
ಹೈದರಾಬಾದ್ (ಜು.16): 2ನೇ ತರಗತಿಯ ಮಕ್ಕಳಿಗೆ ಪಾಠದ ವಿಷಯ ಕೊಡುವ ಬದಲು ಧಾರ್ಮಿಕ ಪಠಣ ಮಾಡುವಂತೆ ಹೋಮ್ ವರ್ಕ್ ಕೊಟ್ಟ ಆಘಾತಕಾರಿ ಘಟನೆ ಹೈದರಾಬಾದ್‌ನ ಖಾಸಗಿ ಶಾಲೆಯೊಂದರಲ್ಲಿ ಬೆಳಕಿಗೆ ಬಂದಿದ್ದು, ಪೋಷಕರ ಆಕ್ರೋಶ ತೀವ್ರಗೊಳ್ಳುತ್ತಿದ್ದಂತೆ ಶಾಲಾ ಆಡಳಿತ ಮಂಡಳಿ ಶಿಕ್ಷಕಿಯನ್ನ ವಜಾಗೊಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.
ಹೈದರಾಬಾದ್‌ನ ಸಯೀದಾಬಾದ್‌ನಲ್ಲಿರುವ 'ಸಕ್ಸಸ್, ದಿ ಸ್ಕೂಲ್‌ನಲ್ಲಿ ಘಟನೆ ನಡೆದಿದೆ. ಶಾಲೆಯ ಶಿಕ್ಷಕಿ ಶೇಖ್ ಆಯಿಷಾ ಪರ್ವಿನ್ ವಜಾಗೊಂಡಿರುವ ಶಿಕ್ಷಕಿ. ವಜಾಗೊಳಿಸಿ ಬರೆದಿರುವ ಪತ್ರದಲ್ಲಿ 'ಇನ್ನೆಂದು ಸಕ್ಸಸ್ ಗ್ರೂಪ್ ಆಫ್ ಎಜುಕೇಷನ್ ಇನ್‌ಸ್ಟಿಟ್ಯೂಟ್‌ನಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸದಂತೆ ನಿಮ್ಮನ್ನು ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ' ಎಂದು ಆಡಳಿತ ಮಂಡಳಿಸಿ ತಿಳಿಸಿದೆ.
ಶಾಲೆ ಮುಗಿಯುವ ವೇಳೆ ಮಕ್ಕಳಿಗೆ ಹೋಂ ವರ್ಕ್ ಕೊಡುವುದು ಸಾಮಾನ್ಯ. ಆದರೆ ಹೋಂ ವರ್ಕ್ ಕೊಡುವಾಗ ಮಕ್ಕಳಿಗೆ ಅಂದಿನ ಪಾಠ, ಅಧ್ಯಯನಗಳ ಕುರಿತಾಗಿ ಕೊಡಲಾಗುತ್ತೆ. ಆದರೆ ಶಿಕ್ಷಕಿ ಆಯಿಷಾ ಪರ್ವಿನ್ ಪಾಠದ ಬದಲಿಗೆ ಎರಡನೇ ತರಗತಿಯ ಹಿಂದೂ ಮಗುವಿಗೆ ಕಲ್ಮಾ ಮತ್ತು ಸೂರಾ ಫಾತಿಹಾವನ್ನು ಪಠಿಸುವಂತೆ ಹೋಂ ವರ್ಕ್ ಕೊಟ್ಟಿರುವ ಶಿಕ್ಷಕಿ. ಮಗು ಮನೆಗೆ ಹೋದ ನಂತರ ಪೋಷಕರು ಮಗುವಿನ ಹೋಂ ವರ್ಕ್ ಗಮನಕ್ಕೆ ಬಂದಿದೆ. ಕಲ್ಪಾ ಸೂರಾ ಫಾತಿಹಾ ಪಠಣ ಮಾಡುವಂತೆ ಮಗುವಿಗೆ ಮನೆಕೆಲಸ ಕೊಟ್ಟಿರುವುದು ಕಂಡು ಆಘಾತಕ್ಕೊಳಗಾಗಿದ್ದಾರೆ. ಈ ಬಗ್ಗೆ ಪೋಷಕರು ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿಯವರನ್ನ ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ ನಂತರ ವಿವಾದವೆದ್ದಿದೆ. ಅಷ್ಟೇ ಅಲ್ಲದೆ ಇದು ಇತರೆ ಪೋಷಕರಿಗೂ ತಿಳಿದು ಶಾಲಾಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶಿಕ್ಷಕಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಬಗ್ಗೆ ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ್ಲಾ ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, 'ಸಕ್ಸಸ್ ಆದರೆ ಭಾಗಶಃ ಮಾತ್ರ… ಇಂದು ಬೆಳಗ್ಗೆ ಹೈದರಾಬಾದ್‌ನಲ್ಲಿ ಶಾಲಾ ಶಿಕ್ಷಕಿಯೊಬ್ಬರು ಹಿಂದೂ ಮಗುವಿಗೆ ಇಸ್ಲಾಮಿಕ್ ಪ್ರಾರ್ಥನೆ ಮಾಡುವಂತೆ ಕಲ್ಮಾ, ಇತ್ಯಾದಿ ಪಠಣ ಮಾಡಿ ಹೇಳುವಂತೆ ಹೋಮ್ ವರ್ಕ್ ನೆಪದಲ್ಲಿ ಬಲವಂತದ ಕ್ರಮವನ್ನು ನಾನು ಖಂಡಿಸಿದ ನಂತರ, ಈಗ ಶಾಲೆಯು ಆ ಶಿಕ್ಷಕಿ ಆಯಿಷಾಳನ್ನ ಕೆಲಸದಿಂದ ತೆಗೆದುಹಾಕಿದೆ' ಎಂದು ಬರೆದುಕೊಂಡಿದ್ದಾರೆ. ಆದರೆ ವಜಾಗೊಳಿಸಿದ ಪತ್ರವನ್ನು ಬಿಟ್ಟು ಯಾವುದೇ ಸಾರ್ವಜನಿಕ ಹೇಳಿಕೆ ನೀಡಿಲ್ಲ ಎಂದು ಬರೆದಿದ್ದಾರೆ.
School Teacher Terminated In #Hyderabad After Alleged Religious Recitation Controversy
A controversy has erupted at #SuccessTheSchool in #Saidabad, Hyderabad, after the parents of a Class 2 Hindu student alleged that their child was asked to recite the Kalma and Surah Fateha.… pic.twitter.com/R4UNcp7Hhe— BNN Channel (@Bavazir_network) July 16, 2026
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ