ಭಾನುವಾರದ ಪರೀಕ್ಷೆಯ ವೇಳೆ ಹಿಜಾಬ್ ತೆಗೆಯಲು ನಿರಾಕರಿಸಿದಾಗ ಶಿಕ್ಷಕರೊಬ್ಬರು ಆಕ್ಷೇಪಾರ್ಹ ಮಾತುಗಳನ್ನಾಗಿದ್ದಾರೆ ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ. ಮಹಂತ್ ದರ್ಶನ್ ದಾಸ್ ಮಹಿಳಾ ಕಾಲೇಜಿನಲ್ಲಿ ಹಿಜಾಬ್ ವಿಚಾರ ಸದ್ದಾಗಿದ್ದು, ಮಧ್ಯಂತರ ಪರೀಕ್ಷೆಗಾಗಿ ವಿದ್ಯಾರ್ಥಿಗಳು ಬಂದಿದ್ದ ವೇಳೆ ಈ ಘಟನೆ ನಡೆದಿದೆ.
ಪಾಟ್ನಾ (ಅ.16): ಉತ್ತರ ಬಿಹಾರದ ಮುಜಾಫರ್‌ಪುರ ಪಟ್ಟಣದಲ್ಲಿ ಹಿಜಾಬ್ ಬಗ್ಗೆ ಗಲಾಟೆ ನಡೆದಿದೆ. ಭಾನುವಾರ ನಡೆದ ಪರೀಕ್ಷೆಯ ವೇಳೆ ಹಿಜಾಬ್ ತೆಗೆಯಲು ನಿರಾಕರಿಸಿದ ವೇಳೆ ಶಿಕ್ಷಕರೊಬ್ಬರು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದಾರೆ ಎಂದು ವಿದ್ಯಾರ್ಥಿನಿಯರು ದೂರಿದ್ದಾರೆ. ಸುದ್ದಿಸಂಸ್ಥೆಗಳ ವರದಿ ಪ್ರಕಾರ, ಬಿಹಾರದ ಮಿಥಿನಾಪುರ ನಗರದ ಮಹಾಂತ ದರ್ಶನ್ ದಾಸ್ ಮಹಿಳಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮಧ್ಯಂತರ ಪರೀಕ್ಷೆಗಾಗಿ ವಿದ್ಯಾರ್ಥಿನಿಯರು ಆಗಮಿಸಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಇನ್ನೊಂದೆಡೆ ಕಾಲೇಜಿನ ಪ್ರಾಂಶುಪಾಲ ಡಾ. ಕನ್ಹು ಪ್ರಿಯಾ ಈ ಕುರಿತಾಗಿ ಮಾತನಾಡಿದ್ದು, ಹಿಜಾಬ್‌ಅನ್ನು ತೆಗೆಯುವಂತೆ ಎಲ್ಲೂ ಹೇಳಿಲ್ಲ. ಆದರೆ, ಪರೀಕ್ಷೆ ಬರೆಯುವಾಗ ಮುಖ ಮುಚ್ಚಿಕೊಂಡು ಬರೆಯುವುದು ಬೇಡ, ಹಿಜಾಬ್ ತೆಗೆದಿಟ್ಟು ಬರೆಯಿರಿ ಎಂದಿದ್ದೇವೆ. ಪರೀಕ್ಷಾ ಅಕ್ರಮಗಳು ಆಗುತ್ತಿರುವ ಹಿನ್ನಲೆಯಲ್ಲಿ ಹಾಗೂ ಬ್ಲೂಟೂತ್ ಬಳಸಿ ಪರೀಕ್ಷೆ ಬರೆಯುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿರುವ ಕಾರಣ ಈ ರೀತಿ ಮಾಡಲಾಗಿತ್ತು ಎಂದು ಹೇಳಿದ್ದಾರೆ. ಇನ್ನೊಂದೆಡೆ ಮಿಥಿನಾಪುರ ಪೊಲೀಸ್ ಠಾಣೆಯ ಸ್ಟೇಷನ್ ಇನ್‌ಚಾರ್ಜ್ ಶ್ರೀಕಾಂತ್ ಶುಕ್ಲಾ ಈ ಬಗ್ಗೆ ಮಾತನಾಡಿದ್ದು, ಪರೀಕ್ಷೆ ಆರಂಭವಾಗುವ ಸಮಯದಲ್ಲಿಯೇ ಈ ಘಟನೆ ನಡೆದಿದೆ ಎಂದಿದ್ದಾರೆ.
"ನಾವು ಎರಡೂ ಕಡೆಯವರನ್ನು ವಿಚಾರಣೆ ಮಾಡಿದ್ದೇವೆ ಮತ್ತು ಪರೀಕ್ಷೆಯನ್ನು ಶಾಂತಿಯುತವಾಗಿ ನಡೆಸಿದ್ದೇವೆ. ಸದ್ಯಕ್ಕೆ, ಈ ಪ್ರದೇಶದಲ್ಲಿ ಪ್ರಕರಣ ದಾಖಲಿಸುವ ಅಥವಾ ಹೆಚ್ಚುವರಿ ಪಡೆಗಳನ್ನು ನಿಯೋಜಿಸುವ ಅಗತ್ಯವಿಲ್ಲ. ಆದರೆ ನಾವು ಪರಿಸ್ಥಿತಿಯ ಮೇಲೆ ನಿಗಾ ಇಡುತ್ತೇವೆ" ಎಂದು ಶ್ರೀಕಾಂತ್ ಶುಕ್ಲಾ (Hijab Case) ಹೇಳಿದ್ದಾರೆ.
Hijab Row: ಪುರುಷರು ಸ್ವಯಂನಿಯಂತ್ರಣ ಮಾಡಿಕೊಂಡ್ರೆ ಹಿಜಾಬ್ ಬೇಡ: ಹರ್ಯಾಣ ಸಚಿವ
ಕಿವಿ ತೋರುವಂತೆ ಹೇಳಿದ್ದೆವು: "ಇದು ಹಿಜಾಬ್ (Muzaffarpur ) ಕುರಿತಾದ ಪ್ರಕರಣವಲ್ಲ. ಅನೇಕ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಫೋನ್ ಕೊಂಡೊಯ್ಯುತ್ತಿದ್ದರು, ಇದು ನಿಯಮಗಳಿಗೆ ವಿರುದ್ಧವಾಗಿದೆ, ಪರೀಕ್ಷಾ ಸಭಾಂಗಣದ (Bihar MDDM College,) ಹೊರಗೆ ಮೊಬೈಲ್ ಬಿಡಲು ಕೇಳಿಕೊಂಡವರಲ್ಲಿ ವಿದ್ಯಾರ್ಥಿನಿಯೂ ಸೇರಿದ್ದಳು' ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಮೇಲ್ವಿಚಾರಕರಲ್ಲಿ ಒಬ್ಬರಾಗಿದ್ದ ಶಿಕ್ಷಕರು, ಆಕೆಯ ಬಳಿ ಯಾವುದಾದರೂ ಬ್ಲೂಟೂತ್ ಸಾಧನಗಳಿವೆಯೇ ಎಂದು ಪರಿಶೀಲಿಸುತ್ತಿದ್ದರಿಂದ ಬಾಲಕಿಗೆ ಕಿವಿ ತೋರಿಸಲು ಮಾತ್ರ ಕೇಳಲಾಯಿತು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಇದರಿಂದ ಬಾಲಕಿಗೆ ಏನಾದರೂ ತೊಂದರೆಯಾಗಿದ್ದರೆ ಪರೀಕ್ಷಾ ನಿಯಂತ್ರಕರಿಗೆ ಅಥವಾ ನನಗೆ ತಿಳಿಸಬೇಕಿತ್ತು. ಆದರೆ ಅವರ ಉದ್ದೇಶವೇ ಬೇರೆಯಾಗಿತ್ತು. ಅವಳು ಸ್ಥಳೀಯ ಪೊಲೀಸ್ ಠಾಣೆಗೆ ಮತ್ತು ತನಗೆ ತಿಳಿದಿರುವ ಕೆಲವು ಸ್ಥಳೀಯ ಸಮಾಜ ವಿರೋಧಿಗಳನ್ನು ಕರೆದಳು. ಅವರು ಬಂದಾಗ, ಅವರು ಗದ್ದಲವನ್ನು ಸೃಷ್ಟಿಸಿದರು.
Hijab Case: ಜಾತ್ಯಾತೀತತೆ ಒಂದೇ ಧರ್ಮಕ್ಕೆ ಸೀಮಿತವೇ?: ತೀರ್ಪಿನಲ್ಲಿ ಪ್ರಶ್ನಿಸಿದ ನ್ಯಾ.ಹೇಮಂತ್ ಗುಪ್ತಾ
ಮೇಲ್ವಿಚಾರಕರು ದೇಶದ್ರೋಹಿ ಎಂದು ಕರೆದಿದ್ದು ಮಾತ್ರವಲ್ಲ, (Muzaffarpur Hijab Controversy)ನಿಮ್ಮಂತವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿದ್ದರು ಎಂದು ವಿದ್ಯಾರ್ಥಿ ಹೇಳಿದ್ದಾಳೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ. ಆ ಸಮಯದಲ್ಲಿ ನಾನು ಪರೀಕ್ಷಾ ಹಾಲ್‌ನಲ್ಲಿ ಇರಲಿಲ್ಲ, ಆದರೆ ಪರೀಕ್ಷೆಗೆ ಬಂದ ಇತರ ಹುಡುಗಿಯರು ಈ ಆರೋಪಗಳು ಸುಳ್ಳು ಎಂದು ಹೇಳಿದರು. ಕಾಲೇಜಿನ ಪ್ರಾಂಶುಪಾಲರು ಕೂಡ ಶಾಲೆಯಲ್ಲಿ ಬಾಲಕಿಯ ಹಾಜರಾತಿ ತೀರಾ ಕಡಿಮೆ ಎಂದು ದಾಖಲೆ ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ''ಶೇ 75ಕ್ಕಿಂತ ಕಡಿಮೆ ಹಾಜರಾತಿ ಹೊಂದಿರುವ ಯಾವುದೇ ವಿದ್ಯಾರ್ಥಿ ಅಂತಿಮ ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಕಾಲೇಜು ಆಡಳಿತದ ಮೇಲೆ ಒತ್ತಡ ಹೇರಿ ತನ್ನ ಪ್ರಕರಣದಲ್ಲಿ ವಿನಾಯಿತಿ ನೀಡುವಂತೆ ಒತ್ತಾಯಿಸಲಾಗುವುದು ಎಂಬ ಭಾವನೆಯಿಂದ ಬಾಲಕಿ ಈ ಕೃತ್ಯ ಎಸಗಿರಬಹುದು ಎಂದು ಹೇಳಿದ್ದಾರೆ.