ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ , NCP ಮೈತ್ರಿ| ಈ ನಡುವೆ ಅಚ್ಚರಿಯ ಹೇಳಿಕೆ ಕೊಟ್ಟ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ| ಮತ್ತೆ ಒಂದಾಗುತ್ತಾ ಬಿಜೆಪಿ, ಶಿವಸೇನೆ?
ಮುಂಬೈ[ಫೆ.03]: ಮಹಾರಾಷ್ಟ್ರ ರಾಜಕೀಯದಾಟ ಇಡೀ ದೇಶದಲ್ಲೇ ಸದ್ದು ಮಾಡಿತ್ತು. ವಿಧಾನಸಭೆ ಚುನಾವಣೆಗೂ ಮುನ್ನ ಬಿಜೆಪಿ ಜೊತೆ ಮೈತ್ರಿ ಮಾಡುವ ಮಾತುಗಳನ್ನಾಡಿದ್ದ ಶಿವಸೇನೆ, ಬಳಿಕ ತಲೆದೋರಿದ ಅಸಮಾಧಾನಗಳಿಂದ ಕಾಂಗ್ರೆಸ್ ಹಾಗೂ NCP ಜೊತೆ ಮೈತ್ರಿ ಮಾಡಿಕೊಂಡಿತ್ತು. ಅಲ್ಲದೇ ಬಿಜೆಪಿ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸಿತ್ತು. ಹೀಗಾಗಿ ಜನರೆಲ್ಲರೂ ಮುಂದೆ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದೇ ಭಾವಿಸಿದ್ದರು. ಆದರೀಗ ಉದ್ಧವ್ ಠಾಕ್ರೆ ಈ ಅಸಲಿ ಆಟ ಆರಂಭಿಸಿದ್ದು, ಅಚ್ಚರಿಯ ಹೇಳಿಕೆ ನೀಡಿದ್ದಾರೆ.
'ಅಯೋಧ್ಯೆ ಬದಲು ರಾಹುಲ್ ಗಾಂಧಿ ಜತೆ ಹಜ್ ಯಾತ್ರೆ ಹೋಗಿ' ಠಾಕ್ರೆಗೆ ಡಿಚ್ಚಿ
undefined
ಹೌದು ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಸಾಧ್ಯವೇ ಇಲ್ಲ ಎಂದು ಭಾವಿಸಿದ್ದವರಿಗೆ ಉದ್ಧವ್ ಠಾಕ್ರೆ ಭಾನುವಾರ ನೀಡಿರುವ ಹೇಳಿಕೆ ಭಾರೀ ಅಚ್ಚರಿ ಹೇಳಿಕೆ ನೀಡಿದ್ದಾರೆ. ಬಿಜೆಪಿ ಮೈತ್ರಿ ಸಂಬಂಧ ಪ್ರತಿಕ್ರಿಯಿಸಿದ ಉದ್ಧವ್ 'ಬಿಜೆಪಿ ಜೊತೆ ಮುಂದೆ ಯಾವತ್ತೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ' ಎಂದಿದ್ದಾರೆ. ಅಲ್ಲದೇ 'ಒಂದು ವೇಳೆ ಅವರು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದರೆ, ಸುಳ್ಳು ಹೇಳಿರದಿದ್ದರೆ ನಾನು ಸಿಎಂ ಆಗುತ್ತಿರಲಿಲ್ಲ. ಒಪ್ಪಂದದಂತೆ ನಡೆದುಕೊಳ್ಳುವಂತೆ ಹೇಳಿದ್ದೆನಷ್ಟೇ, ಅದಕ್ಕಿಂತ ಹೆಚ್ಚೇನು ಕೇಳಿರಲಿಲ್ಲ' ಎಂದಿದ್ದಾರೆ.
ಬಿಜೆಪಿ ನಡೆಯಿಂದ ತಾನು ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ನಡುವೆ ಸಿಕ್ಕಾಕೊಂಡಿದ್ದೆ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ. ಉದ್ಧವ್ ಈ ಮಾತುಗಳು ಅಚ್ಚರಿ ಉಂಟು ಮಾಡಿದ್ದು, ಮುಂದೆ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ ಮಾಡುವ ಸೂಚನೆ ಕೊಟ್ಟಿದೆ.
ರಾಮಮಂತ್ರ ಜಪಿಸಿದ ಶಿವಸೇನೆ: ಮಾರ್ಚ್‌ನಲ್ಲಿ ಉದ್ಧವ್ ಆಯೋಧ್ಯೆಗೆ!
ಫೆಬ್ರವರಿ 3ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ