
ದುಬೈ: ಕೊಲೆ ಪ್ರಕರಣದಲ್ಲಿ ದೋಷಿಗಳೆಂದು ಸಾಬೀತಾಗಿ ಮರಣದಂಡನೆಗೆ ಗುರಿಯಾಗಿದ್ದ ಕೇರಳ ಮೂಲದ ಇಬ್ಬರು ವ್ಯಕ್ತಿಗಳನ್ನು ಇತ್ತೀಚೆಗೆ ಯುಎಇನಲ್ಲಿ ಗಲ್ಲಿಗೇರಿಸಲಾಗಿದೆ. ಭಾರತದ ವಿದೇಶಾಂಗ ಇಲಾಖೆಗೆ ಮಾಹಿತಿ ನೀಡಿದ ಬಳಿಕ ಮರಣದಂಡನೆ ಪ್ರಕ್ರಿಯೆ ನಡೆದಿದೆ.
ಮರಣದಂಡನೆಗೆ ಒಳಗಾದವರನ್ನು ಕಣ್ಣೂರಿನ ಮುಹಮ್ಮದ್ ರಿನಾಶ್ ಮತ್ತು ಮುರುಳೀಧರನ್ ಎಂದು ಗುರುತಿಸಲಾಗಿದೆ. ಆಲ್ ಐನ್‌ನ ಟ್ರಾವೆಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ರಿನಾಶ್‌ನನ್ನು ಯುಎಇ ಪ್ರಜೆಯ ಕೊಲೆ ಪ್ರಕರಣದಲ್ಲಿ ಗಲ್ಲಿಗೇರಿಸಿದ್ದರೆ, ಮುರುಳೀಧರನ್ ಅವರನ್ನು ಭಾರತೀಯ ಪ್ರಜೆಯ ಕೊಲೆ ಪ್ರಕರಣದಲ್ಲಿ ಮರಣದಂಡನೆ ವಿಧಿಸಲಾಗಿದೆ.
ಫೆ.28ರಂದು ಭಾರತದ ರಾಯಭಾರಿ ಕಚೇರಿಗೆ ಮರಣದಂಡನೆಗೆ ಸಂಬಂಧಿಸಿದಂತೆ ಮಾಹಿತಿ ಸಿಕ್ಕಿತ್ತು. ಇಬ್ಬರಿಗೂ ಸಾಧ್ಯವಿರುವ ಎಲ್ಲ ಕಾನೂನು ನೆರವು ನೀಡಲಾಗಿದ್ದು, ಅಂತ್ಯಕ್ರಿಯೆಯಲ್ಲಿ ಇಬ್ಬರು ಕುಟುಂಬ ಸದಸ್ಯರು ಭಾಗವಹಿಸಲು ವ್ಯವಸ್ಥೆ ಮಾಡಲು ಸಚಿವಾಲಯ ಪ್ರಯತ್ನಿಸುತ್ತಿದೆ ಎಂದು ಸಚಿವಾಲಯ ಹೇಳಿದೆ. ವರದಿ ಪ್ರಕಾರ, ಯುಎಇನಲ್ಲಿ 28 ಭಾರತೀಯರು ಮರಣದಂಡನೆಗೆ ಗುರಿಯಾಗಿದ್ದಾರೆ. ಮಾ.3ರಂದು ಮಗು ಕೊಂದ ಆರೋಪದಲ್ಲಿ ಉತ್ತರ ಪ್ರದೇಶದ ಮಹಿಳೆಯನ್ನು ಗಲ್ಲಿಗೇರಿಸಲಾಗಿತ್ತು.
ಕೆಲಸ ಅರಸಿ ಗಲ್ಫ್‌ಗೆ ತೆರಳಿದ ಮಹಿಳೆಗೆ ಗಲ್ಲು: ಮಗಳ ಕ್ಷೇಮಕ್ಕಾಗಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ತಂದೆಗೆ ಶಾಕ್
ದುಬೈ ಮನೆಯಿಂದ ಶೋಯೆಬ್ ಮಲೀಕ್‌ನ ಹೊರಹಾಕಿದ ಸಾನಿಯಾ ಮಿರ್ಜಾ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ