
ನಾಗ್ಪುರ(ಮೇ.23): ನಿಲ್ಲಿಸಿದ್ದ ಜಡ್ಜ್ ಕಾರು ತೆಗೆದು ಜಾಲಿ ಹೋದ ಪೊಲೀಸ್ ಪೇದೆ ಇದೀಗ ಅಮಾನತ್ತಾಗಿದ್ದಾನೆ. ಇಷ್ಟೇ ಅಲ್ಲ ದುಬಾರಿ ಮೊತ್ತವನ್ನು ದಂಡದ ರೂಪದಲ್ಲಿ ಪಾವತಿಸಬೇಕಿದೆ. ಅಷ್ಟಕ್ಕೂ ಈ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸ್ ಪೇದೆ ಮಾಡಿದ ಯಡವಟ್ಟಿನಿಂದ. ಜಾಲಿ ರೌಂಡ್ ವೇಳೆ ಜಡ್ಜ್ ಕಾರು ಅಪಘಾತವಾಗಿದೆ. ಕಾರಿನ ಹಿಂಭಾಗ ಸಂಪೂರ್ಣ ನಜ್ಜು ನುಜ್ಜಾಗಿದೆ. ಆದರೆ ಏನೂ ನಡೆದ ಇಲ್ಲ ಎಂಬಂತೆ ಕಾರನ್ನು ಪಾರ್ಕ್ ಮಾಡಲಾಗಿತ್ತು. ಇದರ ವಿರುದ್ಧ ತನಿಖೆ ನಡೆಸಿದ ಪೊಲೀಸರಿಗೆ ಪೇದೆಯ ಕರಾಮತ್ತು ಪತ್ತೆಯಾಗಿದೆ. ಈ ಘಟನೆಗೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಬಾಂಬೆ ಹೈಕೋರ್ಟ್‌ನಲ್ಲಿ ಜಡ್ಜ್ ಆಗಿರುವ ವಾಲ್ಮೀಕಿ ಸಾ ಮೆನೆಜೆಸ್ ಅವರ ಮನೆಯಲ್ಲಿ ಸುರಕ್ಷತೆಗಾಗಿ ಪೊಲೀಸ್ ಪೇದೆಯನ್ನು ನಿಯೋಜಿಸಲಾಗಿದೆ. ಎಪ್ರಿಲ್ 5 ರಂದು ಜಡ್ಜ್ ಹಾಗೂ ಕುಟಂಬಸ್ಥರು ವೈಯುಕ್ತಿಕ ಕೆಲಸದ ಕಾರಣ ತೆರಳಿದ್ದರು. ಇತ್ತ ಮನೆಯಲ್ಲಿ ಕಾವಲಿದ್ದ ಪೊಲೀಸ್ ಪೇದೆ, ಜಡ್ಜ್ ಕಾರನ್ನು ತೆಗೆದು ಜಾಲಿ ರೌಂಡ್ ಹೋಗಿದ್ದಾನೆ. ಜಡ್ಜ್ ಹಾಗೂ ಕುಟುಂಬ ಒಂದೆರೆಡು ದಿನ ಮನೆಯಲ್ಲಿ ಇಲ್ಲ ಅನ್ನೋದು ಖಚಿತವಾಗಿತ್ತು.
Parking Accident ಬ್ರೇಕ್ ಬದಲು ಆ್ಯಕ್ಸಲರೇಟರ್, ಯುವತಿ ಅಚಾತುರ್ಯಕ್ಕೆ 2ನೇ ಮಹಡಿಯಿಂದ ಕೆಳಕ್ಕೆ ಬಿತ್ತು ಕಾರು!
ಜಡ್ಜ್ ಕಾರಿನಲ್ಲಿ ಜಾಲಿ ರೌಂಡ್ಸ್ ಪ್ಲಾನ್ ಮಾಡಿದ್ದಾನೆ. ನಾಗ್ಪುರ ಸಿಟಿ ಸೇರಿದಂತೆ ಹಲೆವೆಡೆ ಸುತ್ತಾಡಿದ್ದಾನೆ. ಆದರೆ ಸಂಭ್ರಮದಲ್ಲಿ ಕಾರನ್ನ ರಿವರ್ಸ್ ತೆಗೆಯುವ ವೇಳೆ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈತನ ಹೈಫೈ ರಿವರ್ಸ್‌ಗೆ ಕಾರಿನ ಹಿಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದೆ. ತನ್ನ ಜಾಲಿ ರೈಡ್ ಸಂಭ್ರಮ ಒಮ್ಮೆಲೆ ಇಳಿದಿದೆ. ಏನು ಮಾಡಬೇಕು ಎಂದು ತೋಚಿಲ್ಲ. ಸರಿಮಾಡಲು ಗ್ಯಾರೇಜಿಗೆ ಕೊಟ್ಟರೆ, ರಿಪೇರಿ ಮಾಡಿ ಕೊಡುವಾಗ ಒಂದು ವಾರವೇ ಕಳೆಯಲಿದೆ. ಇತ್ತ ಜಡ್ಜ್ ಮನೆಗೆ ವಾಪಾಸ್ ಆಗಲಿದ್ದಾರೆ. ಇನ್ನು ಅಪಘಾತದ ವಿಚಾರವೂ ಬಹಿರಂಗವಾಗಲಿದೆ ಅನ್ನೋದು ಅರಿತ ಪೊಲೀಸ್ ಪೇದೆ ವಕ್ರ ಐಡಿಯಾ ಮಾಡಿದ್ದಾನೆ.
ಕಾರನ್ನು ಹಾಗೇ ಜಡ್ಜ್ ಮನೆಗೆ ತಂದು ಪಾರ್ಕ್ ಮಾಡಿದ್ದಾನೆ. ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ಕಾರನ್ನು ನೋಡಿದರೆ ಅಪಘಾತವಾದಂತೆ ಕಾಣುವುದಿಲ್ಲ. ಕಾರಣ ಹಿಂಭಾಗದಲ್ಲಿ ನಜ್ಜು ನುಜ್ಜಾದ ಭಾಗ ಕಾಣಿಸುವುದಿಲ್ಲ. ನಾಜೂಕಾಗಿ ನಿಲ್ಲಿಸಿದ ಪೊಲೀಸ್ ಪೇದೆ ತನ್ನ ಕರ್ತವ್ಯದಲ್ಲಿ ಮಗ್ನನಾಗಿದ್ದ. ಇತ್ತ ಜಡ್ಜ್ ಮನೆಗೆ ಆಗಮಿಸಿ ಕಾರು ತೆಗೆಯಲು ಪೇದೆಯಲ್ಲಿ ಹೇಳಿದ್ದಾನೆ. ಬೇರೆ ದಾರಿ ಕಾಣದೆ ಕಾರು ತೆಗೆದಾಗ ಜಡ್ಜ್‌ಗೆ ಅಚ್ಚರಿಯಾಗಿದೆ. ನಿಲ್ಲಿಸಿದ್ದ ಕಾರು ನಜ್ಜು ಗುಜ್ಜಾಗಿರುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತನಗೇನು ಗೊತ್ತಿಲ್ಲ ಎಂದಿದ್ದಾನೆ.
ಖ್ಯಾತ ಗಾಲ್ಫರ್ ಟೈಗರ್ ವುಡ್ಸ್ ಕಾರು ಭೀಕರ ಅಪಘಾತ..! ನೂರಾರು ಅಡಿ ಪ್ರಪಾತಕ್ಕೆ ಬಿದ್ದ ಕಾರು
ಹೈಕೋರ್ಟ್ ಜಡ್ಜ್ ಈ ಪ್ರಕರಣ ಸುಮ್ಮನೆ ಬಿಡುವು ಮಾತಿದೆಯಾ? ಪ್ರಕರಣ ದಾಖಲಾಯಿತು. ಪೊಲೀಸರು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಗಳನ್ನು ಪರೀಶೀಲನೆ ನಡೆಸಲು ಆರಂಭಿಸಿದ್ದಾರೆ. ಜಡ್ಜ್ ಮನೆಯ ಸಿಸಿಟಿವಿ, ಮನೆಯ ಸುತ್ತ ಮುತ್ತಲಿನ ಸಿಸಿಟಿವಿ ಪರಿಶೀಲಿಸಿದಾಗ ಪೊಲೀಸ್ ಪೇದೆ ಕಾರು ತೆಗೆದು ಹೊರಹೋಗಿರುವ ದೃಶ್ಯ ಪತ್ತೆಯಾಗಿದೆ. ನಗರದಲ್ಲಿ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಪೊಲೀಸ್ ಪೇದೆ ಕಾರನ್ನು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿರುವುದು ಪತ್ತೆಯಾಗಿದೆ.
ಕಾರು ಸರಿಪಡಿಸಲು 2.28 ಲಕ್ಷ ರೂಪಾಯಿ ಖರ್ಜಾಗಿದೆ. ಇತ್ತ ಪೊಲೀಸ್ ಪೇದೆ ಅಮಾನತ್ತಾಗಿದ್ದಾನೆ. ಇಷ್ಟೇ ಅಲ್ಲ ಇದೀಗ ದುಬಾರಿ ದಂಡ ಪಾವತಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ