
ಪ್ರಯಾಗ್‌ರಾಜ್: ಮಹಾಕುಂಭದ ವೇಳೆ ದೋಣಿ ಚಲಾಯಿಸುತ್ತಿದ್ದ ಕುಟುಂಬವೊಂದು 30 ಕೋಟಿ ರು. ಸಂಪಾದಿಸಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ ಬೆನ್ನಲ್ಲೇ, ಅಂಥದ್ದೊಂದು ಸಾಧನೆ ಮಾಡಿದ ನಾವಿಕ ಪಿಂಟು ಮಹಾರಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ. 2019ರ ಅರ್ಧಕುಂಭ ಮೇಳದ ವೇಳೆಯೂ ದೋಣಿ ಸಾಗಿಸುತ್ತಿದ್ದೆವು. ಮಹಾಕುಂಭದ ವೇಳೆಗೆ ವೃತ್ತಿಯನ್ನು ವಿಸ್ತರಿಸುವ ಕನಸು ಇತ್ತಾದರೂ ಆರ್ಥಿಕ ಶಕ್ತಿ ಇರಲಿಲ್ಲ. ಹಾಗಾಗಿ ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡು, ಚಿನ್ನವನ್ನೆಲ್ಲ ಅಡವಿಟ್ಟು ಕಷ್ಟಪಟ್ಟು 70 ಹೊಸ ದೋಣಿಗಳನ್ನು ಖರೀದಿಸಿದೆವು. ಆದರೆ ಇದೆಲ್ಲವನ್ನೂ ಮೀರಿದ ಲಾಭವಾಗಿದೆ ಎಂದು ತಿಳಿಸಿದ್ದಾರೆ.
ನನ್ನ ಬಳಿ 300 ಜನರ ತಂಡವಿತ್ತು. 250 ನಾವಿಕರಿದ್ದರು. ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ಹಿಡಿದು ಅವರಿಗೆ ಸ್ನಾನದ ವ್ಯವಸ್ಥೆ ಮಾಡುವವರೆಗೆ ಎಲ್ಲ ಕೆಲಸಗಳನ್ನು ತಂಡ ಯಶಸ್ವಿಯಾಗಿ ನೋಡಿಕೊಂಡಿತು. ಪ್ರತಿ ಹೆಜ್ಜೆಯಲ್ಲೂ ನನ್ನ ಸಹೋದರರು ಜತೆಗಿದ್ದರು ಎಂದು ಹೇಳಿದರು. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಮಹಾಕುಂಭ ಮೇಳದಿಂದ ಕೋಟ್ಯಾಧಿಪತಿಯಾದ ದೋಣಿ ಮಾಲೀಕ: 45 ದಿನದಲ್ಲಿ ಗಳಿಸಿದ್ದೆಷ್ಟು ಕೋಟಿ
ಮಹಾಕುಂಭದ ಕೇಳರಿಯದ ಕಥೆಗಳು: ಜನಸಂದಣಿ, ಕಾಲ್ತುಳಿತ ಮತ್ತು ಅಭೂತಪೂರ್ವ ಯಶಸ್ಸಿನ ಕಥೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ