
ರಾಂಚಿ(ಮಾ.04): ಹಕ್ಕಿ ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಕೋಳಿ ಮಾರಾಟ ಪಾತಾಳಕ್ಕೆ ಕುಸಿಯುತ್ತದೆ. ಕೋಳಿ ಬಳಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಇದೀಗ ಹಲವು ರಾಜ್ಯಗಳಲ್ಲಿ ಹಕ್ಕಿ ಜ್ವರ ಪ್ರಕರಣಗಳು ಕಾಣಿಸಿಕೊಂಡಿದೆ. ಇದರ ನಡುವೆ ಜಾರ್ಖಂಡ್ ಆರೋಗ್ಯ ಸಚಿವ ಬನ್ನಾ ಗುಪ್ತಾ ಹೇಳಿಕೆ ಗೊಂದಲಕ್ಕೆ ಕಾರಣವಾಗಿದೆ. ಜಾರ್ಖಂಡ್‌ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಹೀಗಾಗಿ ಬನ್ನಾ ಗುಪ್ತಾ ಹೇಳಿಕೆ ತೀವ್ರ ಆಕ್ಷೇಪಕ್ಕೂ ಕಾರಣವಾಗಿದೆ. ಹಕ್ಕಿ ಜ್ವರ ಹೆಚ್ಚಾಗುತ್ತಿದೆ ಅಂದರೆ ನಾನು ಹೆಚ್ಚು ಚಿಕಿನ್ ತಿನ್ನುತ್ತೇನೆ ಎಂದಿದ್ದಾರೆ. ಈ ಹೇಳಿಕೆಗೆ ಹಲವರ ಪರ ವಿರೋಧ ವ್ಯಕ್ತಪಡಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿದೆ. ಕೆಲ ಪ್ರಕರಣಗಳು ದಾಖಲಾಗಿದೆ. ಆದರೆ ಯಾವುದೂ ಗಂಭೀರ ಪ್ರಕರಣ ಅಲ್ಲ. ಹೀಗಾಗಿ ಯಾವುದೇ ಆತಂಕವಿಲ್ಲ ಎಂದಿದ್ದಾರೆ. ಜಾರ್ಖಂಡ್ ಆರೋಗ್ಯ ಇಲಾಖೆ ತೀವ್ರ ನಿಗಾ ವಹಿಸಿದೆ. ಹಕ್ಕಿ ಜ್ವರ ನಿಯಂತ್ರಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಕ್ಕಿ ಜ್ವರ ಕುರಿತು ಯಾರೂ ಗಾಳಿ ಸುದ್ದಿ ಹಬ್ಬಿಸಬೇಡಿ ಎಂದು ಬನ್ನಾ ಗುಪ್ತಾ ಮನವಿ ಮಾಡಿದ್ದಾರೆ.
Monkey fever: ಕೆಎಫ್‌ಡಿ ಸೋಂಕಿತ ವ್ಯಕ್ತಿ ಆಸ್ಪತ್ರೆಗೆ ದಾಖಲು: ಮಲೆನಾಡಲ್ಲಿ ಆತಂಕ
ಹಕ್ಕಿ ಜ್ವರ ಇದೆ ಎಂದರೆ ನಾನು ಹೆಚ್ಚು ಚಿಕನ್ ತಿನ್ನುತ್ತೇನೆ. ಒಂದೇ ವಿಚಾರ ಗಮನದಲ್ಲಿಡಬೇಕು. ಕೋಳಿ ಅಡುಗೆಯನ್ನು ಚೆನ್ನಾಗಿ ಬೇಯಿಸಬೇಕು. ಆತಂಕಬೇಡ ಸೇವಿಸಿ ಎಂದು ಬನ್ನಾ ಗುಪ್ತಾ ಹೇಳಿದ್ದಾರೆ. ಬೇಸಿಗೆಯಲ್ಲಿ ಹಕ್ಕಿಜ್ವರ ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಜನವರಿ ತಿಂಗಳಲ್ಲಿ ಕೇರಳದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿತ್ತು.
ಚೀನಾದಲ್ಲಿ ಕೋಳಿಯಿಂದ ಮಾನವನಿಗೆ ಹಕ್ಕಿಜ್ವರ ಹರಡಿದ ಪ್ರಕರಣ ವರದಿಯಾಗಿತ್ತು. 2021ರಲ್ಲಿ ಈ ಘಟನೆ ವರದಿಯಾಗಿತ್ತು. ಝೆನ್‌ಜಿಯಾಂಗ್ ನಗರದ 41 ವರ್ಷದ ವ್ಯಕ್ತಿಯೊಬ್ಬನಲ್ಲಿ ಎಚ್10ಎನ್3 ಮಾದರಿಯ ಹಕ್ಕಿಜ್ವರ ಪತ್ತೆಯಾಗಿದೆ. ಈ ಮಾದರಿಯಿಂದ ಹಕ್ಕಿ ಜ್ವರ ಪತ್ತೆಯಾಗಿದ್ದು ಇದೇ ಮೊದಲು ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿತ್ತು.
ಸತತ ಚಿಕಿತ್ಸೆಯಿಂದ ಸೋಂಕಿತ ವ್ಯಕ್ತಿ ಚೇತರಿಸಿಕೊಂಡಿದ್ದು, ಈ ಸೋಂಕು ಸಾಂಕ್ರಾಮಿಕ ರೂಪ ಪಡೆಯುವ ಸಾಧ್ಯತೆ ತೀರಾ ಕಡಿಮೆ’ ಎಂದು ಆಯೋಗ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಹಕ್ಕಿಜ್ವರದ ವಿವಿಧ ಮಾದರಿಗಳ ಪೈಕಿ ಎಚ್10ಎನ್3 ಸೋಂಕಿನ ಕಡಿಮೆ ತೀವ್ರತೆ ಇರುವ ಮಾದರಿಯಾಗಿದ್ದು, ದೊಡ್ಡ ಮಟ್ಟದಲ್ಲಿ ಹಬ್ಬುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ. ಇದರ ಹೊರತಾಗಿ ಇನ್ನೂ ಹಲವು ಮಾದರಿಯ ಹಕ್ಕಿಜ್ವರದ ಮಾದರಿಗಳಿದ್ದು, ಅವು ಆಗಾಗ್ಗೆ ಕುಕ್ಕುಟ ಕ್ಷೇತ್ರದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಗೆ ಹರಡಿದ ಉದಾಹರಣೆಗಳಿವೆ.
ಮಕ್ಕಳಿಗೆ ಜ್ವರ ಬಂದಾಗ ಸ್ಪಾಂಜಿಂಗ್ ಮಾಡೋದು ಸರೀನಾ?
ಎಚ್5ಎನ್8 ಮಾದರಿಯ ಹಕ್ಕಿಜ್ವರ ಕಳೆದ ಫೆಬ್ರವರಿಯಲ್ಲಿ ಮಾನವನಲ್ಲಿ ಪತ್ತೆಯಾಗಿತ್ತು. ಇನ್ನು 2020ರ ಡಿಸೆಂಬರ್‌ನಲ್ಲಿ ಚೀನಾದಲ್ಲಿ ಎಚ್5ಎನ್8 ಹಕ್ಕಿಜ್ವರ ಕೂಡ ಮನುಷ್ಯದಲ್ಲಿ ದೇಹದಲ್ಲಿ ಇರುವುದು ದೃಢಪಟ್ಟಿತ್ತು. ಎಚ್5ಎನ್1 ಮಾದರಿಯ ಹಕ್ಕಿಜ್ವರದಿಂದ 1997ರಲ್ಲಿ ಹಾಂಕಾಂಗ್‌ನಲ್ಲಿ 6 ಜನ ಮೃತಪಟ್ಟಿದ್ದರು.ಭಾರತದಲ್ಲಿ ಎಚ್5ಎನ್1 ಮಾದರಿಯ ಹಕ್ಕಿಜ್ವರ ಸಾಕಷ್ಟುಬಾರಿ ಕಂಡುಬಂದಿದ್ದರೂ ಮನುಷ್ಯನಲ್ಲಿ ಪತ್ತೆಯಾಗಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ