ದೀಪಾವಳಿ ರಜೆಗೆ ಮನೆಗೆ ಹೋಗದೇ ಹಾಸ್ಟೆಲ್‌ನಲ್ಲಿ ಉಳಿದ ವಿದ್ಯಾರ್ಥಿಗಳು ಆ ಕಟ್ಟಡದಿಂದ ಈ ಕಟ್ಟಡಕ್ಕೆ ಒಂದಾದ ಮೇಲೆ ಒಂದರಂತೆ ರಾಕೆಟ್ ಪಟಾಕಿಯನ್ನು ಹಾರಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಟಷ್ಟತೆ ಇಲ್ಲ
ದೀಪಾವಳಿ ಹಬ್ಬ ಬಂತೆಂದರೆ ಎಲ್ಲೆಡೆ ಪಟಾಕಿಗಳದ್ದೇ ಸದ್ದು ರಸ್ತೆಯಲ್ಲಿ, ಮನೆಯ ಮಹಡಿಯಲ್ಲಿ ಸೇತುವೆಗಳ ಮೇಲೆ ಚಲಿಸುವ ವಾಹನಗಳ ಮೇಲೆ ಹೀಗೆ ಎಲ್ಲೆಂದರಲ್ಲಿ ಜನ ಪಟಾಕಿ ಸಿಡಿಸುವ ಮೂಲಕ ಪಶು ಪಕ್ಷಿಗಳ ಜೊತೆ ಮನುಷ್ಯರರನ್ನು ಕೂಡ ಗಾಬರಿಗೀಡು ಮಾಡುತ್ತಾರೆ. ಇಂತಹ ಅಪಾಯಕಾರಿ ಪಟಾಕಿ ಸ್ಟಂಟ್‌ಗಳ ವೀಡಿಯೋ ದೀಪಾವಳಿ ಸಮಯದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಕಳೆದ ಸಾರಿ ದೀಪಾವಳಿಯ ವೇಳೆ ಚಲಿಸುವ ಕಾರಿನ ಮೇಲ್ಭಾಗದಲ್ಲಿ ಪಟಾಕಿ ಇರಿಸಿ ಹಾರಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿತ್ತು. ಈ ಬಾರಿ ಬೈಕ್ ಮೇಲೆ ಪಟಾಕಿ ಹಾರಿಸುತ್ತಾ ಸ್ಟಂಟ್ ಮಾಡ್ತಿದ್ದ ವೀಡಿಯೋ ವೈರಲ್ ಆಗಿ ಯುವಕನ ಬಂಧನವೂ ಆಗಿದೆ. ಈ ಘಟನೆಗಳೆಲ್ಲಾ ಮಾಸುವ ಮೊದಲೇ ದೀಪಾವಳಿ ರಜೆಗೆ ಮನೆಗೆ ಹೋಗದೇ ಹಾಸ್ಟೆಲ್‌ನಲ್ಲಿ ಉಳಿದ ವಿದ್ಯಾರ್ಥಿಗಳು ಆ ಕಟ್ಟಡದಿಂದ ಈ ಕಟ್ಟಡಕ್ಕೆ ಒಂದಾದ ಮೇಲೆ ಒಂದರಂತೆ ರಾಕೆಟ್ ಪಟಾಕಿಯನ್ನು ಹಾರಿಸುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಆದರೆ ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಸ್ಟಷ್ಟತೆ ಇಲ್ಲ
ಈ ವೀಡಿಯೋ ಈಗ ಟ್ವಿಟ್ಟರ್‌ನಲ್ಲಿ ಸಖತ್ ವೈರಲ್ ಆಗಿದ್ದು, ಏಳು ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಘರ್ ಕಲೇಶ್ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ವೈರಲ್ ಆಗಿದೆ. ವೀಡಿಯೋದಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ತಾವಿದ್ದ ಕಟ್ಟಡದಿಂದ ಸಮೀಪದ ಕಟ್ಟಡಕ್ಕೆ ಪರಸ್ಪರ ರಾಕೆಟ್ ಪಟಾಕಿಗಳನ್ನು ಹಾರಿಸುತ್ತಿರುವುದನ್ನು ಕಾಣಬಹುದಾಗಿದೆ. ಇದು ಒಂದು ರೀತಿಯ ಯುದ್ಧದಂತೆ ಒಬ್ಬರಾದ ಮೇಲೆ ಒಬ್ಬರು ಪರಸ್ಪರ ಆ ಕಟ್ಟಡದಿಂದ ಈ ಕಟ್ಟಡಕ್ಕೆ ಪಟಾಕಿ ಹಾರಿಸುತ್ತಿದ್ದು, ಯುದ್ಧದಲ್ಲಿ ರಾಕೆಟ್ ದಾಳಿಯಂತೆ ಗೋಚರಿಸುತ್ತಿದೆ.
19 ಸೆಕೆಂಡ್‌ಗಳ ಈ ವೀಡಿಯೋ ನೋಡಿದ ಅನೇಕರು ಇಸ್ರೇಲ್ ಹಮಾಸ್ ಯುದ್ಧವನ್ನು ಭಾರತದಲ್ಲಿ ರಿಕ್ರಿಯೇಟ್ ಮಾಡಲಾದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಬಹುಶಃ ಹಾಸ್ಟೆಲ್‌ನಲ್ಲಿ ವಾರ್ಡನ್ ಇರಲಿಲ್ಲ ಎನಿಸುತ್ತಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ನಮಗೆ ಹಾಸ್ಟೆಲ್ ದಿನಗಳನ್ನು ನೆನಪಿಸಿತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಸ್ರೇಲ್‌ನಂತೆ ಇಲ್ಲೂ ಒಂದು ಐರನ್ ಡೋಮ್ ಸ್ಥಾಪಿಸಿ ಎಂದಿದ್ದಾರೆ. ಮತ್ತೆ ಕೆಲವರು ಕುತೂಹಲದಿಂದ ಈ ಕಾಲೇಜು ಯಾವುದಾಗಿರಬಹುದು ಎಂದು ಪ್ರಶ್ನೆ ಮಾಡಿದ್ದಾರೆ. ಕೇವಲ ಹುಡಗರ ಹಾಸ್ಟೆಲ್‌ನಲ್ಲಿ ಮಾತ್ರ ಹೀಗೆ ಆಗಲು ಸಾಧ್ಯ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ವಿಜಯಪುರ: ಪಟಾಕಿ ಬದಲು ಗುಂಡು ಹಾರಿಸಿದ ಭೂಪ..!
ಒಟ್ಟಿನಲ್ಲಿ ಹಾಸ್ಟೆಲ್ ದಿನಗಳು ಎಷ್ಟು ಮಜಾವಾಗಿರುತ್ತವೆ ಎಂಬುದನ್ನು ಹಾಸ್ಟೆಲ್‌ನಲ್ಲಿ ದಿನ ಕಳೆದವರನ್ನೇ ಕೇಳಿ ನೋಡಿ ಮಜಾವಾಗಿ ವಿವರಿಸುತ್ತಾರೆ. ರಕ್ಷಿತ್ ಶೆಟ್ಟಿ ಅಭಿನಯದ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲೂ ಕೂಡ ನೀವು ಹಾಸ್ಟೆಲ್ ಡೇಸ್‌ನಲ್ಲಿ ಅದರಲ್ಲು ಬಾಯ್ಸ್ ಹಾಸ್ಟೆಲ್‌ನಲ್ಲಿ ನಡೆಯುವ ಕಿತಾಪತಿಗಳನ್ನು ಕಣ್ತುಂಬಿಕೊಂಡಿರಬಹುದು.
ಈ ಹಾಸ್ಟೆಲ್ ಹುಡುಗರ ಪಟಾಕಿ ಯುದ್ಧದ ವೀಡಿಯೋ ಇಲ್ಲಿದೆ ನೋಡಿ ಕಣ್ತುಂಬಿಕೊಳ್ಳಿ:
Kalesh b/w Two groups of Hostel boys with Crackers during Diwali Celebration pic.twitter.com/6AUjNIB9FB
— Ghar Ke Kalesh (@gharkekalesh)