ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್ ಇನ್ನಿಲ್ಲ

Published : Nov 15, 2023, 12:04 AM ISTUpdated : Nov 15, 2023, 12:18 AM IST
ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್ ಇನ್ನಿಲ್ಲ

ಸಾರಾಂಶ

ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸುಬ್ರತಾ ರಾಯ್ ಅವರನ್ನು ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಬ್ರತಾ ರಾಯ್ ಅವರು ಇಹಲೋಕ ತ್ಯಜಿಸಿದ್ದಾರೆ. 

ಮುಂಬೈ(ನ.15):  ಸಹಾರಾ ಸಮೂಹದ ಸಂಸ್ಥಾಪಕ ಸುಬ್ರತಾ ರಾಯ್(75) ನಿನ್ನೆ(ಮಂಗಳವಾರ) ಮುಂಬೈನಲ್ಲಿ ನಿಧನರಾಗಿದ್ದಾರೆ. ಸುಬ್ರತಾ ರಾಯ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಸುಬ್ರತಾ ರಾಯ್ ಅವರನ್ನು ಭಾನುವಾರ ಮುಂಬೈನ ಕೋಕಿಲಾಬೆನ್ ಧೀರೂಭಾಯಿ ಅಂಬಾನಿ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಸಂಸ್ಥೆಗೆ (ಕೆಡಿಎಎಚ್) ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸುಬ್ರತಾ ರಾಯ್ ಅವರು ಇಹಲೋಕ ತ್ಯಜಿಸಿದ್ದಾರೆ. 

"ನಮ್ಮ ಗೌರವಾನ್ವಿತ 'ಸಹರಾಶ್ರೀ' ಸುಬ್ರತಾ ರಾಯ್ ಸಹಾರಾ ಅವರ ನಿಧನದ ಸುದ್ದಿಯನ್ನು ತಿಳಿಸಲು ತೀವ್ರ ದುಃಖವೆನಿಸುತ್ತದೆ ಎಂದು ಸಹಾರಾ ಇಂಡಿಯಾ ಪರಿವಾರ್ ತಿಳಿಸಿದೆ. ಸ್ಪೂರ್ತಿದಾಯಕ ನಾಯಕ ಮತ್ತು ದಾರ್ಶನಿಕ ಸಹರಾಶ್ರೀ ಜಿ ಅವರು ಮಂಗಳವಾರ ರಾತ್ರಿ 10.30 ಕ್ಕೆ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ. ಸುಬ್ರತಾ ರಾಯ್ ಅವರು  ಮೆಟಾಸ್ಟಾಟಿಕ್ ಮಾರಣಾಂತಿಕತೆ, ಅಧಿಕ ರಕ್ತದೊತ್ತಡ ಮತ್ತು ಮಧುಮೇಹದ ವಿರುದ್ಧ ದೀರ್ಘಕಾಲ ಹೋರಾಡಿ ನಿಧನರಾದರು.

ಚಿಕ್ಕೋಡಿ: ಚಿಂಚಣಿ ಅಲ್ಲಮಪ್ರಭು ಮಹಾಸ್ವಾಮೀಜಿ ಲಿಂಗೈಕ್ಯ

ಸುಬ್ರತಾ ರಾಯ್ ಅವರ ಅಗಲಿಕೆಯಿಂದ ಸಹಾರಾ ಇಂಡಿಯಾ ಪರಿವಾರಕ್ಕೆ ಬಹಳ ದುಃಖವೆನಿಸುತ್ತಿದೆ. ಸುಬ್ರತಾ ರಾಯ್ ಅವರು ಒಂದು ಶಕ್ತಿಯಾಗಿದ್ದರು, ಮಾರ್ಗದರ್ಶಕರಾಗಿದ್ದರು ಮತ್ತು ಅವರ ಜೊತೆಯಲ್ಲಿ ಕೆಲಸ ಮಾಡುವ ಸವಲತ್ತು ಹೊಂದಿರುವ ಎಲ್ಲರಿಗೂ ಸ್ಫೂರ್ತಿಯ ಮೂಲವಾಗಿದ್ದರು” ಎಂದು ಸಹಾರಾ ಇಂಡಿಯಾ ಪರಿವಾರ್ ಹೇಳಿದೆ.

ಸುಬ್ರತಾ ರಾಯ್ ಜೂನ್ 10, 1948 ರಂದು ಬಿಹಾರದ ಅರಾರಿಯಾದಲ್ಲಿ ಜನಿಸಿದ್ದರು. ಹಣಕಾಸು, ರಿಯಲ್ ಎಸ್ಟೇಟ್, ಮಾಧ್ಯಮ ಮತ್ತು ಆತಿಥ್ಯ ಸೇರಿದಂತೆ ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿರುವ ವಿಶಾಲವಾದ ಸಾಮ್ರಾಜ್ಯವನ್ನು ಸುಬ್ರತಾ ರಾಯ್ ಸ್ಥಾಪಿಸಿದ್ದರು. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು