
ಉತ್ತರ ಪ್ರದೇಶ (ಮಾ.8): ಉತ್ತರಪ್ರದೇಶದ ಭದೋಹಿಯಲ್ಲಿ ಮೊಬೈಲ್ ಶೋ ರೂಂ ಅಂಗಡಿಯತ್ತ ಜನರನ್ನು ಸೆಳೆಯೋದಕ್ಕೆ ಹೊಸ ಪ್ಲಾನ್ ಮಾಡಿ ಅಂಗಡಿ ಮಾಲೀಕನೇ ಬಂಧನವಾಗಿರುವ ಘಟನೆ ನಡೆದಿದೆ. ಸಾರ್ವಜನಿಕವಾಗಿ ಶಾಂತಿ ಕದಡುವ ಆರೋಪದಡಿ ಅಂಗಡಿ ಮಾಲೀಕನನ್ನು ಬಂಧಿಸಲಾಗಿದೆ. ಮಾತ್ರವಲ್ಲ ಅಂಗಡಿಯನ್ನು ಸೀಲ್ ಮಾಡಿ ಬೀಗ ಜಡಿಯಲಾಗಿದೆ. ಮಾರ್ಚ್ 3ರಿಂದ 7ರವರೆಗೆ ಸ್ಯಾರ್ಟ್‌ಫೋನ್ ಖರೀದಿ ಮಾಡಿದವರಿಗೆ ಎರಡು ಬಿಯರ್ ಬಾಟಲ್ ಉಚಿತವಾಗಿ ನೀಡಲಾಗುತ್ತದೆ ಎಂದು ಜಾಹೀರಾತು ನೀಡಿದ ಇದರ ಬೆನ್ನಲ್ಲೆ ಮೊಬೈಲ್ ಶೋ ರೂಂ ಎದುರು ಜನರು ಮುಗಿಬಿದ್ದಿದ್ದಾರೆ.
ಮಗ ಪರೀಕ್ಷೆಯಲ್ಲಿ ಪಾಸಾಗಲೆಂದು ಚೀಟಿ ಕೊಡಲು ಹೋದ ಅಪ್ಪ ಪೋಲಿಸರ ಕೈಗೆ ಸಿಕ್ಕಿ ಹಣ್ಣಾದ!
ಭದೋಹಿಯ ಚೌರಿ ರಸ್ತೆ ಸಮೀಪ ಮೊಬೈಲ್ ಅಂಗಡಿ ನಡೆಸುತ್ತಿರುವ ರಾಜೇಶ್ ಮೌರ್ಯ ಎಂಬ ಮೊಬೈಲ್ ಶೋರೂಂನ ಮಾಲೀಕ ಈ ಆಫರ್ ನೀಡಿದ್ದು, ಈಗ ಪೊಲೀಸರ ಅಥಿತಿಯಾಗಿದ್ದಾನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕೋಟ್ವಾಲಿ ಪೊಲೀಸ್ ಠಾಣಾಧಿಕಾರಿ ಅಜಯ್ ಕುಮಾರ್ ಸೇಠ್ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಹೋಳಿ ಸಂಭ್ರಮಕ್ಕೆ 26 ಲಕ್ಷ ಬಾಟಲ್ ಮದ್ಯ ಮೋರಿದ ಡೆಲ್ಲಿ ಪೀಪಲ್ಸ್, ಹಿಂದಿನೆಲ್ಲಾ ದಾಖಲೆ ಉಡೀಸ್!
ಘಟನೆ ಬಗ್ಗೆ ಠಾಣಾಧಿಕಾರಿ ಅಜಯ್ ಕುಮಾರ್ ಸೇಠ್ ಮಾಧ್ಯಮಗಳೊಂದಿಗೆ ಮಾತನಾಡಿ, ಶೋರೂಂನಲ್ಲಿ ಮಾರ್ಚ್ 3ರಿಂದ 7ರವರೆಗೆ ಸ್ಮಾರ್ಟ್ ಫೋನ್ ಖರೀದಿಸುವವರಿಗೆ ಎರಡು ಕ್ಯಾನ್ ಬಿಯರ್ ಉಚಿತವಾಗಿ ನೀಡುವುದಾಗಿ ಪೋಸ್ಟರ್, ಕರಪತ್ರ ಹಂಚಿದ್ದಾನೆ. ಆ ಕಾರಣಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಜನಸಂದಣಿ ಆಗಿದೆ. ಹೀಗಾಗಿ ಮೊಬೈಲ್ ಅಂಗಡಿ ಎದುರು ನೆರೆದಿದ್ದ ಜನರ ಗುಂಪುನ್ನು ಲಾಠಿಚಾರ್ಜ್ ಮಾಡಬೇಕಾಯಿತು ಎಂದಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 151 (ಸಾರ್ವಜನಿಕ ಶಾಂತಿಗೆ ಭಂಗ ತರುವ) ಅಡಿಯಲ್ಲಿ ರಾಜೇಶ್ ಮೌರ್ಯನನ್ನು ಬಂಧಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ