ಕೆಲವು ಅಭ್ಯರ್ಥಿಗಳು ಮತದಾರರಿಗೆ ಪ್ರಯಾಣದ ಪೂರ್ಣ ವೆಚ್ಚ, ಇನ್ನು ಕೆಲವರು ಅರ್ಧ ವೆಚ್ಚ ನೀಡಿ ಕರೆಸಿಕೊಂಡಿದ್ದಾರೆ. ಇನ್ನು ಕೆಲವರು ಸ್ವಯಂಪ್ರೇರಿತರಾಗಿ ಮತ ಚಲಾವಣೆಗಾಗಿ ದೂರದ ದೇಶದಿಂದ ತವರಿಗೆ ಆಗಮಿಸಿದ್ದಾರೆ. ಇನ್ನು ಕೆಲ ಶ್ರೀಮಂತರು ಖಾಸಗಿ ವಿಮಾನಗಳನ್ನು ಬುಕ್ ಮಾಡಿ ಆಗಮಿಸಿದ್ದಾರೆ.
ತಿರುವನಂತಪುರಂ(ಏ.25): ಕೇರಳದಲ್ಲಿ ಲೋಕಸಭಾ ಚುನಾವಣೆ ಹಿಂದೆಂದೂ ಕಾಣದಷ್ಟು ಕಾವು ಪಡೆದುಕೊಂಡಿರುವ ನಡುವೆಯೇ, ಇಂದು(ಶುಕ್ರವಾರ) ನಡೆಯಲಿರುವ ಒಂದೇ ಹಂತದ ಚುನಾವಣೆಯಲ್ಲಿ ಮತ ಚಲಾವಣೆಗೆಂದೇ ಕೊಲ್ಲಿ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 10000ಕ್ಕೂ ಹೆಚ್ಚು ಕೇರಳಿಗರು ತವರಿಗೆ ಆಗಮಿಸಿದ್ದಾರೆ.
ಕೆಲವು ಅಭ್ಯರ್ಥಿಗಳು ಮತದಾರರಿಗೆ ಪ್ರಯಾಣದ ಪೂರ್ಣ ವೆಚ್ಚ, ಇನ್ನು ಕೆಲವರು ಅರ್ಧ ವೆಚ್ಚ ನೀಡಿ ಕರೆಸಿಕೊಂಡಿದ್ದಾರೆ. ಇನ್ನು ಕೆಲವರು ಸ್ವಯಂಪ್ರೇರಿತರಾಗಿ ಮತ ಚಲಾವಣೆಗಾಗಿ ದೂರದ ದೇಶದಿಂದ ತವರಿಗೆ ಆಗಮಿಸಿದ್ದಾರೆ. ಇನ್ನು ಕೆಲ ಶ್ರೀಮಂತರು ಖಾಸಗಿ ವಿಮಾನಗಳನ್ನು ಬುಕ್ ಮಾಡಿ ಆಗಮಿಸಿದ್ದಾರೆ. ಕೇರಳದಲ್ಲಿ ಆಡಳಿತಾರೂಢ ಎಡಪಕ್ಷಗಳ ನೇತೃತ್ವದ ಎಲ್‌ಡಿಎಫ್ ಮೈತ್ರಿಕೂಟ, ವಿಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಹಣಾಹಣ ಇದೆ.
ಕರ್ನಾಟಕ Election 2024 Live: ದಕ್ಷಿಣದ 14 ಜಿಲ್ಲೆಗಳಿಗೆ ಇಂದು ಮತದಾನ
ಚುನಾವಣಾ ಆಯೋಗದ ಪ್ರಕಾರ, ವಿದೇಶಗಳಲ್ಲಿ ವಾಸಿಸುವ ಸುಮಾರು 1.3 ಕೋಟಿ ಮತದಾರರಲ್ಲಿ ಶೇ.1 ರಷ್ಟು ಮಂದಿ ಮಾತ್ರ ಹಕ್ಕು ಚಲಾವಣೆಗೆ ಈ ಬಾರಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ಕಳೆದ ಚುನಾವಣೆಗಳಲ್ಲಿ 25 ಸಾವಿರ ಅನಿವಾಸಿ ಭಾರತೀಯರು ಮಾತ್ರ ತಮ್ಮ ಹಕ್ಕು ಚಲಾಯಿಸಿದ್ದರು. ಈ ಪೈಕಿ ಕೇರಳದಲ್ಲಿ ಅತ್ಯಧಿಕ ಸಂಖ್ಯೆ ಜನರಿದ್ದರು. ದುಬೈ ಸೇರಿದಂತೆ ಇತರ ಕೊಲ್ಲಿ ರಾಷ್ಟ್ರಗಳಲ್ಲಿ 80 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. ಆ ಪೈಕಿ ಕೇರಳದವರೇ 7 ಲಕ್ಷಕ್ಕೂ ಹೆಚ್ಚಿನ ಜನರಿದ್ದಾರೆ.