
ನವದೆಹಲಿ(ಮೇ.07) ಉಗ್ರರ ಪೋಷಿಸುವ ಪಾಕಿಸ್ತಾನಕ್ಕೆ ಭಾರತೀಯ ಸೇನೆ ಆಪರೇಶನ್ ಸಿಂಧೂರ್ ಮೂಲಕ ತಕ್ಕ ಉತ್ತರ ನೀಡಿದೆ. ಪಾಕಿಸ್ತಾನದಲ್ಲಿರುವ 9 ಉಗ್ರರ ನೆಲೆಯನ್ನು ಭಾರತ ಧ್ವಂಸ ಮಾಡಿದೆ. ಪೆಹಲ್ಗಾಂ ದಾಳಿ ನಡೆಸಿದ ಉಗ್ರರನ್ನು ಟಾರ್ಗೆಟ್ ಮಾಡಿದ ಭಾರತೀಯ ಸೇನೆ ಆಪರೇಶನ್ ಸಿಂಧೂರ್ ಹೆಸರಲ್ಲಿ ದಾಳಿ ಮಾಡಿದೆ. ಪಾಕಿಸ್ತಾನದ 9 ಉಗ್ರರ ಕ್ಯಾಂಪ್, ಪ್ರಮುಖ ನೆಲೆಗಳನ್ನು ಭಾರತ ಟಾರ್ಗೆಟ್ ಮಾಡಿ ಧ್ವಂಸ ಮಾಡಿದೆ. ಅಮಾಯಕರ ಮೇಲೆ ದಾಳಿ ಮಾಡಿದ ಉಗ್ರರಿಗೆ ಭಾರತ ಮೊದಲ ಹಂತದ ತಿರುಗೇಟು ನೀಡಿದೆ. ಇಷ್ಟಕ್ಕೆ ಭಾರತದ ಕಾರ್ಯಾಚರಣೆ ಮುಗಿದಿಲ್ಲ. ಈ ಬಾರಿ ಸೇನಾ ದಾಳಿಯ ಪ್ರೂಫ್ ಕೇಳಿಲ್ಲ. ಆದರೆ ಮೊದಲೇ ಎಚ್ಚೆತ್ತುಕೊಂಡಿರುವ ಭಾರತೀಯ ಸೇನೆ ಆಪರೇಶನ್ ಸಿಂಧೂರ್ ದಾಳಿಯ ವಿಡಿಯೋ ರಿಲೀಸ್ ಮಾಡಿದೆ.
25 ನಿಮಿಷದಲ್ಲಿ ಎಲ್ಲವೂ ಉಡೀಸ್
ಕೇಂದ್ರ ಸರ್ಕಾರ ಮೇ 7 ರಂದು ದೇಶಾದ್ಯಂತ ಮಾಕ್ ಡ್ರಿಲ್ ಮಾಡಲು ಸೂಚನೆ ನೀಡಿತ್ತು. ಸೈರನ್ ಮೊಳಗಿಸಿ ನಾಗರೀಕರು ಯುದ್ಧದ ತುರ್ತು ಪರಿಸ್ಥಿತಿ ಕುರಿತು ಜಾಗೃತಿ ಮಾಡಲು ಸೂಚಿಸಿತ್ತು. ಆದರೆ ಭಾರತದಲ್ಲಿ ಪ್ರಾಕ್ಟೀಸ್ ಸೈರನ್ ಮೊಳಗುವ ಮೊದಲೇ ಪಾಕಿಸ್ತಾನದಲ್ಲಿ ಅಸಲಿ ಸೈರನ್ ಮೊಳಗಿತ್ತು. ಕಾರಣ ಮಧ್ಯ ರಾತ್ರಿ 1.05ಕ್ಕೆ ಭಾರತ ಮಿಸೈಲ್ ದಾಳಿ ನಡೆಸಿತ್ತು. ಉಗ್ರರ ಕ್ಯಾಂಪ್ ಗುರಿಯಾಸಿ ಭಾರತ ದಾಳಿ ನಡೆಸಿತ್ತು. ಉಗ್ರರ 9 ಕ್ಯಾಂಪ್ ಟಾರ್ಗೆಟ್ ಮಾಡಿದ್ದ ಸೇನೆ, ನಿಖರವಾಗಿ ಗುರಿಯಿಟ್ಟು ದಾಳಿ ಮಾಡಿತ್ತು. 25 ನಿಮಿಷಗಳ ಕಾಲ ಈ ದಾಳಿ ನಡೆದಿತ್ತು. 1.5 ರಿಂದ 1.30ರ ವರೆಗೆ 9 ಟಾರ್ಗೆಟ್ ಉಗ್ರರ ನೆಲೆಯನ್ನು ಧ್ವಂಸಗೊಳಿಸಾಗಿದೆ. 1.30ಕ್ಕೆ ಭಾರತೀಯ ಸೇನೆಯ ಕಾರ್ಯಾಚರಣೆ ಅಂತ್ಯಗೊಂಡಿದೆ.
ಆಪರೇಶನ್ ಸಿಂಧೂರ್ ದಾಳಿಗೆ ಉಗ್ರರ ನೆಲೆ ಮಾತ್ರವಲ್ಲ ಪಾಕಿಸ್ತಾನ ಷೇರುಮಾರುಕಟ್ಟೆಯೂ ಧ್ವಂಸ
ದಾಖಲೆ ಕೇಳುವ ಮೊದಲೇ ವಿಡಿಯೋ ರಿಲೀಸ್
25 ನಿಮಿಷದಲ್ಲಿ 24 ಮಿಸೈಲ್ ದಾಳಿ ನಡೆದಿದೆ. ಅದು ಭಾರತದ ಮೂರು ಸೇನೆ ಜಂಟಿಯಾಗಿ ನಡೆಸಿದ ದಾಳಿಯಾಗಿದೆ. 9 ಉಗ್ರರ ತಾಣಗಳು ಧ್ವಂಸಗೊಂಡಿದೆ. ಭಾರತದ ಪಾಕಿಸ್ತಾನದ ಉಗ್ರರ ಕೇಂದ್ರಗಳನ್ನು ಟಾರ್ಗೆಟ್ ಮಾಡಿ ದಾಳಿ ಮಾಡಿದ ವಿಡಿಯೋವನ್ನು ಭಾರತೀಯ ಸೇನೆ ಬಿಡುಗಡೆ ಮಾಡಿದೆ. ಭಾರತದ ಕಾರ್ಯಾಚರಣೆ ವಿಡಿಯೋ ಮೈಜುಮ್ಮೆನಿಸುವಂತಿದೆ. ಭಾರತೀಯ ಸೇನೆಯ ಕಳೆದ ಹಲವು ದಾಳಿ, ಪ್ರತೀಕಾರಕ್ಕೆ ದೇಶಾದ್ಯಂತ ದಾಖಲೆ ಕೇಳಿ ಅವಮಾನಿಸಲಾಗಿತ್ತು. ಭಾರತೀಯ ಸೇನೆ ದಾಳಿ ಮಾಡಿದ್ದೆ ಸುಳ್ಳು ಎಂದು ಆರೋಪ ಮಾಡಲಾಗಿತ್ತು. ಹೀಗಾಗಿ ಈ ಬಾರಿ ದಾಖಲೆ ಕೇಳುವ ಮೊದಲೇ ಭಾರತೀಯ ಸೇನೆ ವಿಡಿಯೋ ಬಿಡುಗಡೆ ಮಾಡಿದೆ.
ಪಾಕಿಸ್ತಾನ ಸರ್ಕಾರ, ಸೇನೆ ಕೂಡ ಭಾರತದ ದಾಳಿಯನ್ನು ಒಪ್ಪಿಕೊಂಡಿದೆ. ಇದಕ್ಕೆ ಪ್ರತೀಕಾರ ತೀರಿಸುವುದಾಗಿ ಹೇಳಿದೆ. ಆದರೆ ಭಾರತ ಮೊದಲ ಹಂತದ ತಿರುಗೇಟು ನೀಡಿದೆ. ಆದರೆ ಆಪರೇಶನ್ ಸಿಂಧೂರ್ ಪೂರ್ಣಗೊಂಡಿಲ್ಲ. ಇದೀಗ ಮುಂದಿನ ಭಾಗ ಶೀಘ್ರದಲ್ಲೇ ಮತ್ತೊಂದು ಸಂಚಲನ ಸೃಷ್ಟಿಸಲಿದೆ.
70 ಉಗ್ರರ ಮಟಾಶ್, 60 ಉಗ್ರರಿಗೆ ಗಾಯ
ಭಾರತ ಟಾರ್ಗೆಟ್ ಮಾಡಿದ್ದ ಉಗ್ರರ ಕ್ಯಾಂಪ್‌ನಲ್ಲಿದ್ದ 70 ಉಗ್ರರು ದಾಳಿಯಲ್ಲಿ ಮೃತಪಟ್ಟಿದ್ದಾರೆ. ಇನ್ನು 60ಕ್ಕೂ ಹೆಚ್ಟು ಉಗ್ರರಿಗೆ ಗಾಯವಾಗಿದೆ. ವಿಶೇಷ ಅಂದರೆ ಭಾರತ ಕೇವಲ ಉಗ್ರರ ಕ್ಯಾಂಪ್ ಗುರಿಯಾಗಿಸಿ ದಾಳಿ ಮಾಡಿದೆ. ಭಾರತದ 9 ದಾಳಿಯಲ್ಲಿ ಯಾವುದೇ ನಾಗರೀಕರನ್ನು ಗುರಿಯಾಗಿಸಿ ದಾಳಿ ಮಾಡಿಲ್ಲ. ಇಷ್ಟೇ ಅಲ್ಲ ಭಾರತದ ದಾಳಿಯಲ್ಲಿ ಪಾಕಿಸ್ತಾನದ ನಾಗರೀಕರಿಗೆ ಹಾನಿಯಾಗಿಲ್ಲ.
ಭಾರತ ದಾಳಿ ಮಾಡಿದ 9 ಉಗ್ರರ ನೆಲೆ ಪೈಕಿ 5 ತಾಣಗಳು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿದ್ದರೆ, 4 ತಾಣಗಳು ಪಾಕಿಸ್ತಾನದ ಒಳಗಿದೆ. ಈ ಪೈಕಿ ಬಹವಾಲ್‌ಪುರ್‌ದಲ್ಲಿ ಭಾರತೀಯ ಸೇನೆ ನಡೆಸಿದ ದಾಳಿ ಪಾಕಿಸ್ತಾನವನ್ನು ಬೆಚ್ಚಿ ಬೀಳಿಸಿದೆ. ಕಾರಣ ಇದು ಜೈಶ್ ಇ ಮೊಹಮ್ಮದ್ ಏರಿಯಾ ಎಂದೇ ಜನಪ್ರಿಯವಾಗಿದೆ. ಇಲ್ಲಿ ಪಾಕಿಸ್ತಾನ ಸೇನೆ, ಜೈಶ್ ಉಗ್ರರು ಸೇರಿದಂತೆ ಹಲವು ಹಂತದ ಭದ್ರತೆಗಳಿವೆ. ಪಾಕಿಸ್ತಾನದ ಎಲ್ಲಾ ರೇಡಾರ್, ಭದ್ರತಾ ವ್ಯವಸ್ಥೆ ಭೇದಿಸಿ ಭಾರತದ ದಾಳಿ ಮಾಡುವಲ್ಲಿ ಯಶಸ್ವಿಯಾಗಿದೆ.
ಭಾರತ ಸೇನೆ ಉಗ್ರರ ನೆಲೆ ಮೇಲೆ ದಾಳಿ ಮಾಡಿದರೆ 'ಶಾಂತಿಯ ಟ್ವೀಟ್' ಮಾಡಿದ ಕಾಂಗ್ರೆಸ್; ಸಚಿವ ಪ್ರಿಯಾಂಕ ಖರ್ಗೆ ಆಕ್ರೋಶ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ