ಪತ್ನಿ ಮೇಲಿನ ಪ್ರೀತಿ: ರಾಫ್ಟಿಂಗ್ ಬೋಟ್‌ನಲ್ಲಿ ಥೈಲ್ಯಾಂಡ್‌ನಿಂದ ಮುಂಬೈಗೆ ಹೊರಟ ವ್ಯಕ್ತಿ

By Anusha KbFirst Published Mar 25, 2022, 6:12 PM IST
Highlights
  • ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಹೊ ಹೊಂಗ್ ಹಂಗ್ ಪತ್ನಿ
  • ಎರಡು ವರ್ಷಗಳಿಂದ ಪತ್ನಿ ಭೆಟಿಯಾಗದೆ ವಿರಹ
  • ಸಮುದ್ರ ದಾಟುವ ಸಾಹಸಕ್ಕೆ ಮುಂದಾದ ವ್ಯಕ್ತಿ

ಬ್ಯಾಂಕಾಕ್: ದೂರವಿದ್ದಷ್ಟು ಪ್ರೀತಿ ಹೆಚ್ಚಂತೆ ಹಾಗೆಯೇ ಪತ್ನಿಗಾಗಿ ಕಾತರಿಸುತ್ತಿದ್ದ ವಿಯೆಟ್ನಾಂ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ನೋಡಲು ಥಾಯ್ಲೆಂಡ್‌ನಿಂದ ಭಾರತಕ್ಕೆ ರಾಫ್ಟಿಂಗ್ ಬೋಟ್‌ನಲ್ಲಿ 2,000 ಕಿಲೋಮೀಟರ್ (1,240 ಮೈಲಿ) ರೋಲಿಂಗ್ ಮಾಡಲು ಪ್ರಯತ್ನಿಸಿದ್ದಾನೆ. ಆರಂಭದಲ್ಲಿ ಈತ ಬ್ಯಾಂಕಾಕ್‌ಗೆ ತೆರಳಿದ್ದ ಆದರೆ ವೀಸಾ ಇಲ್ಲದೆ  ಭಾರತಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡ ಆತ ರಾಫ್ಟಿಂಗ್‌ ಬೋಟು ತೆಗೆದುಕೊಂಡು ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬರಲು ಪ್ರಯತ್ನಿಸಿದ್ದಾನೆ.

ಕೋವಿಡ್ ಬಂದ ನಂತರ ಹಲವು ದೇಶಗಳ ನಡುವೆ ವಿಮಾನ ಪ್ರಯಾಣವೇ ಸ್ಥಗಿತಗೊಂಡಿದೆ. ಹೀಗಾಗಿ ವಿದೇಶಕ್ಕೆ ತೆರಳಿದವರು ವಿದೇಶದಲ್ಲೇ ಬಾಕಿಯಾಗಿ ತಮ್ಮ ಕುಟುಂಬದವರನ್ನು ಭೇಟಿ ಮಾಡಲಾಗದೆ ಕೇವಲ ವಿಡಿಯೋ ಕಾಲ್‌ ಮಾಡಿ ಅದರಲ್ಲೇ ತಮ್ಮ ಪ್ರೀತಿ ಪಾತ್ರರನ್ನು ನೋಡಿಕೊಂಡು ಖುಷಿ ಪಡುವಂತಾಗಿದೆ. ಈ ಕೋವಿಡ್ ಅನೇಕರ ಬಾಳಲ್ಲಿ ಅನಾಹುತವನ್ನೇ ತಂದಿಟ್ಟಿದೆ. ಹೀಗೆ ಕೋವಿಡ್ ಕಾರಣಕ್ಕಾಗಿ ಯಾವುದೇ ವಿಮಾನ ಪ್ರಯಾಣವಿಲ್ಲದ ಕಾರಣ ವಿದೇಶದಲ್ಲಿರುವ(ಭಾರತ) ಪತ್ನಿಯನ್ನು ನೋಡಲಾಗದೆ ಕಂಗೆಟ್ಟಿದ್ದ ವಿಯೆಟ್ನಾಂ (vietnam) ವ್ಯಕ್ತಿಯೊಬ್ಬ ರಾಫ್ಟಿಂಗ್ ಬೋಟಿನ ಮೂಲಕ ಸಮುದ್ರ ಮಾರ್ಗದಲ್ಲಿ ಬಂದು ಪತ್ನಿಯ ಭೇಟಿಯಾಗಲು ಮುಂದಾಗಿ ಥಾಯ್ಲೆಂಡ್‌ನಲ್ಲಿ ನೌಕಾಪಡೆ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾನೆ. 

ಅವನಿಗೆ 63, ಅವಳಿಗೆ 22. ಇಬ್ಬರದ್ದೂ ಸುಖೀ ದಾಂಪತ್ಯ, ಆದ್ರೆ ಎಲ್ರೂ ಅದೇ ಪ್ರಶ್ನೆ ಕೇಳ್ತಿದ್ದಾರಂತೆ !

37 ವರ್ಷ ವಯಸ್ಸಿನ ಹೊ ಹೊಂಗ್ ಹಂಗ್ (Ho Hoang Hung) ಎಂಬಾತ ಎರಡು ವಾರಗಳ ಹಿಂದೆ ಥೈಲ್ಯಾಂಡ್‌ನ ಫುಕೆಟ್ (Phuket)ಬೀಚ್‌ ಕರಾವಳಿಯಿಂದ ಗಾಳಿ ತುಂಬಬಹುದಾದ ರಬ್ಬರ್ ಡಿಂಗಿಯ (inflatable rubber dinghy) ಮೂಲಕ ಪ್ರಯಾಣ ಶುರು ಮಾಡಿದ್ದಾನೆ. ಪ್ರಯಾಣದ ಸಮಯದಲ್ಲಿ ಈತ ಕ್ಷಣದಲ್ಲಿ ತಯಾರಿಸಬಲ್ಲ ನೂಡಲ್ಸ್ (noodles) ಹಾಗೂ ಸ್ವಲ್ಪ ಪ್ರಮಾಣದ ನೀರನ್ನು ಜೊತೆಗಿಟ್ಟುಕೊಂಡಿರುವುದು ಬಿಟ್ಟರೆ ತನ್ನ ಬಳಿ ಅಗತ್ಯವಾಗಿ ಬೇಕಾದ ಮಾರ್ಗ ತೋರಿಸುವ ನ್ಯಾವಿಗೇಷನ್‌ ಸಿಸ್ಟಂ ಆತನ ಬಳಿ ಇರಲಿಲ್ಲ. ಅಲ್ಲದೇ ಈತ  ಚಂಡಮಾರುತ ಆರಂಭವಾದ ಸಮಯದಲ್ಲಿ ಬಂಗಾಳಕೊಲ್ಲಿ (Bay of Bengal) ಪ್ರದೇಶವನ್ನು ದಾಟುವ ಯೋಜನೆ ಹಾಕಿಕೊಂಡಿದ್ದ. 

Authorities in Thailand have rescued a man who attempted to paddle on an inflatable boat from Phuket to India to reunite with his wife, after being apart for two years due to the pandemic.

📸: Third Naval Area Command of the Royal Thai Navy pic.twitter.com/0C1eHN0GuZ

— Astro Radio News (@AstroRadioNews)

 

ಈ ಮಧ್ಯೆ ಬುಧವಾರ ಮೀನುಗಾರಿಕಾ ದೋಣಿಯೊಂದು ಹೋ ಅವರು ಥಾಯ್ ಮುಖ್ಯ ಭೂಭಾಗದಿಂದ ಸುಮಾರು 80 ಕಿಲೋಮೀಟರ್ ದೂರದಲ್ಲಿರುವ ಸಿಮಿಲನ್ ದ್ವೀಪಗಳ ಬಳಿ ಸಂಚರಿಸುತ್ತಿರುವುದನ್ನು ಪತ್ತೆ ಮಾಡಿದೆ. ಕೂಡಲೇ ಮೀನುಗಾರ ಬೋಟ್‌ನ ಸಿಬ್ಬಂದಿ  ಥಾಯ್‌ಲ್ಯಾಂಡ್‌ನ ನೌಕಾಪಡೆಯ ಕಡಲ ಭದ್ರತಾ ಘಟಕವನ್ನು (maritime security unit) ಸಂಪರ್ಕಿಸಿದ್ದಾರೆ. ಅವರು ಬಂದು ಈ ಹೋನನ್ನು ರಕ್ಷಿಸಿದ್ದಾರೆ. ಥಾಯ್ ಕರಾವಳಿಯಲ್ಲಿ ರಕ್ಷಿಸಿದ ನಂತರ ಈ ವ್ಯಕ್ತಿಯನ್ನು ಗುರುವಾರ (ಮಾರ್ಚ್ 24) ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ನೌಕಾಪಡೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ವೇಳೆ ಹೊ ಹೊಂಗ್ ಹಂಗ್‌ನನ್ನು ಅಧಿಕಾರಿಗಳು ವಿಚಾರಿಸಿದಾಗ ಈತನ ಪತ್ನಿ ಭಾರತದ ಮುಂಬೈನಲ್ಲಿ ಕೆಲಸ ಮಾಡುತ್ತಿದ್ದು, ಕೋವಿಡ್ ಪ್ರಯಾಣದ ನಿರ್ಬಂಧಗಳಿಂದಾಗಿ ಎರಡು ವರ್ಷಗಳಿಂದ ಆಕೆಯನ್ನು ನೋಡಿಲ್ಲ. ಆಕೆಯನ್ನು ಭೇಟಿಯಾಗಲು  ಪ್ರಯತ್ನಿಸುತ್ತಿರುವುದಾಗಿ ಹೋ ಅಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಥಾಯ್ ಮ್ಯಾರಿಟೈಮ್ ಎನ್‌ಫೋರ್ಸ್‌ಮೆಂಟ್ ಕಮಾಂಡ್ ಸೆಂಟರ್‌ನಿಂದ ಕ್ಯಾಪ್ಟನ್ ಪಿಚೆಟ್ ಸಾಂಗ್ಟನ್ (Captain Pichet Songtan) ಹೇಳಿದ್ದಾರೆ.

Spiritual Intimacy: ಸಂಗಾತಿ ಜತೆ ಆಧ್ಯಾತ್ಮಿಕ ಆಪ್ತತೆ ಬೇಕಾದರೆ ಹೀಗ್ಮಾಡಿ

ಇಷ್ಟು ದೂರದ ಸಮುದ್ರ ಪ್ರಯಾಣಕ್ಕೆ ಮುಂದಾದ ಹೊ ಹೊಂಗ್ ಹಂಗ್‌, ತನ್ನೊಂದಿಗೆ ಮ್ಯಾಪ್(map), ದಿಕ್ಸೂಚಿ(compass), ಜಿಪಿಎಸ್ ಅಥವಾ ಧರಿಸಲು ಬೇರೆ ಬಟ್ಟೆಯನ್ನು (clothes) ಕೂಡ ಇಟ್ಟುಕೊಂಡಿರಲಿಲ್ಲ. ಆತ ಸೀಮಿತ ಪ್ರಮಾಣದ ನೀರನ್ನು ಮಾತ್ರ ತನ್ನ ಬಳಿ ಇಟ್ಟುಕೊಂಡಿದ್ದ  ಎಂದು ಕ್ಯಾಪ್ಟನ್ ಹೇಳಿದ್ದಾರೆ. ಈತ ಆರಂಭದಲ್ಲಿ ಬ್ಯಾಂಕಾಕ್‌ಗೆ (Bangkok) ತೆರಳಿದ್ದ. ಆದರೆ ವೀಸಾ ಇಲ್ಲದೆ ಅಲ್ಲಿಂದ ಭಾರತಕ್ಕೆ ಪ್ರಯಾಣಿಸಲು ಸಾಧ್ಯವಿಲ್ಲ ಎಂಬುದನ್ನು ತಿಳಿದುಕೊಂಡ ಇದಾದ ಬಳಿಕ ರಾಫ್ಟಿಂಗ್‌ ಬೋಟು ತೆಗೆದುಕೊಂಡು ಕಡಲು ದಾಟಿ ಭಾರತ ಸೇರಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.

ಮಾರ್ಚ್ 5 ರ ಸುಮಾರಿಗೆ ಹೊರಟ  ಹೊ ಅವರಿಗೆ ಸಮುದ್ರದಲ್ಲಿ ಸಾಗುವ ಮಧ್ಯೆ ತೀವ್ರವಾದ ಗಾಳಿಯೂ ಎದುರಾಗಿದ್ದು, ಇದರಿಂದ ಅವರು ಎರಡು ವಾರಗಳಲ್ಲಿ ಜಾಸ್ತಿ ದೂರ ಪ್ರಯಾಣಿಸಲಾಗದೇ ಸೀಮಿತ ದೂರ ತೆರಳಿದ್ದರು. ಹೆಚ್ಚಿನ ವಿಚಾರಣೆಗಾಗಿ ಹೋ ಅವರನ್ನು ಫುಕೆಟ್‌ಗೆ ಹಿಂತಿರುಗಿ ಕಳುಹಿಸಲಾಗುತ್ತದೆ ಎಂದು ಥಾಯ್ ಅಧಿಕಾರಿಗಳು ತಿಳಿಸಿದ್ದಾರೆ. ನಾವು ವಿಯೆಟ್ನಾಂ ರಾಯಭಾರ (Vietnamese embassy) ಕಚೇರಿ ಮತ್ತು ಭಾರತೀಯ ರಾಯಭಾರ (Indian embassy)ಕಚೇರಿಯನ್ನು ಸಂಪರ್ಕಿಸಿದ್ದೇವೆ ಆದರೆ ಇನ್ನೂ ಉತ್ತರವಿಲ್ಲ" ಎಂದು ಪಿಚೆಟ್ ಹೇಳಿದ್ದಾರೆ. 
 

click me!