ಹಿಂಸಾಚಾರಕ್ಕೆ ತಿರುಗಿದ ಹೋಳಿ: ಉತ್ತರಪ್ರದೇಶದಲ್ಲಿ 21 ಜನರ ಬಂಧನ

By Anusha KbFirst Published Mar 9, 2023, 10:50 AM IST
Highlights

ಉತ್ತರಪ್ರದೇಶದಲ್ಲಿ ಬಣ್ಣದ ಹಬ್ಬ ಹೋಳಿ ಆಚರಣೆ ಹಿಂಸಾಚಾರಕ್ಕೆ ತಿರುಗಿದ್ದು, ನಿಲೋನಿ ಶಹಪುರದಲ್ಲಿ ಘರ್ಷಣೆಗೆ ಸಂಬಂಧಿಸಿದಂತೆ  21 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಗ್ರೇಟರ್ ನೋಯ್ಡಾ: ಉತ್ತರಪ್ರದೇಶದಲ್ಲಿ ಬಣ್ಣದ ಹಬ್ಬ ಹೋಳಿ ಆಚರಣೆ ಹಿಂಸಾಚಾರಕ್ಕೆ ತಿರುಗಿದ್ದು, ನಿಲೋನಿ ಶಹಪುರದಲ್ಲಿ ಘರ್ಷಣೆಗೆ ಸಂಬಂಧಿಸಿದಂತೆ  21 ಜನರನ್ನು ಪೊಲೀಸರು ಬಂಧಿಸಿದ್ದಾರೆ. ನಿನ್ನೆ (ಮಾರ್ಚ್ 8 ) ರಂದು ದೇಶಾದ್ಯಂತ ಬಣ್ಣಗಳ ಹಬ್ಬವನ್ನು ಬಹಳ ಸಂಭ್ರಮದಿಂದ ಜನ ಆಚರಿಸಿದ್ದರು. ಇದೇ ವೇಳೆ  ಗ್ರೇಟರ್ ನೋಯ್ಡಾದಲ್ಲಿ ಹೋಳಿ ಆಚರಣೆಯು ಹಿಂಸಾಚಾರಕ್ಕೆ ತಿರುಗಿತು, ಸಣ್ಣ ಗಲಾಟೆ ವಿಕೋಪಕ್ಕೆ ತಿರುಗಿ ಎರಡು ಗುಂಪುಗಳ ನಡುವೆ ಘರ್ಷಣೆಗೆ ಕಾರಣವಾಯಿತು. ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು 21 ಜನರನ್ನು ಬಂಧಿಸಿದ್ದಾರೆ. 

ಹೋಳಿ ಆಚರಣೆ ವೇಳೆ  ತರುಣನೋರ್ವನಿಗೆ ಹೊಡೆದು ಗಾಯಗೊಳಿಸಿದ ಕಾರಣಕ್ಕೆ  21 ಜನರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ.  ಹಿಂದೂಗಳು ಆಚರಿಸುವ ಹೋಳಿ ಹಾಗೂ ಮುಸ್ಲಿಮರು ಆಚರಿಸುವ ಶಬ್-ಎ-ಬರಾತ್ ಎಂಬ ಹಬ್ಬ ಎರಡೂ ಒಂದೇ ದಿನ ಬಂದಿದ್ದರಿಂದ ಪೊಲೀಸರು ಎಲ್ಲೆಡೆ ತೀವ್ರವಾಗಿ ಭದ್ರತೆಯನ್ನು ಹೆಚ್ಚಿಸಿದ್ದರು. ಹೀಗಿದ್ದು, ಕೂಡ  ಈ ಹಿಂಸಾಚಾರ ನಡೆದಿದೆ. 

Holi 2023: ಈ ದಿನ ಶನಿ ಸೇರಿ ಈ ಗ್ರಹಗಳ ಸಂಚಾರ 4 ರಾಶಿಗಳಿಗೆ ತರಲಿದೆ ಕುತ್ತು, ಇಲ್ಲಿದೆ ಪರಿಹಾರ

ಎರಡು ಸಮುದಾಯಗಳ ನಡುವೆ ಯಾವುದೇ  ಕೋಮು ಘರ್ಷಣೆ ನಡೆಯದಿರುವಂತೆ ತಡೆಯಲು ಗ್ರೇಟರ್ ನೋಯ್ಡಾ, ಗೌತಮ್ ಬುದ್ಧ ನಗರ ಮತ್ತು ದೆಹಲಿಯಲ್ಲಿ ವಿವಿಧ ಸ್ಥಳಗಳಲ್ಲಿ ಭಾರಿ ಭದ್ರತೆ ಏರ್ಪಡಿಸಲಾಗಿತ್ತು. ಈ ಘರ್ಷಣೆಗೆ ಸಂಬಂಧಿಸಿದಂತೆ ಗ್ರೇಟರ್ ನೋಯ್ಡಾದ ಪೊಲೀಸ್ ವಕ್ತಾರ ಮಾತನಾಡಿ , ಒಂದು ಗುಂಪು  ಮತ್ತೊಂದು ಗುಂಪಿನ ವಿರುದ್ಧ ಅವಾಚ್ಯವಾಗಿ ನಿಂದಿಸಿದ ನಂತರ ಈ ಘರ್ಷಣೆ ಶುರುವಾಗಿದೆ. ಇದು ನಂತರ ಹಿಂಸಾಚಾರಕ್ಕೆ ತಿರುಗಿದ ಪರಿಣಾಮ ಅನೇಕರು ಗಾಯಗೊಂಡರು ಎಂದು ಹೇಳಿದರು.

ಘಟನೆಗೆ ಸಂಬಂಧಿಸಿದಂತ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐ ಜೊತೆ ಮಾತನಾಡಿ,  ಸ್ಥಳೀಯರು ಪಾನಮತ್ತರಾಗಿದ್ದು (consumed liquor), ಗುಂಪೊಂದು ಅವಾಚ್ಯ ಪದಗಳಿಂದ ನಿಂದಿಸಲು ಶುರು ಮಾಡಿದಾಗ ಘರ್ಷಣೆ ಆರಂಭವಾಯಿತು. ಗಲಾಟೆ ಮಾಡಿದ ಎರಡೂ ಗುಂಪು ಕೂಡ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು, 21 ಜನರನ್ನು ಬಂಧಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ಕಾನೂನು ವ್ಯವಸ್ಥೆ ನಿಯಂತ್ರಣದಲ್ಲಿದೆ ಎಂದು ಹೇಳಿದರು.

ಬರ್ಸಾನಾದಲ್ಲಿ ಸಂಭ್ರಮದ ಲಾತ್ಮಾರ್ ಹೋಳಿ… ರಾಧಾ- ಕೃಷ್ಣರನ್ನು ನೆನಪಿಸುವ ಹಬ್ಬವಿದು

ಘಟನೆಯಲ್ಲಿ ಹೋಳಿ ಆಡುತ್ತಿದ್ದ 17 ವರ್ಷದ ಬಾಲಕನ ಮೇಲೆ ಹರಿತವಾದ ಆಯುಧದಿಂದ ಹಲ್ಲೆ ಮಾಡಿ ಗಾಯಗೊಳಿಸಲಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ಕೈ ಕಾಲುಗಳಿಗೆ ಗಾಯಗಳಾಗಿವೆ. ಈ ಬಗ್ಗೆ ಎಫ್‌ಐಆರ್ ದಾಖಲಾಗಿದೆ ಎಂದರು. ಹಬ್ಬದ ಕಾರಣಕ್ಕೆ ನೋಯ್ಡಾದಲ್ಲಿ ಮಾರ್ಚ್‌ 31ರವರೆಗೆ 144 ಸೆಕ್ಷನ್‌ (Section 144) ಜಾರಿಗೊಳಿಸಲಾಗಿದೆ ಎಂದು ಉತ್ತರ ಪ್ರದೇಶ (Uttar Pradesh) ಸರ್ಕಾರ ಘೋಷಿಸಿದೆ. ಹೀಗಾಗಿ ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. 
 

click me!