
ಕಳೆದ ಕೆಲವು ದಿನಗಳಿಂದ ಈ ಗ್ರಾಮದ ರಸ್ತೆಗಳು, ಮನೆಯ ಅಂಗಳ ಹಾಗೂ ಜಮೀನಿನಲ್ಲಿ ರಾಜರ ಕಾಲದ ಚಿನ್ನದ ನಾಣ್ಯಗಳು ಪತ್ತೆಯಾಗುತ್ತಿವೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಗ್ರಾಮಸ್ಥರು ಚಿಕ್ಕವರಿಂದ ಹಿರಿಯರವರೆಗೂ ರಾತ್ರಿಯಿಡೀ ಟಾರ್ಚ್ ಹಾಕಿಕೊಂಡು ಭೂಮಿ ಅಗೆಯುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಂದು ವೇಳೆ ನಿಮಗೆ ಎಲ್ಲೋ ನೆಲದಲ್ಲಿ ಚಿನ್ನದ ನಾಣ್ಯಗಳು ಸಿಗುತ್ತಿವೆ ಎಂದು ತಿಳಿದರೆ, ನೀವೂ ಓಡೋಡಿ ಹೋಗುತ್ತೀರಿ. ಮಧ್ಯಪ್ರದೇಶದ (Madhya Pradesh) ಬುರ್ಹಾನ್‌ಪುರ (burhanpur) ಜಿಲ್ಲೆಯಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಅಸಿರ್‌ಗಢ (Asirgarh) ಗ್ರಾಮದಲ್ಲಿ ಜಮೀನುಗಳಲ್ಲಿ ಮೊಘಲರ ಕಾಲದ ಚಿನ್ನದ ನಾಣ್ಯಗಳು (mughals gold coins) ಸಿಗುತ್ತಿವೆ ಎಂಬ ವದಂತಿ ಹಬ್ಬಿತು. ಆಮೇಲೆ ಏನಾಯಿತು ಚಿಕ್ಕವರು, ದೊಡ್ಡವರು, ಯುವಕರು ಎಲ್ಲರೂ ಜಮೀನಿನ ಕಡೆಗೆ ಓಡಲು ಪ್ರಾರಂಭಿಸಿದರು. ನೋಡ ನೋಡುತ್ತಿದ್ದಂತೆ ಜನರು ಅಲ್ಲಿ ಭರ್ಜರಿಯಾಗಿ ಅಗೆಯಲು ಪ್ರಾರಂಭಿಸಿದರು.
ಈ ಹಿಂದೆಯೂ ಬುರ್ಹಾನ್‌ಪುರದಲ್ಲಿ ಚಿನ್ನದ ನಾಣ್ಯಗಳನ್ನು ಹುಡುಕಲು ಬಂದಿದ್ದರು: ಬುರ್ಹಾನ್‌ಪುರದ ಅಸಿರ್‌ಗಢ ಗ್ರಾಮದಲ್ಲಿ ನೆಲದಿಂದ ನಾಣ್ಯಗಳು ಸಿಗುತ್ತಿರುವ ಈ ಘಟನೆ ಇದೇ ಮೊದಲಲ್ಲ. ಈ ಹಿಂದೆಯೂ ಇಂತಹ ಹಲವು ಘಟನೆಗಳು ನಡೆದಿವೆ. ಕೆಲವು ದಿನಗಳ ಹಿಂದೆ ಗ್ರಾಮದ ಜನರು ಇದೇ ಸ್ಥಳದಲ್ಲಿ ಅಗೆದಾಗ ಕೆಲವರಿಗೆ ಕೆಲವು ನಾಣ್ಯಗಳು ಸಿಕ್ಕಿದ್ದವು. ಆದರೆ ಬೆಳೆ ಹಾಳಾದ ಕಾರಣ ಪೊಲೀಸರು ಮತ್ತು ಆಡಳಿತ ಮಂಡಳಿಯವರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರಿಂದ ಭೂಮಿ ಅಗೆಯುವುದನ್ನು ನಿಲ್ಲಿಸಲಾಯಿತು. ಆದರೆ, ಈಗ ಮತ್ತೆ ವದಂತಿ ಕೇಳಿ ಜನರು ಅಗೆಯಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ, ಈ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ವಿದೇಶಕ್ಕೆ ಹೋಗುವಾಗ ಗಂಡಸರು, ಹೆಂಗಸರು ಎಷ್ಟು ಚಿನ್ನ ಕೊಂಡೊಯ್ಯಬಹುದು? ನಿಯಮಗಳೇನು?
ಮೊಘಲರ ನಾಣ್ಯಗಳಲ್ಲಿ ಉರ್ದು ಮತ್ತು ಅರೇಬಿಕ್ ಲಿಪಿ: ಈ ಬಗ್ಗೆ ಸ್ಥಳೀಯ ನಿವಾಸಿ ಜಯಪ್ರಕಾಶ್ ಎಂಬ ಯುವಕ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ನಮ್ಮ ಗ್ರಾಮ ಧೂಳ್‌ಕೋಟ್‌ನಿಂದಲೂ ಅನೇಕ ಜನರು ಬುಧವಾರ ಮತ್ತು ಗುರುವಾರ ರಾತ್ರಿ ಅಸಿರ್‌ಗಢದ ಜಮೀನಿನಲ್ಲಿ ನಾಣ್ಯಗಳನ್ನು ಹುಡುಕಲು ಬಂದಿದ್ದರು. ನನಗೆ ಸ್ವಲ್ಪ ವಿಚಿತ್ರ ಎನಿಸಿದಾಗ, ನಾನು ಅದರ ಸತ್ಯಾಸತ್ಯತೆಯನ್ನು ತಿಳಿಯಲು ಅಲ್ಲಿಗೆ ಹೋದೆ. ಅಲ್ಲಿನ ದೃಶ್ಯ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ಜನರು ಮೊಬೈಲ್ ಟಾರ್ಚ್‌ನಲ್ಲಿ ನೆಲವನ್ನು ಅಗೆಯುತ್ತಿದ್ದರು. ನಿಜವಾಗಿಯೂ ಇಲ್ಲಿ ನಾಣ್ಯಗಳು ಸಿಗುತ್ತವೆಯೇ ಎಂದು ನಾನು ಅವರನ್ನು ಕೇಳಿದಾಗ, ಅವರು ನನಗೆ ಹಿತ್ತಾಳೆಯ ನಾಣ್ಯಗಳನ್ನು ತೋರಿಸಿದರು. ಅದರಲ್ಲಿ ಉರ್ದು ಮತ್ತು ಅರೇಬಿಕ್‌ನಲ್ಲಿ ಏನೋ ಬರೆಯಲಾಗಿತ್ತು. ಅದನ್ನು ಜನರು ಮೊಘಲರ ಕಾಲದ ಚಿನ್ನದ ನಾಣ್ಯಗಳು ಎಂದು ಹೇಳಿದರು.
ಅಸಿರ್‌ಗಢ ಗ್ರಾಮದ ಇತಿಹಾಸ ಏನು?
ಸ್ಥಳೀಯ ಜನರು ಹೇಳುವ ಪ್ರಕಾರ, ಅಸಿರ್‌ಗಢ ಹಿಂದೆ ಒಂದು ಐತಿಹಾಸಿಕ ನಗರವಾಗಿತ್ತು. ಅದರ ಜನಸಂಖ್ಯೆ 7 ಲಕ್ಷದಿಂದ 8 ಲಕ್ಷದಷ್ಟಿತ್ತು. ಅಲ್ಲಿ ಮೊಘಲರ ಆಳ್ವಿಕೆ ಇತ್ತು. ಅವರು ಇಲ್ಲಿ ವಾಸಿಸುತ್ತಿದ್ದರು. ಇಲ್ಲಿ ಮೊಘಲರ ಸೈನಿಕರ ಠಾಣೆಗಳು ಮತ್ತು ಕುದುರೆ ಲಾಯಗಳು ಕೂಡ ಇದ್ದವು. ಯುದ್ಧದ ನಂತರ ಸೈನಿಕರು ಇಲ್ಲಿಗೆ ಬಂದಾಗ, ಅವರು ಲೂಟಿ ಮಾಡಿದ ವಸ್ತುಗಳನ್ನು ಜಮೀನುಗಳಲ್ಲಿ ಅಥವಾ ನೆಲದಲ್ಲಿ ಹೂತು ಹಾಕುತ್ತಿದ್ದರು. ಇಲ್ಲಿನ ಜನರು ಕೂಡ ತಮ್ಮ ಸಂಪತ್ತನ್ನು ಲೂಟಿಯ ಭಯದಿಂದ ನೆಲದಲ್ಲಿ ಹೂತು ಹಾಕುತ್ತಿದ್ದರು. ಇದರಿಂದ ಅದು ಸುರಕ್ಷಿತವಾಗಿರುತ್ತದೆ ಎಂಬ ನಂಬಿಕೆ ಹೊಂದಿದ್ದರು. ಈ ಕಾರಣದಿಂದಾಗಿ, ಕೆಲವು ಜನರಿಗೆ ಈ ಹಿಂದೆ ಇಲ್ಲಿ ನೆಲದಿಂದ ಚಿನ್ನದ ನಾಣ್ಯಗಳು ಸಿಕ್ಕಿದ್ದವು. ಹೀಗಾಗಿ, ಸ್ಥಳೀಯ ಜನರು, ರಾಜರ ಕಾಲದಲ್ಲಿ ಕೆಲವರು ಇಲ್ಲಿ ಚಿನ್ನದ ನಿಧಿ ಹೂತು ಹಾಕಿದ್ದಾರೆ ಎಂದು ನಂಬಿದ್ದಾರೆ.
ಇದನ್ನೂ ಓದಿ: ಕೇರಳ ಕಡಲ ತೀರಕ್ಕೆ ತನ್ನಷ್ಟಕ್ಕೆ ಬಂದು ಬಿದ್ದ ಲಕ್ಷಾಂತರ ಮೀನುಗಳು: ಇದು ಸುನಾಮಿ ಮುನ್ಸೂಚನೆಯೇ ?
ಪುರಾತತ್ವ ಇಲಾಖೆಯ ತಜ್ಞರೊಬ್ಬರು ಮಾತನಾಡಿ, ಅಸಿರ್‌ಗಢ ಐತಿಹಾಸಿಕ ಪ್ರದೇಶವಾಗಿದ್ದು, ಇಲ್ಲಿ ಹಳೆಯ ನಾಣ್ಯಗಳು ಸಿಗುವ ಸಾಧ್ಯವಿದೆ. ಆದರೆ ತನಿಖೆಯ ನಂತರವಷ್ಟೇ ಇದನ್ನು ಖಚಿತಪಡಿಸಲು ಸಾಧ್ಯ ಎಂದು ಹೇಳಿದ್ದಾರೆ. ಇಲ್ಲಿ ಬ್ರಿಟಿಷರ ಆಳ್ವಿಕೆ, ನಾದಿರ್ ಷಾ, ನಾಸಿರ್ ಫಾರೂಕ್ ಮತ್ತು ಅಕ್ಬರ್ ಕೂಡ ಇಲ್ಲಿ ಆಳ್ವಿಕೆ ನಡೆಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ