ಉಗ್ರರ ನೆಲೆಗೇ ಗುರಿಯಿಟ್ಟು ನಾಶ ಮಾಡಿದ 'ರಫೇಲ್​ ಜೆಟ್'​ಗೆ ಗಂಟೆಯೊಂದಕ್ಕೆ ಅಬ್ಬಾ ಇಷ್ಟು ಇಂಧನ ಬೇಕಾ?

Published : May 11, 2025, 11:18 AM ISTUpdated : May 12, 2025, 10:44 AM IST
ಉಗ್ರರ ನೆಲೆಗೇ ಗುರಿಯಿಟ್ಟು ನಾಶ ಮಾಡಿದ 'ರಫೇಲ್​ ಜೆಟ್'​ಗೆ ಗಂಟೆಯೊಂದಕ್ಕೆ ಅಬ್ಬಾ ಇಷ್ಟು ಇಂಧನ ಬೇಕಾ?

ಸಾರಾಂಶ

ಫ್ರಾನ್ಸ್‌ ನಿರ್ಮಿತ ರಫೇಲ್ ಯುದ್ಧವಿಮಾನವು ೨೦೨೦ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಯಿತು. ಇದು ಆಪರೇಷನ್ ಸಿಂದೂರದಲ್ಲಿ ಪ್ರಮುಖ ಪಾತ್ರ ವಹಿಸಿ, ಪಾಕಿಸ್ತಾನದ ಒಳಗಿನ ಭಯೋತ್ಪಾದಕ ಕೇಂದ್ರಗಳ ಮೇಲೆ ದಾಳಿ ನಡೆಸಿತು. ಇದಕ್ಕೆ ಗಂಟೆಗೆ ಸುಮಾರು ೨,೫೦೦ ರಿಂದ ೯,೦೦೦ ಲೀಟರ್ ಇಂಧನ ಬೇಕಾಗುತ್ತದೆ. ಮೀಟಿಯೋರ್ ಕ್ಷಿಪಣಿ ಸೇರಿದಂತೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಹೊಂದಿದೆ.

ಭಾರತದ ಮತ್ತು ಪಾಕಿಸ್ತಾನದ ಘರ್ಷಣೆಯಲ್ಲಿ 'ಆಪರೇಷನ್​ ಸಿಂದೂರ'ದ ಹೀರೊ ಆಗಿ ಮೆರೆದಿರುವ ರಫೇಲ್​ ಯುದ್ಧ ವಿಮಾನ. ಇದರ ಸಹಾಯದಿಂದ ಜಗತ್ತಿನಾದ್ಯಂತ ಹಲವಾರು ದೇಶಗಳು ಯುದ್ಧ ಮಾಡಿದ್ದು, ಇದು ಯುದ್ಧಗಳಲ್ಲಿ ದಾಖಲೆಯನ್ನೇ ಬರೆದಿದೆ. 2020 ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡ ಫ್ರಾನ್ಸ್​ ನಿರ್ಮಿತ ರಫೇಲ್, ಇದಾಗಿದೆ.  ಕಾಶ್ಮೀರದ ಪೆಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿಗೆ  ಪ್ರತೀಕಾರವಾಗಿ, ಐಎಎಫ್ ಕಳೆದ ಬುಧವಾರ ರಫೇಲ್ ಜೆಟ್‌ಗಳನ್ನು ಬಳಸಿ ಪಾಕಿಸ್ತಾನದೊಳಗಿನ ಒಂಬತ್ತು ಭಯೋತ್ಪಾದಕ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ನಿಖರವಾದ ದಾಳಿಗಳನ್ನು ನಡೆಸಿತು. ಸ್ಕಾಲ್ಪ್ ಕ್ರೂಸ್ ಕ್ಷಿಪಣಿಗಳು ಮತ್ತು ಹ್ಯಾಮರ್ ನಿಖರ ಬಾಂಬ್‌ಗಳಿಂದ ಶಸ್ತ್ರಸಜ್ಜಿತವಾದ ರಫೇಲ್ ಫೈಟರ್ ಜೆಟ್‌ಗಳನ್ನು ಬಳಸಿದ್ದು ಇದೇ ಮೊದಲು.  

ಆದರೆ ಎರಡು ದೇಶಗಳ ನಡುವೆ ಯುದ್ಧವಾಗಲಿ ಅಥವಾ ಈಗ ನಡೆಯುತ್ತಿರುವಂತೆ ಸಂಘರ್ಷಗಳಾಗಲೀ ಅದು ಭಾರಿ ಪ್ರಮಾಣದ ಆರ್ಥಿಕ ನಷ್ಟಕ್ಕೂ ಕಾರಣವಾಗುತ್ತದೆ. ಒಂದೊಂದು ಯುದ್ಧ ಸಾಮಗ್ರಿಗಳು ನಷ್ಟವಾದಾಗಲೂ ನೂರಾರು ಕೋಟಿ ರೂಪಾಯಿಗಳು ನಷ್ಟವಾದಂತೆಯೇ. ಈಗ ರಫೇಲ್​  ಜೆಟ್​ ಕುರಿತು ಮಾತ್ರ ಹೇಳುವುದಾದರೆ, ಇದಕ್ಕೆ ಗಂಟೆಗೆ ಸುಮಾರು 2,500 ಲೀಟರ್ ಇಂಧನ ಬೇಕಾಗುತ್ತದೆ. ಹಾಗೆಂದು ಇಷ್ಟೇ ಇಂಧನವೂ ಸಾಕಾಗುವುದಿಲ್ಲ. ಯುದ್ಧಗಳು ಘನಘೋರವಾದ ಸಂದರ್ಭಗಳಲ್ಲಿ 9 ಸಾವಿರ ಲೀಟರ್​ವರೆಗೂ ಇಂಧನ ತೆಗೆದುಕೊಂಡಿರುವ ದಾಖಲೆಗಳು ಇವೆ.  ಲೆವೆಲ್ ಕ್ರೂಸಿಂಗ್ ಹಾರಾಟದಲ್ಲಿ ಗಂಟೆಗೆ ಸುಮಾರು 2,500 ಲೀಟರ್ ಇಂಧನ ಸಾಕು. ಆದರೆ  ಯುದ್ಧಗಳ ಆಧಾರದ ಮೇಲೆ ಸದ್ಯ ಇರುವ ಅಂಕಿ ಅಂಶಗಳ ಪ್ರಕಾರ,  ಗಂಟೆಗೆ ಸುಮಾರು 9,000 ಲೀಟರ್‌ಗಳಿಗೆ ಏರಬಹುದು.  

Operation Sindoor: ಸಿಂದೂರ ಕಸಿದ ಉಗ್ರರ ಮಟ್ಟ ಹಾಕಲು ನಿಂತ ಸೋಫಿಯಾ, ವ್ಯೋಮಿಕಾ

ಎಂಜಿನ್ ಶಕ್ತಿ ಮತ್ತು ಒತ್ತಡ
ಭಾರತವನ್ನು ಹೊರತುಪಡಿಸಿ, ಮಾಲಿ, ಲಿಬಿಯಾ, ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಹಲವಾರು ರಾಷ್ಟ್ರಗಳಲ್ಲಿ ಜೆಟ್ ಅನ್ನು ಬಳಸಲಾಗಿದೆ.  ಈ ಜೆಟ್ ಎರಡು M88-2 ಟರ್ಬೊಫ್ಯಾನ್ ಎಂಜಿನ್‌ಗಳಿಂದ ಚಾಲಿತವಾಗಿದ್ದು, ಇವು ಒಟ್ಟಾಗಿ 16,850 ಪೌಂಡ್‌ಗಳ ಒತ್ತಡವನ್ನು ಉತ್ಪಾದಿಸುತ್ತವೆ.  ರಫೇಲ್ ತನ್ನ ಆಂತರಿಕ ಟ್ಯಾಂಕ್‌ಗಳು ಮತ್ತು ಅದರ ಮೂರು ಬಾಹ್ಯ ಆಳವಾದ ಟ್ಯಾಂಕ್‌ಗಳೊಂದಿಗೆ ಸುಮಾರು 11.4 ಟನ್‌ಗಳಷ್ಟು ಇಂಧನವನ್ನು ಸಾಗಿಸಬಲ್ಲದು. ಆದ್ದರಿಂದ ಇದು 3,700 ಕಿಮೀ ದೋಣಿ ವ್ಯಾಪ್ತಿಗೆ ಅನುವು ಮಾಡಿಕೊಡುತ್ತದೆ, ಇದು ಆಪರೇಷನ್ ಸಿಂದೂರ್‌ನಲ್ಲಿ ಕಂಡುಬರುವಂತಹ ಸಾಗರೋತ್ತರ ಅಥವಾ ಎತ್ತರದ ಕಾರ್ಯಾಚರಣೆಗಳನ್ನು ಒಳಗೊಂಡಂತೆ ದೀರ್ಘ-ಶ್ರೇಣಿಯ ನಿಯೋಜನೆಗಳಿಗೆ ಅನುಕೂಲಕರವಾಗಿ ಬಳಸಲು ಅನುವು ಮಾಡಿಕೊಡುತ್ತದೆ.

 ರಫೇಲ್ ವಿಮಾನದ ಹೊಟ್ಟೆಭಾಗದಲ್ಲಿ ಒಟ್ಟು ಹದಿನಾಲ್ಕು strong point ಗಳಿರುತ್ತಾವೆ. ಈ ಪಾಯಿಂಟುಗಳನ್ನು ಕ್ಷಿಪಣಿಗಳನ್ನು ಅಥವಾ ಇಂಧನದ ಟ್ಯಾಂಕುಗಳನ್ನು ಅಳವಡಿಸಲು ಉಪಯೋಗಿಸಲಾಗುತ್ತದೆ. ಇದೊಂದು ಕ್ರಮಪಲ್ಲಟನೆಯ ಸಂಯೋಜನೆ, ಅಂದರೆ ಆಕ್ರಮಣದ ಉದ್ದೇಶದ ಅನುಸಾರವಾಗಿ ವಿವಿಧ ತರಹದ ಮಿಸೈಲುಗಳನ್ನು ಅಳವಡಿಸಲಾಗುತ್ತದೆ. ಒಟ್ಟಿನಲ್ಲಿ ಸುಮಾರು 9500 ಕೇಜಿಯಷ್ಟು ಭಾರವನ್ನು ಸಲೀಸಾಗಿ ಹೇರಿಕೊಂಡು ಹೋಗುತ್ತದೆ. ಬತ್ತಳಿಕೆಯಲ್ಲಿರುವ ಮೊಟ್ಟಮೊದಲ ಬ್ರಹ್ಮಾಸ್ತ್ರದ ಹೆಸರು 'ಮೀಟಿಯೋರ್'. ಪ್ರಪಂಚದ ಬೇರೆ ಯಾವ ದೇಶದಲ್ಲೂ ಈ ಶ್ರೇಣಿ ಮತ್ತು ಸಾಮರ್ಥ್ಯದ ಕ್ಷಿಪಣಿ ಇನ್ನೂ ಬಂದಿಲ್ಲ. ಇದು ರಫೇಲ್ ವಿಮಾನದಿಂದ ಇನ್ನೊಂದು ಯುದ್ಧವಿಮಾನದ ಮೇಲೆ ಪ್ರಯೋಗಿಸುವ ಕ್ಷಿಪಣಿ. ಇದರ ಕಾರ್ಯಪರಿಧಿ ಸುಮಾರು 120 ಕಿಮೀವರೆಗೂ ಇರುತ್ತದೆ. ಅಷ್ಟು ದೂರದವರೆಗೆ ಇದರ ಮಾರ್ಗದರ್ಶನ ಹೇಗೆ ನಡೆಯುತ್ತದೆ ಎನ್ನುವುದು ಬಹಳ ಕೌತುಕದ ಸಂಗತಿ. ಇದೊಂದು ಬಹಳ ಚಾಣಾಕ್ಷ ಕ್ಷಿಪಣಿ. ಶತ್ರು ವಿಮಾನವನ್ನು ರಡಾರಿನಲ್ಲಿ ಸೆರೆಹಿಡಿದು, ತಪ್ಪಿಸಿಕೊಳ್ಳದಂತೆ ಭದ್ರಪಡಿಸಿ ಈ ಕ್ಷಿಪಣಿಯನ್ನು ಫೈರ್ ಮಾಡಿದ ಕೂಡಲೇ ಅದು ಅತ್ಯಂತ ವೇಗದಲ್ಲಿ ಅಂದರೆ ವಿಮಾನಕ್ಕಿಂತ ದುಪ್ಪಟ್ಟು ವೇಗದಲ್ಲಿ ಶತ್ರು ವಿಮಾನದ ಕಡೆಗೆ ಹಾರಲಾರಂಬಿಸುತ್ತದೆ. ಇದರ ಮಾರ್ಗದರ್ಶನವನ್ನು ರಡಾರಿನಲ್ಲಿ ನಿಯಂತ್ರಿಸಲಾಗುತ್ತದೆ. ಅಕಸ್ಮಾತ್ತಾಗಿ ಪೈಲಟ್ ವಾಯುಕದನದ ವಾತಾವರಣದಲ್ಲಿ ಬ್ಯುಸಿಯಾಗಿ ಬಿಟ್ಟರೆ ಈ ಕ್ಷಿಪಣಿಯ ನಿಯಂತ್ರಣವನ್ನು 'ನೇತ್ರಾ' ವಿಮಾನದಂತಹ ನಿಯಂತ್ರಣ ಕೇಂದ್ರಕ್ಕೆ ಹಸ್ತಾಂತರ ಮಾಡಬಹುದು.

ಈ ಯುದ್ಧ ವಿಮಾನದ ಕುರಿತು ಇನ್ನೂ ಹೆಚ್ಚಿನ ಇಂಟರೆಸ್ಟಿಂಗ್​ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ವಿಂಗ್​ ಕಮಾಂಡರ್​ ಸುದರ್ಶನ್​. ಅವರು ಬರೆದ ಲೇಖನ ಈ ಕೆಳಗಿದೆ: 

Rafale Fighter Jet: 'ಆಪರೇಷನ್​ ಸಿಂದೂರ'ದ ಹೀರೋ, ರಫೇಲ್​ ಯುದ್ಧ ವಿಮಾನದ ರೋಚಕ ಮಾಹಿತಿ ಇಲ್ಲಿದೆ...

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..