Covid Vaccine ಖರೀದಿ ಬಂದ್: ಸರ್ಕಾರದ ಬಳಿಯಿದೆ 6 ತಿಂಗಳಿಗೆ ಸಾಕಾಗುವಷ್ಟು ಲಸಿಕೆ ಸಂಗ್ರಹ

By Kannadaprabha News  |  First Published Oct 17, 2022, 8:59 AM IST

ಕೋವಿಡ್‌ ಅಬ್ಬರ ಕಡಿಮೆಯಾಗಿರುವುದು ಹಾಗೂ ಲಸಿಕೆ ಪಡೆಯಲು ಜನರು ನಿರಾಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಲಸಿಕೆಯನ್ನು ಸದ್ಯದ ಮಟ್ಟಿಗೆ ಖರೀದಿ ಮಾಡದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 


ಕೊರೋನಾ (Corona) ನಿಯಂತ್ರಣಕ್ಕೆ ಬಂದು, ಜನರು ಮೂರನೇ ಡೋಸ್‌ (Third Dose) ಪಡೆಯಲು ನಿರಾಸಕ್ತಿ ತೋರುತ್ತಿರುವ ಬೆನ್ನಲ್ಲೇ ಸದ್ಯದ ಮಟ್ಟಿಗೆ ಲಸಿಕೆ (Vaccine) ಖರೀದಿ ಮಾಡದಿರಲು ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ನಿರ್ಧರಿಸಿದೆ. ಜೊತೆಗೆ 2022-23ನೇ ಸಾಲಿನಲ್ಲಿ ಲಸಿಕೆ ಖರೀದಿಗೆಂದು ಪಡೆದಿದ್ದ 4,237 ಕೋಟಿ ರೂ. ಗಳನ್ನು ಹಣಕಾಸು ಸಚಿವಾಲಯಕ್ಕೆ ಮರಳಿಸಲು ನಿರ್ಧರಿಸಿದೆ. 2022-23ನೇ ಬಜೆಟ್‌ನಲ್ಲಿ (Budget) ಸರ್ಕಾರ 5000 ಕೋಟಿ ರೂ. ಗಳನ್ನು ತೆಗೆದಿರಿಸಿತ್ತು. ಆದರೆ ಇದರಲ್ಲಿ ಇನ್ನೂ 4,237.14 ಕೋಟಿ ರೂ. ಹಣ ಖರ್ಚಾಗದೇ ಬಾಕಿ ಉಳಿದಿದೆ.

ಸ್ಥಗಿತ ಏಕೆ?:
ಕೇಂದ್ರ ಹಾಗೂ ಸರ್ಕಾರಗಳ ಬಳಿ ಈಗ ಇನ್ನೂ 1.8 ಕೋಟಿ ಡೋಸ್‌ ಲಸಿಕೆಗಳು ಬಾಕಿ ಇವೆ. ಇಷ್ಟು ಡೋಸ್‌ಗಳನ್ನು (Dose) ಇನ್ನೂ 6 ತಿಂಗಳ ಲಸಿಕಾಕರಣಕ್ಕೆ ಬಳಸಬಹುದು. ಇದೇ ವೇಳೆ, ಕೋವಿಡ್‌ ಪ್ರಕರಣ (Covid Cases) ಇಳಿಕೆ ಆಗುತ್ತಿರುವ ಕಾರಣ ಲಸಿಕೆ ಪಡೆಯಲು ಜನರು ನಿರಾಸಕ್ತಿ ತೋರಿಸುತ್ತಿದ್ದಾರೆ. ಹೀಗಾಗಿ ಬಾಕಿ ಹಣವನ್ನು ಮರಳಿಸಿ, ಲಸಿಕೆ ಖರೀದಿ ನಿಲ್ಲಿಸಲು ಕೇಂದ್ರ ಸರ್ಕಾರ (Central Government) ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ.

Tap to resize

Latest Videos

undefined

ಇದನ್ನು ಓದಿ: ಭಾರತದ ಮೊದಲ ಇಂಟ್ರಾನಾಸಲ್ ಕೋವಿಡ್ ಲಸಿಕೆಗೆ ಡಿಸಿಜಿಐ ಅನುಮೋದನೆ

ಇದೇ ವೇಳೆ, ಖಾಸಗಿಯವರಿಗೂ ಲಸಿಕೆ ನೀಡಲು ಅವಕಾಶ ನೀಡಲಾಗಿರುವ ಕಾರಣ ಒಂದು ವೇಳೆ ಸರ್ಕಾರದ ದಾಸ್ತಾನು ಖಾಲಿ ಆದರೂ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆ ಲಭ್ಯ ಇರುತ್ತದೆ ಎಂದು ಅವು ಸ್ಪಷ್ಟಪಡಿಸಿವೆ. ‘ಸದ್ಯಕ್ಕಂತೂ ಸರ್ಕಾರ ಲಸಿಕೆ ಖರೀದಿಸುವುದಿಲ್ಲ. ಇನ್ನು 6 ತಿಂಗಳಲ್ಲಿ ಮತ್ತೆ ಲಸಿಕೆ ಖರೀದಿಸಬೇಕು ಎಂದರೆ ಕೊರೋನಾ ಪರಿಸ್ಥಿತಿಯನ್ನು ಆಧರಿಸಿರುತ್ತದೆ’ ಎಂದು ಮೂಲಗಳು ಹೇಳಿವೆ.

ಈವರೆಗೆ ದೇಶದಲ್ಲಿ ಎಷ್ಟು ಜನರಿಗೆ ಲಸಿಕೆ ವಿತರಣೆ?
2021ರ ಜನವರಿ 16ರಿಂದ ದೇಶದಲ್ಲಿ ಉಚಿತ ಲಸಿಕಾಕರಣವನ್ನು ಕೇಂದ್ರ ಸರ್ಕಾರ ಆರಂಭಿಸಿತ್ತು. ದೇಶದ 18 ವರ್ಷ ಮೇಲ್ಪಟ್ಟ ಶೇ. 92 ಜನರು ಎರಡೂ ಡೋಸ್‌, ಶೇ. 98 ಜನರು ಮೊದಲ ಡೋಸ್‌ ಪಡೆದಿದ್ದಾರೆ. ಶೇ. 27 ಜನರು ಮೂರನೇ ಡೋಸ್‌ ಪಡೆದುಕೊಂಡಿದ್ದಾರೆ. 12 ರಿಂದ 14 ವರ್ಷದ ಶೇ. 87 ಜನರು ಮೊದಲ ಹಾಗೂ ಶೇ. 68 ಜನರು ಎರಡೂ ಡೋಸ್‌ ಪಡೆದಿದ್ದಾರೆ. ಈವ​ರೆಗೆ ಒಟ್ಟು 219.32 ಕೋಟಿ ಡೋಸ್‌ ಲಸಿಕೆ ವಿತ​ರ​ಣೆ​ಯಾ​ಗಿ​ದೆ.

ಇದನ್ನೂ ಓದಿ: ರಾಜ್ಯದಲ್ಲಿ 11 ಕೋಟಿ ಡೋಸ್‌ ಲಸಿಕೆ: ಮಹತ್ವದ ಮೈಲಿಗಲ್ಲು ದಾಟಿದ ಕೋವಿಡ್‌ ವ್ಯಾಕ್ಸಿನ್‌ ಅಭಿಯಾನ

2401 ಹೊಸ ಕೋವಿಡ್‌ ಕೇಸು, 21 ಜನರ ಸಾವು
ಭಾನು​ವಾರ ಮುಂಜಾನೆ 8 ಗಂಟೆಗೆ ಮುಕ್ತಾ​ಯ​ವಾದ 24 ಗಂಟೆ​ಗ​ಳಲ್ಲಿ ದೇಶದಲ್ಲಿ 2,401 ಹೊಸ ಕೋವಿಡ್‌ ಪ್ರಕ​ರ​ಣ​ ದಾಖ​ಲಾ​ಗಿದ್ದು, 21 ಸೋಂಕಿ​ತರು ಮೃತಪಟ್ಟಿದ್ದಾರೆ. ಸಕ್ರಿಯ ಪ್ರಕ​ರ​ಣ​ಗಳ ಸಂಖ್ಯೆ 26,625ಕ್ಕೆ ಏರಿ​ಕೆ​ಯಾ​ಗಿದೆ. ದೇಶ​ದಲ್ಲಿ ಈವ​ರೆಗೆ 4.46 ಕೋಟಿ ಕೋವಿಡ್‌ ಪ್ರಕ​ರ​ಣ​ಗಳು ದಾಖ​ಲಾ​ಗಿವೆ. ದೈನಂದಿನ ಪಾಸಿ​ಟಿ​ವಿಟಿ ದರ ಶೇ.1.04 ರಷ್ಟಿದೆ. ಈವ​ರೆಗೆ ಒಟ್ಟು 219.32 ಕೋಟಿ ಡೋಸ್‌ ಲಸಿಕೆ ವಿತ​ರ​ಣೆ​ಯಾ​ಗಿ​ದೆ.

ಇದನ್ನೂ ಓದಿ: ಇನ್ಮುಂದೆ ಕೋವಿಡ್ ವ್ಯಾಕ್ಸಿನ್‌ ಸೂಜಿಮುಕ್ತ, ಇನ್ಹೇಲ್ ಆವೃತ್ತಿಗೆ ಚೀನಾ ಅನುಮೋದನೆ

click me!