ಭಾರತೀಯ ರೈಲ್ವೇಯ ತತ್ಕಾಲ್ ಟಿಕೆಟ್ ಬುಕಿಂಗ್ ಸೇವೆ ಸ್ಥಗಿತ, ಪ್ರಯಾಣಿಕರ ಆಕ್ರೋಶ!

By Suvarna News  |  First Published Mar 4, 2023, 4:01 PM IST

ಭಾರತದಲ್ಲಿ ಎಲ್ಲವೂ ಡಿಜಿಟಲೀಕರಣಗೊಂಡಿದೆ. ಹೀಗಾಗಿ ಭಾರತೀಯ ರೈಲ್ವೇ ಟಿಕೆಟ್ ಬುಕಿಂಗ್ ಭಾಗಶಃ ಆನ್‌ಲೈನ್ ಮೂಲಕವೇ ನಡೆಯುತ್ತಿದೆ. ಆದರೆ ಈ ಟಿಕೆಟ್ ಬುಕಿಂಗ್‌ನಲ್ಲಿ ಸಮಸ್ಯೆ ತಲೆದೋರಿದ ಕಾರಣ ಜನರು ಪರದಾಡುವಂತಾಗಿದ್ದಾರೆ. ಭಾರತೀಯ ರೈಲ್ವೇ ತಾತ್ಕಾಲ್ ಟಿಕೆಟ್ ಬುಕಿಂಗ್ ಸೇವೆಯಲ್ಲಿ ವ್ಯತ್ಯಯವಾಗಿದೆ.
 


ನವದೆಹಲಿ(ಮಾ.04): ಭಾರತೀಯ ರೈಲ್ವೇ ಡಿಜಿಟಲೀಕರಣಗೊಂಡ ಬಳಿಕ ಪ್ರಯಾಣಿಕರಿಗೆ ತ್ವರಿತ ಸೇವೆ ಸಿಗುತ್ತಿದೆ. ಟಿಕೆಟ್ ಬುಕಿಂಗ್, ದೂರುಗಳಿಗೆ ಸ್ಪಂದನೆ, ನೆರವು ಸೇರಿದಂತೆ ಎಲ್ಲಾ ನೆರವುಗಳು ಡಿಜಿಟಲ್ ಮೂಲಕ ಸುಲಭವಾಗಿದೆ. ರೈಲು ಟಿಕೆಟ್ ಬುಕಿಂಗ್ ಇದೀಗ ಭಾಗಶಃ ಆನ್‌ಲೈನ್ ಮೂಲಕವೇ ಆಗುತ್ತಿದೆ. ಆದರೆ IRCTCಯ ಆನ್‌ಲೈನ್ ಬುಕಿಂಗ್‌ನಲ್ಲಿ ಕೆಲ ತಾಂತ್ರಿಕ ಸಮಸ್ಯೆ ತಲೆದೋರಿದ ಕಾರಣ ಜನರು ಪರದಾಡುವಂತಾಗಿದ್ದಾರೆ. IRCTC ತತ್ಕಾಲ್ ಟಿಕೆಟ್ ಬುಕಿಂಗ್ ಸೇವೆ ಸ್ಥಗಿತಗೊಂಡಿದೆ. ಇದರ ಪರಿಣಾಮ ಜನರು ಟಿಕೆಟ್ ಬುಕ್ ಮಾಡಲು ಸಾಧ್ಯವಾಗದೆ, ಅತ್ತ ಪ್ರಯಾಣ ಮಾಡಲು ಸಾಧ್ಯವಾಗದೆ ಪರದಾಡಿದ್ದಾರೆ. ತತ್ಕಾಲ್ ಟಿಕೆಟ್ ಬುಕಿಂಗ್ ಸೇವೆ ವಿರುದ್ಧ ಜನರು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ತತ್ಕಾಲ್ ಟಿಕೆಟ್ ಬುಕಿಂಗ್ ಮಾಡಲು IRCTC ಅಧಿಕೃತ ವೆಬ್‌ಸೈಟ್ ಹಾಗೂ ಆ್ಯಪ್ ಒಪನ್ ಮಾಡಿದರೆ, ನಿರ್ವಹಣೆ ಕಾರಣ ಇ ಟಿಕೆಟ್ ಬುಕಿಂಗ್ ಲಭ್ಯವಿಲ್ಲ. ದಯವಿಟ್ಟು ಕೆಲಕಾಲದ ಬಳಿಕ ಪ್ರಯತ್ನಿಸಿ ಎಂಬ ಸಂದೇಶ ಬರುತ್ತಿದೆ. ಇಷ್ಟೇ ಅಲ್ಲ ಟಿಕೆಟ್ ರದ್ದು ಅಥವಾ TDRಗಾಗಿ ನಮ್ಮ ಗ್ರಾಹಕರ ಸೇವಾ ಕೇಂದ್ರವಾಗಿರುವ 14646,0755-6610661 and 0755-40906000 ಸಂಪರ್ಕಿಸಿ. ಅಥವಾ ಇ ಮೇಲ್ ಮೂಲಕ ಸಂಪರ್ಕಿಸಿ ಎಂದು ಕೋರಿದೆ. 

Tap to resize

Latest Videos

 

Travel Tips : ತತ್ಕಾಲ್ ರೈಲ್ವೆ ಟಿಕೆಟ್ ಬುಕ್ ಮಾಡಲು ಇಲ್ಲಿವೆ ಟಿಪ್ಸ್!

ಕೆಲ ಪ್ರಯಾಣಿಕರು ಟಿಕೆಟ್ ಬುಕಿಂಗ್‌ನಲ್ಲಿ ಅಡಚಣೆಯಾಗಿದೆ.ನಮ್ಮ ಖಾತೆಯಿಂದ ಹಣ ಕಟ್ ಆಗಿದೆ. ಆದರೆ ಟಿಕೆಟ್ ಖಚಿತಗೊಂಡಿಲ್ಲ ಎಂದು ದೂರು ಸಲ್ಲಿಸಿದ್ದಾರೆ. ಟ್ವಿಟರ್‌ನಲ್ಲಿ  ತಾತ್ಕಾಲ್ ಸಮಸ್ಯೆಯಿಂದ IRCTC ಟ್ರೆಡಿಂಗ್ ಆಗಿದೆ. ಪ್ರಯಾಣಿಕರು ಪರದಾಡುವಂತಾಗಿದೆ. ಆದರೆ ಈ ಕುರಿತು ಭಾರತೀಯ ರೈಲ್ವೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಇಂದು ಬೆಳಗ್ಗೆಯಿಂದ ಟಿಕೆಟ್ ಬುಕಿಂಗ್ ಸಮಸ್ಸೆಯಾಗುತ್ತಿದೆ ಎಂದು ಜನರು ದೂರು ನೀಡಿದ್ದಾರೆ. ಮಧ್ಯಾಹ್ನದ ವೇಳೆ ಟಿಕೆಟ್ ಬುಕಿಂಗ್ ಆಗುತ್ತಿದೆ.ಸಮಸ್ಯೆ ನಿವಾರಣೆಯಾಗಿದೆ ಎಂದು ಹವರು ಕಮೆಂಟ್ ಮಾಡಿದ್ದಾರೆ.ಆದರೆ ಅಷ್ಟೇ ಜನ, ಸಮಸ್ಯೆ ಹಾಗೇ ಇದೆ ಎಂದು ದೂರು ನೀಡಿದ್ದಾರೆ. 

ತತ್ಕಾಲ್‌ ಟಿಕೆಟ್‌ ಬ್ಲಾಕ್‌ ದಂಧೆಗೆ ಬ್ರೇಕ್‌!

ಭಾರತೀಯ ರೈಲು ನಿಲ್ದಾಣಗಳನ್ನು ಕೇಂದ್ರ ಸರ್ಕಾರ ಮೇಲ್ದರ್ಜೆಗೆ ಏರಿಸುತ್ತಿದೆ. ಅತ್ಯಾಧುನಿಕ ಶೈಲಿಯಲ್ಲಿ ರೈಲು ನಿಲ್ದಾಗಳು ತಲೆ ಎತ್ತುತ್ತಿದೆ. ಇನ್ನು ಅತೀ ವೇಗದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು, ರೈಲು ವಿದ್ಯುದ್ದೀಕರಣ ಸೇರಿದಂತೆ ದೇಶಾದ್ಯಾಂತ ಭಾರಿ ಮೊತ್ತದ ಕಾಮಾಕಾರಿಗಳು ನಡೆಯುತ್ತದೆ. ಇತ್ತೀಚೆಗೆ ಪ್ರಧಾನ ಮೋದಿ ಬೆಳಗಾವಿಯಲ್ಲಿ ಮೇಲ್ದರ್ಜಗೆ ಏರಿಸಿದ ರೈಲು ನಿಲ್ದಾಣದ ಉದ್ಘಾಟನೆ ಮಾಡಿದ್ದರು. ಭಾರತೀಯ ರೈಲ್ವೇ ಸಂಪೂರ್ಣ ಬದಲಾಗಿದೆ. ಸೇವೆಯಲ್ಲಿ ಮಹತ್ತರ ಬದಲಾವಣೆಯನ್ನೂ  ತಂದಿದೆ. ಇಷ್ಟೇ ಅಲ್ಲ ಜನರಿಗೆ ಅತ್ಯಾಧುನಿಕ ಹಾಗೂ ಅತೀ ವೇಗದ ಸೌಲಭ್ಯವನ್ನೂ ನೀಡುತ್ತಿದೆ. ಇದರ ನಡುವೆ ಟಿಕೆಟ್ ಬುಕಿಂಗ್ ಸಮಸ್ಯೆ ಸೇರಿದಂತೆ ಇತರ ಕೆಲ ತಾಂತ್ರಿಕ ಸಮಸ್ಯೆಗಳು ತಲೆದೋರಿರುವುದು ಕೇಂದ್ರದ ತಲೆನೋವು ಹೆಚ್ಚಿಸಿದೆ.
 

click me!