ಕೇರಳ(ಡಿ.10): ಹೆಲಿಕಾಪ್ಟರ್ ಪತನದಲ್ಲಿ(IAF Helicopter crash) ಮಡಿದ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್(CDS Gen Bipin Rawat) ಹಾಗೂ ಪತ್ನಿ ಮಧುಲಿಕಾ ರಾವತ್ ಪಂಚಭೂತಗಳಲ್ಲಿ ಲೀನರಾಗಿದ್ದಾರೆ. ದೆಹಲಿಯ ಬ್ರಾರ್ ಸ್ಕ್ವೇರ್ ರುದ್ರಭೂಮಿಯಲ್ಲಿ ರಾವತ್ ಪುತ್ರಿಯರು ಅಂತಿಮ ವಿಧಿವಿಧಾನ ನೇರವೇರಿಸಿ ಚಿತೆಗೆ ಅಗ್ನಿಸ್ಪರ್ಶ(Cremation) ಮಾಡಿದ್ದಾರೆ. ಇಡೀ ದೇಶವೇ ದುಃಖದ ಮಡುವಿನಲ್ಲಿ ಮುಳುಗಿದೆ. ಆದರೆ ಕೆಲವರು ರಾವತ್ ಸಾವನ್ನು ಸಂಭ್ರಮಿಸಿದ್ದಾರೆ. ಈ ಕಿಡಿಗೇಡಿಗಳ ಪಟ್ಟಿಗೆ ಕೇರಳ(Kerala Government) ಸರ್ಕಾರದ ಪರ ವಕೀಲೆ(Government Pleader) ಕೂಡ ಸೇರಿರುವುದು ದುರಂತ. ಬಿಪಿನ್ ರಾವತ್ ಸಾವನ್ನು ಸಂಭ್ರಮಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ ಕೇರಳ ಸರ್ಕಾರ ವಾದ ಮಂಡನೆ ವಕೀಲೆ ರೆಶ್ಮಿಮಿತಾ ರಾಮಚಂದ್ರನ್(Reshmitha ramachandran) ವಿರುದ್ಧ ನಿವೃತ್ತ ಸೇನಾನಿಗಳು ಸರ್ಕಾರಕ್ಕೆ ಎಚ್ಚರಿಕೆ ಪತ್ರ ಬರೆದಿದ್ದಾರೆ.
ರೆಶ್ಮಿತಾ ರಾಮಚಂದ್ರನ್ ವಿರುದ್ಧ ನಿವೃತ್ತಿ ಸೇನಾನಿನಿಗಳು ಇದೀಗ ಕೇರಳ ಅಡ್ವೋಕೇಟ್ ಜನರಲ್(Advocate General of Kerala) ಕೆ ಗೋಪಾಲಕೃಷ್ಣ ಕುರುಪ್‌ಗೆ ಪ್ರತಿಭಟನಾ ಪತ್ರ ಬರೆದಿದ್ದಾರೆ. ಬಿಪನ್ ರಾವತ್ ಸಾವು ಸಂಭ್ರಮಿಸಿ ಹಾಕಿರುವ ಪೋಸ್ಟ್ ಹಿಂಪಡೆದು ತಕ್ಷಣ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ರೆಶ್ಮಿತಾ ರಾಮಚಂದ್ರನ್ ಹೈಕೋರ್ಟ್‌ನಲ್ಲಿ(High Court) ಕೇರಳ ಸರ್ಕಾರದ ಪರ ವಾದ ಮಂಡಿಸುವ ವಕೀಲೆಯಾಗಿದ್ದಾರೆ. ರಾವತ್ ದೇಶಕ್ಕಾಗಿ ಕೈಗೊಂಡ ಹಲವು ನಿರ್ಧಾರಗಳನ್ನು ಉಲ್ಲೇಖಿಸಿ ಟೀಕೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಸಾವಿನಿಂದ ಒಬ್ಬ ವ್ಯಕ್ತಿ ಪವಿತ್ರವಾಗುವುದಿಲ್ಲ ಎಂದು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ.
Bipin Rawat Cremation ಪಂಚಭೂತಗಳಲ್ಲಿ ರಾವತ್ ಲೀನ, ಮಿಲಿಟರಿ ಗೌರವದೊಂದಿಗೆ ಅಂತ್ಯಕ್ರಿಯೆ!
ನಿವೃತ್ತ(Ex Servicemen) ಕ್ಯಾಪ್ಟನ್ ಸುಂದರನ್ ಕೆ ಹಾಗೂ ರಘುನಾಥನ್ ಡಿ, ನಿವೃತ್ತಿ ಸೇನಾನಿ ಸಂಜಯನ್ ಎಸ್ ಸೇರಿದಂತೆ ವಾಯುಸೇನೆ, ಭೂ ಸೇನೆ ಹಾಗೂ ನೌಕಾಪಡೆಯ ನಿವೃತ್ತಿ ಸೇನಾನಿಗಳು ಎಚ್ಚರಿಕೆ ಪತ್ರ ರವಾನಿಸಿದ್ದಾರೆ. ತಕ್ಷಣವೇ ರೆಶ್ಮಿತಾ ರಾಮಚಂದ್ರನ್ ವಿರುದ್ದ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ನಿವೃತ್ತ ಸೇನಾನಿಗಳು ತಮ್ಮ ಪತ್ರದಲ್ಲಿ ತಾವು ಅತೀ ನೋವಿನಿಂದ ಈ ಪತ್ರ ಬರೆಯುತ್ತಿರುವುದಾಗಿ ಹೇಳಿದ್ದಾರೆ. ಬಿಪಿನ್ ರಾವತ್ ನಿಧನದಿಂದ ರಾವತ್ ಇಬ್ಬರು ಪುತ್ರಿಯರು ಸೇರಿದಂತೆ ಇಡೀ ದೇಶವೇ ಶೋಕಸಾಗರದಲ್ಲಿ ಮುಳುಗಿದೆ. ಆದರೆ ಕೇರಳ ಸರ್ಕಾರದ ಪರ ವಾದ ಮಂಡಿಸುವ ವಕೀಲರೊಬ್ಬರು ರಾವತ್‌ಗೆ ಅವಹೇಳನ ಮಾಡುವ ರೀತಿಯಲ್ಲಿ, ರಾವತ್ ನಿಂದಿಸಿ ಪೋಸ್ಟ್ ಹಾಕಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.
Bipin Rawat Final Journey ಪಾರ್ಥೀವ ಶರೀರದ ಅಂತಿಮ ಯಾತ್ರೆಯಲ್ಲಿ ಜನಸಾಗರ, ಅಮರ್ ರಹೇ ಘೋಷಣೆ
ಕೇರಳ ಹೈಕೋರ್ಟ್‌ನಲ್ಲಿ ಸರ್ಕಾರದ ವಾದ ಮಂಡಿಸುವ ವಕೀಲೆ ಜವಾಬ್ದಾರಿಯುತ ಸ್ಥಾನದಲ್ಲಿದ್ದಾರೆ. ಹೈಕೋರ್ಟ್ ಸವಲತ್ತುಗಳನ್ನು, ಸೌಲಭ್ಯಗಳನ್ನು ಬಳಸಿಕೊಂಡು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ದೇಶದ ವೀರ ಯೋಧನ ಕುರಿತು ಅತ್ಯಂತ ಕೆಟ್ಟ ಪದಗಳನ್ನು ಬಳಸಿ ಅವಹೇಳನ ಮಾಡಿದ್ದಾರೆ ಎಂದು ಸೇನಾನಿಗಳು ತಮ್ಮ ಪತ್ರದಲ್ಲಿ ಹೇಳಿದ್ದಾರೆ.
ಇಷ್ಟಕ್ಕೂ ರೆಶ್ಮಿತಾ ರಾಮಚಂದ್ರನ್ ಹಾಕಿರುವ ಪೋಸ್ಟ್ ಭಾರತೀಯರ ರಕ್ತ ಕುದಿಸುವಂತಿದೆ. ರೆಶ್ಮಿತಾ ರಾಮಚಂದ್ರನ್ ಫೇಸ್‌ಬುಕ್ ಪೋಸ್ಟ್ ಸಾರಾಂಶ ಇಲ್ಲಿದೆ:
ನಾನು ಯಾವ ರೀತಿ ಬಿಪಿನ್ ರಾವತ್ ಅವರನ್ನು ನೆಪಿಸಿಕೊಳ್ಳಲಿ? ಭಾರತ ಸಂವಿಧಾನವನ್ನೇ ಬದಲಿಸಿ, ಅಂದಿನ ಚೀಫ್ ಜಸ್ಟೀಸ್ ನೆರವಿನಿಂದ ಬಿಪಿನ್ ರಾವತ್‌ಗೆ ಮೂರು ಸೇನೆಯ ಮುಖ್ಯಸ್ಥ ಜವಾಬ್ದಾರಿ ನೀಡಲಾಯಿತು. ಅದೇ ರಾವತ್ ಕಾಶ್ಮೀರದಲ್ಲಿ ಕಲ್ಲು ತೂರಾಟಗಾರರನ್ನು ಸೇನಾ ವಾಹನಕ್ಕೆ ಕಟ್ಟಿ ದಾರಿಯುದ್ದಕ್ಕೂ ಸಾಗಿದ ಘಟನೆಯಲ್ಲಿ ರಾವತ್‌ಗೆ ಕ್ಲೀನ್ ಚಿಟ್ ನೀಡಲಾಗಿದೆ.
Bipin Rawat Death ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ 13 ಸೇನಾಧಿಕಾರಿಗಳಿಗೆ ಮೋದಿ ಗೌರವ ನಮನ!
ಇನ್ನು ಹಲವು ಯೋಧರ ವಿಕಲಚೇನ ಪಿಂಚಣಿ ಮೂಲಕ ಹಣ ಕೊಳ್ಳೆ ಹೊಡೆದಿದ್ದಾರೆ. ಹಲವು ಯೋಧರಿಗೆ ಕರೆ ಮಾಡಿ ಈ ಕುರಿತು ಒತ್ತಡ ಹಾಕಿದ್ದಾರೆ. ಮಹಿಳಾ ಯೋಧರಿಗೆ ಕಿರುಕುಳ ನೀಡಿದ್ದಾರೆ. ಕೇಂದ್ರ ಸರ್ಕಾರ ಸಿಎಎ ಕಾಯ್ದೆ ವಿರುದ್ಧ ಪ್ರತಿಭಟನೆ ಮಾಡಿದವರ ವಿರುದ್ಧ ರಾವತ್ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸಾವಿನಿಂದ ಬಿಪಿನ್ ರಾವತ್ ಪವಿತ್ರವಾಗುವುದಿಲ್ಲ ಎಂದು ಪೋಸ್ಟ್ ಹಾಕಿದ್ದಾರೆ.