ಗುಜ್ಜರ್‌ ಮೀಸಲು ಹೋರಾಟಗಾರ ಕಿರೋರಿ ಸಿಂಗ್‌ ಬೈನ್‌ಸ್ಲಾ ನಿಧನ

By Anusha KbFirst Published Apr 1, 2022, 3:11 AM IST
Highlights
  • ದೀರ್ಘಕಾಲದ ಅನಾರೋಗ್ಯದಿಂದ ನಿಧನರಾದ ಕಿರೋರಿ ಸಿಂಗ್‌
  • ಸೇನೆಯಿಂದ ನಿವೃತ್ತಿ ಬಳಿಕ ಮೀಸಲಾತಿಗಾಗಿ ಹೋರಾಟ
  • ಜೈಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ

ಜೈಪುರ: ರಾಜಸ್ಥಾನದಲ್ಲಿ ನಡೆದ ಗುಜ್ಜರ್‌ ಸಮುದಾಯದ ಮೀಸಲು ಹೋರಾಟದ ಪ್ರಮುಖ ರೂವಾರಿಯಾದ ಕಿರೋರಿ ಸಿಂಗ್‌ ಬೈನ್‌ಸ್ಲಾ (84) ದೀರ್ಘಕಾಲದ ಅನಾರೋಗ್ಯದಿಂದ ಗುರುವಾರ ನಿಧನರಾದರು. ಬೈನ್‌ಸ್ಲಾ 3 ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. 1962ರ ಚೀನಾ, 1965, 71ರ ಪಾಕಿಸ್ತಾನ ಯುದ್ಧದಲ್ಲಿ ಭಾಗಿಯಾಗಿದ್ದರು. 2007-08ರಲ್ಲಿ ನಡೆದ ಗುಜ್ಜರ್‌ ಸಮುದಾಯದ ಹೋರಾಟದಲ್ಲಿ ಮುಖವಾಣಿಯಾಗಿ ಗುರುತಿಸಿಕೊಂಡಿದ್ದರು. 2009ರಲ್ಲಿ ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು.

ಅನೇಕ ದಿನಗಳಿಂದ ಅನಾರೋಗ್ಯದಿಂದ ಬಳಸುತ್ತಿದ್ದ ಸಿಂಗ್,​ ಜೈಪುರ (Jaipur)ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಿಸದೇ ಗುರುವಾರ ಕೊನೆಯುಸಿರೆಳೆದಿದ್ದಾರೆ. ಕರ್ನಲ್ ಬೈನ್ಸ್ ಲಾ ಅವರ ಪಾರ್ಥಿವ ಶರೀರವನ್ನು ಆಸ್ಪತ್ರೆಯಿಂದ ಜೈಪುರದಲ್ಲಿರುವ ನಿವಾಸಕ್ಕೆ ತಂದು, ನಂತರ ಅವರ ಸ್ವಗ್ರಾಮದಲ್ಲಿ ಅಂತಿಮ ವಿಧಿ - ವಿಧಾನಗಳನ್ನು ನೆರವೇರಿಸಿ ಕುಟುಂಬಸ್ಥರು ಅಂತ್ಯಸಂಸ್ಕಾರ ನೆರವೇರಿಸಲಿದ್ದಾರೆ.

Latest Videos

ಬಡ ಬ್ರಾಹ್ಮಣ ಮಕ್ಕಳಿಗೆ ಶಿಕ್ಷಣದಲ್ಲಿ ಮೀಸಲಾತಿ ನೀಡಿ: ಅಶೋಕ್‌ ಹಾರನಹಳ್ಳಿ!

ಕರ್ನಲ್ ಕಿರೋರಿ ಸಿಂಗ್ ಬೈನ್ಸ್ ಲಾ (Colonel Kirori Singh BainsLaw) ಅವರು ರಾಜಸ್ಥಾನದ (Rajasthan) ಕರೌಲಿ (Karauli) ಜಿಲ್ಲೆಯ ಮುಂಡಿಯಾ (Mundia) ಗ್ರಾಮದಲ್ಲಿ ಜನಿಸಿದರು. ಗುರ್ಜರ್ (Gujjar) ಸಮುದಾಯದಿಂದ ಬಂದ ಕಿರೋರಿ ಸಿಂಗ್, ಶಿಕ್ಷಕರಾಗಿ (teacher) ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಬಳಿಕ ತಂದೆಯಂತೆಯೇ ಸೈನ್ಯ ಸೇರಿದ ಬೈನ್ಸ್ ಲಾ, ರಜಪೂತಾನ ರೈಫಲ್ಸ್‌ನಲ್ಲಿ ನೇಮಕಗೊಂಡರು. ಸೈನ್ಯದಲ್ಲಿದ್ದಾಗ 1962ರ ಭಾರತ - ಚೀನಾ ಯುದ್ಧ (India-China War) ಮತ್ತು 1965 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ (India-Pakistan War)ಕಿರೋರಿ ಸಿಂಗ್‌ ಭಾಗವಹಿಸಿದ್ದರು.

Panchamasali Reservation: ಬೊಮ್ಮಾಯಿ ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಕೂಡಲ ಶ್ರೀ..!

ಸೈನ್ಯದಿಂದ ನಿವೃತ್ತರಾದ ನಂತರ ರಾಜಸ್ಥಾನಕ್ಕೆ ಹಿಂದಿರುಗಿದ ಕಿರೋರಿ ಸಿಂಗ್, ಗುಜ್ಜರ್ ಸಮುದಾಯಕ್ಕೆ ವಿಶೇಷ ವರ್ಗದಲ್ಲಿ ಮೀಸಲಾತಿ (reservations for the Gujjar community)ನೀಡಬೇಕೆಂದು ಆಗ್ರಹಿಸಿ ಹೋರಾಟ ಪ್ರಾರಂಭಿಸಿದರು. ಆಂದೋಲನದ ವೇಳೆ ಹಲವು ಬಾರಿ ರೈಲುಗಳನ್ನು ತಡೆದು ಹಳಿಗಳ ಮೇಲೆ ಧರಣಿ ನಡೆಸಿದ್ದರು. ಆಂದೋಲನಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ಹಲವು ಆರೋಪಗಳು ಕೇಳಿ ಬಂದಿದ್ದವು. ಕಿರೋರಿ ಸಿಂಗ್ ಗುಜ್ಜರ ಹಕ್ಕುಗಳಿಗಾಗಿ ಹೋರಾಡಿದರು. ಗುರ್ಜರ್ ಸಮಾಜವು ಒಬಿಸಿಯಲ್ಲಿ ಮೀಸಲಾತಿಯ ಲಾಭವನ್ನು ಪಡೆಯುತ್ತಿತ್ತು. ಆದರೆ, ಅವರಿಗೆ ವಿಶೇಷ ವರ್ಗದಲ್ಲಿ ಮೀಸಲಾತಿ ನೀಡಬೇಕೆಂಬ ಬೇಡಿಕೆಯಿಟ್ಟು ಸುಮಾರು 2 ವರ್ಷಗಳ ಕಾಲ ಚಳವಳಿ ನಡೆಯಿತು. ಆಗ ವಸುಂಧರಾ ರಾಜೇ ಸರ್ಕಾರ( Vasundhara Raje government) ಆಡಳಿತ ನಡೆಸುತ್ತಿತ್ತು. ಮೀಸಲಾತಿ ಚಳವಳಿಯ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದರು.

सामाजिक आंदोलन के प्रखर नेतृत्वकर्ता कर्नल किरोड़ी सिंह बैंसला जी के निधन पर शोक व्यक्त करता हूँ। सामाजिक अधिकारों के लिए उन्होंने आजीवन संघर्ष किया। ईश्वर दिवंगत आत्मा को शांति प्रदान करें परिजनों व प्रशंसकों के प्रति मेरी संवेदनाएं।
ॐ शांति!

— Om Birla (@ombirlakota)

 

ಕರ್ನಲ್ ಕಿರೋರಿ ಸಿಂಗ್ ಬೈನ್ಸ್ ಲಾ ಅವರು ಗುರ್ಜರ್ ಮೀಸಲಾತಿ ಚಳವಳಿಯಿಂದ ಮುನ್ನೆಲೆಗೆ ಬಂದಿದ್ದರು. ಬಳಿಕ ರಾಜಕೀಯದಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಪಡೆದು ರಾಜಸ್ಥಾನದ ಟೋಂಕ್ ಸವಾಯಿ ಮಾಧೋಪುರ್‌ನಿಂದ (Madhopur) ಸ್ಪರ್ಧಿಸಿ ಕಾಂಗ್ರೆಸ್‌ ನಮೋ ನಾರಾಯಣ ಮೀನಾ ವಿರುದ್ಧ ಅತ್ಯಂತ ಕಡಿಮೆ ಅಂತರದಿಂದ ಸೋತರು.ಇದಾದ ನಂತರ ಸಾಮಾಜಿಕ ಬೇಡಿಕೆಗಳಿಂದಾಗಿ ಬಿಜೆಪಿಯಿಂದ ಅವರ ಅಂತರ ಹೆಚ್ಚಾಯಿತು. ಆದರೆ 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿ, ಅವರು ತಮ್ಮ ಮಗ ವಿಜಯ್ ಬೈನ್ಸ್ ಲಾ ಅವರೊಂದಿಗೆ ದೆಹಲಿಯಲ್ಲಿ ಬಿಜೆಪಿ ಸದಸ್ಯತ್ವವನ್ನು ಸ್ವೀಕರಿಸಿದ್ದರು. ಬಿಜೆಪಿ ಸೇರಿದ ನಂತರವೂ ಸಮಾಜಕ್ಕೆ ಸಂಬಂಧಿಸಿದ ವಿಷಯಗಳು ಮತ್ತು ಸಮಾಜದ ಕೆಲಸಗಳಲ್ಲಿ ಸಕ್ರಿಯರಾಗಿದ್ದರು.
 

click me!