
ಕೇರಳ ಮೂಲದ ಎಂ. ಪಿ. ಅಹಮ್ಮದ್ ಎನ್ನುವವರು 1993ರಲ್ಲಿ ಸ್ಥಾಪಿಸಿರುವ ಸುಪ್ರಸಿದ್ಧ ಮಲಬಾರ್ ಗೋಲ್ಡ್ & ಡೈಮಂಡ್ಸ್ ಭಾರಿ ವಿವಾದ ಸೃಷ್ಟಿಸಿದೆ. 13 ದೇಶಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಬಹುರಾಷ್ಟ್ರೀಯ ಕಂಪೆನಿಯಾಗಿರುವ ಮಲಬಾರ್ ಗೋಲ್ಡ್ & ಡೈಮಂಡ್ಸ್ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಬೈಕಾಟ್ ಟ್ರೆಂಡ್ ಶುರುವಾಗಿದ್ದು, ಸದ್ಯ ಕೋರ್ಟ್ ಆದೇಶದಿಂದ ತಾತ್ಕಾಲಿಕವಾಗಿ ಈ ವಿಷಯ ತಣ್ಣಗಾಗಿದೆ. ಭಾರತದ ವಿರುದ್ಧ ಮಾತನಾಡಿದ್ದ ಪಾಕಿಸ್ತಾನದ ಮಾಡೆಲ್ ಒಬ್ಬರನ್ನು ಚಿನ್ನದ ಪ್ರಚಾರಕ್ಕಾಗಿ ರಾಯಭಾರಿಯನ್ನಾಗಿ ನೇಮಿಸಲಾಗಿದೆ ಎನ್ನುವುದು ಭಾರಿ ಕೋಲಾಹಲ ಸೃಷ್ಟಿಸಿದೆ. ಆಪರೇಷನ್ ಸಿಂದೂರ್ ಸಮಯದಲ್ಲಿ ಇದನ್ನು ಬಲವಾಗಿ ಖಂಡಿಸಿ ಪಾಕಿಸ್ತಾನದ ಪರವಾಗಿ ಜೈ ಎಂದಿದ್ದ ಪಾಕಿಸ್ತಾನದ ಮಾಡೆಲ್ ಇನ್‌ಸ್ಟಾಗ್ರಾಮ್ ಪ್ರಭಾವಿ ಅಲಿಶ್ಬಾ ಖಾಲಿದ್ ಅವರನ್ನು ನೇಮಕ ಮಾಡಿರುವುದೇ ಇಷ್ಟೆಲ್ಲಾ ಗಲಾಟೆಗೆ ಕಾರಣವಾಗಿದೆ.
ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ (Kareena Kapoor Khan) ಕೂಡ ಇದರ ರಾಯಭಾರಿ ಎನ್ನುವುದು ವಿಶೇಷ. ಅಷ್ಟಕ್ಕೂ ಆಗಿದ್ದೇನೆಂದರೆ, ಪಾಕಿಸ್ತಾನದ ಮಾಡೆಲ್ ಅನ್ನು ಭಾರತದಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುವ ಮೂಲಕ ವಿರೋಧ ವ್ಯಕ್ತಪಡಿಸಿದ್ದರು. ಮಲಬಾರ್ ಗೋಲ್ಡ್ನಿಂದ ಚಿನ್ನವನ್ನು ಖರೀದಿಸದಂತೆ ತಾಕೀತು ಮಾಡಿದ್ದರು. ಕೊನೆಗೆ ಇದರ ವಿರುದ್ಧ ಮಲಬಾರ್ ಗೋಲ್ಡ್ & ಡೈಮಂಡ್ಸ್ ಬಾಂಬೆ ಹೈಕೋರ್ಟ್ ಮೊರೆ ಹೋಗಿತ್ತು.
ಕೋರ್ಟ್ನಲ್ಲಿ ಕಂಪೆನಿ ವಾದಿಸಿದ್ದು ಏನೆಂದರೆ, ಪೆಹಲ್ಗಾಮ್ ದಾಳಿ, ಆಪರೇಷನ್ ಸಿಂದೂರ್ಗೂ ಮೊದಲೇ ಈಕೆಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಈಕೆಯ ಹಿನ್ನೆಲೆ ಏನು ಎಂದು ತಿಳಿದಿರಲಿಲ್ಲ. ಇದರಲ್ಲಿ ನಮ್ಮದೇನೂ ತಪ್ಪಿಲ್ಲ. ಹಿಂದೂಗಳ ಹಬ್ಬದ ಸಮಯದಲ್ಲಿ, ತಮ್ಮ ಕಂಪೆನಿಗೆ ಕೆಟ್ಟ ಹೆಸರು ಬರಬೇಕೆನ್ನುವ ಕಾರಣದಿಂದ ಮತ್ತು ಇಲ್ಲಿ ಚಿನ್ನ-ವಜ್ರಾಭರಣ ಖರೀದಿ ಮಾಡಬಾರದು ಎನ್ನುವ ಕಾರಣದಿಂದ ಉದ್ದೇಶಪೂರ್ವಕವಾಗಿ ನಮ್ಮ ಹೆಸರನ್ನು ಕೆಲವರು ಹಾಳು ಮಾಡುತ್ತಿದ್ದಾರೆ. ಆದ್ದರಿಂದ ಇಂಥ ಹೇಳಿಕೆಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡದಂತೆ ತಡೆಯಬೇಕು ಎಂದು ಕೋರಿಕೊಂಡಿದ್ದರು. ತಾತ್ಕಾಲಿಕವಾಗಿ ಈ ಕಂಪೆನಿಗೆ ಬಾಂಬೆ ಹೈಕೋರ್ಟ್ ರಿಲೀಫ್ ಕೊಟ್ಟಿದೆ. ಸದ್ಯದ ಮಟ್ಟಿಗೆ ಕಂಪೆನಿಗೆ ಕೆಟ್ಟ ಹೆಸರು ಬರದಂತೆ ನೋಡಿಕೊಳ್ಳುವ ಪೋಸ್ಟ್ ಹಾಕಬಾರದು ಎಂದು ಕೋರ್ಟ್ ಹೇಳಿದ್ದು, ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿದೆ. ಅಂತಿಮವಾಗಿ ಕೋರ್ಟ್ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆಯೋ ನೋಡಬೇಕಿದೆ.
ಸದ್ಯ ಲಂಡನ್ನಲ್ಲಿ ವಾಸವಿರುವ ಅಲಿಶಾ/ಅಲಿಶ್ಬಾ ಪಾಕಿಸ್ತಾನಿ ಇನ್‌ಸ್ಟಾಗ್ರಾಮ್ ಪ್ರಭಾವಿ ವ್ಯಕ್ತಿ. ಅವರು ವಿವಿಧ ಬ್ರ್ಯಾಂಡ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮೇ 2025 ರಲ್ಲಿ ಆಪರೇಷನ್ ಸಿಂದೂರ್ ಬಗ್ಗೆ ಅವರ ಪೋಸ್ಟ್‌ಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಆ ಪೋಸ್ಟ್‌ಗಳಲ್ಲಿ ಒಂದರಲ್ಲಿ, ಅವರು ಭಾರತದ ಈ ಕಾರ್ಯಾಚರಣೆ "ಹೇಡಿತನ" ಎಂದು ಹೇಳಿದ್ದರು. ಮತ್ತು ತನ್ನ ಭಾರತೀಯ ಅನುಯಾಯಿಗಳ ಬಗ್ಗೆ ತನಗೆ ಯಾವುದೇ ಗೌರವವಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ವೈರಲ್ ಆಗುತ್ತಿದೆ. ಆದರೆ ಮಲಬಾರ್ ಗೋಲ್ಡ್ ಜೊತೆ ಈ ವಿಷಯವನ್ನು ಲಿಂಕ್ ಮಾಡ್ತಿರೋದು ಸರಿಯಲ್ಲ ಎಂದು ಕಂಪೆನಿ ವಾದಿಸಿತ್ತು ಹಾಗೂ ತಮಗೆ ಈ ಬಗ್ಗೆ ಅರಿವಿಲ್ಲ ಎಂದು ಹೇಳಿದ್ದರಿಂದ ತಾತ್ಕಾಲಿಕವಾಗಿ ಕೋರ್ಟ್ ತಡೆ ನೀಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ