ಆಪರೇಷನ್ ಸಿಂಧೂರನ್ನು ವಿದೇಶಿ ಮಾಧ್ಯಮಗಳು ಬಣ್ಣಿಸಿದ್ದು ಹೇಗೆ?

Published : May 07, 2025, 05:04 PM ISTUpdated : May 07, 2025, 05:06 PM IST
ಆಪರೇಷನ್ ಸಿಂಧೂರನ್ನು ವಿದೇಶಿ ಮಾಧ್ಯಮಗಳು ಬಣ್ಣಿಸಿದ್ದು ಹೇಗೆ?

ಸಾರಾಂಶ

ಆಪರೇಷನ್ ಸಿಂಧೂರ್‌ ಕಾರ್ಯಾಚರಣೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗಿದ್ದು, ಅವು ಈ ಘಟನೆಯನ್ನು ಬಣ್ಣಿಸಿದ್ದು ಹೇಗೆ?

ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಉಗ್ರರ ಹುಟ್ಟಡಗಿಸಲು ಮುಂದಾದ ಭಾರತ ಪಾಕಿಸ್ತಾನದ ಉಗ್ರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ನಡೆಸಿದ ಕಾರ್ಯಾಚರಣೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿದೆ. ಬಹುತೇಕ ಪ್ರತಿಷ್ಠಿತ ಜಾಗತಿಕ ಮಾಧ್ಯಮಗಳು ಈ ಸುದ್ದಿಯನ್ನು ವಿವಿಧ ರೀತಿಯಲ್ಲಿ ಬಣ್ಣಿಸಿವೆ. ಹೆಚ್ಚಿನ ಜಾಗತಿಕ ಮಾಧ್ಯಮಗಳು ಭಾರತ ನಡೆಸಿದ ಈ ದಾಳಿ ಭಯೋತ್ಪಾದನಾ ನಿಗ್ರಹಕ್ಕೆ ಮುಂದಾದ ಎಂಬ ಭಾರತದ ನಿಲುವನ್ನು ಪ್ರತಿಧ್ವನಿಸಿವೆ.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದ 9 ಕಡೆ ಭಯೋತ್ಪಾದಕರ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಭಾರತೀಯ ಸಶಸ್ತ್ರ ಪಡೆಗಳು ಬುಧವಾರ ನಿಷೇಧಿತ ಗುಂಪುಗಳಾದ ಲಷ್ಕರ್-ಎ-ತೈಬಾ (ಎಲ್‌ಇಟಿ) ಮತ್ತು ಜೈಶ್-ಎ-ಮೊಹಮ್ಮದ್ (ಜೆಇಎಂ) ಗಳ ಪ್ರಧಾನ ಕಚೇರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದವು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆದ ಈ ಆಪರೇಷನ್ ಸಿಂಧೂರ್" ಅಡಿಯಲ್ಲಿ ನಡೆದ ಮಿಲಿಟರಿ ಕಾರ್ಯಾಚರಣೆಯೂ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು. ಇಡೀ ಪ್ರಪಂಚದ ಗಮನವು ಈ ಬೆಳವಣಿಗೆಯ ಮೇಲೆ ಕೇಂದ್ರೀಕೃತವಾಗಿತ್ತು. ಅಮೆರಿಕಾ ಹಾಗೂ ಬ್ರಿಟನ್ ಸೇರಿದಂತೆ ಜಗತ್ತಿನ ಹಲವು ಪ್ರತಿಷ್ಠಿತ ಮಾಧ್ಯಮಗಳು ಈ ಬಗ್ಗೆ ಸುದ್ದಿ ಮಾಡಿದವು.

ಅಮೇರಿಕನ್ ಮಾಧ್ಯಮವಾದ ನ್ಯೂಯಾರ್ಕ್ ಟೈಮ್ಸ್ (New York Times) ಕಾಶ್ಮೀರ ದಾಳಿಯ ನಂತರ ಭಾರತ ಪಾಕಿಸ್ತಾನದೊಳಗೆ ಕ್ಷಿಪಣಿ ದಾಳಿ ನಡೆಸಿದೆ(India Launches Missile Strikes Inside Pakistan After Kashmir Attack) ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿತು. ಈ ವರದಿಯು ಈ ಕಾರ್ಯಾಚರಣೆಯನ್ನು ಭಾರತ-ಪಾಕಿಸ್ತಾನದ ನಡುವಿನ ಸಂಘರ್ಷ ಉಲ್ಬಣಗೊಂಡಿದೆ. ಹಾಗೂ ಭಾರತ ದಾಳಿಗೆ ಮುಂಚೆ ಅಮೆರಿಕಕ್ಕೆ ತಿಳಿಸಿತ್ತು ಎಂಬ ಅಂಶವನ್ನು ಒತ್ತಿಹೇಳಿದೆ. ಇದು ಅಂತಾರಾಷ್ಟ್ರೀಯ ಘರ್ಷಣೆಯನ್ನು ಕಡಿಮೆ ಮಾಡುವ ಪ್ರಯತ್ನವನ್ನು ಸೂಚಿಸುತ್ತದೆ.

ಹಾಗೆಯೇ ಮತ್ತೊಂದು ಪ್ರಮುಖ ಮಾಧ್ಯಮ ಸಿಎನ್‌ಎನ್‌ (CNN) ಭಾರತ ಮತ್ತು ಪಾಕಿಸ್ತಾನದ ಸಂಘರ್ಷ ಅಂಚಿಗೆ ಬಂದಿದೆ(India and Pakistan on brink of wider conflict) ಎಂಬ ಶೀರ್ಷಿಕೆಯೊಂದಿಗೆ ವರದಿ ಮಾಡಿದೆ. ಈ ವರದಿಯು ಭಾರತದ ರಫೇಲ್ ಫೈಟರ್ ಜೆಟ್‌ಗಳು ಮತ್ತು ಎಸ್‌ಸಿಎಎಲ್‌ಪಿ ಕ್ರೂಸ್ ಕ್ಷಿಪಣಿಗಳಂತಹ ಸುಧಾರಿತ ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ಗಮನ ಸೆಳೆದಿದೆ.
ಅಲ್ಲದೇ ಈ ದಾಳಿ ಭಯೋತ್ಪಾದಕ ಮೂಲಸೌಕರ್ಯವನ್ನು ಗುರಿಯಾಗಿರಿಸಿಕೊಂಡಿವೆಯೇ ಹೊರತು ಮಿಲಿಟರಿ ಸ್ವತ್ತುಗಳ ಮೇಲೆ ಅಲ್ಲ ಎಂದು ವರದಿ ಮಾಡಿದ್ದು ಇದು ಭಾರತದ ನಿಲುವನ್ನು ಮುನ್ನರುಚ್ಚರಿಸಿದೆ.

ಹಾಗೆಯೇ ಅಮೆರಿಕಾದ ಮತ್ತೊಂದು ಪ್ರತಿಷ್ಠಿತ ಮಾಧ್ಯಮ ವಾಷಿಂಗ್ಟನ್ ಪೋಸ್ಟ್‌, ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುತ್ತಿದ್ದಂತೆ ಉದ್ವಿಗ್ನತೆ ಹೆಚ್ಚಾಗಿದೆ, ಇಸ್ಲಾಮಾಬಾದ್ ಪ್ರತಿಕ್ರಿಯೆಯ ಪ್ರತಿಜ್ಞೆ ಮಾಡಿದೆ (Tensions Soar as India Strikes Pakistan, Islamabad Vows Response) ಎಂದು ಹೆಡ್ಡಿಂಗ್ ನೀಡಿದೆ. ಈ ವರದಿಯೂ ಭಾರತದ ಕಾರ್ಯಾಚರಣೆಯನ್ನು ಬಲಪ್ರದರ್ಶನ ಎಂದು ಕರೆದಿದೆ. ಜೊತೆಗೆ ಮಿಲಿಟರಿ ಬೇಸ್‌ಗಳ ಮೇಲೆ ಹಾಗೂ ನಾಗರಿಕರ ಗುರಿಯಾಗಿಸದೇ ದಾಳಿ ಮಾಡಿದ ಭಾರತದ ಕ್ರಮವನ್ನು ಒತ್ತಿ ಹೇಳಿದೆ. 

ಘಟನೆಯ ಬಿಬಿಸಿಯೂ ಪಾಕಿಸ್ತಾನದ ಬಹಾವಲ್ಪುರ್ ಮತ್ತು ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಕೇಂದ್ರಗಳು ಭಾರತೀಯ ದಾಳಿಯ ಪ್ರಮುಖ ಗುರಿಗಳಾಗಿವೆ ಎಂದು ವರದಿ ಮಾಡಿದೆ. ಅಲ್ಲದೇ ಭಾರತದ ಕಾರ್ಯಾಚರಣೆಯಿಂದ ಆತಂಕ ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆಯ ಬಗ್ಗೆ ಅಂತರರಾಷ್ಟ್ರೀಯ ಸಮುದಾಯದ ಕಳವಳದ ಬಗ್ಗೆ ವರದಿ ಮಾಡಿದೆ. 

ಹಾಗೆಯೇ ವಾಲ್ ಸ್ಟ್ರೀಟ್ ಜರ್ನಲ್ (The Wall Street Journal)ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಭಾರತವು ಪಾಕಿಸ್ತಾನದಲ್ಲಿರುವ ಶಂಕಿತ ಉಗ್ರಗಾಮಿ ತಾಣಗಳನ್ನು ಗುರಿಯಾಗಿಸಿಕೊಂಡಿದೆ ಎಂದು ವರದಿ ಮಾಡಿದೆ.

ಚಿಕಾಗೋ ಟ್ರಿಬ್ಯೂನ್(Chicago Tribune)ಕಾಶ್ಮೀರದಲ್ಲಿ ಮಾರಕ ದಾಳಿಯ ನಂತರ ಭಾರತ ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿದೆ.

ದಿ ಗಾರ್ಡಿಯನ್(The Guardian) ಕಾಶ್ಮೀರ ಉದ್ವಿಗ್ನತೆ ಭುಗಿಲೆದ್ದಂತೆ ಭಾರತ ಪಾಕಿಸ್ತಾನದೊಳಗೆ ಮಿಲಿಟರಿ ದಾಳಿ ನಡೆಸಿದೆ.

ಫೈನಾನ್ಷಿಯಲ್ ಟೈಮ್ಸ್(Financial Times):ನವದೆಹಲಿ ಕ್ಷಿಪಣಿ ದಾಳಿಗೆ ಆದೇಶಿಸುತ್ತಿದ್ದಂತೆ ಭಾರತ-ಪಾಕಿಸ್ತಾನ ಬಿಕ್ಕಟ್ಟು ಉಲ್ಬಣಗೊಂಡಿದೆ.

ದಿ ಟೈಮ್ಸ್(The Times):ಪ್ರವಾಸಿಗರ ಹತ್ಯಾಕಾಂಡದ ನಂತರ ಭಾರತ ಪಾಕಿಸ್ತಾನದ ಮೇಲೆ ಬಾಂಬ್ ದಾಳಿ ಮಾಡಿದೆ. ಇದು ಸಂಘರ್ಷದ ಭಯವನ್ನು ಹೆಚ್ಚಿಸಿದೆ.

ಎಬಿಸಿ ನ್ಯೂಸ್(ABC News):ಭಾರತ ಪಾಕಿಸ್ತಾನದ 9 ಕಡೆ ದಾಳಿ ಮಾಡಿದೆ.

ಲೆ ಮಾಂಡೆ(Le Monde):ಮಾರಕ ದಾಳಿಗೆ ಪ್ರತಿಕ್ರಿಯೆಯಾಗಿ ನವದೆಹಲಿ ಪಾಕಿಸ್ತಾನಿ ಪ್ರದೇಶದ ಮೇಲೆ ದಾಳಿ ಮಾಡಿದೆ.

ಜಪಾನ್ ಟೈಮ್ಸ್(Japan Times):ಕಾಶ್ಮೀರ ಪ್ರವಾಸಿಗರ ಹತ್ಯೆಗೆ ಸಂಬಂಧಿಸಿದಂತೆಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದೆ.

ಜಪಾನ್ ಟುಡೇ(Japan Today): ಪ್ರವಾಸಿಗರ ಹತ್ಯೆಗೆ ಸಂಬಂಧಿಸಿದಂತೆ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿದೆ, ಭಾರತೀಯ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು ಎಂದು ಪಾಕಿಸ್ತಾನ ಹೇಳಿದೆ.

ದಿ ಟೈಮ್ಸ್ ಆಫ್ ಇಸ್ರೇಲ್(The Times of Israel): ಪಾಕಿಸ್ತಾನದ ಮೇಲೆ ದಾಳಿ ಮಾಡಿದ ನಂತರ ಇಸ್ರೇಲ್ ಭಾರತದ ಸ್ವರಕ್ಷಣೆಯ ಹಕ್ಕನ್ನು ಬೆಂಬಲಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್