ಕರ್ನಾಟಕ ರೀತಿ ದೇಶದಲ್ಲಿ ಮುಸ್ಲಿಂ ಮೀಸಲಾತಿಗೆ 'ಕಾಂಗ್ರೆಸ್‌' ಪ್ಲಾನ್: ಪ್ರಧಾನಿ ಮೋದಿ

By Kannadaprabha News  |  First Published Apr 26, 2024, 7:03 AM IST

ಮುಸ್ಲಿಂ ಮೀಸಲು ಕುರಿತ ಕಾಂಗ್ರೆಸ್‌ ನಿಲುವಿನ ಬಗ್ಗೆ ಸತತ 3ನೇ ದಿನವೂ ಪ್ರಧಾನಿ ನರೇಂದ್ರ ಮೋದಿ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಒಬಿಸಿ ಮೀಸಲು  ಕಸಿದು ಮುಸ್ಲಿಮರಿಗೆ ನೀಡಿದ ಕರ್ನಾಟಕದ ಮಾದರಿಯನ್ನೇ ದೇಶವ್ಯಾಪಿ ವಿಸ್ತರಣೆ ಮಾಡಲು ಕಾಂಗ್ರೆಸ್ ಯೋಜಿಸಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. 


ಆಗ್ರಾ (ಏ.26): ಮುಸ್ಲಿಂ ಮೀಸಲು ಕುರಿತ ಕಾಂಗ್ರೆಸ್‌ ನಿಲುವಿನ ಬಗ್ಗೆ ಸತತ 3ನೇ ದಿನವೂ ಪ್ರಧಾನಿ ನರೇಂದ್ರ ಮೋದಿ ತಮ್ಮ ವಾಗ್ದಾಳಿ ಮುಂದುವರೆಸಿದ್ದಾರೆ. ಒಬಿಸಿ ಮೀಸಲು  ಕಸಿದು ಮುಸ್ಲಿಮರಿಗೆ ನೀಡಿದ ಕರ್ನಾಟಕದ ಮಾದರಿಯನ್ನೇ ದೇಶವ್ಯಾಪಿ ವಿಸ್ತರಣೆ ಮಾಡಲು ಕಾಂಗ್ರೆಸ್ ಯೋಜಿಸಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. ಉತ್ತರ ಪ್ರದೇಶ ಆಗ್ರಾ ಮತ್ತು ಶಜಹಾನ್ಪುರದಲ್ಲಿ ಬಿಜೆಪಿ ಬಿಜೆಪಿ ರ್ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಧರ್ಮದ ಆಧಾರದಲ್ಲಿ ಮೀಸಲು ನೀಡುವುದಕ್ಕೆ ಸಂವಿಧಾನ ಅವಕಾಶ ನೀಡುವುದಿಲ್ಲ. 

ಆದರೆ ಸಂವಿಧಾನ ನಿರಾಕರಿಸಿದ್ದನ್ನೇ ಪ್ರತಿಪಾದಿಸುವ ಮೂಲಕ ಕಾಂಗ್ರೆಸ್ ಸಂವಿಧಾನಕ್ಕೆ ಅವಮಾನ ಮಾಡುತ್ತಿದೆ. ಕರ್ನಾಟಕದಲ್ಲಿ ಅದು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಮೀಸಲನ್ನು ಕಸಿದು ಮುಸ್ಲಿಂ ಸಮುದಾಯಕ್ಕೆ ನೀಡಲು ಮುಂದಾಗಿದೆ. ಕರ್ನಾಟಕದ ಈ ಮೀಸಲು ಮಾದರಿಯನ್ನು ದೇಶವ್ಯಾಪಿ ವಿಸ್ತರಿಸುವ ಯೋಜನೆ ಹೊಂದಿದೆ ಎಂದು ಆರೋಪಿಸಿದರು. 'ಕಾಂಗ್ರೆಸ್, ಕರ್ನಾಟಕ ಮತ್ತು ಆಂಧ್ರ ಪ್ರದೇಶದಲ್ಲಿ ತನ್ನ ಪ್ರಣಾಳಿಕೆಯಲ್ಲಿ ಪದೇ ಪದೇ ಧರ್ಮಾಧಾರಿತ ಮೀಸಲನ್ನು ಪ್ರತಿಪಾದಿಸಿದೆ. ಕಾಂಗ್ರೆಸ್ ಮುಂಬಾಗಿಲಲ್ಲಿ ಮಾಡಿದ ಪಿತೂರಿಯನ್ನು ನ್ಯಾಯಾಂಗ ತಿರಸ್ಕರಿಸಿದೆ. ಹೀಗಾಗಿ ಹಿಂಬಾಗಿಲಿನಿಂದ ಈ ರೀತಿಯ ಷಡ್ಯಂತ್ರ ಹೂಡಿದೆ. 

Tap to resize

Latest Videos

ಕರ್ನಾಟಕ Election 2024 Live: ದಕ್ಷಿಣದ 14 ಜಿಲ್ಲೆಗಳಿಗೆ ಇಂದು ಮತದಾನ

ಭಾಷಣಗಳಲ್ಲಿ ಒಬಿಸಿ ಬಗ್ಗೆ ಮಾತನಾಡುವ ಅವರು ಹಿಂಬಾಗಿಲಿನಿಂದ ಅವರ ಹಕ್ಕುಗಳನ್ನು ಕಸಿದು ತಮ್ಮವರಿಗೆ ನೀಡುತ್ತಾರೆ' ಎಂದು ಹರಿಹಾಯ್ದಿದ್ದಾರೆ. ಇದೇ ಸಂದರ್ಭದಲ್ಲಿ ಪಿತ್ರಾರ್ಜಿತ ಆಸ್ತಿ ವಿಚಾರದಲ್ಲಿಯೂ ಕೈ ಕುಟುಕಿರುವ ಮೋದಿ 'ಕಾಂಗ್ರೆಸ್ ಸಂಪತ್ತನ್ನು ಕಿತ್ತುಕೊಳ್ಳುವುದರ ಜೊತೆಗೆ ನಿಮ್ಮ ಪಿತ್ರಾರ್ಜಿತ ಆಸ್ತಿಯ ಬಗ್ಗೆಯೂ ಮಾತನಾಡುತ್ತಿದೆ. ನಿಮ್ಮ ತಾಯಿ ಮತ್ತು ಸಹೋದರಿಯರ ಉಳಿತಾಯದ ಮೇಲೆ ಕಾಂಗ್ರೆಸ್ ಕಣ್ಣು ಹಾಕಿದೆ. ಆದರೆ ನಾನು ನಿಮ್ಮ ಕಾವಲುಗಾರನಿಗೆ ನಿಂತು ನಿಮ್ಮ ಶಾಂತಿ ಮತ್ತು ಆಸ್ತಿಯನ್ನು ಕಾಯುತ್ತಾನೆ' ಎಂದು ಪ್ರಚಾರದ ವೇಳೆ ಜನರಿಗೆ ಪ್ರಧಾನಿ ಭರವಸೆ ನೀಡಿದರು.

click me!