ಎಣ್ಣೆ ಕುಡಿಯೋರು ಭಾರತೀಯರಲ್ಲ, ಮಹಾಪಾಪಿಗಳು ಎಂದ ಬಿಹಾರ ಸಿಎಂ!

Published : Mar 31, 2022, 09:25 PM IST
 ಎಣ್ಣೆ ಕುಡಿಯೋರು ಭಾರತೀಯರಲ್ಲ, ಮಹಾಪಾಪಿಗಳು ಎಂದ ಬಿಹಾರ ಸಿಎಂ!

ಸಾರಾಂಶ

ಬಿಹಾರ ವಿಧಾನಪರಿಷತ್‌ ನಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಮಾತು ಮದ್ಯಪಾನ ಮಾಡುವವರು ಮಹಾಪಾಪಿಗಳು ಮಹಾತ್ಮಾ ಗಾಂಧಿಯನ್ನು ಹಿಂಬಾಲಿಸದ ಈ ವ್ಯಕ್ತಿಗಳು ಭಾರತೀಯರಲ್ಲ  

ಪಾಟ್ನಾ (ಮಾ. 31): ಮದ್ಯಪಾನ (drinkers ) ಮಾಡುವವರು ಮಹಾಪಾಪಿಗಳು (mahapaapi ), ಮತ್ತು ಅವರೆಲ್ಲ ಭಾರತೀಯರಲ್ಲ (Not Indians) ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ (Bihar Chief Minister Nitish Kumar) ಬುಧವಾರ ಬಿಹಾರ ವಿಧಾನ ಪರಿಷತ್ತಿನಲ್ಲಿ (Bihar Legislative Council ) ಮಾತನಾಡುವ ವೇಳೆ ಹೇಳಿದ್ದಾರೆ. ಬಿಹಾರದಲ್ಲಿ ಅಬಕಾರಿ ನಿಷೇಧ ಕಾಯ್ದೆ  2016ರ ಪ್ರಸ್ತಾವಿತ ತಿದ್ದುಪಡಿಗಳ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಿಎಂ, ತಿದ್ದುಪಡಿಯ ನಂತರ, ಮೊದಲ ಬಾರಿಗೆ ಮದ್ಯಪಾನ ಮಾಡಿ ಸಿಕ್ಕಿಬೀಳುವ ವ್ಯಕ್ತಿಗಳಿಗೆ ದಂಡ ವಿಧಿಸಲಾಗುತ್ತದೆ ಎಂದಿದ್ದಾರೆ.

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಎಂಎಲ್‌ಸಿ (RJD MLC) ಸುನೀಲ್ ಸಿಂಗ್ ಅವರು ಮದ್ಯಪಾನ ಮಾಡಿದವರ ಮೇಲಿನ ಪ್ರಕರಣಗಳನ್ನು ಕೈಬಿಡುವ ಮತ್ತು ಅವರನ್ನು ಜೈಲಿನಿಂದ ಬಿಡುಗಡೆ ಮಾಡುವ ಬೇಡಿಕೆಗೆ ಪ್ರತಿಕ್ರಿಯಿಸಿದ ಕುಮಾರ್, “ನಾನು ಅವರನ್ನು ಮಹಾಪಾಪಿ ಎಂದು ಕರೆಯುತ್ತೇನೆ. ಮಹಾತ್ಮಾ ಗಾಂಧಿಯನ್ನು ಅನುಸರಿಸದವರು ಹಿಂದೂಸ್ತಾನಿಗಳಲ್ಲ ಎಂದು ನಾನು ಹೇಳುತ್ತೇನೆ. ಅವರು ಅಸಮರ್ಥ ಜನರು. ಕುಡಿಯುವವರಿಗೆ ಯಾವುದೇ ಕಾನೂನು ಪರಿಹಾರ ಸರ್ಕಾರದಿಂದ ಸಿಗುವುದಿಲ್ಲ" ಎಂದು ಸಿಎಂ ಹೇಳಿದರು.

ನಕಲಿ ಮದ್ಯ ಸೇವಿಸಿ ಸಾಯುವವರ ಕುಟುಂಬಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ ಎಂದೂ ಸಿಎಂ ಸ್ಪಷ್ಟಪಡಿಸಿದ್ದಾರೆ. ಅಂತಹ ಕುಟುಂಬಗಳಿಗೆ ನಾವು ಯಾವುದೇ ಪರಿಹಾರವನ್ನು ನೀಡುವುದಿಲ್ಲ. ಕಾಯ್ದೆಗೆ ತಿದ್ದುಪಡಿ ತಂದರೆ ಮದ್ಯ ವ್ಯಾಪಾರಿಗಳು ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಇತ್ತೀಚೆಗೆ ಯಾತ್ರೆಯ ಮೂಲಕ ಮದ್ಯಪಾನದ ವಿರುದ್ಧ ಜಾಗೃತಿ ಮೂಡಿಸಿದ ಸಿಎಂ ಹೇಳಿದರು.    

ಕಳೆದ ಆರು ತಿಂಗಳಲ್ಲಿ ಅರ್ಧ ಡಜನ್ ಗೂ ಅಧಿಕ ಹೂಚ್ ಪ್ರಕರಣಗಳು ವರದಿಯಾಗಿದ್ದು, 60ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆ ನಂತರವೇ ಸಿಎಂ ಕುಡುಕರ ವಿರುದ್ಧ ಪರಿಹಾರ ಕ್ರಮಗಳನ್ನು ಘೋಷಣೆ ಮಾಡಿದ್ದಾರೆ.

ಭದ್ರತಾ ಲೋಪ, ಸ್ವಗ್ರಾಮದಲ್ಲೇ ಬಿಹಾರ ಸಿಎಂ ನಿತೀಶ್ ಕುಮಾರ್ ಮೇಲೆ ದಾಳಿ!

ಆರ್‌ಜೆಡಿ ರಾಷ್ಟ್ರೀಯ ವಕ್ತಾರ ಸುಬೋಧ್ ಮೆಹ್ತಾ, ನಾವೂ ಸಹ ನಿಷೇಧವನ್ನು ಬೆಂಬಲಿಸುತ್ತೇವೆ ಮತ್ತು ಆರ್‌ಜೆಡಿ-ಜೆಡಿ (ಯು)-ಕಾಂಗ್ರೆಸ್ ಆಡಳಿತದಲ್ಲಿ ಮದ್ಯಸಾರ ಕಾನೂನನ್ನು ಜಾರಿಗೆ ತಂದಿದ್ದರೂ, ಮದ್ಯಪಾನ ನಿಷೇಧದ ಕುರಿತು ಗಾಂಧಿ ತತ್ವಗಳು ಈ ನಡುವೆ ಇರಲಿಲ್ಲವೇ ಎಂದು ನಾನು ವಿನಮ್ರವಾಗಿ ಸಿಎಂ ಅವರನ್ನು ಕೇಳಲು ಬಯಸುತ್ತೇನೆ. 2009 ಮತ್ತು 2016ರಲ್ಲಿ ನಿತೀಶ್ ಕುಮಾರ್ ಅವರು ಮದ್ಯ ನೀತಿಯನ್ನು ಉದಾರಗೊಳಿಸಿದ್ದರು. ಸಿಎಂ ಗಾಂಧಿಯವರ ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಮಾತನಾಡುತ್ತಾರೆ ಆದರೆ ಗಾಂಧಿಯವರ ಪಂಚಾಯತ್ ರಾಜ್ ಪರಿಕಲ್ಪನೆಗಳ ವಿರುದ್ಧ ಸಾರ್ವಜನಿಕ ಪ್ರತಿನಿಧಿಗಳಿಗಿಂತ ಹೆಚ್ಚಿನ ಅಧಿಕಾರವನ್ನು ಅಧಿಕಾರಶಾಹಿಗಳ ಮೇಲೆ ಹಾಕುತ್ತಿದ್ದಾರೆ. ಎಂದು ಹೇಳಿದ್ದಾರೆ.

ಬಿಹಾರದಲ್ಲಿ ಶಿಕ್ಷಕರಿಗೆ ಕುಡುಕರ ಹಿಡಿಯುವ ಕೆಲಸ: ರಾಜ್ಯ ಶಿಕ್ಷಣ ಇಲಾಖೆ ಆದೇಶ!

ಇತ್ತೀಚೆಗೆ ಬಿಹಾರದಲ್ಲಿ ಶಿಕ್ಷಕರಿಗೆ ಕುಡುಕರನ್ನು ಹಿಡಿಯುವ ಕೆಲಸ ನೀಡಲಾಗಿತ್ತು. ಗಣತಿ, ಚುನಾವಣೆ, ಬಿಸಿಯೂಟ ಹೀಗೆ ಮೊದಲೇ ನಾನಾ ಕಾರ್ಯಗಳಲ್ಲಿ ವ್ಯಸ್ತರಾಗಿರುವ ಶಾಲಾ ಶಿಕ್ಷಕರಿಗೆ ಬಿಹಾರದಲ್ಲಿ (Bihar School Teachers) ಹೊಸತೊಂದು ಜವಾಬ್ದಾರಿ ಹೆಗಲಿಗೆ ಬಿದ್ದಿತ್ತು. ಅದು - ಕುಡುಕರನ್ನು ಹಿಡಿಯುವುದು! ಬಿಹಾರದಲ್ಲಿ 2016ರಿಂದ ಸಂಪೂರ್ಣ ಪಾನನಿಷೇಧ ಜಾರಿಯಲ್ಲಿದೆ. ರಾಜ್ಯದಲ್ಲಿ ಎಲ್ಲೂ ಅಕ್ರಮ ಅಥವಾ ಸಕ್ರಮ ಮದ್ಯ ಸಿಗುವಂತಿಲ್ಲ. ಆದರೂ ಶಾಲೆಗಳ ಕಾಂಪೌಂಡ್‌ ಸೇರಿದಂತೆ ಅನೇಕ ಕಡೆ ಕುಡಿದು ಎಸೆದ ಸಾರಾಯಿ ಬಾಟಲಿಗಳು ಸಿಗುತ್ತಿವೆ. ಜನರು ಕುಡಿದು ತೂರಾಡುವುದು ಅಲ್ಲಲ್ಲಿ ಕಂಡುಬರುತ್ತಿದೆ.  ಹೀಗಾಗಿ ಯಾರು ಕುಡಿಯುತ್ತಾರೆ ಮತ್ತು ಅವರಿಗೆ ಯಾರು ಮದ್ಯ ಮಾರಾಟ ಮಾಡುತ್ತಾರೆ ಎಂಬುದನ್ನು ಪತ್ತೆಹಚ್ಚುವಂತೆ ರಾಜ್ಯ ಶಿಕ್ಷಣ ಇಲಾಖೆಯು (education Department) ಜಿಲ್ಲಾ ಶಿಕ್ಷಣ ಅಧಿಕಾರಿಗಳು, ಪ್ರಿನ್ಸಿಪಾಲ್‌ಗಳು, ಶಿಕ್ಷಕರು ಮತ್ತು ಶೈಕ್ಷಣಿಕ ಕ್ಷೇತ್ರದ ಸ್ವಯಂಸೇವಕರಿಗೆ ಆದೇಶ ನೀಡಿದೆ. ಅದರಂತೆ ಅವರು ಇನ್ನುಮುಂದೆ ಕುಡುಕರನ್ನೂ, ಮದ್ಯದ ವ್ಯಾಪಾರಿಗಳನ್ನೂ ಪತ್ತೆಹಚ್ಚಿ ಸರ್ಕಾರದ ಪಾನನಿರೋಧ ಟೋಲ್‌ಫ್ರೀ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ಭಾರತ-ಆಫ್ರಿಕಾ ಫೈನಲ್ ಫೈಟ್ - ಟೆಸ್ಟ್ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?
ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಡಿಕೆಗೆ ದಿಲ್ಲಿ ಪೊಲೀಸ್‌ ನೋಟಿಸ್‌