ಹಾರ್ಲಿಕ್ಸ್, ಬೂಸ್ಟ್‌ಗಿನ್ನು ಆರೋಗ್ಯ ಪೇಯ ಪಟ್ಟ ಇಲ್ಲ..!

By Kannadaprabha NewsFirst Published Apr 26, 2024, 10:36 AM IST
Highlights

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ- ಕಾಮರ್ಸ್ ವೈಬೈಟ್ ನಿಂದ ಪಾನೀಯಗಳ ಹೆಸರನ್ನು ಆರೋಗ್ಯಕರ ಪಾನೀಯ ಪಟ್ಟಿಯಿಂದ ಕೈ ಬಿಡುವುದಕ್ಕೆ ಸೂಚಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ನವದಹಲಿ(ಏ.25):  ಹಾರ್ಲಿಕ್ಸ್, ಬೂಸ್ಟ್ ಸೇರಿದಂತೆ ವಿವಿಧ ಆರೋಗ್ಯ ಲೆಬೆಲ್ ಹೊಂದಿರುವ ಪಾನೀಯಗಳನ್ನು ಉತ್ಪಾದಿಸುವ ಹಿಂದುಸ್ತಾನ್ ಯುನಿಲಿವರ್ ಸಂಸ್ಥೆ ತನ್ನ ಕಂಪನಿಯ ಆರೋಗ್ಯಕರ ಪಾನೀಯ ಪಟ್ಟಿಯಿಂದ ಹಾರ್ಲಿಕ್ಸ್, ಬೂಸ್ಟ್ ಹೆಸರನ್ನು ಕೈ ಬಿಟ್ಟಿದೆ. 

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಇ- ಕಾಮರ್ಸ್ ವೈಬೈಟ್ ನಿಂದ ಪಾನೀಯಗಳ ಹೆಸರನ್ನು ಆರೋಗ್ಯಕರ ಪಾನೀಯ ಪಟ್ಟಿಯಿಂದ ಕೈ ಬಿಡುವುದಕ್ಕೆ ಸೂಚಿಸಿದ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಹಾರ್ಲಿಕ್ಸ್‌, ಬೂಸ್ಟ್‌ ಹಿಂದೂಸ್ತಾನ್‌ ಯುನಿಲಿವರ್‌ ತೆಕ್ಕೆಗೆ

ಹೆಲ್ತ್ ಡ್ರಿಂಕ್ಸ್ ಹೆಸರು ತೆಗೆದು ಹಾಕಿ ಪೌಷ್ಟಿಕಾಂಶ ಪಾನೀಯದ ಗುಂಪಿಗೆ ಸೇರಿಸಲಾಗಿದೆ. ಇದಕ್ಕೂ ಮುನ್ನವೇ 'ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗವು ಆರೋಗ್ಯಕರ ಪಾನೀಯಗೆ ಯಾವುದೇ ಅರ್ಥವಿಲ್ಲ. ಡೈರಿ, ಧಾನ್ಯ ಅಥವಾ ಮಾಲ್ಟ್ ಆಧಾರಿತ ಪಾನೀಯಗಳನ್ನು ಹೆಲ್ಡ್ ಡ್ರಿಂಕ್ ಪಟ್ಟಿಗೆ ಸೇರಿಸಬೇಡಿ. ಅದು ಸರಿಯಾದ ಪದವಲ್ಲ. ಗ್ರಾಹಕರು ತಪ್ಪು ಹಾದಿ ತುಳಿಯುವುದಕ್ಕೆ ಕಾರಣವಾಗುತ್ತದೆ' ಎಂದು ಸೂಚಿಸಿತ್ತು.

click me!