
ಗುರುಗ್ರಾಂ (ಅ.07) ನಿಮಗೆ ವ್ಯಾಟ್ಸಾಪ್ ಮೂಲಕ ಮದುವೆ ಆಮಂತ್ರಣ ಪತ್ರಿಕೆ ಬಂದಿದೆಯಾ? ಅಪರಿಚಿತ ನಂಬರ್‌ನಿಂದ ಹಾಯ್, ನನ್ನ ಮದುವೆ ಆಮಂತ್ರಣ ಪತ್ರಿಕೆ ಇಲ್ಲಿದೆ, ಕುಟುಂಬ ಸಮೇತ ನೀವು ಮದುವೆಗೆ ಆಗಮಿಸಿ ಹರಸಬೇಕು ಅನ್ನೋ ಸಂದೇಶ, ಜೊತೆಗೆ ಆಮಂತ್ರಣ ಪತ್ರಿಕೆ ನಿಮ್ಮ ವ್ಯಾಟ್ಸಾಪ್ ಖಾತೆಗೆ ಕಳುಹಿಸಿ ಮೋಸ ಮಾಡುವ ಜಾಲ ಸಕ್ರಿಯವಾಗಿದೆ. ಹೀಗೆ ಗುರುಗ್ರಾಂನ ವಿಷ್ಣುಗಾರ್ಡನ್ ನಿವಾಸಿ ವಿನೋದ್ ಕುಮಾರ್ ವ್ಯಾಟ್ಸಾಪ್ ಮೂಲಕ ಬಂದ ಮದುವೆ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡಲು ಹೋಗಿ ಬರೋಬ್ಬರಿ 97,000 ರೂಪಾಯಿ ಕಳೆದುಕೊಂಡು ಘಟನೆ ನಡೆದಿದೆ.
ಅಪರಿಚಿತ ನಂಬರ್‌ನಿಂದ ಮದುವೆಗೆ ಬರಬೇಕು ಎಂದು ಆಮಂತ್ರಣ ಪತ್ರಿಕೆ ಕಳುಹಿಸಿದರೆ ಕ್ಲಿಕ್ ಮಾಡಿ ಮೋಸಹೋಗಬೇಡಿ. ಕಾರಣ ಇದು ಸೈಬರ್ ಫ್ರಾಡ್ಸ್ ಕಳುಹಿಸುವ ಸಂದೇಶವಾಗಿರುವ ಸಾಧ್ಯತೆ ಇದೆ. ಯಾರ ಮದುವೆ, ಎಲ್ಲಿ ಎಂದು ತಿಳಿದುಕೊಳ್ಳುವ, ಸಾಧ್ಯವಾದರೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಉತ್ಸಾಹ ತೋರಿ ಮೋಸ ಹೋಗಬೇಡಿ. ಈ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡಿದರೆ ನಿಮ್ಮ ಪೋನ್ ಟ್ರಾಪ್ ಮಾಡಿ ಬ್ಯಾಂಕ್ ಖಾತೆ ಮಾಹಿತಿಗಳನ್ನು ಪಡೆದು ಖಾತೆಯ ಹಣ ಖಾಲಿ ಮಾಡುತ್ತಾರೆ.
ವಿನೋದ್ ಕುಮಾರ್ ಅಕ್ಟೋಬರ್ 4ರಂದು ಇದೇ ರೀತಿ ಅಪರಿಚಿತ ನಂಬರ್‌ನಿಂದ ಮದುವೆ ಆಮಂತ್ರಣ ಬಂದಿದೆ. ತನ್ನ ಗೊತ್ತಿರುವ ಆಪ್ತರು, ಶಾಲಾ ಗೆಳೆಯರು ಅಥವಾ ಹಿಂದಿನ ಕಚೇರಿಗಳ ಸಹೋದ್ಯೋಗಿಗಳು ಆಗಿರಬಹುದು ಎಂದು ವಿನೋದ್ ಕುಮಾರ್ ಕುತೂಹಲದಿಂದ ಆಮಂತ್ರಣ ಪತ್ರಿಕೆ ಡೌನ್ಲೋಡ್ ಮಾಡಿಕೊಂಡಿದ್ದಾರೆ. ಆದರೆ ಈ ಡೌನ್ಲೋಡ್ ಆಮಂತ್ರಣ ಪತ್ರಿಕೆ ಓಪನ್ ಆಗಲೇ ಇಲ್ಲ. ಹಲವು ಬಾರಿ ಪ್ರಯತ್ನಿಸಿದರೂ ಫೈಲ್ ಓಪನ್ ಆಗಲಿಲ್ಲ. ಕೆಲ ಹೊತ್ತು ಪ್ರಯತ್ನಿಸಿದ ವಿನೋದ್ ಕುಮಾರ್ ಬಳಿಕ ಪ್ರಯತ್ನ ನಲ್ಲಿಸಿದ್ದ. ಅಪರಿಚಿತ ವ್ಯಕ್ತಿಗೆ ಸಂದೇಶ ಕಳುಹಿಸಲು ಮುಂದಾಗಿದ್ದ, ಆಮಂತ್ರಣ ಪತ್ರಿಕೆ ಓಪನ್ ಆಗುತ್ತಿಲ್ಲ. ಇಮೇಜ್ ಕಳುಹಿಸುವಂತೆ ಮೆಸೇಜ್ ಕಳುಹಿಸಲು ಮುಂದಾಗಿದ್ದ. ಕೆಲವೇ ಹೊತ್ತಲ್ಲಿ ವಿನೋದ್ ಕುಮಾರ್‌ಗೆ ಟೆಕ್ಸ್ಟ್ ಸಂದೇಶ ಬಂದಿದೆ. ಖಾತೆಯಿಂದ 97,000 ರೂಪಾಯಿ ಕಡಿತಗೊಂಡಿರುವ ಸಂದೇಶ ಬಂದಿದೆ.
ಖಾತೆಯಿಂದ ಹಣ ಕಡಿತಗೊಂಡ ಬೆನ್ನಲ್ಲೇ ತಾನು ಮೋಸಹೋಗಿರುವುದು ಅರಿವಾಗಿದೆ. ಹೀಗಾಗಿ ವಿನೋದ್ ಕುಮಾರ್, ಗುರುಗ್ರಾಂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಇತ್ತ ಪೊಲೀಸರು ಸಂಪೂರ್ಣ ಮಾಹಿತಿ ಪಡೆದುಕೊಂಡು ತನಿಖೆ ಆರಂಭಿಸಿದ್ದಾರೆ. ಇದೇ ವೇಳೆ ವ್ಯಾಟ್ಸಾಪ್ ಬಳಕೆದಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಪರಿಚಿತ ವ್ಯಕ್ತಿಗಳಿಂದ, ಅಪರಿಚಿತ ನಂಬರ್‌ನಿಂದ ಬರವು ಸಂದೇಶಗಳಿಗೆ ಪ್ರತಿಕ್ರಿಯೆ ನೀಡಲು ಹೋಗಬೇಡಿ, ಕಳುಹಿಸುವ ಫೈಲ್ ಡೌನ್ಲೋಡ್ ಮಾಡಬೇಡಿ. ಇದರಿಂದ ಅಪಾಯ ಹೆಚ್ಚು ಎಂದು ಎಚ್ಚರಿಸಿದ್ದಾರೆ.
ಫೋನ್ ಮೂಲಕ, ಸಂದೇಶ, ಲಿಂಕ್ ಮೂಲಕ ಸೈಬರ್ ಫ್ರಾಡ್ ಮಾಡುವ ಸಂಖ್ಯೆ ಒಂದೆಡೆ ಹೆಚ್ಚಾಗಿದ್ದರೆ, ಮತ್ತೊಂದೆಡೆ ಬೇರೆ ವಿಧಾನದ ಮೂಲಕ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಾಗಿದೆ. ಮೋಸ ಮಾಡುವವರ ಮಾಹಿತಿ ಪಡೆದು ಮುಖತಃ ಭೇಟಿಯಾಗುತ್ತಾರೆ. ತಾವು ಯಾವುದೇ ಕಂಪನಿ, ಪ್ರಚಾರ, ಐದಾಯ ಇಲಾಖೆ ಅದಿಕಾರಿಗಳು ಸೇರಿದಂತೆ ಹಲವು ಸೋಗಿನಲ್ಲಿ ವ್ಯಕ್ತಿಗಳನ್ನು ಭೇಟಿಯಾಗಿ ಮೋಸ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ.
ಡಿಜಿಟಲ್ ಅರೆಸ್ಟ್ ಸೇರಿದಂತೆ ಹಲವು ರೀತಿಯಲ್ಲಿ ಸೈಬರ್ ಕ್ರೈಂ ನಡೆಯುತ್ತಿದೆ. ಹೀಗಾಗಿ ಮೊಬೈಲ್ ಫೋನ್ ಬಳಸುವಾಗ ಅತೀವ ಎಚ್ಚರಿಕೆಯಿಂದ ಇರಬೇಕು ಎಂದು ಸೈಬರ್ ಪೊಲೀಸರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ