
ರಸ್ತೆ ಬದಿ ಮೂತ್ರ ಮಾಡ್ತಿದ್ದ ವ್ಯಕ್ತಿಗೆ ಇಲ್ಲಿ ಮೂತ್ರ ಮಾಡ್ಬೇಡಿ ಎಂದಿದ್ದಕ್ಕೆ ಆತ ರಸ್ತೆ ಬದಿ ಮಲಗಿದ್ದವನೋರ್ವನಿಗೆ ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದ್ದು, ಭಯ ಹುಟ್ಟಿಸುತ್ತಿದೆ.
ವೀಡಿಯೋದಲ್ಲಿ ಕಾಣಿಸುವಂತೆ ಹೀಗೆ ಹಲ್ಲೆಗೊಳಗಾದ ವ್ಯಕ್ತಿ ರಸ್ತೆ ಬದಿ ಫುಟ್ಪಾತ್ ಮೇಲೆ ಮಲಗಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ಕೈಯಲ್ಲಿ ಕೋಲೊಂದನ್ನು ಹಿಡಿದುಕೊಂಡು ಬಂದ ಆರೋಪಿ ಅವರ ಬೆಡ್‌ಶಿಪ್‌ನ್ನು ಮುಖದಿಂದ ಎಳೆದು ತೆಗೆದು ಬಳಿಕ ರಾಕ್ಷಸನಂತೆ ಒಂದೇ ಸಮನೇ ಆತನಿಗೆ ಕೋಲಿನಿಂದ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆ ಆ ವ್ಯಕ್ತಿ ಮಲಗಿದಲ್ಲಿಂದ ಎದ್ದು ಕುಳಿತುಕೊಳ್ಳಲು ಪ್ರಯತ್ನಿಸಿ ಹಿಂದೆ ಹಿಂದೆ ಸರಿಯುತ್ತಾರೆ. ಆದರೂ ಬಿಡದೇ ರಾಕ್ಷಸನಂತೆ ವರ್ತಿಸಿದ್ದಾನೆ ಆ ಯುವಕ. ನವದೆಹಲಿಯ ಮಾಡೆಲ್ ಟೌನ್‌ನಲ್ಲಿ ಈ ಅವಾಂತರ ನಡೆದಿದೆ. ಆ ರಸ್ತೆ ಬದಿ ಮಲಗಿದ್ದ ವ್ಯಕ್ತಿ ಇಲ್ಲಿ ಮೂತ್ರ ಮಾಡಬೇಡಿ ಎಂದಿದ್ದಕ್ಕೆ ಸಿಟ್ಟಿಗೆದ್ದ ಯುವಕ ಹೀಗೆ ಅಮಾನುಷವಾಗಿ ಹಲ್ಲೆ ಮಾಡಿದ್ದಾನೆ.
ರಾಯಚೂರು: ಮಕ್ಕಳ ಕಳ್ಳಿಯೆಂದು ಮರಕ್ಕೆ ಕಟ್ಟಿಹಾಕಿ ಬಡಪಾಯಿ ಮಹಿಳೆಗೆ ಥಳಿಸಿದ ಪಾಪಿಗಳು!
ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ ಕಾಣಿಸುವಂತೆ ಬಿಳಿ ಶರ್ಟ್ ಕಪ್ಪು ಪ್ಯಾಂಟ್ ಧರಿಸಿದ್ದ ಯುವಕ ಕೈಯಲ್ಲೊಂದು ಕೋಲನ್ನು ಎತ್ತಿಕೊಂಡು ಬಂದು ಫುಟ್‌ಪಾತ್‌ನಲ್ಲಿ ಮಲಗಿದ್ದ ವ್ಯಕ್ತಿ ಆತನೇ ಎಂದು ಖಚಿತಪಡಿಸಿಕೊಂಡು ಹಿಗ್ಗಾಮುಗ್ಗಾ ಬಾರಿಸುತ್ತಿರುವುದು ಕಾಣಿಸುತ್ತಿದೆ. ಆತ ಪಕ್ಕಕ್ಕೆ ಸರಿದರು ಬಿಡದೇ ಯುವಕ ಥಳಿಸಿದ್ದು, ಈ ವೀಡಿಯೋ ನೋಡಿದವರ ಹೃದಯ ಚೂರ್ ಅನ್ನುವಂತೆ ಮಾಡುತ್ತಿದೆ. ಹಲ್ಲೆ ಮಾಡಿ ಹಿಂದೆ ಹೋದವ ಮಲಗಿದ್ದ ವ್ಯಕ್ತಿ ಎದ್ದು ನಿಲ್ಲುತ್ತಿದ್ದಂತೆ ಬಂದು ಮತ್ತೆ ಹಲ್ಲೆ ಮಾಡುತ್ತಾನೆ.
ಮೂವರ ಜೊತೆ ಬೈಕ್‌ನಲ್ಲಿ ಬಂದು ಯುವಕ ಈ ಕೃತ್ಯವೆಸಗಿದ್ದಾನೆ. ಆತನ ಜೊತೆ ಬಂದವರಿಬ್ಬರು ಬೈಕ್‌ನ್ನು ಸ್ಟಾಟರ್‌ನಲ್ಲಿರಿಸಿ ಕಾಯುತ್ತಿದ್ದರೆ ಈತ ಒಂದೇ ಸಮನೇ ಫೂಟ್‌ಪಾತ್‌ನಲ್ಲಿ ಮಲಗಿದ್ದವನ ಮೇಲೆ ಹಲ್ಲೆ ಮಾಡಿ, ನಂತರ ಬೈಕ್ ಏರಿ ತನ್ನ ಸ್ನೇಹಿತರ ಜೊತೆ ಹೊರಟು ಹೋಗಿದ್ದಾನೆ. ಪಬ್ಲಿಕ್ ಪಾರ್ಕ್ ಸಮೀಪವೇ ಈ ಘಟನೆ ನಡೆದಿದ್ದು, ಅಲ್ಲೇ ಜನ ಓಡಾಡುತ್ತಿದ್ದರು. ಯಾರೊಬ್ಬರು ಸಹಾಯಕ್ಕೆ ಧಾವಿಸಿ ಬಂದಿಲ್ಲ. ಆದರೆ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ದೆಹಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಅತ್ತೆಗೊಂದು ಕಾಲ ಮುಗೀತು, ಸೊಸೆ ಕಾಲ ಶುರುವಾಯ್ತು: ಅತ್ತೆಯ ಹಲ್ಲು ಮುರಿಯುವಂತೆ ಹೊಡೆದ ಕಿರಿ ಸೊಸೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ