ದೇಶಾದ್ಯಂತ ನವರಾತ್ರಿ ಹಬ್ಬದ ಆಚರಣೆ ಅಂಗವಾಗಿ ರಾಮಲೀಲಾ ಪ್ರದರ್ಶನವೂ ಪ್ರಮುಖ. ಹೀಗೆ ಶ್ರೀರಾಮನ ಪಾತ್ರ ಮಾಡುತ್ತಿದ್ದ ಪಾತ್ರಧಾರಿ ವೇದಿಕೆಯಲ್ಲಿ ಹೃದಯಾಘಾತವಾಗಿ ಮೃತಪಟ್ಟ ಘಟನೆ ನಡೆದಿದೆ.
ದೆಹಲಿ(ಅ.06) ದೇಶಾದ್ಯಂತ ದಸರಾ ಹಬ್ಬದ ಆಚರಣೆ ನಡೆಯುತ್ತಿದೆ. ದಸರಾ ಹಬ್ಬದ ಪ್ರಮುಖ ಆಕರ್ಷಣೆ ರಾಮಲೀಲಾ ಪ್ರದರ್ಶನ. ಹಲವು ಭಾಗದಲ್ಲಿ ರಾಮಲೀಲಾ ಪ್ರದರ್ಶನಗಳು ನಡೆಯುತ್ತಿದೆ. ಹೀಗೆ ರಾಮಲೀಲಾದಲ್ಲಿ ಶ್ರೀರಾಮನ ಪಾತ್ರ ಮಾಡುತ್ತಿದ್ದ ವ್ಯಕ್ತಿಗೆ ವೇದಿಕೆಯಲ್ಲಿ ಹೃದಯಾಘಾತವಾಗಿ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಶ್ರೀರಾಮನ ಪಾತ್ರಧಾರಿಯನ್ನು ಆಸ್ಪತ್ರೆ ದಾಖಲಿಸಿದರೂ ಪ್ರಯೋಜನವಾಗಲಿಲ್ಲ. ಈ ಘಟನೆ ದೆಹಲಿಯ ವಿಶ್ವಕರ್ಮ ನಗರದಲ್ಲಿ ನಡೆದಿದೆ.
45 ವರ್ಷದ ಸುಶೀಲ್ ಕೌಶಿಕ್ ವೃತ್ತಿಯಲ್ಲಿ ರಿಯಲ್ ಎಸ್ಟೇಟ್ ಸೇರಿದಂತೆ ಕೆಲ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ರಾಮಲೀಲಾ ಕಥಾನ ಪ್ರದರ್ಶನದಲ್ಲಿ ಶ್ರೀರಾಮನ ಪಾತ್ರ ನಿರ್ವಹಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಸುಶೀಲ್ ಕೌಶಿಕ್ ಶ್ರೀರಾಮನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರೆ. ಈ ಬಾರಿಯೂ ಅದೇ ಉತ್ಸಾಹದಲ್ಲಿ ಸುಶೀಲ್ ಕೌಶಿಕ್ ಶ್ರೀರಾಮನ ಪಾತ್ರ ನಿರ್ವಹಿಸಲು ತಯಾರಿ ಮಾಡಿಕೊಂಡಿದ್ದಾರೆ.
undefined
ಟೀ ಜೊತೆ ಸಿಗರೇಟು ಸೇದುವ ಅಭ್ಯಾಸ ನಿಮಗಿದೆಯಾ? ಈ ಸಮಸ್ಯೆ ಕಟ್ಟಿಟ್ಟ ಬುತ್ತಿ!
ಶನಿವಾರ(ಅ.05) ರಾತ್ರಿ ಶಹದರಾದಲ್ಲಿ ಬೃಹತ್ ವೇದಿಕೆಯಲ್ಲಿ ರಾಮಲೀಲಾ ಕಥಾನಕ ಪ್ರದರ್ಶನ ಆರಂಭಗೊಂಡಿತ್ತು. ರಾಮಾಯಣ ಕಥಾನಕವನ್ನು ಪ್ರದರ್ಶಿಸುತ್ತಿದ್ದ ತಂಡಕ್ಕೆ ಜನರಿಂದ ಅಪಾರ ಮೆಚ್ಚುಗೆಯ ಚಪ್ಪಾಳೆ ಬಿದ್ದಿತ್ತು. ಶ್ರೀರಾಮನ ಪಾತ್ರಧಾರಿ ಸುಶೀಲ್ ಕೌಶಿಕ್ ವೇದಿಕೆಯಲ್ಲಿ ಪಾತ್ರ ನಿರ್ವಹಿಸುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಅಸ್ವಸ್ಥರಾಗುತ್ತಿದ್ದಂತೆ ಸುಶೀಲ್ ಕೌಶಿಕ್ ತಕ್ಷಣವೇ ವೇದಿಕೆ ಹಿಂಭಾಗಕ್ಕೆ ತರಳಿದ್ದಾರೆ. ಅಷ್ಟರಲ್ಲೇ ಕುಸಿದು ಬಿದ್ದಿದ್ದಾರೆ.
ತಕ್ಷಣವೇ ಸುಶೀಲ್ ಕೌಶಿಕ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ತಪಾಸಣೆ ನಡೆಸಿದ ವೈದ್ಯರು ಸುಶೀಲ್ ಕೌಶಿಕ್ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ಖಚಿತಪಡಿಸಿದ್ದಾರೆ. ರಾಮಲೀಲಾ ಕಥಾನಕದಲ್ಲಿ ಶ್ರೀರಾಮನ ಪಾತ್ರಧಾರಿಯಾಗಿದ್ದ ಸುಶೀಲ್ ಕೌಶಿಕ್ ನಿಧನ ಸುದ್ದಿ ನೆರೆದಿದ್ದ ಶ್ರೀರಾಮ ಭಕ್ತರಿಗೆ ಆಘಾತ ತರಿಸಿದೆ.
Delhi anand vihar
Sushil Kaushik 45 years died while performing role of Shri Ram in Ramleela.
Jai Shri Ramleela Vishwakarma Nagar
Sushil Kaushik was a property dealer.
He became unconscious while performing in Ramleela & shifted to Kailash Deepak Hospital, Anand Vihar. pic.twitter.com/sl8SulXlYp
ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಶ್ರೀರಾಮ ಪಾತ್ರಧಾರಿ ದಿಢೀರ್ ಮೃತಪಟ್ಟ ಕಾರಣ, ರಾಮಲೀಲಾ ಕಥಾನಕ ಅರ್ಧಕ್ಕೆ ನಿಂತಿದೆ. ನರೆದಿದ್ದವರಲ್ಲಿ ಆತಂಕ ಮನೆ ಮಾಡಿತ್ತು. ಕೆಲವೇ ಹೊತ್ತಲ್ಲಿ ಶ್ರೀರಾಮ ಪಾತ್ರಧಾರಿ ಹೃದಯಾಘತದಿಂದ ಮೃತಪಟ್ಟಿದ್ದಾರೆ ಅನ್ನೋ ಮಾಹಿತಿ ನೀಡುತ್ತಿದ್ದಂತೆ ಹಲವರು ಕಣ್ಣೀರಾಗಿದ್ದಾರೆ. ಹಲವರು ಈ ವಿಡಿಯೋ ಹಂಚಿಕೊಂಡು ಸದ್ಗತಿ ಕೋರಿದ್ದಾರೆ. ಸುಶೀಲ್ ಕೌಶಿಕ್ ಕುಟುಂಬಸ್ಥರಿಗೆ ನೋವು ತಡೆದುಕೊಳ್ಳುವ ಶಕ್ತಿಯನ್ನು ಶ್ರೀರಾಮ ನೀಡಲಿ ಎಂದು ಹಲವರು ಕಂಬನಿ ಮಿಡಿದಿದ್ದಾರೆ. ಇದೇ ವೇಳೆ ಶ್ರೀರಾಮನ ಪಾತ್ರ ಮಾಡುತ್ತಾ, ಶ್ರೀರಾಮನ ಜಪ, ತಪದಲ್ಲಿ ಪ್ರಾಣ ಬಿಡುವ ಸೌಭಾಗ್ಯ ಸುಶೀಲ್ ಕೌಶಿಕ್‌ಗೆ ಸಿಕ್ಕಿದೆ ಎಂದೂ ಕಮೆಂಟ್ ಮಾಡಿದ್ದಾರೆ.
ದಂಪತಿಗಳು ಸಾವಿನಲ್ಲೂ ಒಂದಾದ ಅಪೂರ್ವ ಘಟನೆ: ಹೃದಯಾಘಾತದಿಂದ ಪತಿ, ಪತ್ನಿ ಇಬ್ಬರು ಸಾವು