
ಚೆನ್ನೈ[ಫೆ.03]: ಐಸಿಸ್ ಸಂಘಟನೆಗೆ ಸೇರಿದ ಶಂಕಿತ ಉಗ್ರನೊಬ್ಬನನ್ನು ರಾಮನಾಥಪುರಂ ಪೊಲೀಸರು ಶನಿವಾರ ಮೀನುಗಾರರ ಗ್ರಾಮದಲ್ಲಿ ಬಂಧಿಸಿದ್ದಾರೆ. ಶೇಖ್ ದಾವೂದ್ (32) ಎಂಬಾತನೇ ಬಂಧಿತ.
ಕಳೆದ ಜ. 8ರಂದು ಕನ್ಯಾಕುಮಾರಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ವಿಲ್ಸನ್ ಕೊಲೆ ಪ್ರಕರಣದ ಸಂಬಂಧ, ಕರ್ನಾಟಕದ ಉಡುಪಿ ರೈಲ್ವೇ ನಿಲ್ದಾಣದಲ್ಲಿ ಜ.14ರಂದು ಬಂಧಿತರಾಗಿದ್ದ ಅಬ್ದುಲ್ ಶಹೀಮ್ ಹಾಗೂ ತೌಫೀಖ್‌ಗೆ ಹಣಕಾಸು ನೆರವು ನೀಡಿದ ಆರೋಪ ಈತನ ಮೇಲೆ ಇದೆ.
ಈ ಹಿಂದೆ ಉಗ್ರಗಾಮಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಕ್ಕೆ ರಾಷ್ಟ್ರೀಯ ತನಿಖಾ ದಳ ಈತನನ್ನು ಬಂಧಿಸಿತ್ತು. ಬಳಿಕ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರೂ, ಉಗ್ರ ಚಟುವಟಿಕೆಗಳನ್ನು ಮುಂದುವರಿಸಿದ್ದ ಎಂದು ಪೊಲೀಸರು ಹೇಳಿದ್ದಾರೆ.
250ಕೆಜಿ ತೂಕದ ಐಸಿಸ್ ಉಗ್ರನನ್ನು ಎತ್ತುವಲ್ಲಿ ಸುಸ್ತಾದ ಪೊಲೀಸರು!
ಈತ ತಂಡ ಕಟ್ಟಿಕೊಂಡು ಇಸ್ಲಾಮ್‌ಗೆ ವಿರುದ್ಧವಾಗಿ ಮಾತನಾಡುವವರನ್ನು ಕೊಲೆ ಮಾಡುವ ಯೋಜನೆ ಹಾಕಿಕೊಂಡು ಅದನ್ನು ಕಾರ್ಯಗತಗೊಳಿಸಿದ್ದ. ಅಲ್ಲದೇ ಜೈಲಿನಲ್ಲಿರುವ ತಮ್ಮ ಮುಖಂಡರ ಬಿಡುಗಡೆಗೆ ವಿದೇಶದಿಂದ ಹಣ ಕ್ರೋಢೀಕರಣ ಮಾಡುತ್ತಿದ್ದ. ಅಲ್ಲದೇ ಉಗ್ರ ಚಟುವಟಿಕೆಗಳಿಗೆ ಅಮಾಯಕ ಯುವಕರನ್ನು ಬಲೆಗೆ ಬೀಳಿಸುತ್ತಿದ್ದ ಅಲ್ ಹಿಂದ್ ಟ್ರಸ್ಟ್‌ನ ಶಂಕಿತ ಐಸಿಸ್ ಉಗ್ರ ಖಾಜಾ ಮೊಯ್ದಿನ್ ಜತೆಗೆ ಈತನಿಗೆ ನಂಟು ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ