
ಎಲ್ಲಾ ಕಡೆ ಮಗಳಿಗೆ ತಂದೆ ದಾರಿ ತೋರುವ ಮಾರ್ಗದರ್ಶಕನಾಗಿದ್ದರೆ ಇಲ್ಲಿ ಮಗಳೇ ತಂದೆಗೆ ದಾರಿ ದೀಪವಾಗಿದ್ದಾಳೆ. ಹೌದು ಮಾತು ಬಾರದ ತಂದೆಯೊಬ್ಬಳಿಗೆ ಮಗಳೇ ಇಲ್ಲಿ ಮಾತಾಗಿದ್ದಾಳೆ. ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. Adv. Homi Devang Kapoor (@Homidevang31)ಎಂಬುವವರು ಈ ವೀಡಿಯೋವನ್ನು ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ವೀಡಿಯೋದಲ್ಲಿ ಕಾಣುವಂತೆ ಅಪ್ಪನಿಗೆ ಮಾತು ಬರುವುದಿಲ್ಲ, ಮೂಕ ಭಾಷೆಯ ಮೂಲಕ ಅವರು ಮಾತನಾಡುತ್ತಾರೆ. ಅಂಗಡಿಗೆ ಬರುವವರಿಗೆಲ್ಲರಿಗೂ ಮೂಕ ಭಾಷೆ ಅಷ್ಟು ಸುಲಭದಲ್ಲಿ ಅರ್ಥವಾಗುವುದಿಲ್ಲ, ಹೀಗಾಗಿಯೇ ಇಲ್ಲಿ ಮಗಳು ಅಪ್ಪನ ಬೆನ್ನಿಗೆ ನಿಂತು ವ್ಯವಹಾರದಲ್ಲಿ ಸಹಾಯ ಮಾಡುತ್ತಿದ್ದಾಳೆ. ಈ ವೀಡಿಯೋ ಭಾರಿ ವೈರಲ್ ಆಗಿದ್ದು, ಅನೇಕರು ಪುಟ್ಟ ಬಾಲಕಿಯ ಪ್ರಬುದ್ಧ ನಡವಳಿಕೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
57 ಸೆಕೆಂಡ್‌ಗ ವಿಡಿಯೋದಲ್ಲಿ ಬಾಲಕಿ ಗ್ರಾಹಕರು ಕೇಳುವುದನ್ನು ತನ್ನ ತಂದೆಗೆ ಮೂಕಿ ಭಾಷೆಯಲ್ಲಿ ವಿವರಿಸುವುದನ್ನು ಕಾಣಬಹುದಾಗಿದೆ. ರಸ್ತೆ ಬದಿಯೊಂದರ ಮನೆಯ ಅಲಂಕಾರಿಕ ವಸ್ತುಗಳ ಸ್ಟಾಲ್ ಇದಾಗಿದ್ದು, ವೀಡಿಯೋದಲ್ಲಿ ಗ್ರಾಹಕರು ಬೆಲೆ ಕಡಿಮೆ ಮಾಡುವಂತೆ ವಾದಿಸುವುದನ್ನು ಕಾಣಬಹುದು. ಇದನ್ನು ಆಕೆ ತನ್ನ ತಂದೆಗೆ ವಿವರಿಸುತ್ತಿದ್ದು, ಅವರು ಅಷ್ಟು ಕಡಿಮೆ ಬೆಲೆಗೆ ನೀಡಲು ಸಾಧ್ಯವಿಲ್ಲ ಎಂದು ತಮ್ಮದೇ ಭಾಷೆಯಲ್ಲಿ ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ವೀಡಿಯೋ ನೋಡಿದ ಅನೇಕರು ಭಾವುಕರಾಗಿ ಕಾಮೆಂಟ್ ಮಾಡಿದ್ದು, ಬಾಲಕಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹರ್ಯಾಣದ ಪಾಣಿಪತ್‌ನ ಹಳೆ ಬಸ್ ನಿಲ್ದಾಣದ ಸಮೀಪ ಇವರ ಅಂಗಡಿ ಇದೆ.
ಅಪ್ಪನಿಗೆ ಮಾತನಾಡಲು ಬರುವುದಿಲ್ಲ, ಆದರೆ ಅವರ ಮಗಳು ಪ್ರತಿದಿನ ಅಂಗಡಿ ನಡೆಸುತ್ತಾ ಅವರಿಗೆ ಸಹಾಯ ಮಾಡುತ್ತಾಳೆ. ಪಾಣಿಪತ್: ಹಳೆಯ ಬಸ್ ನಿಲ್ದಾಣ, ಸುಕ್ದೇವ್ ನಗರ ಗೇಟ್ 1 ಬಳಿ, ಪರ್ವೀನ್ ಮೆಡಿಕಲ್ ಎದುರು, ನೀವು ಇಲ್ಲೇ ಹತ್ತಿರದಲ್ಲಿದ್ದರೆ, ಏನಾದರೂ ಖರೀದಿಸಿ, ನಿಮ್ಮ ಸ್ವಲ್ಪ ಸಹಾಯವು ಬಹಳಷ್ಟು ಅರ್ಥಪೂರ್ಣವಾಗಿರುತ್ತದೆ ಎಂದು ಬರೆದು ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ವೀಡಿಯೋಗೆ ಭಾರಿ ಸ್ಪಂದನೆ ವ್ಯಕ್ತವಾಗಿದೆ.
ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ವೀಡಿಯೋ ನೋಡಿದ ಒಬ್ಬರು ಖಂಡಿತ ಬಾಸ್. ನನಗೆ ಈ ವ್ಯಕ್ತಿ ಬಹಳ ದಿನಗಳಿಂದ ಗೊತ್ತು. ತುಂಬಾ ಪ್ರತಿಭಾನ್ವಿತ ಸೇಲ್ಸ್ ಮ್ಯಾನ್. ಅವರು ಮಾರಾಟ ಮಾಡಿ ಜೀವನೋಪಾಯ ಗಳಿಸುವುದಕ್ಕೆ ಅವರಿಗೆ ಭಾಷೆ ಅಡ್ಡಿಯಾಗಿಲ್ಲ, ಇಂದು ಅವರಿಂದ ಶಾಪಿಂಗ್ ಮಾಡುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಮಾತು ಬಾರದ ಅವರ ಬಳಿಯೂ ಕೆಲವರು ವ್ಯವಹಾರ ಕುದುರಿಸಲು ಚರ್ಚೆ ಮಾಡುತ್ತಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನರು ಅವರ ಸ್ಥಿತಿಯನ್ನು ನೋಡಿಯೂ ಮಾತುಕತೆ ನಡೆಸುತ್ತಿರುವುದು ಬೇಸರದ ಸಂಗತಿ. ರಸ್ತೆ ಬದಿಗಳಲ್ಲಿ ಮಾರಾಟ ಮಾಡುವವರು ಮತ್ತು ಹಬ್ಬದ ಸಮಯದಲ್ಲಿ ಕೆಲಸ ಮಾಡುವ ಜನರೊಂದಿಗೆ ದಯವಿಟ್ಟು ದಯೆಯಿಂದ ವರ್ತಿಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
ಈ ಮೂಕಿ ಭಾಷೆಯನ್ನು ಎಲ್ಲರೂ ಕಲಿತರೆ ತುಂಬಾ ಒಳ್ಳೆಯದು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ತಂದೆ ಮಗಳ ಸುಂದರ ಭಾಂದವ್ಯಕ್ಕೊಂದು ಉದಾಹರಣೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದ್ದು, ಅಪ್ಪನ ಸಹಾಯಕ್ಕೆ ನಿಂತಿರುವ ಮಗಳ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಮೊದಲೇ ಅಪ್ಪ ಎಂದರೆ ಹೆಣ್ಣು ಮಕ್ಕಳಿಗೆ ಒಂದು ಹಿಡಿ ಹೆಚ್ಚು ಪ್ರೀತಿ, ಇತ್ತ ಅಪ್ಪನಿಗೂ ಅಷ್ಟೇ ಮಗಳೆಂದರೆ ದೇವತೆಯಂತೆ, ಅದೇ ರೀತಿ ಇಲ್ಲಿ ತಂದೆ ಮಗಳ ಈ ಬಾಂಡಿಂಗ್ ಅನೇಕರನ್ನು ಭಾವುಕರಾಗಿಸಿದೆ.
ಇದನ್ನೂ ಓದಿ: 5000 ಕೊಡ್ತಿನಿ ಬಾ ಎಂದು ಕರೆದವನ ಬೆನ್ನು ಹುಡಿ ಮಾಡಿದ ನರ್ಸ್
ಇದನ್ನೂ ಓದಿ: ಫಾರ್ಮಾ ಕಂಪನಿಯಿಂದ ಉದ್ಯೋಗಿಗಳಿಗೆ ಭರ್ಜರಿ ಗಿಫ್ಟ್: ದೀಪಾವಳಿಗೆ 51 ಕಾರುಗಳ ಉಡುಗೊರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ