ದಿವಾಳಿಯಿಂದ ಸಂಸ್ಥೆಯನ್ನು ಲಾಭದ ಹಂತಕ್ಕೇರಿಸಿದ ಉದ್ಯೋಗಿಗಳಿಗೆ ಲಕ್ಸುರಿ ಕಾರು ಗಿಫ್ಟ್ ನೀಡಿದ ಮಾಲೀಕ

Published : Oct 20, 2025, 01:34 PM IST
 Gifts Luxury Cars to Employees

ಸಾರಾಂಶ

MK Bhatia's Generosity:  ಚಂಡೀಗಢದ ಫಾರ್ಮಾ ಸಂಸ್ಥೆಯೊಂದರ ಮಾಲೀಕರೊಬ್ಬರು ಈಗ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ದೀಪಾವಳಿ ಹಬ್ಬಕ್ಕೆ ಅವರು ನೀಡಿದ ಉಡುಗೊರೆ. ಅದೇನು ಇಲ್ಲಿದೆ ಡಿಟೇಲ್ ಸ್ಟೋರಿ

ಉದ್ಯೋಗಿಗಳಿಗೆ ಲಕ್ಸುರಿ ಕಾರು ಗಿಫ್ಟ್ ನೀಡಿದ ಫಾರ್ಮಾ ಕಂಪನಿ ಮಾಲೀಕ

ಚಂಡೀಗಢದ ಫಾರ್ಮಾ ಸಂಸ್ಥೆಯೊಂದರ ಮಾಲೀಕರೊಬ್ಬರು ಈಗ ದೇಶದೆಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇದಕ್ಕೆ ಕಾರಣವಾಗಿರುವುದು ದೀಪಾವಳಿ ಹಬ್ಬಕ್ಕೆ ಅವರು ನೀಡಿದ ಉಡುಗೊರೆ. ಹೌದು ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ದೀಪಾವಳಿಗೆ 51 ಐಷಾರಾಮಿ ಕಾರುಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಅವರು ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ಅವರ ಉದಾರ ಮನಸ್ಸಿನ ಕಾರಣಕ್ಕೆ ಈಗ ಅವರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ. ಅವರು ಲಕ್ಸುರಿ ಕಾರುಗಳ ಕೀಗಳನ್ನು ಉದ್ಯೋಗಿಗಳಿಗೆ ಹಸ್ತಾಂತರ ಮಾಡುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ವೀಡಿಯೋ ನೋಡಿದ ನೆಟ್ಟಿಗರು ನಿಮ್ಮ ಸಂಸ್ಥೆಯಲ್ಲಿ ನಮಗೂ ಕೆಲಸ ಇದ್ಯಾ ಎಂದು ಪ್ರಶ್ನೆ ಮಾಡ್ತಿದ್ದಾರೆ.

ಎಂಐಟಿಎಸ್‌ ಗ್ರೂಪ್‌ನ ಮುಖ್ಯಸ್ಥ ಹಾಗೂ ಸಂಸ್ಥಾಪಕ ಎಂಕೆ ಭಟಿಯಾ ಅವರೇ ಹೀಗೆ ಉದ್ಯೋಗಿಗಳಿಗೆ ಲಕ್ಸುರಿ ಕಾರುಗಳನ್ನು ಉಡುಗೊರೆ ನೀಡಿ ಉದಾರತೆ ಮೆರೆದವರು. ಹಿಂದಿ ಮಾಧ್ಯಮ ದೈನಿಕ್ ಭಾಸ್ಕರ್‌ನ ವರದಿಯ ಪ್ರಕಾರ, ಕಂಪನಿಯು ತನ್ನ ಚಂಡೀಗಢದಲ್ಲಿರುವ ಕೇಂದ್ರದಲ್ಲಿ ದೀಪಾವಳಿಯನ್ನು ಅದ್ಧೂರಿಯಾಗಿ ಆಚರಿಸಿದ ನಂತರ ತಮ್ಮ ಸಂಸ್ಥೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ತೋರಿದ ಉದ್ಯೋಗಿಗಳಿಗೆ ಐಷಾರಾಮಿ ಎಸ್‌ಯುವಿ ಕಾರುಗಳನ್ನು ಬಹುಮಾನವಾಗಿ ನೀಡಿದೆ. ಭಾಟಿಯಾ ಈ ರೀತಿ ಉಡುಗೊರೆ ನೀಡ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ದೀಪಾವಳಿಯ ಶುಭ ಸಂದರ್ಭದಲ್ಲಿ ತಮ್ಮ ಉದ್ಯೋಗಿಗಳಿಗೆ ಅದ್ಭುತವಾದ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದರು ಎಂದು ವರದಿಯಾಗಿದೆ.

ದಿವಾಳಿಯಿಂದ ಚೇತರಿಸಿಕೊಂಡು ಬಂದು ಉದ್ಯೋಗಿಗಳಿಗೆ ಅದ್ದೂರಿ ಉಡುಗೊರೆ

ಎಂಕೆ ಭಾಟಿಯಾ ಅವರ ಉದಾರ ದಾನ ಕಾರ್ಯವು ಅವರ ವಿನಮ್ರ ಸ್ವಭಾವ ಹಾಗೂ ಉದ್ಯೋಗಿಗಳ ಬಗ್ಗೆ ಅವರಿಗಿರುವ ಕೃತಜ್ಞತೆಯನ್ನು ತೋರಿಸುತ್ತದೆ. ಅವರು ತಮ್ಮದೇ ಆದ ಯಶಸ್ಸಿನ ಪ್ರಯಾಣದ ಆರಂಭದಲ್ಲಿ ಸಾಕಷ್ಟು ಕಷ್ಟದ ಸಮಯಗಳನ್ನು ಕಂಡಿದ್ದರು. ಇಂದು ಎಂಐಟಿಎಸ್‌ ಗುಂಪಿನ ಹೆಮ್ಮೆಯ ಸ್ಥಾಪಕ ಮತ್ತು ಅಧ್ಯಕ್ಷರಾಗಿ ನಿಂತಿರುವ ಭಾಟಿಯಾ, ಅವರ ಫಾರ್ಮಾ ಸಂಸ್ಥೆಯೂ ಈ ಹಿಂದೆ ಭಾರೀ ನಷ್ಟವನ್ನು ಅನುಭವಿಸಿದ ನಂತರ 2002 ರಲ್ಲಿ ದಿವಾಳಿ ಹಂತಕ್ಕೆ ಬಂದು ನಿಂತಿತ್ತು. ಆದರೆ ಇದೆಲ್ಲವನ್ನು ಮೀರಿ 2015 ರಲ್ಲಿ ಎಂಐಟಿಎಸ್ ಲಾಭದಾಯಕ ಹಂತಕ್ಕೆ ತಲುಪಿದ್ದು, ಇದರ ಹಿಂದೆ ಬಹುಶಃ ಉದ್ಯೋಗಿಗಳ ಶ್ರಮವೂ ಇದ್ದೇ ಇರುತ್ತದೆ. ಹೀಗಾಗಿ ಬಹುಶಃ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವ ಆಶಯದಂತೆ ಭಾಟಿಯಾ ಅವರು ತಮ್ಮ ಕಷ್ಟಕಾಲದಲ್ಲಿ ಜೊತೆಗಿದ್ದ ಉದ್ಯೋಗಿಗಳಿಗೂ ತಮ್ಮ ಯಶಸ್ಸಿನಲ್ಲಿ ಕೊಡುಗೆಯನ್ನು ತುಸು ಹಂಚಿಕೊಳ್ಳುವ ಮನಸ್ಸಾಗಿದ್ದಿರಬಹುದು. ಇಂದು ಎಂಕೆ ಭಾಟಿಯಾ ಅವರು 12 ಕಂಪನಿಗಳನ್ನು ಹೊಂದಿದ್ದಾರೆ.

ಹರಿಯಾಣದ ಪಂಚಕುಲ ಜಿಲ್ಲೆಯಲ್ಲಿ ನೆಲೆಸಿರುವ ಭಾಟಿಯಾ ಅವರು, ಭಾರತದ ವಿವಿಧ ರಾಜ್ಯಗಳಲ್ಲಿ ಎಂಐಟಿಎಸ್‌ ಗುಂಪನ್ನು ವಿಸ್ತರಿಸಲು ಯೋಜಿಸಿದ್ದರು ಮತ್ತು ವಿದೇಶಿ ಮಾರುಕಟ್ಟೆಗೂ ಸಹ ಪ್ರವೇಶಿಸುವ ಗುರಿಯನ್ನು ಹೊಂದಿದ್ದರು. 2023 ರಲ್ಲಿ ಮೆಡಿಕಲ್ ಡೈಲಾಗ್ಸ್ ಜೊತೆಗಿನ ಸಂವಾದದಲ್ಲಿ, ಭಾಟಿಯಾ ನಾವು ಈಗಾಗಲೇ ಕೆನಡಾ, ಲಂಡನ್ ಮತ್ತು ದುಬೈನಲ್ಲಿ ಪರವಾನಗಿಗಳನ್ನು ಪಡೆದಿದ್ದೇವೆ ಎಂದು ದೃಢಪಡಿಸಿದರು. ತಮ್ಮ ವಿಸ್ತರಣಾ ಯೋಜನೆಗಳ ಭಾಗವಾಗಿ ಭಾಟಿಯಾ ಐದು ಹೊಸ ನಿರ್ದೇಶಕರ ನೇಮಕವನ್ನು ಘೋಷಿಸಿದ್ದರು ಮತ್ತು ಶಿಲ್ಪಾ ಚಾಂಡೆಲ್ ಅವರನ್ನು ಕಂಪನಿಯ ಸಿಇಒ ಆಗಿ ನೇಮಿಸಿದ್ದರು.

ಆದರೆ ಈಗ ಎಂಐಟಿಎಸ್ ಸಂಸ್ಥೆಯ ಮುಖ್ಯಸ್ಥರು ತಮ್ಮ ಉದ್ಯೋಗಿಗಳಿಗೆ ಕಾರಿನ ಕೀಗಳನ್ನು ಹಸ್ತಾಂತರಿಸುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದ್ದು, ಅನೇಕರು ಈ ವೀಡಿಯೋ ನೋಡಿ ಅಚ್ಚರಿಪಟ್ಟಿದ್ದಾರೆ. ಕೆಲವರು ಖುಷಿಪಟ್ಟರೆ ಕೆಲವರು ಇಎಂಐ ಉದ್ಯೋಗಿಗಳೆ ಕಟ್ಟಬೇಕೇನೋ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಕೆಲವರು ಅಲ್ಲಿ ಕೆಲಸ ಖಾಲಿ ಇದೆಯೇ ಎಂದು ಕೇಳಿದ್ದಾರೆ.

ನನ್ನ ಬಳಿ ಮೈಕ್ರೋಬಯಾಲಾಜಿಯಲ್ಲಿ ಡಿಗ್ರಿ ಇದೆ. ನಿಮ್ಮ ಸಂಸ್ಥೆಯಲ್ಲಿ ಏನಾದರು ಅವಕಾಶ ಇದೆಯೇ ನನಗೆ ಒಂದು ಟೆಲಿಸ್ಕೋಪ್ ಕೊಟ್ಟರೆ ಸಾಕು, ಕಾರ್ ವಾರ್ ಏನು ಬೇಡ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಔಷಧಿಗಳನ್ನು ಉತ್ಪಾದಿಸುವ ಮೂಲಕ ನೀವು ಲಾಭ ಗಳಿಸುತ್ತಿರುವವರೆಗೆ, ಆ ಲಾಭವನ್ನು ನಿಮ್ಮ ಉದ್ಯೋಗಿಗಳಿಗೆ ಕಾರುಗಳು, ಬಂಗಲೆಗಳು, ಹಡಗುಗಳನ್ನು ನೀಡಲು ಬಳಸುವುದರಲ್ಲಿ ಯಾವುದೇ ಸಮಸ್ಯೆ ಇಲ್ಲ, ಅದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಗುಣಮಟ್ಟವನ್ನು ಹಾಳು ಮಾಡುವ ಮೂಲಕ ಲಾಭ ಗಳಿಸಿದಾಗ ಸಮಸ್ಯೆ ಉದ್ಭವಿಸುತ್ತದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಸ್ಕಿಡ್ ಆಗಿ ರನ್‌ವೇಯಿಂದ ಸಮುದ್ರಕ್ಕೆ ಬಿದ್ದ ಕಾರ್ಗೋ ವಿಮಾನ : ಇಬ್ಬರು ಸಾವು

ಇದನ್ನೂ ಓದಿ: ಬೋಯಿಂಗ್ 737 ವಿಂಡ್‌ಶೀಲ್ಡ್‌ನಲ್ಲಿ ಬಿರುಕು: 10000 ಅಡಿ ಕೆಳಕ್ಕೆ ಕುಸಿದ ವಿಮಾನ: ಪೈಲಟ್‌ಗೆ ಗಾಯ ತುರ್ತು ಭೂಸ್ಪರ್ಶ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..
ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್