
ಜೀವನದಲ್ಲಿ ಯಶಸ್ವಿಯಾಗಬೇಕು ಎಂದರೆ ಗುರಿಯ ಜೊತೆಗೂ ಸರಿಯಾದ ಗುರುವೂ ಇರಬೇಕು. ಆದರೆ ಮಕ್ಕಳನ್ನು ತಿದ್ದಬೇಕಾದ ಗುರುವಿಗೆ ಅಕ್ಷರ ಮರೆತರೆ ಹೇಗೆ? ಅಂತಹ ಘಟನೆಯೊಂದು ಹಿಮಾಚಲ ಪ್ರದೇಶದಲ್ಲಿ ನಡೆದಿದೆ. ಇತ್ತೀಚೆಗೆ ಶಾಲಾ ಶಿಕ್ಷಕರೊಬ್ಬರು ಕನಿಷ್ಟ ಮೂಲಭೂತ ಅಕ್ಷರ ಜ್ಞಾನವಿಲ್ಲದ, ಸರಿಯಾಗಿ ಬರೆಯಲು ಬರಾದ ಓದಲು ಬಾರದೇ ಅಸಹಾಯಕನಾಗಿ ನಿಂತಿರುವ ಹಾಗೂ ಮಕ್ಕಳಿಗೆ ತಪ್ಪು ತಪ್ಪು ಹೇಳಿಕೊಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಶಿಕ್ಷಣ ವ್ಯವಸ್ಥೆಯ ಬಗ್ಗೆ ಭಾರೀ ಆಕ್ರೋಶ ಉಂಟಾಗುವಂತೆ ಮಾಡಿತ್ತು. ಆ ಘಟನೆ ಮಾಸುವ ಮೊದಲೇ ಈಗ ಹಿಮಾಚಲ ಪ್ರದೇಶದ ಶಾಲೆಯೊಂದರ ಶಿಕ್ಷರೊಬ್ಬರು ಚೆಕ್‌ನಲ್ಲಿ ತಪ್ಪು ತಪ್ಪಾಗಿ ಅಕ್ಷರಗಳನ್ನು ಬರೆದು ಸುದ್ದಿಯಾಗಿದ್ದಾರೆ.
ಹಿಮಾಚಲ ಪ್ರದೇಶದ ರೋನ್ಹತ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರು ಚೆಕ್‌ನಲ್ಲಿ ಮೊತ್ತವನ್ನು ಸರಿಯಾಗಿ ಪದಗಳಲ್ಲಿ ಬರೆಯಲು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸೆಪ್ಟೆಂಬರ 25ರ ದಿನಾಂಕ ಇರುವ ಚೆಕ್ ಇದಾಗಿದ್ದು, ಇದನ್ನು ಮಧ್ಯಾಹ್ನದ ಬಿಸಿಯೂಟ ಕೆಲಸ ಮಾಡುವ ವ್ಯಕ್ತಿಗೆ ನೀಡಬೇಕಾಗಿದ್ದ ಚೆಕ್ ಇದಾಗಿತ್ತು. ಆದರೆ ಒಂದು ಸನ್ಣ ಚೆಕ್‌ನ್‌ನಲ್ಲಿ ಶಾಲೆಯ ಮುಖ್ಯ ಶಿಕ್ಷಕರೆನಿಸಿದವರು ಹಲವು ತಪ್ಪುಗಳನ್ನು ಮಾಡಿದ್ದರು. 7,616 ರೂಪಾಯಿಗಳ ಚೆಕ್ ಇದಾಗಿದ್ದು, ಚೆಕ್‌ನಲ್ಲಿ ಅತ್ತರ್ ಸಿಂಗ್ ಅಂತ ಹೆಸರಿದೆ. ಆದರೆ ಆ ಸಂಖ್ಯೆಯನ್ನು ಅಕ್ಷರಗಳಲ್ಲಿ ಬರೆಯಲು ಅವರು ವಿಫಲರಾಗಿದ್ದಾರೆ. 7ನ್ನು ಇಂಗ್ಲೀಷ್ ಅಕ್ಷರದಲ್ಲಿ ಬರೆಯಲು ಸೆವೆನ್(seven) ಬದಲು ಸವೆನ್(saven) ಎಂದು ಬರೆದಿದ್ದಾರೆ. ಹಾಗೆಯೇ ಸಾವಿರವನ್ನು ಇಂಗ್ಲೀಷ್‌ನಲ್ಲಿ ಥೌಝಂಡ್ ಬದಲು ಅವರು ಥರ್ಸ್‌ಡೇ ಎಂದು ಬರೆದಿದ್ದಾರೆ. ಹಾಗೆಯೇ ಹಂಡ್ರಂಡ್ ಅಂದರೆ 100 ಬರೆಯುವ ಬದಲು ಇಂಗ್ಲೀಷ್‌ನಲ್ಲಿ ಹರೇಂದ್ರ ಎಂದು ಬರೆದಿದ್ದಾರೆ. ಅಲ್ಲದೇ ಕೊನೆಯಲ್ಲಿ ಸಿಕ್ಸ್ಟೀನ್ ಎಂದು ಬರೆಯುವ ಬದಲು ಸಿಕ್ಸ್ಟಿ ಎಂದು ಬರೆದಿದ್ದಾರೆ.
ಚೆಕ್‌ನಲ್ಲಿ ಇಷ್ಟೊಂದು ತಪ್ಪುಗಳು ಕಂಡುಬಂದ ಹಿನ್ನೆಲೆ ಈ ಚೆಕ್ ಅನ್ನು ಬ್ಯಾಂಕ್‌ನವರು ತಿರಸ್ಕರಿಸಿದರು ಎಂದು ವರದಿಯಾಗಿದೆ. ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರೇ ಈ ಚೆಕ್ ಬರೆದಿದ್ದಾರೆಯೇ ಅಥವಾ ಬೇರೆಯವರು ಬರೆದಿದ್ದಾರೆ ಎಂಬ ಬಗ್ಗೆ ಅನುಮಾನ ಮೂಡಿದೆ. ಒಂದು ವೇಳೆ ಅವರು ಬರೆಯದೇ ಹೋದರೂ ಸಹಿ ಮಾಡುವ ಮೊದಲು ಕಾಗುಣಿತವನ್ನು ಪರಿಶೀಲಿಸಲು ಅವರು ವಿಫಲರಾದ ಬಗ್ಗೆ ಜನ ಬೇಸರ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಸ್ಥಿತಿ ಹೀಗಿದೆ, ಅದಕ್ಕಾಗಿಯೇ ಯಾರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಬಯಸುವುದಿಲ್ಲ. ಸರ್ಕಾರಿ ಶಾಲೆಗಳಲ್ಲಿ ಓದಿದ ನಮ್ಮಂತಹ ಜನರು ತುಂಬಾ ದುಃಖಿತರಾಗುತ್ತಾರೆ. ಸರಿಯಾಗಿದ್ದ ವ್ಯವಸ್ಥೆಗಳು ಎಲ್ಲೆಡೆ ಬದಲಾಗುತ್ತಿವೆ ಎಂದು ಒಬ್ಬ ಬಳಕೆದಾರರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇನ್ನು ಕೆಲವರು ಇದಕ್ಕೆ ಮೀಸಲಾತಿ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಓರ್ವ ವ್ಯಕ್ತಿಯ ತಪ್ಪಲ್ಲ, ಇದು ವಿಫಲವಾದ ಶಿಕ್ಷಣ ವ್ಯವಸ್ಥೆಯ ಪ್ರತಿಬಿಂಬ ಎಂದು ಇನ್ನೂ ಕೆಲವರು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಇನ್ಸ್ಟಾಗ್ರಾಮ್ ಪೋಸ್ಟ್ ವಿಚಾರಕ್ಕೆ 20ರ ಹರೆಯದ ಭಜರಂಗದಳ ಕಾರ್ಯಕರ್ತನ ಗುಂಡಿಕ್ಕಿ ಹತ್ಯೆ
ಇದನ್ನೂ ಓದಿ: ಪೊಲೀಸರಲ್ಲ ಪಾಪಿಗಳು, ಹಣ್ಣು ಮಾರುತ್ತಿದ್ದ 25ರ ಯುವತಿ ಮೇಲೆ ಅತ್ಯಾಚಾರವೆಸಗಿದ ಇಬ್ಬರು ಪೊಲೀಸರು
ಇದನ್ನೂ ಓದಿ: 35ರ ಯುವತಿ ಮದ್ವೆಯಾಗಿ ಮರುದಿನವೇ 75ರ ವೃದ್ಧ ಸಾವು: ಸಾವಿನ ಬಗ್ಗೆ ಕುಟುಂಬಸ್ಥರ ಅನುಮಾನ
ಇದನ್ನೂ ಓದಿ: ನಿಮ್ಮಿಂದಾಗಿ ನಾನು ನನ್ನ ಗಂಡ ಜೊತೆಗಿದ್ದೇವೆ: ಮೇಕಪ್ ಆರ್ಟಿಸ್ಟ್ ಮಾತಿಗೆ ಶಾಕ್ ಆದ ಐಶ್ ರೈ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ