವಾಸಸ್ಥಾನದಿಂದ ಹೊರ ಬಂದ ಪೆಂಗ್ವಿನ್‌ ಅನ್ನು ಪೊಲೀಸರು ರಕ್ಷಿಸಿ ಬುಡಾಪೆಸ್ಟ್ ಮೃಗಾಲಯದಲ್ಲಿ ಪುನರ್ವಸತಿ ಮಾಡಿದರು.

ಬೆಕ್ಕು ನಾಯಿ ಅಲ್ಲ, 200ಕ್ಕೂ ಹೆಚ್ಚು ಮೊಸಳೆ ಸಾಕುವ ವ್ಯಕ್ತಿ: ವಿಡಿಯೋ
 

ಆಫ್ರಿಕನ್ ಪೆಂಗ್ವಿನ್ (African penguin) ಸಾನಿಕಾ (Sanyika), ಮೃಗಾಲಯದಲ್ಲಿನ ತನ್ನ ಆವರಣದಿಂದ ಹೊರಬರಲು ಯಶಸ್ವಿಯಾಗಿತ್ತು.  ಮತ್ತು ಸ್ಥಳೀಯ ಅಧಿಕಾರಿಗಳು ಪೆಂಗ್ವಿನ್‌ನತ್ತ ಹೊದಾಗ ಅದು ಬೀದಿಯಲ್ಲಿ ಓಡಲು ಆರಂಭಿಸಿತ್ತು. ನಂತರ ಅಧಿಕಾರಿಗಳು ಈ ಪೆಂಗ್ವಿನ್‌ ಅನ್ನು ಕಂಬಳಿಯಲ್ಲಿ ಸುತ್ತಿ ಸುರಕ್ಷಿತವಾಗಿ ತಂದು ಮೃಗಾಲಯಕ್ಕೆ ಬಿಟ್ಟರು. ಬುಡಾಪೆಸ್ಟ್ ಮೃಗಾಲಯವು (Budapest) ಪೆಂಗ್ವಿನ್ ಸನ್ನಿಕಾಗೆ ಕೇವಲ 6 ತಿಂಗಳ ಪ್ರಾಯ ಎಂದು ಹೇಳಿದೆ.

ರಸ್ತೆ ಮಧ್ಯೆ ಬೈಕ್‌ ಸ್ಟಂಟ್ ಮಾಡಿಕೊಂಡು ಶೋಕಿ ಮಾಡ್ತಿದ್ದವನ ಹಸುವೊಂದು ಬೆನ್ನಟ್ಟಿದ ಘಟನೆ ನಡೆದಿದ್ದು, ಅದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ತನ್ನ ಬೈಕ್‌ನ ಹ್ಯಾಂಡಲ್‌ ಹಿಡಿದುಕೊಂಡು ಬೈಕ್‌ನ್ನು ಸುತ್ತಸುತ್ತ ತಿರುಗಿಸುತ್ತಿದ್ದ. ಈ ವೇಳೆ ಇದೇ ದಾರಿಯಲ್ಲಿ ಬಂದ ಹಸುಗಳೆರಡು ಕೆಲ ಕಾಲ ಇವನ ಅವತಾರವನ್ನು ನೋಡಿವೆ. ಅಲ್ಲದೇ ಈ ಹಸುಗಳು ಬೈಕ್‌ನ ಮುಂದೆ ಮುಂದೆ ಬಂದು ಸುಳಿದಾಡಿವೆ. ಆದರೂ ಈತ ತನ್ನ ಸ್ಟಂಟ್‌ ಮುಂದುವರೆಸಿದ್ದಾನೆ. ಇದರಿಂದ ಹಸುಗಳ ಪಿತ್ತ ನೆತ್ತಿಗೇರಿದ್ದು, ಅವೆರಡು ಇವನನ್ನು ಹಾಯಲು ಬಂದಿವೆ. ಕೂಡಲೇ ಬೈಕ್‌ ಸ್ಟಾರ್ಟ್ ಮಾಡಿದ ಈತ ಸ್ಥಳದಿಂದ ಜಾಗ ಖಾಲಿ ಮಾಡಿದ್ದಾನೆ. ಈ ವೇಳೆ ಹಸುಗಳೆರಡು ಬೈಕ್‌ನ್ನು ಓಡಿಸಿಕೊಂಡು ಹೋಗಿವೆ. 

click me!