
ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷಕ್ಕೆ ಕದನ ವಿರಾಮ ಜಾರಿಗೊಂಡಿದೆ. 1947ರಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧಗಳಲ್ಲಿ ಕೆಲವು ಬಾರಿ ಕದನ ವಿರಾಮ ಜಾರಿಯಿಂದ ಯುದ್ಧ ಅಂತ್ಯವಾಗಿದ್ದರೆ, ಕೆಲಸ ಸಂದರ್ಭದಲ್ಲಿ ಪಾಕ್ ಸೋತು ಶರಣಾಗಿತ್ತು. ಇವುಗಳ ಕಿರು ವಿವರ ವಿವರ ಇಲ್ಲಿದೆ.
1947 (ಭಾರತ- ಪಾಕ್ ಮೊದಲ ಯುದ್ಧ): ಈ ಯುದ್ಧವನ್ನು ಮೊದಲ ಕಾಶ್ಮೀರ ಯುದ್ಧ ಎಂದು ಹೆಸರು. 1947ರ ಅಕ್ಟೋಬರ್‌ನಲ್ಲಿ ಆರಂಭ. 1949ರ ಜನವರಿ ತನಕ ಸಮರ. ಬಳಿಕ ವಿಶ್ವಸಂಸ್ಥೆ ಮಧ್ಯಸ್ಥಿಕೆ. ಕದನ ವಿರಾಮ ಜಾರಿ.
ಭಾರತ ಮೇಲೆ ದಾಳಿಗೆ ಬಳಸುತ್ತಿದ್ದ ಪಾಕಿಸ್ತಾನದ 8 ವಾಯು ನೆಲೆಗಳೇ ಧ್ವಂಸ
1965 (ಭಾರತ - ಪಾಕ್ 2ನೇ ಯುದ್ಧ): 1965ರ ಆ.5 ರಂದು ಕಾಶ್ಮೀರದ ವಿಚಾರ ಕುರಿತು ಸಶಾಸ್ತ್ರ ಸಂಘರ್ಷ ಶುರು. 1965ರ ಸೆ.23ರ ತನಕ ಮುಂದುವರಿಕೆ. ಸೋವಿಯತ್ ಒಕ್ಕೂಟ ಮತ್ತು ಅಮೆರಿಕದ ಮಧ್ಯಸ್ಥಿಕೆಯಲ್ಲಿ ಎರಡೂ ಕಡೆಯವರಿಂದ ಕದನವಿರಾಮಕ್ಕೆ ಒಪ್ಪಿಗೆ.
1971( ಬಾಂಗ್ಲಾ ವಿಮೋಚನಾ ಯುದ್ಧ): 1971ರ ಭಾರತ - ಪಾಕ್ ಯುದ್ಧವು ಪೂರ್ವ ಪಾಕಿಸ್ತಾನದ (ಈಗಿನ ಬಾಂಗ್ಲಾದೇಶ) ಮೇಲೆ ಪಾಕಿಸ್ತಾನಿ ಸೇನೆಯ ದಮನ ನೀತಿ ಮತ್ತು ಅದರ ಸ್ವಾತಂತ್ರ್ಯದ ಬೇಡಿಕೆಯ ಕಾರಣಕ್ಕೆ ಆರಂಭ. 1971ರ ಡಿ.3ರಂದು ಯುದ್ಧ ಶುರು. ಪಶ್ಚಿಮ ಮತ್ತು ಪೂರ್ವ ಎರಡು ಕಡೆಗಳಲ್ಲಿ ಹೋರಾಟದ ಬಳಿಕ ಡಿ.16ಕ್ಕೆ ಪಾಕ್ ಶರಣು. ಕದನ ಅಂತ್ಯ.
1999 (ಕಾರ್ಗಿಲ್ ಯುದ್ಧ): ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನಿ ಪಡೆಗಳು ಮತ್ತು ಉಗ್ರರು ಕಾರ್ಗಿಲ್ ಶಿಖರ ಆಕ್ರಮಿಸಿದ ಕಾರಣ 1999ರ ಮೇ 3 ರಂದು ಪ್ರಾರಂಭ. ಬಳಿಕ ಯುದ್ಧದಿಂದ ಹಿಂದೆ ಸರಿದು ಪಾಕ್. ಜು.26ರಂದು ಮರಳಿ ಕಾರ್ಗಿಲ್ ಪ್ರದೇಶ ಭಾರತದ ವಶಕ್ಕೆ. ಯುದ್ಧ ಅಂತ್ಯ.
ಪಾಕಿಸ್ತಾನದಿಂದ ಎಸ್- 400 ಕ್ಷಿಪಣಿ ನಾಶ ಸುಳ್ಳು: ಆದಂಪುರದಲ್ಲಿ ಹಾನಿಯಾಗಿಲ್ಲ
ಗಡಿ ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ: ಪಹಲ್ಗಾಂ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ್’ ಕೈಗೊಂಡ ಬೆನ್ನಲ್ಲೆ ಮುನ್ನೆಚ್ಚರಿಕೆ ಕ್ರಮವಾಗಿ ಪಾಕಿಸ್ತಾನದ ಗಡಿಯಲ್ಲಿರುವ ಹಲವು ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜಸ್ಥಾನದ ಗಡಿ ಜಿಲ್ಲೆಗಳಾದ ಗಂಗಾನಗರ, ಬಿಕಾನೇರ್, ಜೈಸಲ್ಮೇರ್ ಮತ್ತು ಬಾರ್ಮರ್ ಜಿಲ್ಲೆಗಳ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ.
ಜಮ್ಮುವಿನ 5 ಗಡಿ ಜಿಲ್ಲೆಗಳಾದ ಜಮ್ಮು, ಸಾಂಬಾ, ಕಥುವಾ, ರಜೌರಿ, ಪೂಂಛ್ ಮತ್ತು ಕಾಶ್ಮೀರದ ಗಡಿಯಲ್ಲಿರುವ ಬಾರಾಮುಲ್ಲಾ, ಕುಪ್ವಾರಾ ಮತ್ತು ಗುರೆಜ್‌ನ ಶಾಲಾ ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳಿಗೆ ಬುಧವಾರ ರಜೆ ಘೋಷಿಸಲಾಗಿದೆ. ಶ್ರೀನಗರ ವಿಮಾನ ನಿಲ್ದಾಣದ ಸುತ್ತಲಿನ ಶಾಲೆಗಳಿಗೆ ಹಾಗೂ ಪಂಜಾಬ್‌ನ ಗಡಿ ಜಿಲ್ಲೆಗಳಾದ ಫಿರೋಜ್‌ಪುರ, ಪಠಾಣ್‌ಕೋಟ್, ಫಜಿಲ್ಕಾ, ಅಮೃತಸರ ಮತ್ತು ಗುರುದಾಸಪುರದ ಶಾಲೆಗಳಿಗೂ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ